ಹೋಟೆಲ್ ಉದ್ಯಮದ ಪೈಪೋಟಿಗೆ ಬಾಲ ಹೋಟೆಲ್ ಬಲಿಯಾಯಿತೇ?
ಪ್ರತಿಷ್ಠಿತ ಬಾಲ ಹೋಟೆಲ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿತ್ತಾ?
ಬಳ್ಳಾರಿ:ಏ,6; ನಗರದ ಬಾಲ ರಿಜೆನ್ಸಿ ಹೋಟೆಲ್ ಅವರಣದಲ್ಲಿರುವ ಸ್ಪಾಯೊಂದರಲ್ಲಿ ವೇಶ್ಯೆವಾಟಿಕೆ ನಡೆಯುತ್ತಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಎಸ್ಪಿ ಡಾ.ಶೋಭರಾಣಿಯವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಇಂತಹ ಅನೈತಿಕ ಚಟುವಟಿಕೆ ನಡೆಯುತ್ತಿತ್ತಾ, ನಡೆದಿದೆ ಎಂದರೆ, ನಂಬಲು ಸಾಧ್ಯವಾಗುತ್ತಿಲ್ಲ ಅಂತಾರೆ ಬಳ್ಳಾರಿ ಜನ. ಯಾಕೆಂದರೆ, ನಗರದ ಪ್ರತಿಷ್ಠಿತ ಹೋಟೆಲ್ ಗಳ ಸಾಲಿನಲ್ಲಿ ಈ ಬಾಲ ರಿಜೆನ್ಸಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತೆ. ಇಂತಹ ಹೋಟೆಲ್ ನಲ್ಲಿ ಅನೈತಿಕ ಚಟುವಟಿಕೆಯೇ? ಎಂದು ಜನ ಬಾಯಿ ಮೇಲೆ ಬೇರಳಿಟ್ಟುಕೊಳ್ಳುತ್ತಿದ್ದಾರೆ.
2005 ರಿಂದ ನಗರದಲ್ಲಿ ತಲೆ ಎತ್ತಿ ನಿಂತಿರುವ ಈ ಬಾಲ ರಿಜೆನ್ಸಿ ಹೋಟೆಲ್ ನ ಇತಿಹಾಸದಲ್ಲೆ ಇದೇ ಮೊಟ್ಟಮೊದಲ ಬಾರಿಗೆ ಪೋಲಿಸರು ಹೋಟೆಲ್ ಆವರಣದಲ್ಲಿರುವ ಸ್ಪಾ ಮೇಲೆ ದಾಳಿ ಮಾಡಿದ್ದಾರೆ. ಇಲ್ಲಿ ಕಳೆದ 10 ವರ್ಷಗಳಿಂದ ಸ್ಪಾ ನಡೆಯುತ್ತಿದೆ. ಬಾಲ ರಿಜೆನ್ಸಿಯವರಿಂದ ಖಾಸಗಿ ವ್ಯಕ್ತಿಗಳು ಬಾಡಿಗೆ ಪಡೆದು ನಡೆಸುತ್ತಿದ್ದರು. ಆದರೆ, ಕಳೆದ 10 ವರ್ಷಗಳಿಂದ ಇಂತಹ ಘಟನೆ ಯಾವತ್ತೂ ಕೂಡ ನಡೆದಿರಲಿಲ್ಲ. ಆದರೆ ನಿನ್ನೆಯ ಘಟನೆ ಬಳ್ಳಾರಿಯ ಜನ ದಿಗ್ಭ್ರಮೆಗೊಳ್ಳುವಂತಾಗಿದೆ.
ಯಾಕೆಂದರೆ, ಈ ಬಾಲ ರಿಜೆನ್ಸಿ ಹೋಟೆಲ್ ನಲ್ಲಿ ಸಿನಿ ನಟರು ದೊಡ್ಡ ದೊಡ್ಡ ರಾಜಕಾರಣಿಗಳು ತಂಗುವ ಹಾಗೂ ಕಾರ್ಯಕ್ರಮಗಳನ್ನು ಮಾಡುವ ಫೆವರೆಟ್ ಹೋಟೆಲ್ ಆಗಿದೆ. ಇಂತಹ ಹೋಟೆಲ್ ನಲ್ಲಿ ಇಂದು ಅನೈತಿಕ ಚಟುವಟಿಕೆಯ ಕಪ್ಪು ಚುಕ್ಕಿ ಅಂಟಿದೆ.
ನಿನ್ನೆ ಸಂಜೆ ಸೆನ್ ಪೋಲಿಸರು ಸ್ಪಾ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಏನೂ ದೊರೆತಿಲ್ಲ. ಬಳಿಕ ಜಿಲ್ಲಾ ಎಸ್ಪಿ ಡಾ.ಶೋಭಾರಾಣಿಯವರು ಸ್ಪಾ ಬಳಿ ಧಾವಿಸಿದ್ದಾರೆ. ಸ್ಪಾ ಪರಿಶೀಲನೆ ಮಾಡಿ ಇಡೀ ಬಾಲ ರಿಜೆನ್ಸಿ ಹೋಟೆಲ್ ಜಾಲಾಡಿದ್ದಾರೆ. ಆದರೆ, ಎಲ್ಲೂ ಅಂತಹ ಅನೈತಿಕ ಚಟುವಟಿಕೆ ನಡೆಯುವುದು ಕಂಡು ಬಂದಿಲ್ಲ. ಆದರೆ, ಹೋಟೆಲ್ ಪರಿಶೀಲನೆ ಮಾಡಿ ಕೆಳಗೆ ಬರುವ ವೇಳೆ ಡಸ್ಟಬೀನ್ ಯೊಂದರಲ್ಲಿ ಹೊಸ ಕಾಂಡೋಮ್ ಪಾಕೇಟ್ ಸಿಕ್ಕಿದೆ ಎಂತೆ! ಈ ಹಿನ್ನೆಲೆಯಲ್ಲಿ ಕೆಲವರನ್ನ ಗಾಂಧಿನಗರ ಪೋಲಿಸ್ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ ಪೋಲಿಸರು.
ದಾಳಿ ವೇಳೆ ನಾಲ್ವರನ್ನು ಬಂಧಿಸಿ ಮೂವರು ಮಹಿಳೆಯರನ್ನು ರಕ್ಷಿಸಿದ್ದೀವಿ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಡೆಹರಡೂನ್, ಮಧ್ಯಪ್ರದೇಶ, ವಿಜಯವಾಡದಿಂದ ಬಂದಿದ್ದ ಮಹಿಳೆಯರನ್ನು ಬಳಸಿಕೊಂಡು ಬಳ್ಳಾರಿಯ ಎಂ.ಡಿ.ಮಥಿಲ್ ಮತ್ತು ಮುಂಬೈನ ಮೀನಜ್ ಎಂಬ ಮಹಿಳೆ ಈ ಸ್ಪಾ ನಡೆಸುತ್ತಿದ್ದರು. ಬಹುತೇಕ ಸ್ಪಾ ಗಳಲ್ಲಿ ಹೊರ ರಾಜ್ಯದ ಅವರೇ ಇರುತಾರೆ.
ಇಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆಂಬ ದೂರಿನ ಹಿನ್ನಲೆಯಲ್ಲಿ ದಾಳಿ ನಡೆಸಿ ಮೂವರು ಮಹಿಳೆಯರನ್ನು ರಕ್ಷಿಸಿ ಲೈಂಗಿಕ ಕ್ರಿಯೆಗೆ ಆಗಮಿಸಿದ್ದ
ಬಳ್ಳಾರಿಯ
ಇಬ್ಬರು, ಗಂಗಾವತಿ ಮೂಲದ ಓರ್ವ ಪುರುಷನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೋರ್ವ ತಪ್ಪಿಸಿಕೊಂಡಿದ್ದಾನಂತೆ ಎಂದು ಪೋಲಿಸರು ತಿಳಿಸಿದ್ದಾರೆ.
ನಗರದ ಪ್ರತಿಷ್ಠಿತ ಬಾಲ ರಿಜೆನ್ಸಿ ಹೋಟೆಲ್ ಆವರಣದಲ್ಲಿರುವ ಸ್ಪಾ ಯೊಂದರಲ್ಲಿ ಇಂತಹ ಅನೈತಿಕ ಚಟುವಟಿಕೆ ನಡೆದಿದೆಯಾ? ನಡೆಯುತ್ತಿತ್ತಾ? ಇಲ್ಲ ಹೋಟೆಲ್ ನ ಘನತೆ, ಗೌರವ, ಹಾಳು ಮಾಡಲು ನಡೆದಿರುವ ಹುನ್ನಾರವಾ? ಎಂದು ಹೋಟೆಲ್ ಮಾಲೀಕರಿಗೆ ಕೇಳಿದರೆ ಹೌದು ಅಂತಾರೆ.
ನಗರದ ಬಾಲ ಹೋಟೆಲ್ ನಲ್ಲಿ ಇಂತಹ ಅನೈತಿಕ ಚಟುವಟಿಕೆ ನಡೆಯುತ್ತಿತ್ತಾ? ಇಲ್ಲ ಹೋಟೆಲ್ ಉದ್ಯಮದ ಪೈಪೋಟಿಯಲ್ಲಿ ಹೋಟೆಲ್ ಗೆ ಕೆಟ್ಟ ಹೆಸರು ತರುವ ಹುನ್ನಾರವಾ? ಇಲ್ಲ ಹೋಟೆಲ್ ಮಾಲೀಕರ ಸಂಘರ್ಷಕ್ಕೆ ‘ಬಾಲ’ ಹೋಟೆಲ್ ಬಲಿಯಾಯಿತೇ? ಗೊತ್ತಿಲ್ಲ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪೋಲಿಸರ ಸಂಪೂರ್ಣ ತನಿಖೆಯಿಂದ ಸಿಗಬೇಕಿದೆ.