ಶವ ತರಲು ಹೋಗಿ ಶವವಾದ
ಬಸ್ ಚಾಲಕ: *ಶ್ರೀರಾಮುಲು ಸಂತಾಪ*
ಬಳ್ಳಾರಿ: ಬಳ್ಳಾರಿ ಸಾರಿಗೆ ಇಲಾಖೆಯ ಚೆನ್ನೈ ಗೆ ಸರ್ವಿಸ್ ಮಾಡಿತ್ತದ್ದ ಬಸ್ ಗುರುವಾರರಂದು ಚೆನ್ನೈ ದಿಂದ ರಾತ್ರಿ 7ಗಂಟೆಗೆ ಸಮಯದಲ್ಲಿ ಬಳ್ಳಾರಿಗೆ ಪ್ರಯಾಣ ಮಾಡಿದೆ.
ಚೆನ್ನೈ ನಿಲ್ದಾಣದಿಂದ ಎರಡು ಕಿಲೊಮೀಟರ್ ಹೊರಗೆ ಬಂದ ತಕ್ಷಣವೇ ಡೈವರ್ ಕಮ್ ಕಂಡಕ್ಟರ್ ಅಗಿರುವ ಗಜೇಂದ್ರ ಗಡದ ಮೂಲದ ದೌಲಸಾನ್ (42) ಅವರಿಗೆ ಹೃದಯದಲ್ಲಿ ನೊವು ಕಾಣಿಸಿಕೊಂಡಿದೆ.
ತಕ್ಷಣವೇ ವಾಹನ ಬಿಟ್ಟು ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟದ್ದಾರೆ.
ವಿಷಯ ತಿಳಿದು ತಕ್ಷಣ ಬಳ್ಳಾರಿಯ ಡಿಪೋ ಅಧಿಕಾರಿಗಳು ಅದೇ ದಿನ ರಾತ್ರಿ ಬೊಲೋರೋ ವಾಹನದಲ್ಲಿ ಬಳ್ಳಾರಿಯಿಂದ ನಾಲ್ಕು ಮಂದಿ ಅಧಿಕಾರಿಗಳು ಚೆನ್ನೈಗೆ ತೆರಳಿದ್ದರು.
ಚೆನ್ನೈಯಿಂದ ಶುಕ್ರವಾರ ದೌಲಸಾಬ್ ಮೃತ ದೇಹವನ್ನು ತೆಗೆದುಕೊಂಡು ನೇರವಾಗಿ ಗಜೇಂದ್ರಗಡ ಹೊರಟಿದ್ದಾರೆ.
ಬಸ್ ಹಿಂದುಗಡೆ ಪ್ರಯಾಣ ಮಾಡುತ್ತಿರುವ ಅಧಿಕಾಗಳ ವಾಹನ 3/6/2023ರಂದು ಬೆಳಿಗಿನ ಜಾವ ತುಮಕೂರು ಶಿರಾ, ನೇಲಹಾಳ್ ಬಳಿ ಬೊಲೋರೋ ವಾಹನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ. ಅದರಲ್ಲಿ ಕೆಲವರಿಗೆ ಗಂಭೀರ ಗಾಯಗಳು ಆಗಿದ್ದು, ಅದರಲ್ಲಿ ಬಳ್ಳಾರಿ ಮೂಲದ ಎಂ.ಗೋನಾಳ ಗ್ರಾಮದ ಸಾರಿಗೆ ಚಾಲಕ ಜಗನ್ನಾಥ್(35) ಮೃತಪಟ್ಟಿದ್ದಾರೆ.
ಇನ್ನೂ ಉಳಿದ ಅಧಿಕಾರಿಗಳು ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತದೇಹವನ್ನು ತರಲು ಹೊಗಿರವ ಅಧಿಕಾರಿಗಳು ಅಪಾಯಕ್ಕೆ ಗುರಿಯಾಗಿದ್ದು, ಸಾರಿಗೆ ಸಿಬ್ಬಂದಿ, ಸಾರ್ವಜನಿಕರಲ್ಲಿ ಹಂತಕ್ಕ ಮೂಡಿಸಿದೆ. ವಿಷಯವನ್ನು ತಿಳಿದು ತಕ್ಷಣ ಬಳ್ಳಾರಿಯ ಮಾಜಿ ಉಸ್ತುವಾರಿ ಸಚಿವರು ಬಿ ಶ್ರೀರಾಮುಲು ಭಾನುವಾರ ಗೋನಾಳಗೆ ಭೇಟಿ ನೀಡಿ ಜಗನ್ನಾಥ್ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ಹೇಳಿದ್ದಾರೆ. ನ್ಯೂಸ್9ಟೂಡೇಗೆ ಸಾರಿಗೆ ಅಧಿಕಾರಿಗಳು ಅಗಿರುವ ಚಾಮರಾಜ್ ಅವರು ಮಾಹಿತಿಯನ್ನು ನೀಡಿದ್ದಾರೆ.
(ಕೆ.ಬಜಾರಪ್ಪ ವರದಿಗಾರರು.ಬಳ್ಳಾರಿ)