ಲಾಟರಿ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ; ಶ್ರೀರಾಮುಲು ವ್ಯಂಗ್ಯ
ರಾಜ್ಯದಲ್ಲಿ ಲಾಟರಿ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಬಳ್ಳಾರಿ ನಗರದ ವಾಜಪೇಯಿ ಬಡವಾಣೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುದುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಐದು ಗ್ಯಾರಂಟಿ ಯೋಜನೆ ನೋಡಿ ಜನರು ಕಾಂಗ್ರೆಸ್’ಗೆ ತೀರ್ಪು ನೀಡಿದ್ದಾರೆ. ಉಚಿತ ಯೋಜನೆ ಮೂಲಕ ರಾಜ್ಯದಲ್ಲಿ ಕತ್ತಲೇ ಭಾಗ್ಯ ಕೊಟ್ಟಿದ್ದಾರೆ. ಸರ್ಕಾರ ರಚನೆಯಾಗಿನಿಂದ 45 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಪಿಎಂಸಿ ಸಚಿವ ಹೇಳ್ತಾನೆ, ಪರಿಹಾರ ಬರುತ್ತೆ ಅಂತ ಆತ್ಮಹತ್ಯೆ ಮಾಡಿಕೊಳ್ತಾರೆ ಅಂತಾರೆ..!
ರೈತರ ಪರವಾಗಿ ಸಚಿವನಿಗೆ, ಸರ್ಕಾರಕ್ಕಿಲ್ಲ, ಎಪಿಎಂಸಿ ಸಚಿವನಿಗೆ ಮಾನ ಮಾರ್ಯದೆ ಇಲ್ಲ ಎಂದರು.
ರೈತರ ಪರವಾಗಿ ಹಗುರವಾಗಿ ಮಾತನಾಡ್ತೀರಿ, ರೈತರಿಗೆ ಸಾಂತ್ವನ, ಪರಿಹಾರ ಕೊಡುವ ಕೆಲಸ ಈ ಸರ್ಕಾರ ಮಾಡಿಲ್ಲ. ಲಾಟರಿ ಮೂಲಕ ಬಂದ ಸರ್ಕಾರಕ್ಕೆ ರೈತರ ಕಷ್ಟ ತಿಳಿಯುತ್ತಿಲ್ಲ. ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಮಾಡ್ತೀವಿ, ರೈತಸಂಘಗಳು, ರೈತರು ಮುಂದೆ ಬರಬೇಕು.
ಸೆ.8ರಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡ್ತೀವಿ ಎಂದು ಮಾಹಿತಿ ನೀಡಿದರು.
ಸೇಡಿನ ರಾಜಕಾರಣ ಕಾಂಗ್ರೆಸ್ ಸರ್ಕಾರ ಮಾಡ್ತೀದೆ.
ಕಾಂಗ್ರೆಸ್ ಸರ್ಕಾರ ತುಘಲಕ್ ಸರ್ಕಾರ, ಜನ ವಿರೋಧಿ, ದಲಿತ ವಿರೋಧಿಯಾಗಿದೆ ಎಂದರು.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)