*ಬಳ್ಳಾರಿ ಎಸ್ಪಿ ದುರ್ಗಿ ಲೇಡಿ ಸಿಂಗಂ ಯಂತೆ ಡಾ”ಶೋಭಾರಾಣಿ.!!*
ಹೆಡ್ ಕಾನ್ಸ್ಟೇಬಲ್ ಸೇವೆಯಿಂದ ಅಮಾನತು*
ಸಾಮಾನ್ಯವಾಗಿ ಕಳ್ಳತನವಾದರೆ ಪೊಲೀಸ್ ಠಾಣೆಗೆ ಹೋಗಿ ಜನರು ದೂರು ನೀಡುತ್ತಾರೆ ಆದರೆ ಪೊಲೀಸರೇ ಕಳ್ಳರಾದಂತಹ ಅಂತಹ ವಿಚಿತ್ರ ಘಟನೆ ಬಳ್ಳಾರಿ ಪೊಲೀಸ್ ಇಲಾಖೆ ಸಾಕ್ಷಿ ಯಾಗಿದೆ ಇತ್ತೀಚಿಗೆ ಬಂಗಾರದ ಅಂಗಡಿಯ ಮಾಲೀಕರ ಹಣ ಮತ್ತು ಬಂಗಾರ ಆಭರಣ ದರೋಡೆ ಪ್ರಕರಣದಲ್ಲಿ ಕಳ್ಳರ ಜೊತೆಗೆ ಪೊಲೀಸರು ಶಾಮೀಲಾಗಿರುವ ಮೂಲಕ ಪೊಲೀಸ್ ಇಲಾಖೆಯ ಮಾನ ಮರ್ಯಾದೆ ಹಾಳು ಮಾಡಿದ ಅಧಿಕಾರಿಗಳಿಗೆ ಈ ನೆಲದ ಕಾನೂನು ಎಲ್ಲಾರಿಗೂ ಒಂದು ಎಂದು ಸದಾ ಹೇಳುವ ಎಸ್ಪಿ ಡಾ. ಶೋಭಾ ರಾಣಿ ಅವರು ಬಳ್ಳಾರಿ ಜಿಲ್ಲೆಯ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕಳ್ಳರಿಗೆ, ದರೋಡೆ ಕೊಲೆ ಸುಲಿಗೆ ಮಾಡುವವರಿಗೆ ಹೆಡೆಮುರಿ ಕಟ್ಟುವ ಮೂಲಕ ಜನ ಸಾಮಾನ್ಯರಿಂದ
*ದುರ್ಗಿ, ಲೇಡಿ ಸಿಂಗಂ *
ಎಂದು ಖ್ಯಾತಿ ಪಡೆದಿದ್ದಾರೆ. ಇದಕ್ಕೆ ಅನ್ವರ್ಥನಾಮ ಎಂಬಂತೆ ದರೋಡೆ ಪ್ರಕರಣದಲ್ಲಿ ಇದೀಗ ಪೊಲೀಸ್ ಪೇದೆ ತಪ್ಪು ಮಾಡಿದ ಆರೋಪದ ಮೇಲೆ ಅವರನ್ನು ಸೇವೆಯಿಂದ ಅಮಾನತು ಮಾಡುವ ಮೂಲಕ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಮೂಲಕ ತಾವೊಬ್ಬ ನಿಸ್ಪಕ್ಷಪಾತಿ, ನಿಷ್ಟಾವಂತ, ದಕ್ಷ ಅಧಿಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಬಳ್ಳಾರಿ ನೂತನ ಎಸ್ಪಿ ಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಬಳ್ಳಾರಿ ಗೆ ಮಹಿಳಾ ಎಸ್ಪಿ ಲೇಡಿ ಎಂದು ಜನರು ಅಚ್ಚರಿ ದಿಂದ ಮಾತನಾಡು ಕೊಳ್ಳುವದಲ್ಲಿ ಬಿಜಿ ಬಿಜಿ ಆಗಿದ್ದರು.ಶೋಬಾ ರಾಣಿ ಎಸ್ಪಿ ಅವರು ಕೂಡ ನಿಧಾನವಾಗಿ ಯಾಲ್ಲವು ಅರ್ಥ ಮಾಡಿಕೊಳ್ಳುವ ದನ್ನು ಸೀಕ್ರೆಟ್ ಯಾಗಿ ಆರಂಭ ಮಾಡಿದ್ದಾರೆ. ಜಿಲ್ಲೆಯ ವಾತಾವರಣ ರಾಜಕಾರಣಿ ಗಳ ಅಡಳಿತ ನಿಯಂತ್ರಣಗಳು, ಯಾಲ್ಲವು ಅವರಿಗೆ ತಿಳಿದು ಕೊಳ್ಳಲು ತೂಂಭ ಸಮಯ ತೆಗೆದುಕೊಳ್ಳಲಿಲ್ಲ. ಬೆಂಗಳೂರು ನಗರದಲ್ಲಿ ಹಲವಾರು ಇಲಾಖೆ ಗಳಲ್ಲಿ ದಿಗ್ಗಜರ, ದಂಡು ಪಾಳ್ಯದಲ್ಲಿ ಕರ್ತವ್ಯ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಬಳ್ಳಾರಿ ಇವರ ಗೆ ಯಾವ ಲೇಕ್ಕಚಾರ ಇಲ್ಲದಂತೆ ಆಗಿದೆ. ಕೆಲ ವಿಚಾರ ಗಳಲ್ಲಿ ನೇರವಾಗಿ ಉತ್ತರ ಕೊಡುವ ಸಾಮರ್ಥ್ಯವನ್ನು ಹೊಂದಿರುವ ಸಿಂಗಂ.ಈಗಾಗಲೇ ಬಳ್ಳಾರಿ ಜನರು ಕೇಲ ಠಾಣೆ ಗಳು ಬಿಟ್ಟು ನೇರವಾಗಿ ಸಿಂಗಂ ಹತ್ತಿರ ಹೋಗುತ್ತಾ ಇದ್ದಾರೆ.ತಕ್ಷಣವೇ ಕೆಲಸಗಳು ಮಾಡುತ್ತ ಇದ್ದಾರೆ ಅನ್ನುವ ಅಭಿಮಾನದ ಪ್ರೀತಿ ಚಿಗುರುಗಳು ಬೆಳೆದು ನಿಂತಿವೆ. ಕೆ.ಬಜಾರಪ್ಪ ವರದಿಗಾರರು.9844445008