This is the title of the web page
This is the title of the web page

Please assign a menu to the primary menu location under menu

State

ಸರ್ಕಾರಿ ಮೊಬೈಲ್ ಫೋನ್ ಸಂಪರ್ಕಕ್ಕೆ ಸಿಗದ ಅಧಿಕಾರಿಗಳು: ಗಮನಿಸುವರೆ ಡಿಸಿ,ಎಸ್ ಪಿ,ಸಿಇಓ

ಸರ್ಕಾರಿ ಮೊಬೈಲ್ ಫೋನ್ ಸಂಪರ್ಕಕ್ಕೆ ಸಿಗದ ಅಧಿಕಾರಿಗಳು: ಗಮನಿಸುವರೆ ಡಿಸಿ,ಎಸ್ ಪಿ,ಸಿಇಓ

ಸರ್ಕಾರಿ ಮೊಬೈಲ್ ಫೋನ್ ಸಂಪರ್ಕಕ್ಕೆ ಸಿಗದ ಅಧಿಕಾರಿಗಳು: ಗಮನಿಸುವರೆ ಡಿಸಿ,ಎಸ್ ಪಿ,ಸಿಇಓ?

ಬಳ್ಳಾರಿ (29): ನಾಗರೀಕರ ಅಹವಾಲು ಆಲಿಸಿ, ಸಮಸ್ಯೆ ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾನಾ ವ್ಯವಸ್ಥೆ ರೂಪಿಸಿ ಕಾರ್ಯಗತಗೊಳಿಸಿವೆ. ಸಾಮಾಜಿಕ ಜಾಲತಾಣಗಳ ವೇದಿಕೆಗಳ ಮೂಲಕವೂ ದೂರು-ದುಮ್ಮಾನ ಹೇಳಿಕೊಳ್ಳಲು ಅವಕಾಶ ಕಲ್ಪಿಸಿವೆ.

ಜೊತೆಗೆ ಕೆಲ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಉಚಿತವಾಗಿ ಮೊಬೈಲ್ ಪೋನ್ ಗಳನ್ನು ಕೂಡ ಸರ್ಕಾರಗಳು ನೀಡಿವೆ. ಸದರಿ ಮೊಬೈಲ್ ಪೋನ್ ನಂಬರ್ ಗಳನ್ನು ಆಗಾಗ್ಗೆ ಸಾರ್ವಜನಿಕವಾಗಿ ಪ್ರಚುರಪಡಿಸುತ್ತವೆ.
ಸದರಿ ನಂಬರ್ ಗಳಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ನಾಗರೀಕರಿಗೆ ಸರ್ಕಾರಗಳು ಸಲಹೆ ನೀಡುತ್ತವೆ.

ಆದರೆ ಬಳ್ಳಾರಿ,ವಿಜಯನಗರ ಜಿಲ್ಲೆಯ ಕೆಲ ಅಧಿಕಾರಿಗಳು ? ಸಿಬ್ಬಂದಿಗಳು ಮಾತ್ರ, ಸರ್ಕಾರಿ ಮೊಬೈಲ್ ಪೋನ್ ಕರೆಗಳನ್ನು ಸ್ವೀಕರಿಸಿ ಅಹವಾಲು ಆಲಿಸುತ್ತಿಲ್ಲವೆಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

ಕರ್ತವ್ಯದ ಅವಧಿಯಲ್ಲಿ ಸರ್ಕಾರಿ ಮೊಬೈಲ್ ಪೋನ್ ಕರೆಗಳನ್ನು ಸ್ವೀಕರಿಸದಿರುವುದು ಹಾಗೂ ಸ್ವಿಚ್ ಆಫ್ ಮಾಡಿಕೊಂಡು, ತಮ್ಮ ವೈಯಕ್ತಿಕ ಮೊಬೈಲ್ ಪೋನ್ ಬಳಕೆ ಮಾಡುತ್ತಿರುವ ಹತ್ತು ಹಲವು ದೂರುಗಳಿವೆ.

ಇದರಿಂದ ನಾಗರೀಕರು ಸಣ್ಣಪುಟ್ಟ
ಕೆಲಸ ಕಾರ್ಯಗಳಿಗೂ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಇದರಿಂದ ಅಮೂಲ್ಯ ಹಣ, ಸಮಯ ವ್ಯರ್ಥವಾಗುವಂತಾಗಿದೆ. ಈ ಬಗ್ಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ ಎಂದು ಕೆಲ ನಾಗರೀಕರು ಅಳಲು
ತೋಡಿಕೊಳ್ಳುತ್ತಾರೆ,
ಹಲವು ಸರ್ಕಾರಿ ಕಚೇರಿಗಳ ಸ್ಥಿರ ದೂರವಾಣಿ (ಲ್ಯಾಂಡ್ ಪೋನ್) ಸಂಖ್ಯೆಗಳು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ.

ಮೊಬೈಲ್ ಫೋನ್ ಗಳಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಪ್ರತಿಯೊಂದಕ್ಕೂ ಅಧಿಕಾರಿ ? ಸಿಬ್ಬಂದಿಗಳನ್ನು ಭೇಟಿಯಾಗಿ ಅಹವಾಲು ತೋಡಿಕೊಳ್ಳಬೇಕು ಎಂದರೆ ಏನರ್ಥ? ಜನರ ಮನೆ ಬಾಗಿಲಿಗೆ ಆಡಳಿತ ಎಂಬ ಘೋಷಣೆಯಲ್ಲಿ ಏನಾದರು ಅರ್ಥವಿದೆಯೇ? ಎಂದು ಪ್ರಜ್ಞಾವಂತ ನಾಗರೀಕರು ಪ್ರಶ್ನಿಸುತ್ತಾರೆ.

ಪ್ರಸ್ತುತ ಸುಡು ಬಿಸಿಲು
ಬೀಳುತ್ತಿದೆ. ಕುಡಿಯುವ ನೀರು ಮತ್ತೀತರ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ, ನಾಗರೀಕರು ನಾನಾ ರೀತಿಯ ಸಮಸ್ಯೆ ಎದುರಿಸುತ್ತಾರೆ. ಈ ವೇಳೆಯೂ ಕೂಡ ಕೆಲ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಧಿಕಾರಿ ? ಸಿಬ್ಬಂದಿಗಳು ಮೊಬೈಲ್ ಪೋನ್ ಕರೆ ಸ್ವೀಕರಿಸುವುದಿಲ್ಲ ಎಂಬ ದೂರುಗಳು ನಾಗರೀಕರದ್ದಾಗಿದೆ.

ಗಮನಿಸಲಿ : ಸರ್ಕಾರಿ ಅಧಿಕಾರಿ ? ಸಿಬ್ಬಂದಿಗಳು ಸಮರ್ಪಕವಾಗಿ ಸರ್ಕಾರಿ ಮೊಬೈಲ್ ಫೋನ್ ಬಳಕೆ ಮಾಡುವ ಕುರಿತಂತೆ ಸೂಕ್ತ ನಿರ್ದೇಶನ ನೀಡಬೇಕಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ನಾಗರೀಕರು ವ್ಯಕ್ತಪಡಿಸುವ ಸಮಸ್ಯೆಗಳಿಗೆ ಸ್ಪಂದನೆ ಮಾಡುವಂತೆ ಸೂಚಿಸಬೇಕು. ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡುವ ಕಾರ್ಯ ನಡೆಸಬೇಕು.

ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪೊಲೀಸ್ ವರಿಷ್ಟ ಅಧಿಕಾರಿಗಳು ಸೂಕ್ತ ಸೂಚನೆಯನ್ನು ತಮ್ಮ ಕೆಳಹಂತದ ಇಲಾಖೆ ಅಧಿಕಾರಿಗಳಿಗೆ ರವಾನಿಸಬೇಕಾಗಿದೆ ಎಂದು ನಾಗರೀಕರು ಸಲಹೆ ನೀಡುತ್ತಾರೆ. ಸಮರ್ಪಕ ಉತ್ತರ ಕೊಡಬೇಕು, ಸರ್ಕಾರದ ಕೆಲಸ ಸಾರ್ವಜನಿಕರ ಕೆಲಸ ಎಂದು ತಿಳುದು ಕೊಳ್ಳ ಬೇಕು.. ತಮ್ಮ ಮನೆ ಕೆಲಸ ಅಲ್ಲ ಎಂದು ಅರ್ಥ ಮಾಡಬೇಕು, ಇಲ್ಲದಿದ್ದರೆ ಜನರ ಆಕ್ರೋಶ ಕ್ಕೆ ಗುರುಯಾಗಿ ಸರ್ಕಾರ ಕ್ಕೆ ಕೆಟ್ಟ ಹೆಸರು ತರಬೇಡಿ, ಸಮಸ್ಯೆಗಳು ಸೃಷ್ಟಿ ಮಾಡಬೇಡಿ ಅನ್ನವದು ಜನರ ವಾದ. ಜನರ ತೆರಿಗೆ ದಿಂದ ಸಂಬಳ, ಇನ್ನು ಹಲವಾರು ರೇತಿ ಯಲ್ಲಿ…??. ಇರುತ್ತೆ.


News 9 Today

Leave a Reply