This is the title of the web page
This is the title of the web page

Please assign a menu to the primary menu location under menu

State

ಕೃಷಿ ಇಲಾಖೆ: ನೋಂದಣಿಯಾಗದಿರುವ ಕೀಟನಾಶಕ ಉಪಯೋಗಿಸಬೇಡಿ

ಕೃಷಿ ಇಲಾಖೆ: ನೋಂದಣಿಯಾಗದಿರುವ ಕೀಟನಾಶಕ ಉಪಯೋಗಿಸಬೇಡಿ

ಕೃಷಿ ಇಲಾಖೆ: ನೋಂದಣಿಯಾಗದಿರುವ ಕೀಟನಾಶಕ ಉಪಯೋಗಿಸಬೇಡಿ
ಬಳ್ಳಾರಿ,ಜು.(04)
ಜಿಲ್ಲೆಯ ಬಳ್ಳಾರಿ ಹಾಗೂ ಕುರುಗೋಡು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಿತ್ತನೆ ಕಾರ್ಯ ಶುರುವಾಗಿದ್ದು, ರೈತರು ನೋಂದಣಿಯಾಗದ ಬೀಜ, ರಸಗೊಬ್ಬರ, ಕೀಟನಾಶಕ ಅಥವಾ ಗ್ರಾಮಗಳಲ್ಲಿ ನೇರವಾಗಿ ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಪರಿಕರಗಳನ್ನು ಉಪಯೋಗಿಸಬಾರದು ಎಂದು ಸಹಾಯಕ ಕೃಷಿ ನಿದೇರ್ಶಕ ದಯಾನಂದ ಅವರು ತಿಳಿಸಿದ್ದಾರೆ.
ಯಾವುದೇ ಗ್ರಾಮದಲ್ಲಿ ಪರವಾನಿಗೆ ಇಲ್ಲದೇ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡಿದಲ್ಲಿ ಕೂಡಲೇ ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು. ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸುವಾಗ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕು. ರಸೀದಿಗಳನ್ನು ಬೆಳೆಯ ಹಂತ ಮುಗಿಯುವವರೆಗೂ ಇಟ್ಟುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಸಂಪಾದಕೀಯ ವರದಿ.*
ಈಗಾಗಲೇ ಜಿಲ್ಲೆಯಲ್ಲಿ ಬೀಜ ರಸಗೊಬ್ಬರಗಳ, ಜನರಿಗೆ ರೈತರು ಗೆ ತಿಳಿಯದೆ ಇರುವ ನೂರಾರು ಕಂಪನಿ ಗಳು ಮಾರುಕಟ್ಟೆ ಯಲ್ಲಿ ಇದ್ದಾವೆ. ಈಹಿಂದೆ ಕೂಡ ರಾಜ್ಯ ಮಟ್ಟದಲ್ಲಿ ಹಲವಾರು ನಕಲಿ ಕಂಪನಿ ಗಳ ಮೇಲೆ ಪ್ರಕರಣ ದಾಖಲೆ ಅಗಿದ್ದಾವೆ. ಮೆಣಸಿನಕಾಯಿ ಬೀಜ ವಿಚಾರದಲ್ಲಿ ರೈತರ ಗೋಳು ನೋಡಿದ್ದು ಇದೆ. ಗೊಬ್ಬರ ದಲ್ಲಿ ಮಿಕ್ಸ್ ರ್ ಕಂಪನಿ ಗಳು ಕೂಡ ಇದ್ದಾವೆ, ಅವುಗಳ ವಿಚಾರ ಕೂಡ ಅಧಿಕಾರಿಗಳು ಚೇಕ್ ಮಾಡಬೇಕು ಅಗಿದೆ. ನಾಮಕಾವಾಸ್ಥಿ ಮಾಡಬಾರದು, ತದನಂತರ ರೈತರು ಮೋಸ ಅಗುತ್ತಾರೆ, ಪ್ರತಿ ಅಂಗಡಿ ಯಲ್ಲಿ, ರಹಸ್ಯ ಕಾರ್ಯಚರಣೆ ಮಾಡಬೇಕು, ಈಹಿಂದೆ ಕೆಲ ಖ್ಯಾತಿ ಕಂಪನಿ ಔಷಧಗಳು ಸ್ಟಾಕ್‌ ಮಾಡಿದ್ದು ಪ್ರಕರಣ ದಾಖಲೆ ಆಗಿದ್ದು ಘಟನೆ ಗಳು ಇದ್ದಾವೆ.ಆರಂಭ ದಲ್ಲಿ ನಿಯಂತ್ರಣ ಮಾಡಬೇಕು, ದುಬಾರಿ ದರದಲ್ಲಿ ಮಾರಾಟ ಆಗುವ ಅದನ್ನು ನಿಯಂತ್ರಣ ಮಾಡಬೇಕು ಅಗಿದೆ. ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.9844445008.


News 9 Today

Leave a Reply