ತಿಂಗಳಿಗೆ ಡಬಲ್ ಹಣ, ಮುಗಿಬಿದ್ದ ಮುಗ್ಧ ಜನರು ಗೋಲ್ಮಾಲಾ ಅಥವಾ ಹಣಗಳಿಕೆ ಮಾಡುವ ಬಿಸಿನೆಸ್ ವೇ??
ಬಳ್ಳಾರಿ(2) ಯಾವುದೇ ಒಂದು ವಸ್ತು ಖರೀದಿ ಮಾಡಿದ ಬಿಲ್ಲು ನೀಡಿ ಅದಕ್ಕೆ 25% ಸರ್ವಿಸ್ ಟ್ಯಾಕ್ಸ್ ನೀಡಿ,ಖರೀದಿ ಮಾಡಿದ ಹಣ ಸಮಾನವಾಗಿ ಹಣ ನೀಡಿದರೆ ಒಂದು ತಿಂಗಳಿನಲ್ಲಿ ಡಬಲ್ ಹಣವನ್ನು ವಾಪಸ್ ಕೊಡುವ ವ್ಯವಹಾರ ಒಂದು ಬೆಳಕಿಗೆ ಬಂದಿದೆ.
ಅಕ್ಕಿ,ಬೆಳೆ,ಪೆಟ್ರೋಲು ಮನೆ ಬಳಕೆ, ವಸ್ತುಗಳು ಆರೋಗ್ಯಕ್ಕೆ ಸಂಬಂಧಪಟ್ಟಿರುವ ನ್ಯೂಟ್ರಿಷನ್ ಔಷಧಿಗಳು ಇಂತಹ ಮುಂತಾದ ವಸ್ತುಗಳನ್ನು ಖರೀದಿ ಮಾಡಿ,ಉದಾಹರಣೆಗೆ,10ಸಾವಿರ ರೂಪಾಯಿ ವಸ್ತುಗಳನ್ನು ಖರೀದಿ ಮಾಡಿ ಅದಕ್ಕೆ 25%ಸರ್ವಿಸ್ ಟ್ಯಾಕ್ಸ್ ಅಂದರೆ 5.ಸಾವಿರ ಜೋಡಿಸಿ,10.ಸಾವಿರ ರೂಪಾಯಿ ಖರೀದಿ ಮಾಡಿದ ಹಣದ ಪ್ರಮಾಣವಾಗಿ ಹತ್ತು ಸಾವಿರ ರೂಪಾಯಿ ನೀಡಿದರೆ ಒಂದು ತಿಂಗಳಲ್ಲಿ ಡಬಲ್ ಅಮೌಂಟ್ ನೀಡಲಾಗುತ್ತದೆ ಎನ್ನುವ ಒಂದು ಬಿಸಿನೆಸ್ ಕೆಲ ವರ್ಷಗಳಿಂದ ಬಳ್ಳಾರಿಯಲ್ಲೇ ನಡೆಯುತ್ತದೆ.
ಖರೀದಿ ಮಾಡಿದ ವಸ್ತು ಬೆಲೆ 10.ಸಾವಿರ 25% ಸರ್ವಿಸ್ ಟ್ಯಾಕ್ಸ್ ಅಂದರೆ 5.ಸಾವಿರ ಮತ್ತು ಅಡಿಷನಲ್ 10.ಸಾವಿರ ಅಂದರೆ ಒಟ್ಟಾರೆ 25000 ಸಾವಿರ ಆಗುತ್ತೆ.
ಅದರಲ್ಲಿ 10,ಸಾವಿರ ನಾವು ಖರೀದಿ ಮಾಡಿದ್ದು ನಮ್ಮಲ್ಲಿ ಇರುತ್ತದೆ ಅಡಿಷನಲ್ ಹದಿನೈದು ಸಾವಿರ ರೂಪಾಯಿ ಅವರಿಗೆ ನೀಡಬೇಕಾಗಿರುತ್ತದೆ.
ಈತರಹ ನೀಡಿದ ಹಣವನ್ನು ಒಂದು ಬುಕ್ಕಿನಲ್ಲಿ ದಿನಾಂಕವನ್ನು ಹಾಕಿ ಒಂದು ತಿಂಗಳಿಗೆ ಪೂರ್ತಿ ಅಂದರೆ 25,ಸಾವಿರ ಹಣವನ್ನು ವಾಪಸ್ ಕೊಡಲಾಗುತ್ತದೆ ಎನ್ನುವ ಒಂದು ವ್ಯಾಪಾರ ರಾಜಾ ರೋಷವಾಗಿ ನಡೆಯುತ್ತದೆ
ಎಂದು ಸಾರ್ವಜನಿಕ ವಲಯ ದಲ್ಲಿ ಕೇಳಿ ಬರುತಾ ಇದೇ.
ಈ ರೀತಿ ಎಷ್ಟೇ ಲಕ್ಷಗಳ ಬಿಲ್ ಆಗಲಿ ಕೊಡಬಹುದು.
ಈ ರೀತಿಯಲ್ಲಿ ಡಬಲ್ ನೀಡಲಾಗುತ್ತದೆ ಎನ್ನುವ ದಂದೆ ಹುಟ್ಟು ಕೊಂಡಿದೆ, ಇದಕ್ಕೆ ಜನರು ಹಿಂದೆ ಮುಂದೆ ನೋಡದೆ ತಂಡೋಪ ತಂಡವಾಗಿ ಬಂದು ಹಣವನ್ನು ಸುರಿಯುತ್ತಿರುವುದು ಕಂಡು ಬಂದಿದೆ.
ಬಳ್ಳಾರಿಯಲ್ಲಿ ತೋರಣಾಲ ವಿಶ್ವನಾಥ್ ಅನ್ನುವವರು ಕುಂಬಾರ ಓಣಿ ನಲ್ಲಿ ಕಚೇರಿ ಮಾಡಿ ಈ ವ್ಯವಹಾರ ಮಾಡುತ್ತಿರುವುದು ಕಂಡುಬಂದಿದೆ.
ಇದು ಎಷ್ಟರ ಮಟ್ಟಿಗೆ ಸರಿ ಇದೆ ಎನ್ನುವುದು ಮರ್ಮವಾಗಿ ಉಳಿದಿದೆ.
ಈಗಾಗಲೇ ದೇಶದಲ್ಲಿ ಹಲವಾರು ರೀತಿಯಲ್ಲಿ ಜನರನ್ನು ವಂಚನೆ ಮಾಡಿ ಮನೆ ಲ್ಯಾಂಡ್ ರಿಂಗ್ ದಂದೆ ಮಾಡುತ್ತಿರುವುದು ತದನಂತರ ಟೋಪಿ ಹಾಕುತ್ತಿರುವುದು ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.
ಈ ದಂದೆಯ ಮರ್ಮ ಈವರೆಗೆ ಯಾರಿಗೂ ಅರ್ಥ ಆಗದೆ ಇರುವ ರೀತಿಯಲ್ಲಿ ಮಾಡುತ್ತಾ ಬರುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.
ಇವರನ್ನು ಭೇಟಿ ಮಾಡಲು ದಂದೆ ವಿಚಾರ ಕೇಳಲು ಐದು ನೂರು ರೂಪಾಯಿ ಮುಂಗಡೆ ಟೋಕನ್ ತೆಗೆದುಕೊಂಡು ಭೇಟಿ ಮಾಡಬೇಕಾಗುತ್ತದೆ
ಅಂತೆ..ವಾಸವಿ ಸ್ವಗೃಹ ಹೋಮ್ ನೀಡ್ಸ್ ಅಂಡ್ ಕಾನ್ಸಲ್ಟೆನ್ಸಿ ಅನ್ನುವ ಹೆಸರಿಂದ ದಂದೆ ಮಾಡುತ್ತಿರುವುದು ಬೆಳಕು ಬಂದಿದೆ.
ಆದರೇ ಈವರೆಗೆ ಯಾವದೇ ಮೋಸ ವಂಚನೆ ಮಾಡಿದ ಆರೋಪ ಗಳು ಕೇಳಿ ಬಂದಿಲ್ಲ.
ದಂದೆ ಮಾತ್ರ ಯಾವದೇ Gst ಆಗಲಿ ಅಧಿಕೃತ ವಾಗಿ ದಂದೆ ಕಾಣುಸ್ತಿಲ್ಲ, ಇಲ್ಲಿಯ ಕೆಲ ಸದಸ್ಯರಿಗೆ ನೀಡಿದ ಬಿಲ್ ನಲ್ಲಿ ಏನು ಇಲ್ಲ.
ಅಡ್ರಸ್ ಮೊಬೈಲ್ ನಂಬರ್, ಹಣದ ವಿವರ ಇದೇ,ಇನ್ನು ಕೆಲವರಿಗೆ ನೋಟು ಬುಕ್ ನಲ್ಲಿ ಸೀಲ್ ಹಾಕಿ ಕೊಟ್ಟಿರುವುದು ಕಂಡು ಬಂದಿದೆ.
ಜನರಿಗೆ ಅನುಕೂಲ ಆದ್ರೆ ಪರವಾಗಿ ಇಲ್ಲ, ಮೋಸ ಆಗಬಾರದು.
ಇಲ್ಲಿಯ ಸದಸ್ಯರು ಈ ದಂದೆಯಾ ಮಾಹಿತಿ ಕೊಡಲ್ಲ ತೋರಣಲ್ ವಿಶ್ವನಾಥ್, ಕಟ್ಟು ನಿಟ್ಟಿನ ಆದೇಶ ಇದೇ ಯಂತೆ ಯಾರಿಗೆ ಹೇಳಬಾರದು ಎಂದು.
ಇದರ ವಾಸ್ತವ ಏನು ಅನ್ನುವುದು ತಿಳಿಯಬೇಕು ಆಗಿದೆ.