ಬಿಜೆಪಿಯಿಂದ ಬಂಜಾರ ಸಮುದಾಯಕ್ಕೆ ಅನ್ಯಾಯ-ಚುನಾವಣೆ ಬಹಿಷ್ಕರಿಸಲು ನಿರ್ಧಾರ: ಡಾ.ರಾಮ್ ನಾಯ್ಕ*
ಬಳ್ಳಾರಿ,ಮಾ.25-ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೆ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ರಾಜ್ಯ ಬಿಜೆಪಿ ಸರ್ಕಾರದಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕರ್ನಾಟಕ ಬಂಜಾರ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಡಾ.ರಾಮ್ ನಾಯ್ಕ ತಿಳಿಸಿದ್ದಾರೆ.
ಇಂದು ಪತ್ರಿಕಾ ಭವನದಲ್ಲಿ ಗೋರ್ ಸೇನಾ ಕರ್ನಾಟಕ, ಕರ್ನಾಟಕ ಬಂಜಾರ ರಕ್ಷಣಾ ವೇದಿಕೆ, ಪಾರ್ವತಿ ಬಂಜಾರ ಮಹಿಳಾ ಸಮುದಾಯದ ಸಹಯೋಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಡಗೈ ಹಾಗೂ ಬಲಗೈ ಸಹೋದರ ಸಮುದಾಯಗಳಿಗೆ ಓಲೈಸುವ ಭರದಲ್ಲಿ ಬಂಜಾರ, ಕೊರಚ, ಕೊರಮ, ಸಿಳ್ಳೆಕ್ಯಾತ, ಬುಡ್ಗ ಜಂಗಮ ಹಾಗೂ ಇನ್ನಿತರ ಸಮುದಾಯಗಳನ್ನು ಬೊಮ್ಮಾಯಿ ಸರ್ಕಾರ ಕಡೆಗಣಿಸಿದೆ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ
[3/25, 6:24 PM] joshi cn6: ಬಹಿರಂಗ ಪಡಿಸದೇ, ಚರ್ಚೆಗೆ ಆಹ್ವಾನಿಸದೇ ಕೇವಲ ಚುನಾವಣೆಯ ಹಿತದೃಷ್ಟಿಯಿಂದ ಬಂಜಾರ ಸಮುದಾಯದ ಹೊಟ್ಟೆಯ ಮೇಲೆ ಬಿಜೆಪಿ ಸರ್ಕಾರ ಬರೆ ಎಳೆದಿದೆ. ಶೋಷಿತ ಸಮುದಾಯಗಳ ಮೇಲೆ ಬಿಜೆಪಿ ನೇರವಾಗಿ ಮೋಸ ಮಾಡಿದೆ. ಈ ಕಾರಣಕ್ಕಾಗಿ ಈ ಸರ್ಕಾರವನ್ನು ಕೂಡಲೇ ವಜಾಗೊಳಿಸಲು ರಾಜ್ಯಪಾಲರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವುದಾಗಿ ಹೇಳಿದರು.
*ಜನಾಂಗದ ಪ್ರತಿನಿಧಿಗಳ ಬಗ್ಗೆ ಆಕ್ರೋಶ:*
ಹರಪ್ಪಾ ಮೆಹಂಜೋದಾರೋ ಕಾಲದಿಂದಲೂ ಬಂಜಾರ ಸಮುದಾಯ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ರಾಮ ನಾಮ ಜಪ ಮಾಡಿದ್ದೇ ಬಂಜಾರ ಸಮುದಾಯ. ಈ ಸಮುದಾಯದಲ್ಲಿ 8 ಜನ ಶಾಸಕರು, ಓರ್ವ ಸಂಸದರು ಮತ್ತು ಓರ್ವ ವಿಧಾನ ಪರಿಷತ್ ಸದಸ್ಯರಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಬಂಜಾರ ಸಮುದಾಯದ ಎಲ್ಲ ಜನಪ್ರತಿನಿಧಿಗಳು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಆಡಳಿತಶಾಹಿ ಅಧಿಕಾರದಲ್ಲಿರುವ ಸಮುದಾಯದ ಶಾಸಕ ರಾಜೀವ್, ಪಿ.ಕುಡಚಿ ಹಾಗೂ ಸಚಿವರಾದ ಪಭು ಚೌಹಾಣ್ ಕೂಡ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ರಾಜ್ಯದಲ್ಲಿ 3500 ಲಂಬಾಣಿ ತಾಂಡಾಗಳಿದ್ದು, ಎಲ್ಲ ತಾಂಡಾಗಳಿಗೆ ಸಂಚರಿಸಿ ಬಿಜೆಪಿ ಚಿಹ್ನೆಗೆ ಯಾರೂ ಮತ ಹಾಕಬಾರದು ಎಂದು ಪ್ರಚಾರ ಮಾಡುವುದಾಗಿ ಹೇಳಿದರು.
*ಸಮುದಾಯದಿಂದ ಬಿಜೆಪಿಗೆ ಈ ಬಾರಿ ತಕ್ಕ ಪಾಠ:*
ಗೋರ್ ಸೇನಾ ಕರ್ನಾಟಕ ಅಧ್ಯಕ್ಷ ಗೋಪಿ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 1.10 ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಬಂಜಾರ ಸಮುದಾಯವೇ 45 ಲಕ್ಷ ಜನಸಂಖ್ಯೆ ಹೊಂದಿದೆ.
ಗೋರ್ ಸೇನಾ ಕರ್ನಾಟಕ ಅಧ್ಯಕ್ಷ ಗೋಪಿ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 1.10 ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಬಂಜಾರ ಸಮುದಾಯವೇ 45 ಲಕ್ಷ ಜನಸಂಖ್ಯೆ ಹೊಂದಿದೆ. ರಾಜ್ಯದ ಪರಿಶಿಷ್ಟ ಜಾತಿಯ 105 ಸಮುದಾಯಗಳನ್ನು ಒಡೆಯುವಲ್ಲಿ ಬಿಜೆಪಿ ಸರ್ಕಾರ ಮುಂದಾಗಿದೆ. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಬಿಜೆಪಿಗೆ ಈ ಬಾರಿ ತಕ್ಕ ಪಾಠ ಕಲಿಸುತ್ತೇವೆ. ತಾಂಡಾಗಳ ಅಭಿವೃದ್ಧಿಗಾಗಿ ತಾಂಡಾ ನಿಗಮ ಸ್ಥಾಪಿಸಿದ್ದ ಬಿಎಸ್ ಯಡಿಯೂರಪ್ಪನವರು, ಕಲಬುರಗಿಯಲ್ಲಿ ಲಂಬಾಣಿ ಸಮುದಾಯ ಹಿಂದೆ ಬಿದ್ದಿದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಇಂದು ಬೊಮ್ಮಾಯಿ ಯಾಮಾರಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯ ಬಿಜೆಪಿಗೆ ಮತ ಹಾಕುವುದಿಲ್ಲ. ನಮ್ಮನ್ನು ಬೆಂಬಲಿಸುವ ಪಕ್ಷಗಳಿಗೆ ಮತ ಹಾಕುವುದಾಗಿ ಹೇಳಿದರು.
*ಮಹಿಳೆಯರಿಗೆ ವಂಚನೆ:*
ಪಾರ್ವತಿ ಮಹಿಳಾ ಬಂಜಾರ ಸಮುದಾಯದ ಸಂಸ್ಥಾಪಕಿ ಚಂಪಾ ಚವ್ಹಾಣ್ ಮಾತನಾಡಿ, ಮೊದಲೇ ನಮ್ಮ ಸಮುದಾಯ ತೀವ್ರವಾದ ಸಂಕಷ್ಟಗಳನ್ನು ಎದುರಿಸುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದೆ ಬಿದ್ದಿದೆ. ಬೊಮ್ಮಾಯಿ ಸರ್ಕಾರದ ನಿರ್ಧಾರದಿಂದ ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ದಿವಾಳಿಯಾಗಬೇಕಾಗಿದೆ. ಈ ಮೊದಲು ಕಾಡುವಾಸಿಗಳಾದಂತೆಯೇ ಜೀವಿಸುವ ಹಂತ ಬರಲಿದೆ. ಮಹಿಳೆಯರು ಮತ್ತು ಮಕ್ಕಳು ಸಹ ಬಿಜೆಪಿ ನೇತೃತ್ವದ ಸರ್ಕಾರದ ಈ ನಿರ್ಧಾರದಿಂದ ಯೋಜನೆಗಳ ಬಳಕೆಯಲ್ಲಿ ವಂಚಿತವಾಗಲಿದ್ದಾರೆ. ನಮ್ಮ ಜನಾಂಗಕ್ಕೆ ಮೋಸ ಮಾಡುವ ಯಾವುದೇ ಪಕ್ಷವನ್ನು ಮತ್ತು ಸರ್ಕಾರವನ್ನು ಮಹಿಳೆಯರು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. .
ಕರ್ನಾಟಕ ಬಂಜಾರ ರಕ್ಷಣಾ ವೇದಿಕೆಯ ಅಧ್ಯಕ್ಷ ರಾಮ ನಾಯ್ಕ, ಗೋರ್ ಸೇನಾ ಕರ್ನಾಟಕದ ಗೌರವ ಅಧ್ಯಕ್ಷ ಸ್ವಾಮಿ ನಾಯ್ಕ ಮತ್ತು ಕಾರ್ಯದರ್ಶಿ ಚಂದ್ರ ನಾಯ್ಕ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.