This is the title of the web page
This is the title of the web page

Please assign a menu to the primary menu location under menu

State

ಜೇಸ್ಕಾಂ ಇಲಾಖೆಯಾ ಕಳ್ಳಾಟ, ಕುಡಿಯುವ ನೀರುಗೆ ಪರದಾಟ ಬಳ್ಳಾರಿ ನಗರದ ಕುಡಿಯುವ ನೀರಿನ ಸಮಸ್ಯೆ.ಹಲ್ಲು ಇದ್ದರೆ ಕಡಲೆ ಇಲ್ಲ ಕಡಲಿ ಇದ್ದರೆ ಹಲ್ಲು ಇಲ್ಲ

ಜೇಸ್ಕಾಂ ಇಲಾಖೆಯಾ ಕಳ್ಳಾಟ, ಕುಡಿಯುವ ನೀರುಗೆ ಪರದಾಟ ಬಳ್ಳಾರಿ ನಗರದ ಕುಡಿಯುವ ನೀರಿನ ಸಮಸ್ಯೆ.ಹಲ್ಲು ಇದ್ದರೆ ಕಡಲೆ ಇಲ್ಲ ಕಡಲಿ ಇದ್ದರೆ ಹಲ್ಲು ಇಲ್ಲ

ಜೇಸ್ಕಾಂ ಇಲಾಖೆಯಾ ಕಳ್ಳಾಟ, ಕುಡಿಯುವ ನೀರುಗೆ ಪರದಾಟ ಬಳ್ಳಾರಿ ನಗರದ ಕುಡಿಯುವ ನೀರಿನ ಸಮಸ್ಯೆ.ಹಲ್ಲು ಇದ್ದರೆ ಕಡಲೆ ಇಲ್ಲ ಕಡಲಿ ಇದ್ದರೆ ಹಲ್ಲು ಇಲ್ಲ

ಬಳ್ಳಾರಿ (26)ಜೇಸ್ಕಾಂ ಅಧಿಕಾರಿಗಳ ನಿರ್ಲಕ್ಷತೆ..
10.ದಿವಸಕ್ಕೊಮ್ಮೆ ಕುಡಿಯುವ ನೀರು,ಬಳ್ಳಾರಿ ಸ್ಥಿತಿ ಯಾವ ಮಟ್ಟದಲ್ಲಿ ಇದೆ.. ಗಣಿನಾಡು ಎಂದು ಇಲ್ಲಿ ಖ್ಯಾತಿ ಹೊಂದಿರುವ ಬಳ್ಳಾರಿ ಜಿಲ್ಲೆ ನೂರಾರು ಸಮಸ್ಯೆಗಳೊಂದಿಗೆ ಬಳಲುತ್ತದೆ.
ಇದರಲ್ಲಿ ಮುಖ್ಯವಾಗಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಹಭಾವ ದೊಡ್ಡ ಮಟ್ಟದಲ್ಲಿ ಇರುತ್ತದೆ.
10.ದಿನಕ್ಕೆ ಒಮ್ಮೆ ಕುಡಿಯುವ ನೀರು ಜನರಿಗೆ ಸಿಗುವುದು ಕೂಡ ಅಪರೂಪವಾಗಿದೆ.

ಡ್ಯಾಮ್ ಕೆರೆಗಳಲ್ಲಿ ಸಮರ್ಪಕವಾಗಿ ನೀರು ಇದ್ದು ಜನರಿಗೆ ಪೂರೈಸಲು ಸರ್ಕಾರ ಕ್ಕೆ ಆಗುತ್ತಾ ಇಲ್ಲ.

ಈ ಹಿಂದೆ ನಗರದ ಜನರು ಮಹಾನಗರ ಪಾಲಿಕೆಗೆ ಇಡಿ ಶಾಪ ಹಾಕುತ್ತಾ ಇದ್ದರು.

ಕೊಡ, ಬಕ್ಕಿಟು,ಬೋಗಣಿ ಹಿಡಿದು ರಸ್ತೆಗಳ ಮೇಲೆ ಧರಣಿ ಕೊಡುವ ವಾತಾವರಣ ಕೂಡ ಸೃಷ್ಟಿ ಆಗಿತ್ತು.

ಆದರೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಸರ್ಕಾರಗಳು ಬದಲಾಗುತ್ತವೆ ಪಕ್ಷಗಳು ಬದಲಾಗುತ್ತವೆ ಆದರೆ ನಾಗರಿಕರಿಗೆ ಸಕ್ರಿಯ ಮೂಲಭೂತ ಸೌಲಭ್ಯವನ್ನು ಒದಗಿಸಲು ಯಾರೊಬ್ಬರಿಗೆ ಜವಾಬ್ದಾರಿಲ್ಲ ಎನ್ನೋದಕ್ಕೆ ಕುಡಿಯುವ ನೀರಿನ, ಯುಜಿಡಿ ಸಮಸ್ಯೆ, ಉದಾಹರಣೆಯಾಗಿದೆ.

ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಲವಾರು ಗ್ಯಾರಂಟಿ ಯೋಜನೆಗಳಿಂದ ಸಾರ್ವಜನಿಕ ವಲಯದಲ್ಲಿ ಎಷ್ಟು ಸಮಸ್ಯೆಗಳು ಉದ್ಭವಿಸಿವಿದೆ ಎನ್ನುವುದು ಸರ್ಕಾರಕ್ಕೆ ಅರಿವಿಲ್ಲದಂತೆ ಆಗಿದೆ.

ನಿಮಿಷಕ್ಕೆ 10. ಬಾರಿ ವಿದ್ಯುತ್ ಕಡಿತ ದಿಂದ ಕುಡಿಯುವ ನೀರು ಸಮರ್ಪಕವಾಗಿ ಪಂಪು ಮಾಡುಲು ಆಗುತ್ತಾ ಇಲ್ಲ
ಎನ್ನುವುದು ಮಹಾನಗರ ಪಾಲಿಕೆಯವರ ವಾದಆಗಿದೆ.
ಪ್ರತ್ಯೇಕ ಫೆಡರ್ ಅಳವಡಿಸಿ 24 ತಾಸು ವಿದ್ಯುತ್ ಸರಬರಾಜು ಮಾಡಿದರೆ ಮಾತ್ರ ಸಮರ್ಪಕವಾಗಿ ಮೋಟರುಗಳು ನಡೆದು ನಾಗರಿಕರಿಗೆ ಕನಿಷ್ಠ ಎಂದರೂ ಐದು ದಿನಕ್ಕೂ ಒಮ್ಮೆ ಕುಡಿಯುವ ನೀರನ್ನು ಪೂರೈಸಬಹುದು ಆದರೆ ಬಳ್ಳಾರಿ ನಗರದ ವಾತಾವರಣ ವಿಭಿನ್ನವಾಗಿದೆ.

ಇಲ್ಲಿ ಯಾರು ಜೆಸ್ಕಾಂ ಇಲಾಖೆ ಬಗ್ಗೆ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ ಅವರು ಆಡಿದ್ದೆ ಆಟ ಅವರು ನಡೆದಿದ್ದೇ ದಾರಿ ಎನ್ನುವ ವಾತಾವರಣ ಸೃಷ್ಟಿಯಾಗಿದೆ.

ಅನುದಾನ ಇದ್ದು ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಆಗದೆ ಇರೋ ವಾತಾವರಣ ಸೃಷ್ಟಿಯಾಗಿದೆ.

ವಿದ್ಯುತ್ ಪದೇ ಪದೇ ಕಡಿತ ವಾಗುತ್ತದೆ ಇದರಿಂದ ಹಲವಾರು ಮನೆಗಳಲ್ಲಿ ವಿದ್ಯುತ್ ಉಪಕರಣಗಳು ನಾಶವಾಗಿದ್ದಾವೆ, ವಿದ್ಯುತ್ ಕಡಿತ ದಿಂದ ಎಷ್ಟೋ ಬಾರಿ ಸರ್ಕಾರದ ಆಸ್ಪತ್ರೆಗಳಲ್ಲಿ ಕೂಡ ಅನಾಹುತ ನಡೆದು ಜನರಿಗೆ ತೊಂದರೆ ಆಗಿರುವುದು ಕೂಡ ಕಣ್ಣು ಮುಂದೆ ಇದೆ,ಈಗಾಗಲೇ ಬಹುತೇಕ ಅಸುಪತ್ರೆ ಗಳಲ್ಲಿ ಜನರೇಟರ್ ಮೂಲಕ ವಿದ್ಯುತ್ ಪಡಿತ್ತಿರುವುದು ಕೂಡ ತಿಳಿದು ವಿಚಾರ,ವಿದ್ಯುತ್ ಪದೇ ಪದೇ ಕಡಿತ ಕ್ಕೆ ನೂರಾರು ಕಾರಣಗಳಿದ್ದಾವೆ ಸರಿಯಾದ ಗುಣಮಟ್ಟದ ವಿದ್ಯುತ್ ಸಾಮರ್ಥ್ಯಗಳನ್ನು ಪೂರೈಸಿದೆ ನಾಸಿರಕದ ಸಾಮಗ್ರಿಗಳನ್ನು ಬಳಕೆ ಮಾಡುವುದರಿಂದ ಬೇಸಿಗೆಯಲ್ಲಿ ಪದೇಪದೇ ವಿದ್ಯುತ್ ಕಡಿತ ಎಂದು ನುರಿತ ಇಂಜಿನಿಯರ್ ಗಳ ರಹಸ್ಯದ ಮಾತಾಗಿದೆ.

ಇದರಿಂದ ಸಾರ್ವಜನಿಕರ ಜೀವನ ಜೊತೆ ಚೆಲ್ಲಾಟ ಆಡುತ್ತದೆ ಗುಲ್ಬರ್ಗ ನಿರ್ದೇಶಕರು ಕೂಡ ಸಮರ್ಪಕ ವಿದ್ಯುತ್ ಅನ್ನು ಪೂರೈಸುವ ವಿಚಾರದಲ್ಲಿ ವಿಫಲವಾಗಿದ್ದಾರೆ ಎಷ್ಟೋ ಬಾರಿ ರೈತರು ಕೂಡ ಕಳಪೆ ಗುಣಮಟ್ಟದ ವಿದ್ಯುತ್ ಸಾಮಗ್ರಿಗಳಿಂದ ವಿದ್ಯುತ್ ಕಡಿತ ಮತ್ತು ತೊಂದರೆಗಳು ಉಂಟಾಗುತ್ತಿದ್ದಾವೆ ಎನ್ನುವ ದೂರುಗಳನ್ನು ಕೂಡ ಸಂಬಂಧಿತ ಜಿಲ್ಲಾಧಿಕಾರಿಗಳುಗೆ ನೀಡಿದ್ದು ಕೂಡ ಬೆಳಕುನಲ್ಲಿದೆ.

ಎಲ್ಲವೂ ಪರ್ಸೆಂಟೇಜ್ ಪರ್ಸೆಂಟೇಜ್ ಇದರಿಂದ ಸಾರ್ವಜನಿಕರ ಜೀವನ ಅಯೋಮಯ ಆಗಿದೆ.

ಪಾಲಿಕೆಗಳಿಗೆ ಆದಾಯ ಇಲ್ಲವೆಂದು ಇತ್ತೀಚಿಗೆ ಹೊಸ ತಂತ್ರ ಮಂತ್ರ ಗಾರಿಕೆ ಮಾಡಿ ಈ ಖಾತೆ ಬಿ ಖಾತೆ ಅನ್ನುವ ಖಾತೆಗಳನ್ನು ಮಾಡಿಸಿಕೊಳ್ಳಿ ಸರ್ಕಾರಕ್ಕೆ ಅನುದಾನ ಬರುವ ದಾರಿಯನ್ನು ಹುಡುಕಿದ್ದರು , ಕೋಟ್ಯಾಂತರ ರೂಪಾಯಿ ಅನುದಾನ ಬಂದರು ಸಮರ್ಪಕ ಕುಡಿಯುವ ನೀರನ್ನು ಪೂರೈಸದೆ ಪಾಲಿಕೆ ಇತ್ತ ಜೆಸ್ಕಾಂನ ಕಳ್ಳಾಟ ಜನರ ಆಕ್ರೋಶಕ್ಕೆ ಗುರಿಯಾಗುವ ಅಪಾಯ ತಲುಪಿದೆ.

ಜೆಸ್ಕಾಂ ಇಲಾಖೆ ಗೆ ಒಂದು ರೋಗ ಇದೇ ಸುಳ್ಳು, ಮೇಲಿನ ಅಧಿಕಾರಿಗಳು ಮೇಲೆ ಹೇಳಿ ಸರ್ಕಾರದ ಮೇಲೆ ಅಪವಾದ ಮಾಡಿ ಮುಗಿಳಿ ಗೆ ಹೋರಿಸಿ ಕೊಂಡು ಹೋಗುವ ಚಾಳಿ ಇದೇ. ಇಲ್ಲಿಯಾ ಅಧಿಕಾರಿಗಳು ಗೆ ರಾಜಕಾರಣಿ ಗಳ ರಕ್ಷಣೆ ಇದೇ, ಕೆಲವರು ಸಂಬಂದಿಗಳು ಇದ್ದಾರೆ. ಅದರಿಂದ ಡೋಂಟ್ ಕೇರ್ ಅನ್ನುವ ವಾತಾವರಣ ಇದೇ. ಜನರು ಬೆಸುತ್ತು “ಜೇಸ್ಕಾ ಇಲಾಖೆ ಅಧಿಕಾರಿಗಳ ಮನೆ ಮುಂದೆಯೇ ದಿನ ನಿತ್ಯದ ಕಾರ್ಯಕ್ರಮಗಳು ಮಾಡುವ ಸಮಯ ಸಂದರ್ಭ ಬರಬಹುದು”.. ಆಡಳಿತ ದಲ್ಲಿ ರಾಜಕೀಯ ಹಸ್ತಚೇಪ ಇರಬೇಕು.. ಆದರೇ ಸಾರ್ವಜನಿಕ ವಾಗಿ ತೊಂದರೆ ಆಗೋ ರೇತಿಯಲ್ಲಿ ಇರಬಾರದು… ಅದರ ಮೆಸೇಜ್ ಬೇರೆ ಹೋಗುತ್ತೆ…ಕೆಲ ವರ್ಷ ಗಳು ದಿಂದ ಜೇಸ್ಕಾಂ ಅಧಿಕಾರಿಗಳು ಗೂಟ ಬೋಡುದು ಕೊಂಡು ಇದ್ದಾರೆ,ಖಾದಿ ಬಾಗಿಲುಗಲು ಕಾಯುತ ಇದ್ದಾರೆ. ಇಂತಹ ಹೆಗ್ಗಣ ಗಳು ಇದ್ದರೇ ರಾಜಕಾರಣಿ ಗಳು ಗೆ ಅವಮಾನ ಅಪಮಾನ…


News 9 Today

Leave a Reply