ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ
ರಾಜ್ಯ ಕಾರ್ಯನಿರ್ವಾಹಕ ಸಮಿತಿ ನಿರ್ದೇಶಕರ ಚುನಾವಣೆ ; ಮತ ಚಲಾಯಿಸಿದ ನಾರಾ ವೈಜಯಂತಿ ರೆಡ್ಡಿ
ಹೊಸಪೇಟೆ,/ಬಳ್ಳಾರಿ.ಆ.25: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯನಿರ್ವಾಹಕ ಸಮಿತಿಯ ನಿರ್ದೇಶಕರ ಹುದ್ದೆಗಳಿಗಾಗಿ ಭಾನುವಾರ ಮತದಾನ ನಡೆಯಿತು.
ಹೊಸಪೇಟೆಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರ ಪತ್ನಿ ನಾರಾ ವೈಜಯಂತಿ ರೆಡ್ಡಿಯವರು ತಮ್ಮ ಹಕ್ಕು ಚಲಾಯಿಸಿದರು.
ಈ ವೇಳೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡ, ಉದ್ಯಮಿ ಶ್ರೀನಿವಾಸ್ ರೆಡ್ಡಿ ಹಾಗೂ ಮತ್ತಿತರರು ಹಾಜರಿದ್ದರು.