ಮೋಕ ಗ್ರಾಮ ದಲ್ಲಿ ಚುನಾವಣೆ sveep ಕಾರ್ಯಕ್ರಮ. ಬಳ್ಳಾರಿ(6) ತಾಲೂಕು ಮೋಕಾ ಗ್ರಾಮದಲ್ಲಿ ಚುನಾವಣಾ ಜಾಗ್ರತಿ ಜಾಗೃತಿ ವಾಹನಗಳಿಗೆ ಚುನಾವಣೆ ಅಧಿಕಾರಿ ಹೇಮಂತ್ ಆಯುಕ್ತರು ಬಳ್ಳಾರಿ ಜಿಲ್ಲೆ ಇವರು ಮತ್ತು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಚಾಲನೆಯನ್ನು ನೀಡಿದರು. ಪಂಜಿನ ಮೆರವಣಿಗೆಗೆ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.
ಸುಮಾರು 500 ಜನ ಉಪಸ್ಥಿತರಿದ್ದು ಚುನಾವಣಾ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಆಶಾ ಅಂಗನವಾಡಿಯ ಕಾರ್ಯಕರ್ತರು ನರೇಗಾ ಕೂಲಿಕಾರರು ಉಪಸ್ಥಿತರಿದ್ದರು,ಚುನಾವಣಾ ಜಾಗೃತಿಯ ಪ್ರಮಾಣ ವಚನವನ್ನು ಎಲ್ಲರಿಗೂ ಭೋದಿಸಲಾಗಿತ್ತು.
5-4-2023 ರಂದು ಸಾಯಂಕಾಲ 6.30 ಗಂಟೆ ಸಮಯದಲ್ಲಿ ಕಾರ್ಯಕ್ರಮ ಮಾಡಲಾಗಿತ್ತು. ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ.