ಚುನಾವಣೆ ಘೋಷಣೆಯಾಗಿಲ್ಲ, ಆದ್ರೆ ಟೈಟ್ ರೂಲ್ಸ್ ಏಕೆ!
*ಚುನಾವಣಾಧಿಕಾರಿಗಳ ತಾರತಮ್ಯ ಕಾರ್ಯಕರ್ತರ ಸಿಡಿಮಿಡಿ!*
*ಕೇವಲ ಒಂದು ಪಕ್ಷದ ಸ್ಟಿಕ್ಕರ್ ತೆರವುಗೊಳಿಸಿ ಕೆಂಗಣ್ಣಿಗೆ ಗುರಿಯಾದ ಜಿಲ್ಲಾಡಳಿತ*
ಬಳ್ಳಾರಿ : ಹೈ ವೋಲ್ಟೇಜ್ ಕ್ಷೇತ್ರ ಎನಿಸಿರುವ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಬೀಸಿ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸದಾ ಒಂದಲ್ಲಾ ಒಂದು ಸದ್ದು ಮಾಡುತ್ತಾನೆ ಇರುತ್ತದೆ.
ಹೌದು, ರಾಜಕೀಯ ವಿವಿಧ ಪಕ್ಷದ ನಾಯಕರು ತಮ್ಮ ಪ್ರಚಾರಕ್ಕಾಗಿ ನಾನಾ ಕಸರತ್ತು ಮಾಡುತ್ತಿದ್ದು, ಜಿಲ್ಲಾ ಚುನಾವಣಾಧಿಕಾರಿಗಳು ತಾರತಮ್ಯದ ಕೆಲಸಗಳು ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ.
ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ರಾಜಕೀಯ ನಾಯಕರು ಬ್ಯಾನರ್, ಪ್ಲೆಕ್ಸ್, ಆಟೋಗಳಿಗೆ ಸ್ಟಿಕ್ಕರ್, ಛತ್ರಿ ಕೊಡೆ ಸೇರಿದಂತೆ ವಿಭಿನ್ನ ರೀತಿಯ ತಮ್ಮ ಪ್ರಚಾರವನ್ನು ತಮಗೆ ತಕ್ಕಂತೆ ಕೈಗೊಂಡಿದ್ದರು.
ಆದರೆ ಚುನಾವಣಾಧಿಕಾರಿಗಳ ತಾರತಮ್ಯದ ನೀತಿ ಮಗ್ಗಲ ಮುಳ್ಳಾಗಿ ಪರಿಣಿಮಿಸಿದೆ. ಕಾರಣ ಇಷ್ಟೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಟೀಕರ್’ಗಳನ್ನು ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದನ್ನು ಮಾಡಿ ಆಟೋಗಳಿಗೆ ಅಂಟಿಸಲಾಗಿತ್ತು. ಆದರೆ ನಿನ್ನೆಯಿಂದ ಅಂಟಿಸಿದ ಸ್ಟಿಕ್ಕರ್’ಗಳನ್ನು ಚುನಾವಣಾಧಿಕಾರಿಗಳು ಕಿತ್ತು ದರ್ಪ ತೊರಿಸಿರುವ ಸಂಗತಿ ಕಾರ್ಯಕರ್ತರ ಸಿಡಿಮಿಡಿಗೊಳ್ಳುವಂತೆ ಮಾಡಿದೆ.
ಕೇವಲ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಂಟಿಸಿದ್ದ ಸ್ಟಿಕ್ಕರ್ ತೆರವುಗೊಳಿಸಿದ್ದು ಕಾರ್ಯಕರ್ತರ ಅಸಮಾಧಾನ ಸ್ಪೋಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಯುವ ನಾಯಕ ನಾರಾ ಭರತ್ ಸ್ಟಿಕ್ಕರ್ ತೆರವುಗೊಳಿಸದೇ, ಕೇವಲ ಕೆಆರ್’ಪಿಪಿ ಪಕ್ಷದ ಸ್ಟಿಕರ್ ತೆರೆವುಗೊಳಿಸಿರುವ ಜಿಲ್ಲಾ ಚುನಾವಣಾ ಅಧಿಕಾರಿಗಳ ನಡೆ ಅನುಮಾನ ಮೂಡಿಸುವಂತಿದೆ.
ಇನ್ನೂ ಚುನಾವಣೆ ಘೋಷಣೆಯಾಗಿಲ್ಲ, ನೀತಿ ಸಂಹಿತೆ ಜಾರಿಯಾಗಿಲ್ಲ ಆದರೆ ಬಳ್ಳಾರಿ ನಗರದಲ್ಲಿ ಏಕಿಷ್ಟು ಟೈಟ್ ರೂಲ್ಸ್ ಅಂತ ಜಿಲ್ಲಾಡಳಿತ ವಿರುದ್ಧ ಕಾರ್ಯಕರ್ತರ ಛಿಮಾರಿ ಹಾಕಿದ್ದಾರೆ. ಈ ಹಿಂದೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬಲದಿಂದ ಸೇರಿಸಲು ಪ್ರಯತ್ನ ಪಟ್ಟಿದ್ದ ಕೆಲ ಅಧಿಕಾರಿಗಳು, ಯುವಕರು, ಕಾರ್ಯಕರ್ತರು ರೊಚ್ಚಿಗೆದ್ದು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳು ಕಣ್ಣು ಮುಂದೆ ಇರುವಾಗಲೇ ಜಿಲ್ಲಾಡಳಿತ ತಾರತಮ್ಯ ನೀತಿ ಅನುಸರಿಸಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.ಚುನಾವಣೆ ಸಮಯದಲ್ಲಿ ಇದು ಮತ್ತೊಂದು, ರೂಪ ಪಡೆಯುವ ಸಾದ್ಯತೆ ಇದೆ. ಗೊಂದಲ ವಾತಾವರಣ ಸೃಷ್ಟಿ ಆಗುವ ಸಾಧ್ಯತೆ ಗಳು ಇದ್ದಾವೆ. ಇದಕ್ಕೆ ಚುನಾವಣೆ ಅಧಿಕಾರಿಗಳು ಜವಾಬ್ದಾರಿ ಅಗುತ್ತಾರೆ. ಪಾರದರ್ಶಕ ವಾಗಿ ಇರಲಿ ಅನ್ನುವುದು ಸಾರ್ವಜನಿಕರ ಅಭಿಪ್ರಾಯ ವಾಗಿದೆ.ಈಗಾಗಲೇ ನೂರಾರು ಚುನಾವಣೆ ಗಳು ನಡೆದು ಹೋಗಿವೆ, ಚುನಾವಣೆ ಸಮಯದಲ್ಲಿ ಏನೆಲ್ಲ ನಡೆಯಬೇಕು ನಡೆದು ಹೋಗಿವೆ.ಶಾಂತಿ ಸಾಮರಸ್ಯ ದಿಂದ ಚುನಾವಣೆ ಗಳು ನಡೆಯಬೇಕು. ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.