This is the title of the web page
This is the title of the web page

Please assign a menu to the primary menu location under menu

Technology

ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಮಾರುಕಟ್ಟೆಗೆ ಎಂಟ್ರಿ

ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಮಾರುಕಟ್ಟೆಗೆ ಎಂಟ್ರಿ

ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ವಾಹನವು ಭಾರತದ ಮಾರುಕಟ್ಟೆಯಲ್ಲಿ ಶೀಘ್ರವೇ ಲಭ್ಯವಾಗಲಿದೆ. ಕಂಪನಿಯ ಇಂಡಿಯಾ ವೆಬ್‌ಸೈಟ್‌ನಲ್ಲಿ ಈಗಾಗಲೇ ಪಟ್ಟಿ ಮಾಡಲಾಗಿದೆ, ಇದು ಮಾರುಕಟ್ಟೆ ಪ್ರವೇಶ ದಿನ ಸಮೀಪಿಸುತ್ತಿರುವುದನ್ನು ಸೂಚಿಸಿರುವಂತಿದೆ. ಆದರೆ ದಿನಾಂಕ ಖಚಿತವಾಗಿಲ್ಲ.

ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೆಲೆ $13,499, ಅಂದರೆ ಸರಿ ಸುಮಾರು 10.29 ಲಕ್ಷ ರೂ ಆಗಬಹುದು. ಈ ತಿಂಗಳು ಅಮೆರಿಕಾ ಮಾರುಕಟ್ಟೆಯಲ್ಲಿ ಮೋಟಾರ್‌ಸೈಕಲ್ ಮಾರಾಟವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ನೈಟ್‌ಸ್ಟರ್ ಮೂರು ಶ್ರೇಣಿಯಲ್ಲಿ ಲಭ್ಯವಿರಲಿದೆ. ಕಪ್ಪು, ಗನ್‌ಶಿಪ್ ಗ್ರೇ ಮತ್ತು ರೆಡ್‌ಲೈನ್ ರೆಡ್ ಬಣ್ಣದಲ್ಲಿರುತ್ತದೆ. ಡಾರ್ಕ್ ಮಿಶ್ರಲೋಹದ ಚಕ್ರಗಳು ಮತ್ತು ಬೀಫಿ ರೂಪದಲ್ಲಿ ಕೆಲವು ಆಧುನಿಕ ಶೈಲಿ ಇದೆ‌.

ಸೈಡ್ ಕವರ್‌ಗಳ ಹಿಂದೆ ಸೀಟಿನ ಕೆಳಗೆ ಹನ್ನೆರೆಡು ಲೀಟರ್ ಇಂಧನ ಟ್ಯಾಂಕ್ ಇದೆ. ಈ ತಂತ್ರವು ಗ್ರಾವಿಟಿ ವಿಷಯದಲ್ಲಿ ಮೋಟಾರ್‌ಸೈಕಲ್‌ಗೆ ಮಹತ್ವ‌ನೀಡುತ್ತದೆ.

ಇಂಧನ ತುಂಬಲು ಹಿಂಗ್ಡ್ ಲಾಕಿಂಗ್ ಸೀಟನ್ನು ಎತ್ತುವ ಅಗತ್ಯವಿದೆ. ಪೂರ್ಣ ಎಲ್ಸಿಡಿ ಡಿಸ್ಪ್ಲೇ ಬದಲಿಗೆ, ಇದು ಮಲ್ಟಿಫಂಕ್ಷನ್ ಎಲ್ ಸಿ ಡಿ ಡಿಸ್‌ಪ್ಲೇಯೊಂದಿಗೆ ನಾಲ್ಕು ಇಂಚಿನ ಅನಲಾಗ್ ಗೇಜ್ ಅನ್ನು ಪಡೆಯುತ್ತದೆ.

ಈ ಮೋಟಾರ್ ಸೈಕಲ್ ಮೂರು ವಿಭಿನ್ನ ರೈಡ್ ಮೋಡ್‌ಗಳೊಂದಿಗೆ ಬರುತ್ತದೆ. ಮಳೆ, ರಸ್ತೆ ಮತ್ತು ಸ್ಪೋರ್ಟ್ಸ್ ಹೀಗೆ ಹತ್ತು ಹಲವು ಹೊಸತನಗಳಿವೆ.


News 9 Today

Leave a Reply