ಡೀಲ್ ಡೀಲ್.ಹಣ ನೀಡಿಲ್ಲವೆಂದು ಸುಳ್ಳು ಪ್ರಕರಣ ಗಳು, ಠಾಣೆಯ ಸಿಬ್ಬಂದಿ ಗಳು,ಅಧಿಕಾರಿಗಳು ಕಿರುಕುಳ, ನೊಂದು ವಸತಿ ರಹಿತ ಕೇಂದ್ರ ದಲ್ಲಿ ವಾಸ,!!.
•ಬಳ್ಳಾರಿ ಪೊಲೀಸ್ ಠಾಣೆಯ ಕೆಲ ಸಿಬ್ಬಂದಿಗಳು ಲಂಚ ಅವತಾರ,
ನೊಂದ ಕುಟುಂಬದ ನೋವಿನ ಆರೋಪ.
ಎಷ್ಟು ಜನಕ್ಕೆ ಅನ್ಯಾಯ ಆಗಿರಬಹುದು??.
•ಆಸ್ತಿ ಕಲಹ; ಕ್ರಮಕೈಗೊಳ್ಳದ ಕೌಲ್‌ಬಜಾರ್ ಠಾಣೆಯ ಪೊಲೀಸರು: ಹಿರಿಯ ನಾಗರಿಕ ಈರಣ್ಣ ಆರೋಪ.
ಬಳ್ಳಾರಿ,ಮಾ.(17) ನಮ್ಮ ಕೌಟುಂಬಿಕ ಕಲಹ ಆಸ್ತಿಕಲಹವಾಗಿ ಮಾರ್ಪಟ್ಟು ನನ್ನ ಇಬ್ಬರು ಕಿರಿಯಮಕ್ಕಳಾದ ವಾಸುದೇವ ಮತ್ತು ಪುರುಷೋತ್ತಮ ಇವರು ನನ್ನನ್ನು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಕೊಲೆ ಮಾಡಲು ಯತ್ನಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಹಾಕಿರುತ್ತಾರೆ, ಕಳೆದ ಎರಡು ತಿಂಗಳಿನಿಂದ ನಾವು ಕೋಟೆ ಪ್ರದೇಶದ ನಿರಾಶ್ರಿತಾ ಕೇಂದ್ರದಲ್ಲಿ ವಾಸ ಮಾಡುತ್ತಿದ್ದು, ಘಟನೆಯ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳದೇ, ಹಲ್ಲೇಕೊರರ ಜೊತೆ ಶಾಮೀಲಾಗಿದ್ದಾರೆ ಎಂದು ಹಿರಿಯ ನಾಗರಿಕ ಗಾರೆ ಕೆಲಸದ ಈರಣ್ಣ ಆರೋಪಿಸಿದ್ದಾರೆ.
ತನ್ನ ಹಿರಿಯ ಮಗ ನರಸಿಂಹಲು ಇಬ್ಬರು ಹೆಣ್ಣು ಮಕ್ಕಳಾದ ನೇತ್ರಾವತಿ ಮತ್ತು ಲಲಿತ ಹಾಗೂ ಸೊಸೆಯಾದ ಲಕ್ಷ್ಮಿ ದೇವಿ ಅವರೊಂದಿಗೆ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ದೂರು ನೀಡಲು ಹೋದ ನನ್ನನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿರಿಯ ನಾಗರಿಕರಾದ ನನಗೆ ಕೌಲ್ ಬಜಾರ್ ಠಾಣೆಯ ಅಧಿಕಾರಿಗಳು ಅವಮಾನ ಮಾಡಿದ್ದಾರೆ ಎಂದರು.
ಕಳೆದ ಎರಡು ವರ್ಷಗಳ ಹಿಂದೆ ನಮ್ಮ ಕುಟುಂಬದಲ್ಲಿ ಕುಟುಂಬ ಕಲಹವಾಗಿ ನಂತರ ಅದು ಆಸ್ತಿ ವಿವಾದಕ್ಕೆ ತಿರುಗಿ ನನ್ನ ಇಬ್ಬರು ಕಿರಿಯ ಗಂಡು ಮಕ್ಕಳಾದ ಪುರುಷೋತ್ತಮ ಮತ್ತು ವಾಸುದೇವ ಎಂಬುವವರು ನನ್ನ ಮೇಲೆ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಪದೇಪದೇ ದೈಹಿಕ
ಹಲ್ಲೆ ಮಾಡುವುದು ಸೇರಿದಂತೆ ಮಾರಕಾಸ್ತ್ರಗಳಿಂದ ನಮ್ಮ ಮೇಲೆ ಕೊಲೆ ಯತ್ನ ನಡೆಸಿರುತ್ತಾರೆ.
ಈ ಘಟನೆ ಕುರಿತು ನಾನು ಮತ್ತು ನನ್ನ ಮಕ್ಕಳು ಕೌಲ್ ಬಜಾರ್ ಠಾಣೆಗೆ ದೂರು ನೀಡಲು ಹೋದಾಗ ಅಲ್ಲಿನ ಉನ್ನತ ಅಧಿಕಾರಿಯೊಬ್ಬರು ನಮಗೆ ನ್ಯಾಯ ಕೊಡಿಸದೆ ನಮ್ಮನ್ನೇ ಅವಾಚ್ಯವಾಗಿ ನಿಂದಿಸಿ ಅವಮಾನಕರ ಬೈಗಳನ್ನು ಬೈಯುತ್ತಾ ಹಿರಿಯ ನಾಗರಿಕರೆನ್ನದೆ ನನ್ನನ್ನು ಅವಮಾನಿಸಿರುತ್ತಾರೆ. ಅಷ್ಟೇ ಅಲ್ಲದೆ ನನ್ನನ್ನು ಕುರಿತು ಅವರು, ನಿನ್ನ ಆಸ್ತಿಯನ್ನು ನನ್ನಗಾದರೂ ಕೊಡು ನಾನು ಎಲ್ಲರಿಗೂ ಸಮಪಾಲಾಗಿ ಹಂಚಿ ವ್ಯಾಜ್ಯವನ್ನು ಪರಿಹರಿಸುತ್ತೇನೆ ಇಲ್ಲವಾದರೂ ಎಲ್ಲಿಗಾದರೂ ಹೋಗಿ ಸಾಯಿರಿ ನಮ್ಮ ಠಾಣೆಗೆ ಪದೇ ಪದೇ ಬರಬೇಡಿ ಎಂದು ನನ್ನನ್ನು ಗದರಿಸಿ ಕಳುಹಿಸುತ್ತಾರೆ ಎಂದು ಅಳಲನ್ನು ತೋಡಿಕೊಂಡರು.
ಅಷ್ಟೇ ಅಲ್ಲದೆ ಠಾಣೆಯ ಹೊಂದಿಬ್ಬರು ಪೇದೆಗಳು ನಮ್ಮ ಸಾಹೇಬರಿಗೆ ಹಣ ಕೊಟ್ಟರೆ ನಿಮ್ಮ ಸಮಸ್ಯೆ ಪರಿಹರಿಸುತ್ತಾರೆ ಹಣ ತೆಗೆದುಕೊಂಡು ಬನ್ನಿ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ನಮಗೆ ಲಂಚದ ಬೇಡಿಕೆ ಇಟ್ಟಿರುತ್ತಾರೆ, ಆದರೆ ನಮ್ಮ ಹತ್ತಿರ ಹಣವಿಲ್ಲದಿದ್ದರಿಂದ ನಾವು ಲಂಚ ಕೊಡಲು ಸಾಧ್ಯವಾಗಿಲ್ಲ.
ನಮ್ಮ ಕುಟುಂಬಕ್ಕಾದ ಅನ್ಯಾಯ ಮತ್ತು ಈ ಘಟನೆಯ ಕುರಿತು ನಾವು ಲೋಕಾಯುಕ್ತ ಅದಾಲತ್ ನಲ್ಲಿ ನಮಗೆ ನ್ಯಾಯ ಕೊಡಿಸುವಂತೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದಾಗ ನಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ದೂರು ದಾಖಲಿಸಿರುತ್ತಾರೆ.
ಆದರೂ ನಮಗೆ ಕೌಲ್ ಬಜಾರ್ ಪೊಲೀಸ್ ಠಾಣೆಯ ಪೊಲೀಸರಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ ಕಾರಣ ನೀವಾದರೂ ನನಗೆ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಬೇಕೆಂದು ಅಲವತ್ತು ಕೊಂಡರು. ಕೌಲ್ ಬಜಾರ್ ಠಾಣೆಯ ಪೊಲೀಸ್ ರು,ಸಂತೋಷ ರೆಡ್ಡಿ, ಕೃಷ್ಣ ರೆಡ್ಡಿ, ಪದೇ ಪದೇ, ವಿಚಾರಣೆ ನಿಮಿತ್ತ ಕಾಲ್ ಮಾಡುತ್ತಾ ಹಣವನ್ನು ಡಿಮ್ಯಾಂಡ್ ಇಟ್ಟಿದ್ದು, ಟಿಬಿ ಆಸ್ಪತ್ರೆ ಯ ಬಳಿ ಕರೆದು, ಡೀಲ್, ಮಾಡಿದ್ದಾರೆ ಎಂದು, ಮತೊಬ್ಬ ಪೊಲೀಸ್ ಆಗಿರುವ ನೇಮಿನಾಯ್ಕ್ ಮತ್ತು ಒಬ್ಬ ಫಾರೆಸ್ಟ್ ಇಲಾಖೆಯ ರಫೀಕ್ ಸೇರಿಕೊಂಡು, ಸುಳ್ಳು ಪ್ರಕರಣ ಮಾಡಿ, ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ಮೂರು FiR ಆಗಿದ್ದು, ನಮಗೆ ಯಾವುದೇ ನ್ಯಾಯ ಸಿಕ್ಕಿಲ್ಲ ಅನ್ನುತ್ತಾರೆ, ಬೆಂಗಳೂರು ನಲ್ಲಿ ಇದ್ದರು ನಮ್ಮ ಮೇಲೆ ಪ್ರಕರಣ ದಾಖಲೆ ಮಾಡುತ್ತಾರೆ, ಅದನ್ನು ಕೇಳಿದ್ರೆ ಅವರು ಸಾಹೇಬ್ರು ಜೊತೆ ಮಾತನಾಡು ಕೊಂಡಿದ್ದಾರೆ, (ಪೇಮೆಂಟ್ ) ತಮಗೆ ಹೇಳಿದ್ರು, ಅರ್ಥ ಆಗುತ್ತಾ ಇಲ್ಲವೆಂದು, ಮೂರು ಮಂದಿ ಪೊಲೀಸ್ ರು ಭಯಪಡಸಿ ನಮ್ಮ ಕುಟುಂಬದ ಅವರ ಜೊತೆ ಯಲ್ಲಿ ಅಸಭ್ಯವಾಗಿ, ವರ್ತನೆ ಮಾಡುತ್ತಾ, ಮಾನಸಿಕ ವಾಗಿ, ಹಿಂಸೆ ಮಾಡಿದ್ದಾರೆ ಎಂದು ನರಸಿಂಹ ಹೇಳಿದ್ದಾರೆ. “ದೂರು ಯಾರು ನೀಡಿದ್ದರು ತೆಗದುಕೊಳ್ಳಬೇಕೆಂದು, ಕಾನೂನು ಹೇಳುತ್ತೆ” ಆದರೇ ಠಾಣೆ ಗಳಲ್ಲಿ ಏನೆಲ್ಲಾ ಮಾಡುತ್ತಾರೆ ಅನ್ನುವುದು, ಮತ್ತಷ್ಟು ಬಹಿರಂಗವಾಗಿದೆ ಪ್ರಾಣಿಗಳಲ್ಲಿ ಮೇಲಿನ ಅಧಿಕಾರಿಗಳಿಗಿಂತಲೂ ಕೆಳಗಿನ ಸಿಬ್ಬಂದಿ ಡೀಲ್ ಡೀಲ್ ಅನ್ನುವುದು ಅವರ ಪ್ರಥಮ ಕರ್ತವ್ಯ ಆಗಿದೆ ಎಂದು ನೊಂದ ನರಸಿಂಹಲು ಬಾಯಿಂದ ಕೇಳಿದ್ದು ಅಚ್ಚರಿ ಮೂಡಿಸುತ್ತದೆ. ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಡೀಲ್ ಡೀಲ್ ಲಂಚಾವತಾರ ಠಾಣೆಯ ಅಧಿಕಾರಿಗಳು ಆಗಿರುವಂತ ಸುಭಾಷ್ ಚಂದ್ರ ಗಮನಕ್ಕೂ ಇದೆಯಾ ಅಥವಾ ಇಲ್ಲವಾ ಎನ್ನುವುದು ತಿಳಿಯಬೇಕಾಗಿದೆ ಆದರೆ ನರಸಿಂಹಲು ಅವರ ತಂಗಿ ಅವರ ಅಪ್ಪ ಹೇಳುವುದು ನೋಡಿದರೆ ಎಲ್ಲವೂ ರಾಣಿಯ ಅಧಿಕಾರಿಗಳ ಗಮನಕ್ಕೆ ಇದ್ದು ಇಂತಹ ಡೀಲ್ ಪ್ರಕರಣಗಳು ನಡೆಯುತ್ತಿದ್ದಾವೆ ಎನ್ನುವುದು ಕಂಡು ಬರುತ್ತದೆ,ನರಸಿಂಹುಲು, ಬೋವಿ ಸಮಾಜದ ಮೀಸಲಾತಿ ಸಮಾಜವಾಗಿದ್ದು,ಅವರಿಗೆ ಠಾಣೆಯಲ್ಲಿ ನ್ಯಾಯ ಸಿಕ್ಕಿಲ್ಲವೆಂದರೆ ಇನ್ನು ಮುಂದೆ ದೂರುದಾರರು ಯಾವ ನಂಬಿಕೆ ಮೇಲೆ ಪೊಲೀಸ್ ಠಾಣೆಗೆ ಹೋಗುತ್ತಾರೆ ಎನ್ನುವುದು ಜನರ ಆಕ್ರೋಶ ಆಗಿದೆ.
ಜಿಲ್ಲೆಯಲ್ಲಿ ಇತ್ತೀಚಿಗೆ ದಿಟ್ಟ ಧೈರ್ಯದಿಂದ ಕೆಲಸ ಮಾಡುವ ಪೊಲೀಸ್ ವರಿಷ್ಠ ಅಧಿಕಾರಿಗಳಾಗಿರುವಂತ ಶೋಭಾ ಅವರು ಇದ್ದು ಪೊಲೀಸ್ ಠಾಣೆಗಳಲ್ಲಿ ಲಂಚಾವತಾರಗಳು ನಡೆಯುತ್ತಿದ್ದವಂದರೆ ಇಲಾಖೆ ಗೌರವ ಮೂರು ಕಾಸಿಗೆ ಹೋದಂತೆ ಎನ್ನುವುದು ಸಾರ್ವಜನಿಕರ ಆಕ್ರೋಶ ಆಗಿದೆ.
ಈ ಪ್ರಕರಣಗಳು ಎಸ್ ಪಿ ಶೋಭಾ ಅವರು ಬರಲಿಕ್ಕೆ ಮೊದಲಿಗೆ ನಡೆದಿರುವ ಪ್ರಕರಣಗಳು. ಠಾಣೆಗಳಲ್ಲಿ ಸಿಬ್ಬಂದಿ ರಾಜಾರೋಷವಾಗಿ ದೂರುದಾರರ ರಿಂದ ಹಣವನ್ನು ಪಿಕುತ್ತಾರೆ ಅಂದರೆ ಪೊಲೀಸ್ ಇಲಾಖೆಯ ಮರ್ಯಾದೆ ಹರಾಜು ಆಗಿದೆ.
ಇಲ್ಲಿ ಕೆಲ ಪೊಲೀಸ್ ರು, ಇದೇ ಕೆಲಸಕ್ಕೆ ನಿಂತು ಹಣ ನೀಡಿಲ್ಲ ಅಂದ್ರೆ ವಿರೋಧಿ ದೂರದಾರರ ಮೇಲೆ ಪ್ಲಾನ್ ಮಾಡಿ ಹಲ್ಲೆ, ಮಾಡಿಸಿ ಅವರನ್ನು ಕಷ್ಟಕ್ಕೆ ಗುರಿ ಮಾಡಿ, ಡೀಲ್ ಡೀಲ್ ಮಾಡುತ್ತಾರೆ.
ನರಸಿಂಹಲು ಬಾಯಿಂದ ಹೊರಗೆ ಬಂದಿದೆ, ಅಂದರೆ ಪೊಲೀಸ್ ಇಲಾಖೆಯಲ್ಲಿ ಈ ರೀತಿಯ ಕೆಲ ಸಿಬ್ಬಂದಿಗಳು ಇದ್ದಾರೆ ಅನ್ನುವ ಅಪಾಯ ವಿಷಯ ಗಳು ಹೊರಗೆ ಬಿದ್ದಿದೆ.
ಈಗಾಗಲೇ ಠಾಣೆಗಳು ರಾಜಕಾರಣಿ ಗಳು,ಅತಿಥಿ ಠಾಣೆಗಳು ಆಗಿದ್ದಾವೆ ಅನ್ನುವುದು ಸಾರ್ವಜನಿಕ ವಲಯದಲ್ಲಿ ಇದೇ.
ಕೆಲ ಠಾಣೆಗಳಿಗೆ ಒಬ್ಬರು ಅಧಿಪತಿ ಗಳು, ಇನ್ನು ಕೆಲ ಠಾಣೆಗಳಿಗೆ ಮತ್ತೊಬ್ಬರು ಅಧಿಪತಿ ಗಳು ಆಗಿದ್ದಾರೆ.
ನೇರವಾಗಿ ಠಾಣೆಗಳಲ್ಲಿ ರಾಜಕಾರಣಿಗಳ ಬಳಿ ಹೊದ್ರೆ ಕೆಲಸ ಆಗುತ್ತೆ ಅನ್ನುವುದು ಮೂಲೆ ಮೂಲೆ ಗಳು ಹೇಳುತ್ತೆ.!!. ಠಾಣೆಗಳು ದೂರ ತೆಗೆದುಕೊಳ್ಳುವ ವಿಚಾರ ದಲ್ಲಿ ಸಕ್ರಿಯ ವಾಗಿ ಕೆಲಸ ಮಾಡದೇ ಇದನ್ನು ಠಾಣೆಗಳು ಅಪಾಯ ಮಟ್ಟಕ್ಕೆ ತಳ್ಳಿ ಇವರು ಚಳಿ ಕಾಯಿಸಿ ಕೊಳ್ಳುತ್ತಾರೆ.
ಈಗಾಗಲೇ ಬಳ್ಳಾರಿ ಯಲ್ಲಿ ಸಾವಿರರು ಪ್ರಕರಣ ಗಳು ಸುಳ್ಳು ನಿಂದ ಕೂಡಿದ್ದು ಇದ್ದಾವೆ ಅನ್ನೋದು ನೊಂದ ಅವರ ಬಾಯಿ ನಲ್ಲಿ ಇದ್ದಾವೆ.
ಪೊಲೀಸ್ ರು ಅಂದುಕೊಂಡರೆ ಏನಾದರು ಮಾಡುತ್ತಾರೆ ಅನ್ನುವುದು ಜನರಿಗೆ ಮನದಟ್ಟಿದೆ, ಇದು ಮುಂದೆ ಯಾವ ಅಪಾಯ ಕ್ಕೆ ಹೋಗುತ್ತೆ ಅನ್ನುವುದು, ಕಾಲ ನಿರ್ಣಯ…??.
ಜಿಲ್ಲೆ SP ಅವರು ಏನು ಕ್ರಮ ಮಾಡುತ್ತಾರೆ, ಇದನ್ನು ಯಾವ ರೀತಿ ಯಲ್ಲಿ ಸರಿಪಡಿಸುತ್ತಾರೆ ಅನ್ನುವುದು ಕಾದು ನೋಡಬೇಕು.
ಪತ್ರಿಕಾಗೋಷ್ಠಿಯಲ್ಲಿ ಈರಣ್ಣನವರ ಹಿರಿಯ ಮಗ ನರಸಿಂಹಲು ಹೆಣ್ಣು ಮಕ್ಕಳಾದ ನೇತ್ರಾವತಿ ಮತ್ತು ಲಲಿತ ನರಸಿಂಹಲು ಪತ್ನಿ, ಲಕ್ಷ್ಮಿ ದೇವಿ, ಅವರ ಕುಟುಂಬ ಸ್ನೇಹಿತರಾದ ಸ್ವಾಮಿ ರೆಡ್ಡಿ ಅಂದ್ರಾಳ್, ದೊಡ್ಡಬಸಪ್ಪ ಇದ್ದರು.