ರೈತರಿಂದ ಕಮಿಷನ್ ಪಡೆಯುವಂತಿಲ್ಲ. ಅನ್ನದಾತರ ಬೆನ್ನು ಗೆ ಕಟ್ಟೆಮನೆ ನಾಗೇಂದ್ರ.
ಶೇಂಗಾ ಖರೀದಿ ಆರಂಭ ರೈತರಿಗೆ ಯಾವುದೇ ತೊಂದರೆ ಇಲ್ಲ.
ಬಳ್ಳಾರಿ (8) ಕೃಷಿ ಉತ್ಪನ್ನ ಮಾರುಕಟ್ಟೆ ಬಂದ್ ಆಗಿ 8.ದಿನಗಳು ಕಳದಿದ್ದು ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು.
ದಳಾಲಿ ವರ್ತಕರ ನಡುವೆ, ಮತ್ತು ಖರೀದಿ ಮಾಡುವ ಅವರು ಮದ್ಯ ಭಿನ್ನ ಅಭಿಪ್ರಾಯ
ದಿಂದ ಖರೀದಿಯಲ್ಲಿ ಧರ ಹೆಚ್ಚು ಕಡಿಮೆ ಆಗಿತ್ತು, ರೈತರು ಗಲಾಟೆ ಮಾಡಿದ್ದರು,
ಬಳ್ಳಾರಿ ಮಾರುಕಟ್ಟೆಯಲ್ಲಿ ಖರೀದಿ ನಿಂತುಹೋಗಿತ್ತು, ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಂಧ್ರ ಮತ್ತು ಇತರ ರಾಜ್ಯಗಳಿಂದ ದೊಡ್ಡಮಟ್ಟದಲ್ಲಿ ಶೇಂಗಬರುತ್ತಿದೆ.
ಈ ಹಿಂದೆ ರೈತರು ಹಸಿ ಇರುವ ಶೇಂಗವನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದರು,
ಆಸಂದರ್ಭದಲ್ಲಿ ಖರೀದಿದಾರರು ಹಸಿ ಶೇಂಗವನ್ನು ಖರೀದಿ ಮಾಡಲು ಆಗುವುದಿಲ್ಲ ಮತ್ತು ಅದನ್ನು ಒಣಗಿಸಿ ಮಾರುಕಟ್ಟೆಗೆ ಕಳಸಲು ತುಂಬಾ ಕಷ್ಟವಾಗುತ್ತದೆ ಇದರಿಂದ ಗುಣಮಟ್ಟದ ಶೇಂಗಾ ಕೂಡ ನಷ್ಟಕ್ಕೆ ಗುರಿಯಾಗುತ್ತದೆ ಎಂದು ಅದನ್ನು ಖರೀದಿ ಮಾಡಲು ಆಗುವುದಿಲ್ಲವೆಂದು ನಿಲ್ಲಿಸಲಾಗಿತ್ತು,
ಇದರಿಂದ ಕಂಗಾಲಾದ ರೈತರು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅನ್ಯಾಯ ಆಗಿದೆ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿ ವಿಡಿಯೋಗಳ ಮೂಲಕ ಪ್ರಚಾರ ಮಾಡಿದ್ದರು.
ಅದರಿಂದ ಮಾರುಕಟ್ಟೆ ಗೊಂದಲಕೇ ಗುರಿಯಾಗಿತ್ತು.
ತದನಂತರ ನೂತನವಾಗಿ ಬಂದಿರುವಂತಹ ಮಾರ್ಕೆಟ್ ಸೆಕ್ರೆಟರಿ ವಿ. ಆರ್. ಜಯ ಕುಮಾರ್ ಅವರು ರೈತರಿಂದ ಯಾವುದೇ ಕಮಿಷನ್ ತೆಗೆದುಕೊಳ್ಳಬಾರದೆಂದು ದಳಾಲಿ ಅಂಗಡಿಯ ಮಾಲೀಕರ ಮೇಲೆ ನಿರ್ಬಂಧವನ್ನು ಏರಿದ್ದರು, ದಳಾಲಿ ಅಂಗಡಿ ಮಾಲೀಕರು ಏನಿದ್ದರೂ ಶೇಂಗ ಖರೀದಿ ಮಾಡಲು ಬರುವ ಟೆಂಡರ್ ದಾರರ ಬಳಿ ತಮ್ಮ ಕಮಿಷನ್ ಪಡಿಬೇಕಂದು ಆದೇಶ ಮಾಡಿದ್ದರು.
ಇದರಿಂದ ಕಂಗಾಲದ ಅಂಗಡಿ ಮಾಲೀಕರು ಕಮಿಷನ್ ಇಲ್ಲವೆಂದರೆ ನಾವು ಏನು ಮಾಡುವುದೆಂದು ಹಳೆ ಪದ್ದತಿಯಲ್ಲಿ ಖರೀದಿ ಮಾಡಲು ಕಷ್ಟವಾಗುತ್ತದೆ ಎಂದು ವಾದ ಮಾಡುತ್ತಾ ಮಾರ್ಕೆಟಿಯನ್ನು ನಿಲ್ಲಿಸಲಾಗಿತ್ತು.
ಕೊನೆಗೆ ಶುಕ್ರವಾರ ಮಾರ್ಕೆಟ್ ಸಮಿತಿ ಅಧ್ಯಕ್ಷರಾಗಿರುವಂತಹ ಕಟ್ಟೆಮನೆ ನಾಗೆಂದ್ರ, ಉಪಾಧ್ಯಕ್ಷ ಕಪ್ಪಗಲ್ ರಾಮಣ್ಣ ಸೆಕ್ರೆಟರಿ ಜಯ ಕುಮಾರ್ ಅವರು ದಳಾಲಿ ಮತ್ತು ಟೆಂಡರ್ ದಾರರನ್ನು ಅಂಗಡಿಯ ಮಾಲೀಕರನ್ನು ಸೇರಿಸಿ ಸಮಾವೇಶ ನಡೆಸಿ ರೈತರಿಂದ ನಯಾ ಪೈಸ ಕಮಿಷನ್ ತೆಗೆದುಕೊಳ್ಳಬಾರದೆಂದು ತಾವು ಏನಿದ್ದರೂ ಶೇಂಗ ಖರೀದಿ ಮಾಡಲು ಬಂದಿರುವ ಅವರಿಂದಲೇ ಪಡೆಬೇಕೆಂದು ತೀರ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಖರೀದಿ ದಾರರು ಯಾರು ಬರುತ್ತಿಲ್ಲವೆಂದು , ಹೀಗಾದರೆ ಮಾರುಕಟ್ಟೆ ಬೀಗ ಹಾಕಬೇಕಾಗುತ್ತದೆ ಎಂದು ಕೆಲವರು ಹೇಳುಲಾಗಿತ್ತು, ಇದಕ್ಕೆ ಆಕ್ರೋಶ ಗೊಂಡ,ಅಧ್ಯಕ್ಷ ನಾಗೇಂದ್ರ ಅವರು ಮಾರುಕಟ್ಟೆಗೆ ಬೀಗ ಹಾಕಬೇಕಾಗುತ್ತದೆ ಎಂದು ಹೇಳಲು ನೀವು ಯಾರು ಸರ್ಕಾರ ಇದೆ. ಖರೀದಿದಾರನ್ನು ಬೇರೆ ಕಡೆಯಿಂದ ಕರಿಸಿ ವ್ಯಾಪಾರ ವಹಿವಾಟು ಮಾಡಬೇಕಾಗುತ್ತದೆ, ಮಾಡುತ್ತೇವೆ ಎಂದು ಹೆದರಿಕೆ ಗಳನ್ನು ಮಾಡಬೇಡಿ ಎಂದು ತಿಳಿಸಿದರು.
ಶುಕ್ರವಾರ ಬಳ್ಳಾರಿ ಮಾರುಕಟ್ಟೆಯಲ್ಲಿ ಶೇಂಗಾ ಖರೀದಿಯಾಗಿದ್ದು ಸಂತೋಷದ ಸುದ್ದಿ ಆಗಿದೆ.
ಇನ್ನು ಮುಂದೆ ರೈತರಿಗೆ ಯಾವುದೇ ತೊಂದರೆ ಆಗದಂತೆ ಯಾವುದೇ ದಳಾಲಿ ಕಮಿಷನ್ ಇಲ್ಲದಂತೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು , ಸೆಕ್ರೆಟರಿ ಅವರು ಅಧ್ಯಕ್ಷರು ನಾಗೇಂದ್ರ ತಿಳಿಸಿದ್ದಾರೆ. ಒಂದು ವಾರ ದಿಂದ ಮಾರುಕಟ್ಟೆ ಬಂದ್ ಆಗಿತ್ತು, ಹಮಾಲಿರ ಗೆ ಕೂಡ ತೊಂದ್ರೆ ಆಗಿದೆ ಅವರು ಗೆ ಕೂಡ ಅನುಕೂಲ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕರೂರು ಮಾಧವರೆಡ್ಡಿ ರೈತ ಸಂಘ. ಪಾಲ್ಲಣ್ಣ ಅವರು ಉಪ ಸ್ಥಿತಿ ಇದ್ದರು.