ಕೃಷಿ ಉತ್ಪನ್ನ ಮಾರುಕಟ್ಟೆಗೆ ಗ್ರಹಣ ರೈತರ ಅಲೆದಾಟ ಟೆಂಡರ್ ಆದರೂ ರೈತರು ಮನೆಗೆ ಇಲ್ಲ!!.
ಬಳ್ಳಾರಿ (25)ಕೃಷಿ ಉತ್ಪನ್ನ ಮಾರುಕಟ್ಟೆಗೆ ಏನೋ ಒಂದು ರೀತಿಯಲ್ಲಿ ಗ್ರಹಣ ಹಿಡಿಯುತ್ತಿದೆ.
ಇದೆ ಸೋಮವಾರ ಮಾರುಕಟ್ಟೆಗೆ ಆಂಧ್ರ ಮತ್ತು ಕರ್ನಾಟಕದಿಂದ 20 ಚೀಲ ಶೇಂಗಾ ಇನ್ನು ಉಳಿದು ದವಸ ಧಾನ್ಯಗಳು 5 ಸಾವಿರ ಒಟ್ಟಾರೆ 25 ಸಾವಿರ ಚೀಲ ಮಾರುಕಟ್ಟೆಗೆ ಬಂದಿತ್ತು.
ಸೋಮವಾರ ಟೆಂಡರ್ ಆಗಿ ಎಲ್ಲಾ ರೈತರು ತಮ್ಮ ಮನೆಗಳಿಗೆ ಹೋಗಬೇಕಾಗಿತ್ತು,ಆದರೆ ಇಲ್ಲಿ ಅಂಗಡಿ ಮತ್ತು ಹಮಾಲಿ ಗಳ ಮಧ್ಯ ಗೊಂದಲ ಸೃಷ್ಟಿಸಿಕೊಂಡು, ಟೆಂಡರ್ ಆಗಿರತಕ್ಕಂತ ಮಾಲನ್ನು ತೂಕ ಹಾಕದೆ ನಿಲ್ಲಿಸಿ ಬಿಡಲಾಗಿದೆ.
ಇಂದು ಮಂಗಳವಾರ ಬೆಳಿಗ್ಗೆ ತುಕಾಗಳು ಆರಂಭಿಸಿದ್ದು ಬೆಳಕಿಗೆ ಬಂದಿದೆ.
ಬಳ್ಳಾರಿಗೆ ಬಹುತೇಕ ಆಂಧ್ರಪ್ರದೇಶದಿಂದ ಎಚ್ಚಿನ ಮಟ್ಟದಲ್ಲಿ ಶೇಂಗಾ ಬರುತ್ತದೆ,ಇದರಿಂದ ಸರ್ಕಾರಕ್ಕೆ ಆದಾಯ ಕೂಡ ಇದೆ ಆದರೆ ಸೋಮವಾರ ನಡೆದಂತಹ ಘಟನೆ ಅಂಗಡಿ ಮಾಲೀಕರು ತಮ್ಮ ಅಂಗಡಿಗೆ ಬಂದಿರುವ ಸರಕು ತಮ್ಮ ಅಂಗಡಿಗಳ ವ್ಯಾಪ್ತಿಯಲ್ಲಿ ಹಾಕಿಕೊಳ್ಳದೆ ಪಕ್ಕದ ಅಂಗಡಿಯವರ ಮುಂದೆ ಹಾಕಿ ಸಮಸ್ಯೆಗಳು ಸೃಷ್ಟಿ ಮಾಡಿಕೊಂಡು ಅದನ್ನು ಆಜುಬಾಜು ಅಂಗಡಿ ಮಾಲಿಕರು ಹಮಾಲರು ಮಾತು ಮಾತು ಬೆಳೆಸಿಕೊಂಡು ಮಾರ್ಕೆಟ್ ಅನ್ನು ಬಂದು ಮಾಡಲಾಗಿದೆ.
ಇದರಿಂದ ರೈತರು ಕಷ್ಟಗಳನ್ನು ಅನುಭವಸಿಕೊಂಡಿದ್ದಾರೆ.
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಏನೋ ಒಂದು ರೀತಿಯಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತದೆ .
ಇತ್ತೀಚಿಗೆ ಅಂಗಡಿ ಮಾಲೀಕರು, ಟೆಂಡರ್ ದಾರರ ಮಧ್ಯದಲ್ಲಿ ವ್ಯತ್ಯಾಸ ಮಾಡಿಕೊಂಡು ಟೆಂಡರ್ ಹಾಕದೆ ನಿಲ್ಲಿಸಿ ರೈತರಿಗೆ ತೊಂದರೆ ನೀಡಿದ್ದು ತಿಳಿದ ಸಂಗತಿ.
ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರು ಯಾವುದನ್ನೂ ಸರಿಯಾಗಿ ಸರಿಪಡಿಸದೆ ನಿರ್ಲಕ್ಷ ವಹಿಸಿದ್ದಾರೆ ಎನ್ನುವುದು ಕೆಲ ಅಂಗಡಿ ಮಾಲೀಕರ ಆರೋಪ.
ಇದರಿಂದ ವ್ಯವಸ್ಥೆ ಹಾಳು ಆಗುತ್ತಾ ಇದೆ.
ಸರ್ಕಾರಕ್ಕೆ ಬರುವಂತಹ ಆದಾಯ ಶೂನ್ಯ ಆಗುತ್ತದೆ.
ಮಾರುಕಟ್ಟೆಗೆ ಕೆಟ್ಟ ಹೆಸರು ಬರುವ ಅಪಾಯ ಕೂಡ ಸೃಷ್ಟಿಯಾಗಿದೆ ಇದರ ಮಧ್ಯದಲ್ಲಿ ಶೇಂಗಾ ಟೆಂಡರ್ ಧರ ಕೂಡ ಕಡಿಮೆ ಆಗಿದೆ ಎಂದು ರೈತರ ನೋವು.
ಆಂಧ್ರ ಮೂಲದ ರೈತರು ತಮ್ಮ ಕಷ್ಟವನ್ನು ಹೇಳಿ ಕೊಂಡಿದ್ದಾರೆ. ಮದ್ಯ ರಾತ್ರಿ ನ್ಯೂಸ್ 9ಡೇ ಸೋಶಿಯಲ್ ಮೀಡಿಯಾ ರಿಯಾಲಿಟಿ ಚೆಕ್ ಮಾಡಲಾಗಿತ್ತು.
ಆಸಂದರ್ಭದಲ್ಲಿ ಕೃಷಿ ಉತ್ಪನ್ನ ಅಧ್ಯಕ್ಷರು ಕಟ್ಟೆಮನೆ ನಾಗೇಂದ್ರ ಮತ್ತು ಅಧಿಕಾರಿಗಳು ವಾಹನದಲ್ಲಿ ಓಡಾಡುತ್ತಾ ವೀಕ್ಷಣೆ ಮಾಡುತ್ತಾ ಇದ್ದಿದ್ದು ಕಂಡು ಬಂತು ಆದರೆ ರೈತರ ಕಷ್ಟಕ್ಕಂತು ಯಾರು ಬಂದಿಲ್ಲ ಅನ್ನುವುದು ಮಧ್ಯರಾತ್ರಿ ಅಲ್ಲಿಯ ಅಸ್ತವ್ಯವಸ್ಥೆ ನೋಡಿದವರಿಗೆ ಅರಿವು ಆಗುತ್ತೆ..