This is the title of the web page
This is the title of the web page

Please assign a menu to the primary menu location under menu

State

ರೈತರ ಜೊತೆ ರೈತಣ್ಣನ ಸವಿ ಭೋಜನ ಸವಿದ ಮಾಜಿ ಸಚಿವ ಎಂ. ದಿವಾಕರ ಬಾಬು

ರೈತರ ಜೊತೆ ರೈತಣ್ಣನ ಸವಿ ಭೋಜನ ಸವಿದ ಮಾಜಿ ಸಚಿವ ಎಂ. ದಿವಾಕರ ಬಾಬು

ರೈತರ ಜೊತೆ ರೈತಣ್ಣನ ಸವಿ ಭೋಜನ ಸವಿದ ಮಾಜಿ ಸಚಿವ ಎಂ. ದಿವಾಕರ ಬಾಬು.

* ರೈತರ ಉಚಿತ ಭೋಜನದಲ್ಲಿ ಭಾಗವಹಿಸಿ ರೈತರಿಗೆ ಉಣಬಡಿಸಿದ ಮಾಜಿ ಸಚಿವ ದಿವಾಕರ ಬಾಬು

* ನೂತನ ತಂತ್ರಜ್ಞಾನ ಬಳಕೆಯಿಂದ ಸಿದ್ದಪಡಿಸುವ ಶುಚಿ ರುಚಿ ಭೋಜನ ವಿಕ್ಷೇಣೆ

* ಒಂದು ದಿನ ತಮ್ಮ ಸ್ವಂತ ಖರ್ಚಿನಲ್ಲಿ ರೈತ ಭೋಜನ ನೀಡವ ಭರವಸೆ

ಬಳ್ಳಾರಿ;- ಬಳ್ಳಾರಿ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಧೆ,ದಲ್ಲಾಳಿ ವರ್ತಕರ ಸಂಘ, ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಎ.ಪಿ.ಎಂ.ಸಿ. ಆವರಣದಲ್ಲಿ ಆಯೋಜಿಸಿರುವ ಉಚಿತ ರೈತಣ್ಣ ಊಟದ ಕೇಂದ್ರ ಕ್ಕೆ ಮಾಜಿ ಸಚಿವ ಎ,ದಿವಾಕರಬಾಬು ಭೇಟಿ ನೀಡಿದ್ದರು.

ದೂರದ ಪ್ರದೇಶಗಳಿಂದ ಆಗಮಿಸಿರುವ ರೈತರುಗಳಿಗೆ ಶುಚಿ ರುಚಿಯ ಭೋಜನದ ಆಯೋಜನೆಯ ಸಂಘಟಕರು ಈ ಹಿಂದೆ ಮಾಜಿ ಸಚಿವರ ಬಳಿ ತಿಳಿಸಿದಾಗ ಒಂದು ದಿನ ತಾವು ರೈತಣ್ಣ ಭೋಜನಕ್ಕೆ ಬರುವುದಾಗಿ ತಿಳಿಸಿದ್ದರ ಹಿನ್ನಲೆಯಲ್ಲಿ ಇಂದು ಮಧ್ಯಾನ್ಹ ಊಟದ ಕೇಂದ್ರಕ್ಕೆ ಭೇಟಿ ನೂತನ ತಂತ್ರಜ್ಞಾನ ಬಳಸಿ ಆಹಾರ ಸಂಸ್ಕರಣೆ ಹಾಗೂ ಸಿದ್ದಪಡಿಸುವುದನ್ನು ಮೊದಲಿಗೆ ವಿಕ್ಷೀಸಿ ಸಂಘಟನೆಗಳ ಪದಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಸರದಿಸಾಲಿನಲ್ಲಿ ಬಂದ ರೈತರುಗಳಿಗೆ ಭೋಜನವನ್ನು ತಾವೇ ಬಡಿಸಿದರು, ಕೆಲ ರೈತರೊಂದಿಗೆ ಚರ್ಚೆ ನಡೆಸಿ, ತಾವು ಸಹ ಅವರುಗಳಿಗೆ ನೀಡಿದ ಆಹಾರವನ್ನು ತಾವು ಊಟ ಮಾಡುವ ಮೂಲಕ ಶುಚಿರುಚಿ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಂಘಟಕರುಗಳು ದಿವಾಕರ ಬಾಬುರವರನ್ನು ಗೌರವಿಸಿ ಸನ್ಮಾನಿಸಿದರು.

ಸಂಘಟಕರೊAದಿಗೆ ಮಾತನಾಡಿದ ಮಾಜಿ ಸಚಿವರು ದೇಶಕ್ಕೆ ಅನ್ನದಾತ ರೈತ, ರೈತಕ್ಕೆ ಕೇಂದ್ರಕ್ಕೆ ರೈತ ಬಂದಾಗ ಹಸಿವಿನಿಂದ ಇರಬಾರದು ಎಂದು ಕೇಂದ್ರದಲ್ಲಿ ಉಚಿತ ಭೋಜನದ ವ್ಯವಸ್ಥೆ ಮಾಡಿದ್ದು ಶಾಘ್ಲನೀಯ, ಒಂದು ದಿನದ ಭೋಜನದ ಖರ್ಚು ನನ್ನ ಸ್ವಂತಿಕೆಯಲ್ಲಿ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಚೇಂಬರ್ ಆಫ್ ಕಾರ್ಮಸ್ ನ ಅಧ್ಯಕ್ಷ ಶ್ರೀನಿವಾಸ ರಾವ್,ಕಾರ್ಯದರ್ಶಿ ಯಶವಂತ್ ರಾಜ್,ಉಪಾಧ್ಯಕ್ಷ ಮಹಾರುದ್ರಗೌಡ, ಸುರೇಶ್ ಬಾಬು,ರಾಮಚಂದ್ರ,ರ‍್ರಿಸ್ವಾಮಿ, ಆನಂದ ಸೇರಿದಂತೆ ಸಮಿತಿಗಳ ಸದಸ್ಯರುಗಳು ಇನ್ನಿತರರು ಭಾಗವಹಿಸಿದ್ದರು.


News 9 Today

Leave a Reply