ಮಾಜಿ ಸಚಿವರು ನಾಗೇಂದ್ರ ಅವರಿಗೆ ಯುಗಾದಿ ನಂತರ ಸಚಿವ ಸ್ಥಾನ ಖಚಿತ.
ಬಳ್ಳಾರಿ (31)ಜಿಲ್ಲೆಯ ಕರ್ನಾಟಕ ರಾಜ್ಯ ಮಾಜಿ ಸಚಿವರಾಗಿರುವಂತ ಬಿ ನಾಗೇಂದ್ರ ಅವರಿಗೆ ಯುಗಾದಿ ಅನಂತರ ದಿಸೆ ಬದಲಾವಣೆ ಸಚಿವ ಖಚಿತ.
ಇದೇ ತಿಂಗಳು ಮೊದಲ ವಾರದಲ್ಲಿ ಸಚಿವ ಸ್ಥಾನ ಖಚಿತ ಎನ್ನುವುದು ರಾಜಕೀಯ ವಲಯದಲ್ಲಿ ಅವರ ಆಪ್ತರ ವಲಯದಲ್ಲಿ ಕೇಳಿ ಬರುತ್ತದೆ 10ನೇ ತಾರೀಕು ಒಳಗೆ ಮಾಜಿ ಸಚಿವರು ನಾಗೇಂದ್ರ ಅವರು ಮತ್ತೊಮ್ಮೆ ಸಚಿವ ಸ್ಥಾನ ಪಡೆದು ಜನಸೇವೆ ಗೆ ಮುಂದಾಗಲಿದ್ದಾರೆ.
ಅತಿ ಚಿಕ್ಕ ವಯಸ್ಸಿನಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ಜನಮನ ಹೊಂದಿರುವ ಉತ್ತಮ ನಾಯಕರೆಂದು ಕೀರ್ತಿ ಪಡೆದ ಏಕೈಕ ಸಚಿವರು.
ಆದರೇ ಕೆಲ ಕಾರಣ ಅಂತಗಳಿಂದ ವಾಲ್ಮೀಕಿ ಹಗರಣ ಅವರನ್ನು ಸುತ್ತುವರೆದು ಕಳಂಕವನ್ನು ತಂದಿರೋದು ಒಂದು ನೋವಿನ ವಿಚಾರ.
ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ನಾಗೇಂದ್ರ ಅವರು ಇಲ್ಲದ ಕಾರಣ ಪ್ರತಿ ಕ್ಷಣಕ್ಕೂ ಏನೋ ಒಂದು ಕಳೆದುಕೊಂಡಂತೆ ಆಗಿದೆ ಎನ್ನುವ ನೋವಿನ ಭಾವನೆ ಮತದಾರರಲ್ಲಿ ನಾಯಕತ್ವದಲ್ಲಿ ಕೊರಿತೆ ಕಾಣಿಸುತ್ತದೆ.
ಮಾಜಿ ಸಚಿವರು ನಾಗೇಂದ್ರ ಅವರು ಈ ವರಿಗೆ ಅವರು ವೈಯಕ್ತಿಕದಿಂದ ಯಾರು ಮೇಲೆ ದ್ವೇಷ ರಾಜಕಾರಣ ಮಾಡಿದ ಇತಿಹಾಸ ಎಲ್ಲಿಯೂ ಇಲ್ಲ.
ಯಾರನ್ನು ಕಂಡರೂ ನಗು ಮುಖದಿಂದ ಮಾತನಾಡಿಸುವ ಕಷ್ಟ ಸುಖಗಳಿಗೆ ನೆರವು ಆಗುವ ಉತ್ತಮ ನಡೆಯುತ್ತಿರುವ ರಾಜಕಾರಣಿ ಎಂದು ಅಜ್ಜೇ ಅಜ್ಜೆ ಸಾರಿ ಹೇಳುತ್ತದೆ, ಆದರೆ ಕೆಲ ಸಹವಾಸ ದೋಷಗಳು ಅವರನ್ನು ಈ ಅಪಕೀರ್ತಿಗೆ ಗುರಿ ಮಾಡಿದ್ದು ನವೀನ ವಿಚಾರ.
ಇದರಿಂದ ಪಕ್ಷದ ಕಾರ್ಯಕರ್ತರ ಮತ್ತು ನಾಯಕರನ್ನು ಸ್ವಲ್ಪ ಸ್ವಲ್ಪಮಟ್ಟದಲ್ಲಿ ದೂರ ಇಟ್ಟು ರಾಜಕೀಯ ಮಾಡುವುದು ಮಾಡುತ್ತಿದ್ದಾರೆ ಎನ್ನುವ ಆರೋಪ ಅವರ ಬೆನ್ನಿಗೆ ತಟ್ಟಿತು ಈ ಹಿನ್ನೆಲೆ ಒಂದಿಷ್ಟು ಸಮಾಧಾನಗಳು ಕೇಳಿಬಂದಿದ್ದು,ಅದು ಹೊರತುಪಡಿಸಿದರೆ ಯಾರು ಮೇಲೆ ಸೇಡಿನ ರಾಜಕೀಯ ಮಾಡುವ ಮನೋಭಾವ ನಾಗೇಂದ್ರ ಅವರಲ್ಲಿ ಇಲ್ಲ ಎನ್ನುವುದು ಬಹಿರಂಗ ಸತ್ಯದ ವಿಚಾರ.
ಕೆಲ ಘಟನೆಗಳಿಂದ ನಾಗೇಂದ್ರ ಅವರು ಜಿಲ್ಲೆಗೆ ಬಾರದೆ ಕೇಂದ್ರ ಸ್ಥಾನದಲ್ಲಿ ಇರುವುದರಿಂದ ಇನ್ನುಳಿದ ರಾಜಕಾರಣಿಗಳಿಗೆ ಮತ್ತೊಂದು ರೀತಿಯಲ್ಲಿ ಅವಕಾಶ ಸಿಕ್ಕಂತ ಆಗಿತ್ತು ಇದರಿಂದ ಉಳಿದವರಿಗೆ ನಾಗೇಂದ್ರ ಅವರು ಇಲ್ಲದ ಕಾರಣ ಜಿಲ್ಲೆಯಲ್ಲಿ ಏನೆಲ್ಲ ಗೊಂದಲಗಳು ಅಸಮಾಧಾನಗಳು ಆಗಿದೆ ಅನ್ನವದು ಅವರ ಆತ್ಮಗೆ ಮನದಟ್ಟಿದೆ,ಇದರಿಂದ ಬಹುತೇಕ ರಾಜಕಾರಣಿಗಳು ಅಭಿಮಾನಿಗಳು ನಾಗೇಂದ್ರ ಅವರನ್ನು ಮತ್ತೊಮ್ಮೆ ಸಚಿವಗಿರಿ ಕೊಟ್ಟು ಜಿಲ್ಲೆಯ ಗೌರವ ರಾಜ್ಯದ ಜನರಿಗೆ ಸಹಾಯ ಸಹಕಾರ ಮಾಡುವ ಅವಕಾಶ ಅವರಿಗೆ ಮಾಡಿಕೊಡಬೇಕು ಎನ್ನುವ ಬೇಡಿಕೆ ಮುಖ್ಯಮಂತ್ರಿಗಳ ಅಂಗಳಕ್ಕೆ ತಲುಪಿದೆ.
ವಾಲ್ಮೀಕಿ ಹಗರಣದಿಂದ ಸಚಿವ ಸ್ಥಾನದಿಂದ ಕಳುದು ಕೊಂಡ ನಾಗೇಂದ್ರ ಅವರ ಮೇಲೆ ಜನರ ಅಭಿಪ್ರಾಯ ವನ್ನು ರಾಜ್ಯದ ಮುಖ್ಯಮಂತ್ರಿಗಳ ಒಂದು ಸೀಕ್ರೆಟ್ ತಂಡ ಜಿಲ್ಲೆ ಮತ್ತು ರಾಜ್ಯದಲ್ಲಿ ನಾಗೇಂದ್ರ ಅವರ ಕಾರ್ಯವೈಖರಿ ಸರ್ವೆ ಮಾಡಿಸಲಾಗಿದೆ, ಇದರಲ್ಲಿ ಸಂಪೂರ್ಣ ನಾಗೇಂದ್ರ ಅವರ ಪರವಾಗಿ ಜನರ ಮನೋಭಾವ ಇದೆ ಎನ್ನುವುದು ಹೈಕಮಂಡಿಗೆ ತಲುಪಿದೆ.
ಕೆಲಗೊಂದಲಗಳಿಂದ ಸಚಿವ ಸ್ಥಾನ ತಕ್ಷಣ ನೀಡದೆ ಆಗಿರು ಹಿನ್ನೆಲೆ ಮುಖ್ಯಮಂತ್ರಿಗಳು ಸರ್ವೆ ವರದಿ ಗೋಸ್ಕರ ಕಾದಿರುವ ಹಿನ್ನೆಲೆಯಲ್ಲಿ ವಿಳಂಬ ಆಗಿದ್ದು, ಎಲ್ಲವನ್ನು ಅರಿತ ರಾಜ್ಯದ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಏಪ್ರಿಲ್ ಮೊದಲ ವಾರದಲ್ಲಿ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಖಚಿತ ಮಾಡಿದ್ದಾರೆ ಎನ್ನುವುದು ಬಲಮೂಲಗಳ ಮಾಹಿತಿ, ಅಭಿಮಾನಿಗಳಲ್ಲಿ ಸಂಭ್ರಮಾಚರಣೆ ಮೂಡಿಸಿದೆ.
ನಾಗೇಂದ್ರ ಅವರ ಜೊತೆಯಲ್ಲಿ ಇನ್ನೂ ಉಳಿದ ಸಚಿವರನ್ನು ಕೂಡ ತೆಗೆದುಕೊಳ್ಳುವ ಅವಕಾಶವಿದೆ ಎನ್ನುವುದು ಆಪ್ತ ವಲಯದಲ್ಲಿ ಕೇಳಿ ಬರುತ್ತದೆ.
ಏನೇ ಆಗಲಿ ಏಪ್ರಿಲ್ ಮೊದಲ ವಾರದಲ್ಲಿ ಸಚಿವರಾಗಿ ಜಿಲ್ಲೆಯ ಪ್ರವೇಶ ಆಗಲಿದೆ ಎನ್ನುವುದು ಕೇಳಿಬರುತ್ತದೆ.ಜಿಪಂ,ತಾ ಪಂ, ಚುನಾವಣೆ ಗಳ, ಗುರಿ ಕೂಡ ಇದೇ..