*ಮನೆ-ಮನೆ ಪ್ರಚಾರದಲ್ಲಿ ಗಾಲಿ ಅರುಣಾ.*
ಬಳ್ಳಾರಿ ನಗರದ ಎಂ.ಜಿ ಸರ್ಕಲ್ ಬಳಿ ಇರುವ ಜನತಾ ನಗರದ ಕಾಲೋನಿ ಯಲ್ಲಿ ಮನೆ ಮನೆಗೆ ತೆರಳಿ ಕೆ.ಆರ್.ಪಿ.ಪಿ ನಗರ ಅಭ್ಯರ್ಥಿ ಗಾಲಿ ಅರುಣಾ ಪ್ರಚಾರ ಮಾಡಿದರು.ನಗರದ ಪ್ರತಿ ವಾರ್ಡ್ ಯಲ್ಲಿ ಜನರು ಸಂತೋಷ ದಿಂದ ಬರಮಾಡಿಕೊಂಡು ಸಂಭ್ರಮ ಸಡಗರ ಸಂತೋಷ ದಿಂದ ಸ್ವಾಗತಿಸಿ ಇದ್ದಾರೆ. ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಪ್ರತಿ ವಾರ್ಡ್ ನಲ್ಲಿ ಈಬಾರಿ ತಮ್ಮ ಗೆಲುವು ಖಚಿತ ಅನ್ನುವ ಸಂಕೇತ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರ ಜೊತೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಬಗ್ಗೆ ಭರವಸೆ ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್ ಟಿ ಘಟಕದ ಅಧ್ಯಕ್ಷರಾದ
ಉಮಾರಾಜ್, ಜಿಲ್ಲಾ ಮಹಿಳಾ ಶಕ್ತಿ ಘಟಕದ ಅಧ್ಯಕ್ಷರಾದ ಶ್ರೀಮತಿ ಹಂಪಿ ರಮಣ, ಅಸುಂಡಿ ಸೂರಿ, ಪ್ರಕಾಶ್, ನಾಗರಾಜ್, ಚಂದು ಸೇರಿದಂತೆ ಜನತಾ ನಗರದ ಸ್ಥಳೀಯ ಮುಖಂಡರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರು ಅನೇಕರು ಉಪಸ್ಥಿತರಿದ್ದರು.