*ಸಂಡೂರು ಚುನಾವಣೆಯಲ್ಲಿ ಹಗಲು ಹೊತ್ತಿನಲ್ಲಿ ನಕ್ಷತ್ರ ಗಳು ಕಾಣುವಂತೆ ಮಾಡಿದ ಗಾಲಿ ಜನಾರ್ದನ ರೆಡ್ಡಿ!!.*
ಬಳ್ಳಾರಿ/ಸಂಡೂರು ,ಉಪ ಚುನಾವಣೆ ಸಂತೋಷ ಲಾಡ್,ತುಕಾರಾಂ, ಜಿಲ್ಲೆಯ ನಾಯಕರು ಇಲ್ಲದೆ ಇವರು ಇಬ್ಬರು ಮಾತ್ರವೇ ಚುನಾವಣೆ ಮಾಡಿ ಗೆದ್ದರೆ ಸರ್ಕಾರ ದಲ್ಲಿ ಒಂದು ಸಿನಿಮಾ ಮಾಡಬಹುದು ಎಂದು ಕೊಂಡು ಪ್ಲಾನ್ ಮಾಡಿ ಕೊಂಡು ಚುನಾವಣೆ ಮಾಡಿ ಈಹಿಂದೆ ಅಂತೆಯೇ ಜನರನ್ನು ಮರಳು ಮಾಡಬಹುದು ಎನ್ನುವ ನಿರೀಕ್ಷೆ ಉಲ್ಟಾ ಪಲ್ಟಾ ಆಗಿದೆ ಅನಿಸುತ್ತದೆ. ಸಂತೋಷ ಲಾಡ್ ಸಂಡೂರು ಉಪ ಚುನಾವಣೆಯಲ್ಲಿ ತುಕಾರಾಂ ಗೆದ್ದರೆ,ಲಾಡ್ ರಾಜಕೀಯದ ಚದುರಂಗ ದಲ್ಲಿ ಡಿ.ಕೆ.ಶಿ ಗೆ ಮುಳ್ಳು ಅಗಲಿದ್ದಾರೆ, ಇದು ಸಿದ್ದ ರಾಮಯ್ಯ ಅವರ ಪ್ಲಾನ್ ಆಗಿದೆ ಎಂದು ಗುಸು ಗುಸು ಇದೇ. ಅದಕ್ಕೆ ತುಕಾರಾಂ ಅವರ ಮನೆ ಬಾಗಿಲಿಗೆ ಕಾಂಗ್ರೆಸ್ ಟಿಕೆಟ್ ಓಡಾಟ ಮಾಡಿಕೊಂಡು ಬಂದಿದೆ. ಟಿಕೆಟ್ ಕೊಟ್ಟ ಮೇಲೆ ಸಿದ್ದ ರಾಮಯ್ಯ ಅವರಿಗೆ ಚಿಂತನೆ ಮಾಡುವ ವಾತಾವರಣ ಸೃಷ್ಟಿ ಆಗಿದೆ,ಸರ್ವೇ ಕೂಡ 50/50 ಮ್ಯಾಚ್ ಆಗಿದೆ. ಸಂಡೂರು ಉಪ ಚುನಾವಣೆ ಕಾಂಗ್ರೆಸ್ ಕೈ ಬಿಟ್ಟು ಕೊಂಡಿದೆ ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತದೆ!!. ಚುನಾವಣೆ ಕೊನೆಯ ವರಗೆ ಪಕ್ಷ ಹೋರಾಟ ಮಾಡುತ್ತದೆ ಎಂದು ತೋರಿಸಿ ಕೊಳ್ಳುವ ತಂತ್ರ ದಲ್ಲಿ ಇದ್ದಾರೆ ಎಂದು ಬಹಿರಂಗ ವಾಗಿದೆ. *ಕಾಂಗ್ರೆಸ್ ಪಕ್ಷಕ್ಕೆ ಹಗಲು ಹೊತ್ತಿನಲ್ಲಿ ನಕ್ಷತ್ರ ಕಾಣುವಂತೆ ಮಾಡಿದ ಬಿಜೆಪಿ ಪಕ್ಷ, ಗಾಲಿ ಜನಾರ್ದನ ರೆಡ್ಡಿ.* ಸಂಡೂರು ಉಪ ಚುನಾವಣೆ ತುಂಬಾ ಈಜಿ ಇರುತ್ತದೆ ಎಂದು, ಕನಸನ್ನು ಕಂಡ ಸಂತೋಷ್ ಲಾಡ್ ತೂಕರಾಂ ಅವರಿಗೆ ಜನಾರ್ದನ ರೆಡ್ಡಿಯವರು ಚುನಾವಣೆ ಕದನಕ್ಕೆ ಎಂಟ್ರಿ ಕೊಟ್ಟ ಮೇಲೆ ,ಬಿಜೆಪಿ ಹೈ ಕಮಾಂಡ್ ಕೂಡ ತುಂಬಾ ಫೈಟ್ ಕೊಡುತ್ತಾನೆ ಇದೇ. ಬಿಜೆಪಿ ದಿಗ್ಗಜರ ದಂಡು ಸರದಿಯ ಪ್ರಕಾರ ಪ್ರಚಾರ ಕ್ಕೆ ಬಂದು ಹೋಗುತ್ತಾನೆ ಇದ್ದಾರೆ, ಗೆಲುವು, ಸೋಲು ಸರ್ವಸಾಮಾನ್ಯ, ಸರ್ಕಾರ ಅವರದ್ದೇ ಇದ್ದರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆ “ರೆಡ್ಡಿ ಗಾರು” ಹಗಲು ಹೊತ್ತಿನಲ್ಲಿ ನಕ್ಷತ್ರಗಳು ಕಾಣುವಂತೆ ಮಾಡಿದ್ದಾರೆ. ತುಂಬಾ ಬಿಗಿ ಮಾಡಿದ್ದಾರೆ.50/50 ವಾತಾವರಣ, ನಿರ್ಮಾಣ ಆಗಿದೆ. ಕೊನೆಯ ಹಂತದಲ್ಲಿ ಮಹತ್ತರ ಬದಲಾವಣೆ ಮಾಡುತ್ತಾರೆ ಜನಾರ್ದನ ರೆಡ್ಡಿ ಅನ್ನುವ ವಾತಾವರಣ ನಿರ್ಮಾಣ ಆಗಿದೆ, ಜನರು ಕೂಡ ಬದಲಾವಣೆ ಬಯಸುವ ಆಲೋಚನೆ ದಲ್ಲಿ ಇದ್ದಾರೆ. ಕಾಂಗ್ರೆಸ್ ಕೋಟೆ ಅನ್ನುವ ಸಂಡೂರು ನಲ್ಲಿ ಬಿಜೆಪಿ ಗಾಳಿ ಬೀಸುವ ಸಾದ್ಯತೆ ಇದೆ ಎಂದು ಸಾರ್ವಜನಿಕರ ವಲಯದಲ್ಲಿ ಕೂಡ ಕೇಳಿ ಬರುತ್ತದೆ. ಈಗಾಗಲೇ “ರೆಡ್ಡಿ ಗಾರು” ಸಂಡೂರಿನಲ್ಲಿ ಮನೆ ಮಾಡಿ ಹಲವಾರು ಸಮಾಜ ಗಳನ್ನು ಬಿಜೆಪಿ ಕಡೆಗೆ ಸೆಳೆಯುವ ಕೆಲಸ ಮಾಡಿದ್ದಾರೆ.ಬಿಜೆಪಿ ಗೆಲುವಿನ ಅಂತರದಲ್ಲಿ ಇದೆ ಎಂದು, ಬಿಜೆಪಿ ವಲಯದಲ್ಲಿ ಕೇಳಿಬರುತ್ತದೆ. “ರೆಡ್ಡಿ ಗಾರು” ಚುನಾವಣೆ ಬಿಸಿ,ಗೆ ಮಾನ್ಯ ಮುಖ್ಯಮಂತ್ರಿ ಗಳು ಕೂಡಾ ಸಂಡೂರು ಪ್ರಚಾರ ಕ್ಕೆ ಬರುತ್ತಾರೆ ಎಂದು ಕೇಳಿಬರುತ್ತದೆ. ಕೊನೆಯ ಕ್ಷಣದಲ್ಲಿ ರಾಹುಲ್ ಗಾಂಧಿ ಕೂಡ ಬರುವ ಸಾಧ್ಯತೆ ಇದೇ ಎಂದು ಕೇಳಿಬರುತ್ತದೆ. ಒಟ್ಟಾರೆ ಈಜಿ ಗೆಲುವು ಅಂದುಕೊಂಡೆ ಆಡಳಿತ ಸರ್ಕಾರ ಕ್ಕೆ ಭಯದ ವಾತಾವರಣ ಸೃಷ್ಟಿ ಆಗಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)