*lಜನರ ಮನಸ್ಸು ಗೆಲ್ಲುತ್ತಿರುವ ಗಾಲಿ ಲಕ್ಷ್ಮಿಅರುಣಾ.
*ಮತದಾರರ ಮನಸ್ಸಿನಲ್ಲಿ ಸಂಭ್ರಮದ ವಾತಾವರಣ.*
*ರಾಷ್ಟ್ರೀಯ ಪಕ್ಷಗಳು ಧೂಳಿಪಟ ಸಾಧ್ಯತೆ..!!*
ಬಳ್ಳಾರಿ: ವಿಧಾನಸಭೆ ಚುನಾವಣೆಯ ಮತದಾನ ದಿನಾಂಕ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ನೂತನ ಪಕ್ಷದ ರಾಜಕೀಯ ದಿಗ್ಗಜ ಗಾಲಿ ಜನಾರ್ದನ ರೆಡ್ಡಿಯವರ ಕೆಆರ್’ಪಿಪಿ ಬಳ್ಳಾರಿ ನಗರದ ಅಭ್ಯರ್ಥಿಯಾಗಿರುವ ಗಾಲಿ ಲಕ್ಷ್ಮಿ ಅರುಣಾ ಅವರು ನಗರದಲ್ಲಿ ವಿಸ್ತೃತ ಪ್ರಚಾರದಲ್ಲಿ ತೋಡಿಗಿಸಿಕೊಂಡಿದ್ದಾರೆ.
ಶ್ರೀಮಂತಿಕೆಯ ಬಳ್ಳಾರಿಯ ಹೆಣ್ಣು ಮಗಳು ಬಿಸಿಲು ಲೆಕ್ಕಿಸದೆ ಬಳ್ಳಾರಿ ನಗರವನ್ನು ಸುತ್ತುತ್ತಿರುವುದನ್ನು ನೋಡಿರುವ ಜನರು ಕಣ್ಣೀರಿಟ್ಟು ಸ್ವಾಗತ ಮಾಡುತ್ತಿದ್ದಾರೆ.
ಕುಂಕುಮ, ಅರಿಶಿಣವಿಟ್ಟು ಮತ ನೀಡುವ ವಾಗ್ದಾನ ಮಾಡುತ್ತಿದ್ದಾರೆ.
ಶುಕ್ರವಾರ ನಗರದ ಬೀಚ್ ನಗರ್, ಕಪ್ಪಗಲ್ ರಸ್ತೆ, ಭಗತ್ ಸಿಂಗ್ ನಗರದ, ತಾಳುರು ರಸ್ತೆ ಸೇರಿದಂತೆ ವಿವಿಧ ವಾರ್ಡ್’ಗಳಲ್ಲಿ ಬೆಳಿಗ್ಗೆಯಿಂದ ಪ್ರಚಾರ ಆರಂಭ ಮಾಡಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಪುರುಷರು, ಯುವಕರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಗಾಲಿ ಲಕ್ಷ್ಮಿ ಅರುಣಾ ಅವರು, ಈ ಭಾಗದ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಗಮನಿಸಿದ್ದೇನೆ.
ಈಗಾಗಲೇ ಈ ಭಾಗದಲ್ಲಿ ಸಮಸ್ಯೆಗಳು ಕುರಿತು ಒಂದು ಪಟ್ಟಿ ಸಿದ್ದಪಡಿಸಲಾಗಿದೆ,ಈ ಬಾರಿ ಚುನಾವಣೆಯಲ್ಲಿ ತಮ್ಮ ಆಶೀರ್ವಾದದಿಂದ ಶಾಸಕಿಯಾಗಿ ನನ್ನ ಅಯ್ಕೆ ಮಾಡಿ, ಜನರ ಸಮಸ್ಯೆಗಳಿಗೆ ಹೊತ್ತು ನೀಡುತ್ತೇನೆ ಎಂದರು.
ಮಹಿಳೆಯರಿಂದ ಕೂಡ ಉತ್ತಮ ಸ್ಪಂದನೆ ಸಿಗುತ್ತಿದೆ.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಕೆಆರ್’ಪಿಪಿ ನಿದ್ದೆಗೆಡಿಸುತ್ತಿದೆ.
ರಾಷ್ಟ್ರೀಯ ಪಕ್ಷಗಳು ಧೂಳಿಪಟ ಆಗಲಿವೆ ಎಂಬ ಮಾತು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿವೆ.
ಈ ಸಂದರ್ಭದಲ್ಲಿ ಸಣ್ಣೊಡು ನಾಗರಾಜ್ ಅವರ ತಂಡದ ಕಾರ್ಯಕರ್ತರು ಕೆಆರ್’ಪಿಪಿ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷದ ಮುಖಂಡರು, ಪ್ರಕಾಶ್ ರೆಡ್ಡಿ,ರಮಣ, ಶಿವಾರೆಡ್ಡಿ ಹಂಪಿ ರಮಣ, ರಾಜಣ್ಣ, ಹುನುಮೇಶ್, ರಘು, ಅಚಾರಿ, ತಾಳುರು ರಸ್ತೆಯ ಪರಶುರಾಮ, ಈಶ್ವರಪ್ಪ, ಓಂಕಾರಿ, ಬಡ್ಡಪ್ಪ, ರಂಗ, ರಾಮದಾಸ್, ವೀರೇಶ ಸೇರಿದಂತೆ ಅನೇಕರು ಹಾಜರಿದ್ದರು.ಈಬಾರಿ ಬಳ್ಳಾರಿ ನಗರದ ರಾಜಕೀಯ ಚಿತ್ರಣವನ್ನು ಬದಲಾವಣೆ ಮಾಡುವ ಸಾದ್ಯತೆ ಗಳು ಕಾಣುತ್ತವೆ.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ)