*ಬೆದರಿಕೆ ಹಾಕಿ ಸುದ್ದಿ ಮಾಡಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ ಗಾಲಿ ಸೋಮಶೇಖರ್ ರೆಡ್ಡಿ ನಡೆ ಖಂಡಿಸಿದ ಯಾಳ್ಪಿ ವಲಿಭಾಷ*
ಬಳ್ಳಾರಿ: ಶನಿವಾರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರ ಪತ್ರಿಕಾಗೋಷ್ಠಿಯಲ್ಲಿ ಗಾಲಿ ಅರುಣಾ ಅವರು ತುಂಬಾ ಸ್ಪೀಡ್ ಆಗಿ ಚುನಾವಣಾ ಪ್ರಚಾರದಲ್ಲಿದ್ದಾರೆ, ಈ ಬಾರಿ ಬಳ್ಳಾರಿ ನಗರದ ಹಾಲಿ ಶಾಸಕ ಸೋಮಶೇಖರ್ ರೆಡ್ಡಿ ಅವರು ನಗರದಿಂದ ಸ್ಪರ್ಧೆ ಕುರಿತು ಪತ್ರಕರ್ತರ ಕೇಳಿದ ಪ್ರಶ್ನೆಗೆ ಕೆಂಡಮಂಡಲವಾಗಿದ್ದಾರೆ.
ತಾವುಗಳು (ಪತ್ರಕರ್ತರು) ಹೇಳಿದರೆ ಬೆಂಗಳೂರು ನಗರದಿಂದ ಸ್ಪರ್ಧೆ ಮಾಡುವೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದರು.
ನಂತರ ‘ಕೆಲ ಪತ್ರಕರ್ತರು ನಮ್ಮ ಬಳಿ ಬಂದು ಮಂತ್ಲಿ ಮಾಮೂಲಿ ಕೇಳುದ್ದಾರೆ, ಆದಕ್ಕೆ ನಾನು ಕೊಡಲ್ಲ’ ಎಂದ ಕಾರಣಕ್ಕೆ ನನ್ನ ವಿರುದ್ಧ ಸುದ್ದಿಗಳು ಬರೆಯುತ್ತಾರೆ’ ಎಂದು ಹೇಳಿದ್ದರು.
ಈ ಕುರಿತಂತೆ ಶಾಸಕರ ಹೇಳಿಕೆ ಖಂಡಿಸಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಯಾಳ್ಪಿ ವಲಿಬಾಷ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ನಂತರ ಮಾತನಾಡಿದ ಯಾಳ್ಪಿ ವಲಿಭಾಷಾ ಅವರು ಶಾಸಕ ಸೋಮಶೇಖರ್ ರೆಡ್ಡಿ ಹೆದರಿಸಿ ಸುದ್ದಿ ಮಾಡಿಸಿ ಕೊಳ್ಳುವ ಪ್ರಯತ್ನ ಮಾಡಬಾರದು, ಆಧಾರರಹಿತ ಆರೋಪ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಗಣಿಗಾರಿಕೆ ಮಾಡುವ ಸಂದರ್ಭದಲ್ಲಿ ಮಾಧ್ಯಮಗಳನ್ನು ನಿಯಂತ್ರಣ ಮಾಡಿರುವ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.
ತಾವು ಕೂಡ ಯಾವ ಯಾವ ಪ್ರಕರಣಗಳಲ್ಲಿ ಭಾಗಿಯಾಗಿದ್ದೀರಿ ಎನ್ನುವುದು ಜನರ ಕೂಡ ಗೊತ್ತಿದೆ ಎಂದರು.
ನಿಮ್ಮನ್ನು ಕೆಲ ಪತ್ರಕರ್ತರು ಮಾಮೂಲು ಕೇಳಿದ್ದಾರೆ ಎನ್ನುವ ನೀವು, ಶಾಸಕರಾಗಿ ನಾಲ್ಕು ವರ್ಷಗಳು ಕಳೆದಿರುವ ನೀವು ಏಕೆ ಸುಮ್ಮನೆ ಇದ್ದೀರಿ, ಬಹಿರಂಗ ಪಡಿಸಿ ಸಾಕ್ಷಿ ಕೊಡಬಹುದಿತ್ತು.
ಈ ಹಿಂದೆ ಕೂಡ ಕೆಲ ಪತ್ರಕರ್ತರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರು,
ಮತ್ತೊಬ್ಬರಿಗೆ ಇದು ದೆಹಲಿಯಲ್ಲ, ಇದು ಬೆಂಗಳೂರು ಎಂದು ಎಚ್ಚರಿಕೆ ಕೊಟ್ಟು ದುರರ್ವತೆ ತೋರಿದ್ದರು ಎಂದರು.
ಈ ಹಿಂದೆ ತಾವುಗಳು ಮಾಡಿದ್ದ ಪ್ರಕರಣಗಳು ಮುಚ್ಚಿ ಇಟ್ಟುಕೊಂಡು, ಯಾರೂ ನನ್ನನ್ನು ಏನೂ ಮಾಡಿಲ್ಲ ಎನ್ನುವ ಭ್ರಮೆಯಲ್ಲಿ ಸೋಮಶೇಖರ್ ರೆಡ್ಡಿ ಇದ್ದಾರೆ.
ಪತ್ರಕರ್ತರು ಕೇವಲ ಜಾಹಿರಾತು ಅಥವಾ ಪೇಡ್ ಆರ್ಟಿಕಲ್ಸ್ ಕೇಳಿ ಇರಬಹುದು, ಅದನ್ನು ತಾವು ಈ ರೀತಿಯಲ್ಲಿ ಸೃಷ್ಟಿ ಮಾಡಿಕೊಂಡ ಹೇಳಿದ್ದಾರೆ ಎನ್ನಲಾಗ್ತಿದೆ.
ಪ್ರಸ್ತುತ ಚುನಾವಣೆ ತಮಗೆ ಕಷ್ಟವಾಗಿರಬಹುದು, ಸಾರ್ವಜನಿಕ ಅಭಿಪ್ರಾಯಗಳನ್ನು ಪಡೆದು ವಿಸ್ತೃತವಾದ ಸುದ್ದಿಗಳನ್ನು ನೋಡಿ ಹಾಲಿ ಶಾಸಕರು ಗಡಿಬಿಡಿಯಾಗಿರಬಹುದು.
ಚುನಾವಣೆಯಲ್ಲಿ ತಾವು ಏನೂ ಮಾಡಿದರೂ? ಸುಮ್ಮನೆ ಇರಬೇಕು ಎನ್ನುವ ಯೋಚನೆಯಲ್ಲಿ ಇಂತಹ ಆರೋಪಗಳು ಮಾಡಿರಬಹುದು.
ತಂತ್ರಜ್ಞಾನ ಬೆಳೆದಿದೆ ಮಾಹಿತಿ ಕೊಟ್ಟರೆ ಸುದ್ದಿ ಮಾಡೋದು ನಿಲ್ಲಿಸಲು ಸಾಧ್ಯವಿಲ್ಲ.
ತಮ್ಮ ಮೇಲೆ ವಿನಾಕಾರಣ ಸುಳ್ಳು ಸುದ್ದಿಗಳು ಮಾಡಿದರೆ ತಾವೇ ನೇರವಾಗಿ ಪ್ರಶ್ನೆ ಮಾಡಬಹುದು ಆದರೆ ಪದೇಪದೇ ಬೆದರಿಕೆ ಹಾಕಿದರೆ ಅದರ ಹೊಣೆಗಾರಿಕೆ ತಮ್ಮದೇ ಆಗುತ್ತದೆ ಎಂದರು.
ಹುಟ್ಟು ಸಾವು ಯಾರು ನಿಲ್ಲಿಸಲು ಸಾದ್ಯವಿಲ್ಲ. ಗೌರವ ಕೊಟ್ಟು ತೆಗೆದುಕೊಳ್ಳಬೇಕು. ತಮ್ಮ ನಂತರ ಮಕ್ಕಳು ಕೂಡ ರಾಜಕೀಯ ಮಾಡಬೇಕು, ಸ್ನೇಹವನ್ನು ಬೆಳಸಬೇಕು, ಅಧಿಕಾರ ಶಾಶ್ವತವಲ್ಲ ಎಂದಿದ್ದಾರೆ.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)