This is the title of the web page
This is the title of the web page

Please assign a menu to the primary menu location under menu

State

ಗಣೇಶನ ಗಲಾಟೆ ಗಡ್ಡದ್ ಗೆ ಪೀಕಲಾಟ

ಗಣೇಶನ ಗಲಾಟೆ ಗಡ್ಡದ್ ಗೆ ಪೀಕಲಾಟ

ಗಣೇಶನ ಗಲಾಟೆ ಗಡ್ಡದ್ ಗೆ ಪೀಕಲಾಟ

ಬಳ್ಳಾರಿ:ಸೆ,05; ನಗರದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ಪೋಲಿಸ್ ಇಲಾಖೆ, ಮಹಾನಗರ ಪಾಲಿಕೆ, ಜೆಸ್ಕಾಂ ಇಲಾಖೆಗಳು ಏಕಗವಾಕ್ಷಿ ಹೆಚ್ಚುವರಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ ಬಳ್ಳಾರಿ ಜಿಲ್ಲಾ ಸಮಿತಿ ಕಾರ್ಯಕರ್ತರು ಗಾಂಧಿನಗರ ಪೋಲಿಸ್ ಠಾಣೆಯ ಮುಂದೆ ದೀಢಿರ್ ಪ್ರತಿಭಟನೆ ನಡೆಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು

ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲು ಅನುಮತಿಗಾಗಿ ನಾನಾ ಇಲಾಖೆಯವರು ಸೇರಿ ಏಕಾಗವಾಕ್ಷಿ ಎಂದು ಮಾಡಿ, ಆ ಮೂಲಕ ವಿನ: ಕಾರಣ ಗಣೇಶ ಪ್ರತಿಷ್ಠಾಪನ ಸಮಿತಿಗಳಿಂದ ಸರಕಾರದ ಅಧಿಕೃತ ಆದೇಶವಿಲ್ಲದ್ದಿದ್ದರು ಹಣ ವಸೂಲಿಗೆ ನಿಂತಿದ್ದಾರೆ. ಪ್ರತಿ ವರ್ಷವೂ ಧ್ವನಿವರ್ಧಕ, ಗಣೇಶ ಪ್ರತಿಷ್ಠಾಪನೆಯ ಪೆಂಡಾಲ್, ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಇತರೆ ಅನುಮತಿಗಾಗಿ ಅತಿ ಕಡಿಮೆ ಶುಲ್ಕ ಇತ್ತು. ಆದರೆ ಈ ಸಾರಿ ಜೆಸ್ಕಾಂ, ಮಹಾನಗರ ಪಾಲಿಕೆ ಸೇರಿ ಧ್ವನಿವರ್ಧಕ ಬಳಸಲು ಪೋಲಿಸ್ ಇಲಾಖೆಯವರು ಹೆಚ್ಚುವರಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಠಾಣೆಯ ಮುಂದೆ ಜಮಾವಣೆಗೊಂಡ ಕಾರ್ಯಕರ್ತರು ಠಾಣೆ ಮುಂದೆ ಧರಣಿ ಕುಳಿತು ನಾನಾ ಇಲಾಖೆಗಳ ವಿರುದ್ಧ ದಿಕ್ಕಾರ ಕೂಗಲಾರಂಭಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಹಾಗೂ ಗಾಂಧಿನಗರ ಠಾಣೆಯ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ ಗಡ್ಡದ್ ನಡುವೆ ಮಾತಿನ ಚಕಮಕಿ ನಡೆಯಿತು. ನೀವು ಈ ರೀತಿ ಏಕಾಏಕಿ ಠಾಣೆಯ ಮುಂದೆ ಕುಳಿತು ಧರಣಿ ಮಾಡುವುದು ಸರಿಯಿಲ್ಲ. ಠಾಣೆಯ ಅವರಣದೊಳಗೆ ಬನ್ನಿ ನಿಮ್ಮ ಸಮಸ್ಯೆ ಏನೇ ಇರಲಿ ಮಾತನಾಡೋಣ ಎಂದು ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ ಗಡ್ಡದ್ ಪ್ರತಿಭಟನಾಕಾರರ ಮನವೂಲಿಸಲು ಯತ್ನಿಸಿದರು.

ನೆರೆದಿದ್ದ ಕಾರ್ಯಕರ್ತರು ಇಲಾಖೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪಾಲಿಕೆ ಆಯುಕ್ತರು ಹಾಗೂ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.

ಕಾರ್ಯಕರ್ತರ ಪಟ್ಟಿಗೆ ಮಣಿದು ಪಾಲಿಕೆ ಆಯುಕ್ತ ಖಲೀಲ್ ಆಹ್ಮದ್, ಜೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಆಶೋಕ್ ರೆಡ್ಡಿ, ಈ.ಟಿ.ಲಕ್ಷ್ಮೀ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿ, ಸರಕಾರದ ನಿಯಮಗಳನ್ನ ಇಲಾಖೆಯ ನಿಯಮಗಳ ಬಗ್ಗೆ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ನಾವು ಹೆಚ್ಚುವರಿಯಾಗಿ ಹಣ ಕಟ್ಟುವುದಿಲ್ಲ. ತಾವು ಬೇರೆ ಹಬ್ಬಗಳಿಗೆ ಹೀಗೆ ಏಕಗವಾಕ್ಷಿ ಮಾಡಿ ಹಣ ವಸೂಲಿ ಮಾಡುತ್ತೀರಾ ಎಂದು ಅಧಿಕಾರಿಗಳನ್ನ ಅನಿಲ್ ನಾಯ್ಡು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಬಿಜೆಪಿ ಮುಖಂಡ ಹೆಚ್.ಹನುಮಂತಪ್ಪ, ಶ್ರೀರಾಮ್, ಮಲ್ಲೇಶ್, ಶ್ಯಾಮ್ ಸುಂದರ, ಪಾಲಿಕೆ ಸದಸ್ಯ ಹನುಮಂತಪ್ಪ, ಸೋಮನಗೌಡ, ರಾಘವೇಂದ್ರ, ರಾಮಾಂಜನೇಯ, ವೆಂಕಟೇಶ, ಶಬರಿ ರವಿ, ಹನುಮಂತ, ಗಿರಿಶ್ ಕಾರ್ನರ್, ಊಳೂರು ಸಿದ್ದೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


News 9 Today

Leave a Reply