ಜನರ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರದ ಬಸ್ಸು ಗಳು.!!. ಮಿತಿಮೀರಿ “ಹೊಗೆ” (ವಾಯು ಮಾಲಿನ್ಯ )ವರೆಗೆ ಹಾಕುತ್ತಿರುವ ಬಸ್ಸು ಗಳು.
ಬಳ್ಳಾರಿ (24) ಈಗಾಗಲೇ ಜನರು ಅನೇಕ ರೋಗಗಳು ದಿಂದ ಬಳಲುತ್ತಿದ್ದು ದಿನನಿತ್ಯ ಖಾಸಗಿ ಆಸ್ಪತ್ರೆಯಿಂದ ಹಿಡಿದು ಸರ್ಕಾರದ ಆಸ್ಪತ್ರೆಯಿಂದ ಹಿಡಿದು ಪರೀಕ್ಷಾ ಕೇಂದ್ರಗಳವರಿಗೆ ಸಾಲು ಸಾಲು ನಿಂತು ಆರೋಗ್ಯವನ್ನು ಕಾಪಾಡು ಕೊಳ್ಳುತ್ತಿದ್ದಾರೆ.
ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ ಈಗಾಗಲೇ ಬಳ್ಳಾರಿಯಲ್ಲಿ ಧೂಳು ಧುಮ್ಮು ಕಾರ್ಖಾನೆಗಳ “ಹೊಗೆ” ಇದರ ಮಧ್ಯದಲ್ಲಿ ಜನರು ಜೀವನ ಮಾಡುತ್ತಿದ್ದಾರೆ.
ಇದಲ್ಲದೆ ಸರ್ಕಾರದ ಬಸ್ಸುಗಳು ನಗರದ ನಡುಬಾಗದಲ್ಲಿ ಮಿತಿಮೀರಿ ವಾಯುಮಾಲಿನ್ಯ ಮಾಡುತ್ತಾ ಇದ್ದಾವೆ.
ಬಸ್ಸು ಹಿಂದೆ ಹೋಗುವ ಸವಾರಿದಾರರಿಗೆ ಸಾರ್ವಜನಿಕರಿಗೆ ದಾರಿ ಕಾಣದಂತೆ ಮಾಡುತ್ತದೆ.
ಈ ಸರ್ಕಾರದ ಬಸ್ಸುಗಳಿಗೆ ಆಯುಷ್ಯ ಇದೆಯೋ ಅವಧಿ ಮುಗಿದು ಹೋಗಿದೆಯೋ ಗೊತ್ತಾಗೋತ್ತಿಲ್ಲ.
ಬಹುತೇಕ ಸರ್ಕಾರದ ಬಸ್ಸು ಗಳು ಇದೆ ರೀತಿಯಲ್ಲಿ ಕೆಟ್ಟ ಮಾಲಿನ್ಯ ಜನರಿಗೆ ಕುಡಿಸುತ್ತಿದ್ದಾರೆ ಇದನ್ನು ನಿಯಂತ್ರಣ ಮಾಡುವ ಯಾವ ಅಧಿಕಾರಿಗಳು ಶಿಸ್ತು ಕ್ರಮ ಮಾಡಿರುವ ದಾಖಲೆಗಳು,ಶೂನ್ಯ ಶೂನ್ಯ. ಲಾರಿ,ಟಿಪ್ಪರ್, ಗಳು, ಖಾಸಗಿ ಬಸ್ಸು ಗಳ ಕಥೆ ಕೂಡ ಇದೇ ರೇತಿಯಲ್ಲಿ ಇದೇ.