This is the title of the web page
This is the title of the web page

Please assign a menu to the primary menu location under menu

State

ನೂತನ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಪಂ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ

ನೂತನ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಪಂ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ

ನೂತನ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಪಂ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ

*ಕಟ್ಟಕಡೆಯ ವ್ಯಕ್ತಿಗಳಿಗೆ ಕೂಡಾ ಸವಲತ್ತುಗಳು ಸಿಗಬೇಕು:- ಸಚಿವ ನಾಗೇಂದ್ರ*

*ಮೊದಲ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ ಸಚಿವ ನಾಗೇಂದ್ರ*
•ನಗರಕ್ಕೆ35 ದಿನಗಳು ವರೆಗೆ ಕುಡಿಯುವ ನೀರು.!!
•ಮೆಣಸಿನಕಾಯಿ ಬೀಜ ಸುಲಭವಾಗಿ ಸಿಗುತ್ತವೆ ಏಂದು ಸುಳ್ಳು ಮಾಹಿತಿಯನ್ನು ಕೊಟ್ಟ ಅಧಿಕಾರಿಗಳು.!
•ಜೋಳ ಖರೀದಿ ಅಕ್ರಮ ಮತ್ತೆ ತನಖಿ ಮಾಡಬೇಕು.

ಬಳ್ಳಾರಿ : ರಾಜ್ಯದಲ್ಲಿ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ರಚನೆಗೊಂಡ ನಂತರ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು, ಯುವ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಮೊಟ್ಟಮೊದಲ ಪ್ರಗತಿ ಪರಿಶೀಲನೆ ಸಭೆಯನ್ನು ನಗರದ ಜಿ.ಪಂ ನಜೀರ್ ಸಾಬ್ ಸಭಾಂಗಣದಲ್ಲಿ ನಡೆಸಿದರು. ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತಿ ಇದ್ದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಅಧಿಕಾರಿಗಳ ಜೊತೆಯಲ್ಲಿ ಮೀಟಿಂಗ್ ಮಾಡಿದ ಅವರು ಸರ್ಕಾರದ ಸವಲತ್ತುಗಳು ಕಟ್ಟಕಡೆಯ ವ್ಯಕ್ತಿಗಳಿಗೆ ಕೂಡ ಸಿಗಬೇಕು ಎಂದರು. ಈ ಹಿಂದೆ ಬೆಂಬಲ ಬೆಲೆಯ ಜೋಳ ಖರೀದಿಯಲ್ಲಿ ಅಕ್ರಮ ನಡೆದಿದ್ದ ಪ್ರಕರಣ ಮತ್ತು ಬೆಳಕಿಗೆ ಬಂದಿದೆ. ತಪ್ಪು ಮಾಡಿದ ಅವರ ಮೇಲೆ ಮತ್ತೆ ಕ್ರಮ ಜರಗಿಸಲು ಸೂಚನೆಯನ್ನು ನೀಡಿದರು. ಗಂಗಾ ಕಲ್ಯಾಣ ಯೋಜನೆಯ ಕೋಳವೆ ಬಾವಿಗಳು ಕಾಮಗಾರಿ ವಿಳಂಬ ಅಗಬಾರದು. ಇದೆ ಯೋಜನೆಯ ಮೊಟರ್ ಗಳು ಗುಣಮಟ್ಟವನ್ನು ಪರಿಶೀಲನೆ ಮಾಡಬೇಕು, ಈವರೆಗೆ ಅಳವಡಿಸಿದ ಬೋರ್ ವೆಲ್ ಗಳು ವಾಸ್ತವ ಸ್ಥಿತಿಯ ಬಗ್ಗೆ ವರದಿ ಕೊಡಲು ಹೇಳಿದರು. ಇನ್ನೂ ಬಾಕಿ ಇರುವ ಕೋಳವೆ ಬಾವಿಗಳ ಕಾಮಗಾರಿ ಪೂರ್ತಿ ಮಾಡಲು ತಿಳಿಸಿದರು.

*ಬೆಣಕಲ್ ಬೆಣ್ಣೆಯನ್ನು ಮಾರಾಟ ಮಾಡಲು ಸೂಪರ್ ಮಾರ್ಕೆಟ್ ನಿರ್ಮಾಣ*
ಬಳ್ಳಾರಿ ಗ್ರಾಮೀಣ ಪ್ರದೇಶದಲ್ಲಿ ಸ್ವಸಹಾಯ ಗುಂಪುಗಳು ಉತ್ಪಾದಿಸು ವಸ್ತುಗಳನ್ನು ಮಾರಾಟ ಮಾಡುವ, ಬಡತನ ನಿರ್ಮೂಲನೆಗೆ ನಗರದಲ್ಲಿ, ತಾಲೂಕು ಮಟ್ಟದಲ್ಲಿ ಸೂಪರ್ ಮಾರ್ಕೆಟ್ ಪ್ರತ್ಯೇಕವಾಗಿ ತೆರೆದು ಜನರಿಗೆ ಅವಕಾಶವನ್ನು ಮಾಡಿಕೊಡಬೇಕು ಎಂದರು.

*ಕೆ.ಎಂ.ಎಫ್ ನಿರುಪಯುಕ್ತ ನೀರಿನ ವಿಚಾರ ಸಚಿವರು ಗರಂ*

ಜನರ ಆರೋಗ್ಯ ಹಾಳಾಗುತ್ತದೆ ಕೆಟ್ಟ ವಾಸನೆ ಬರುತ್ತದೆ, ನಿಮ್ಮ ನಿರುಪಯುಕ್ತ ನೀರಿನಿಂದ, ಪಾಲಿಕೆ ಕಾಲುವೆಗಳು ಹಾಳು ಅಗಿದ್ದಾವೆ.

ಒಂದು ದಿನದಲ್ಲಿ ಸರಿಪಡಿಸಿ ಕೊಳ್ಳಬೇಕು ಇಲ್ಲದಿದ್ದಲ್ಲಿ ಡೈರಿ ಬಂದ್ ಮಾಡಲಾಗುತ್ತದೆ ಎಂದು ಕೆಎಂಎಫ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಜಲಜೀವನ್ ಮಿಷನ್ ಯೋಜನೆ ಸಮರ್ಪಕ ಕಾರ್ಯನಿರ್ಹಸಬೇಕು. ಜನರಿಗೆ ಕುಡಿಯುವ ನೀರು ತೊಂದರೆ ಅಗಬಾರದು ಎಂದರು.
ನಗರಕ್ಕೆ ಕುಡಿಯುವ ನೀರು ಕೇವಲ 35ದಿನಗಳು ಮಾತ್ರವೇ ಸರಬರಾಜು, ಈಗಾಗಲೇ ಮಳೆರಾಯ ಮಾಯ ಅಗಿರವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಕುಸಿದು ಹೋಗಿದೆ.

ಇಂತಹ ಸಂದರ್ಭದಲ್ಲಿ ನಗರದಲ್ಲಿ ಸ್ಟೋರೇಜ್ ಇರುವ ನೀರು ಕೇವಲ 35 ದಿನಗಳು ಗೆ ಮಾತ್ರವೇ ಸರಬರಾಜು ಮಾಡಲು ಸಾಧ್ಯವಾಗುತ್ತದೆ ಎಂದು ಪಾಲಿಕೆ ಕಮೀಷನರ್ ಸಚಿವರು ಶಾಸಕರು ಮುಂದೆ ಹೇಳಿದರು.

ನೀರಿನ ಅಭಾವ ಅಪಾಯ ಮಟ್ಟದಲ್ಲಿ ನಗರ ಇದೇ ಅನ್ನುದನ್ನು ನಗರ ಶಾಸಕ ಭರತ್ ರೆಡ್ಡಿ ಅವರು ಹಾಗೂ ಸಚಿವರು ಚಿಂತನೆ ನಡೆಸಿದ್ದರು.

ನಗರದಲ್ಲಿ ಬೋರ್ ಹಾಕಿ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ಬಿತ್ತನೆ ಬೀಜದಿಂದ ರೈತರು ಸಮಸ್ಯೆಗೆ ಗುರಿಯಾಗಬಾರದು.

ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಮಿರ್ಚಿ ಜಾಸ್ತಿ ಬೆಳೆಯುತ್ತಾರೆ.

ರೈತರು 2043 ಎಂಬ ತಳಿಯನ್ನು ಹೆಚ್ಚಿಗೆ ಇಷ್ಟ ಮಾಡುತ್ತಾರೆ.

ಅದು ಮಾರ್ಕೆಟ್’ನಲ್ಲಿ ಬಹು ಬೇಡಿಕೆಯಾಗಿ ಮಾರಾಟ ಮಾಡುತ್ತಾರೆ ಅಂಗಡಿ ಮಾಲೀಕರು ಹಾಗೂ ಕಂಪನಿಯವರು. ಬ್ಲಾಕ್’ನಲ್ಲಿ ಕಂಪನಿ ದರದ ಮೇಲೆ ಎರಡು ಪಟ್ಟು ಮೂರು ಪಟ್ಟು ದುಪ್ಪಟ್ಟು ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಇದನ್ನು ಅರಿತುಕೊಂಡ ಸಚಿವರು ನೇರವಾಗಿ ಕಂಪನಿಯ ಅಧಿಕೃತ ಏಜೆನ್ಸಿಯ ಅವರನ್ನು ಮೀಟಿಂಗ್ ಕರೆಯಲಾಗಿತ್ತು.

ರೈತರಿಗೆ ದುಬಾರಿ ದರದಲ್ಲಿ ಮೆಣಸಿನಕಾಯಿ ಬೀಜ ಮಾರಾಟ ಮಾಡಿದರೆ ತಕ್ಷಣವೇ ಅಂತಹ ಅವರ ವಿರುದ್ದ ಶಿಸ್ತು ಕ್ರಮವನ್ನು ಕೈಗೊಳ್ಳಲು ಸೂಚನೆ ನೀಡಿದರು.
ತೋಟಗಾರಿಕೆ ಅಧಿಕಾರಿಗಳು ಮಾತ್ರ ಸಚಿವರಿಗೆ ಸಂಪೂರ್ಣ ಸುಳ್ಳು ಮಾಹಿತಿಯನ್ನು ಕೊಟ್ಟದ್ದು ಕಣ್ಣು ಮುಂದು ಕಂಡು ಬಂದಿದೆ.

ಬೀಜ ಸುಲಭವಾಗಿ ಸಿಗುತ್ತದೆ, ಯಾವುದೇ ಬ್ಲಾಕ್ ಮಾರ್ಕೆಟ್’ನಲ್ಲಿ ಮಾರಾಟ ಇಲ್ಲವೆಂದು ಹಾಡು ಹಗಲು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. 5531 ಎಂಬ ತಳಿ ಇದೇ 2043 ಕೂಡ ಸದ್ಯದಲ್ಲಿ ಸುಲಭವಾಗಿ ಸಿಗುತ್ತದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ದುಬಾರಿ ಬೆಲೆಗೆ ಮಾರಾಟ ಆಗುತ್ತದೆ.

ಇದನ್ನು ಜಿಲ್ಲಾಧಿಕಾರಿಗಳು ಹಾಗೂ ಸಚಿವರು ಮುಂದೆ ಸುಳ್ಳು ಮಾಹಿತಿಯನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.

ಈಸಂದರ್ಭದಲ್ಲಿ ಸಿರಿಗುಪ್ಪ ಶಾಸಕ ಬಿ.ಎಂ ನಾಗರಾಜ್,ಶಾಸಕ ಭರತ್ ರೆಡ್ಡಿ,ಉಪಸ್ಥಿತಿ ಇದ್ದರು.

(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply