*ಬ್ರೂಸ್ ಪೇಟೆ ಠಾಣೆಯ ಮುಖ್ಯ ಪೇದೆ ರಾಮಲಿಂಗ ಅಮಾನತು.*
ಬಳ್ಳಾರಿ (2) ಕೊಪ್ಪಳ ಜಿಲ್ಲೆಯ ಸಿ .ಇ ಎನ್. ಠಾಣೆಯಲ್ಲಿ ಸಿಡಿಆರ್ ಹಾಕಿ ಅಧಿಕಾರಿಗಳ ಅನುಮತಿ ಇಲ್ಲದೆ ರಹಸ್ಯ ಮಾಹಿತಿ ಪಡೆದು ಡೀಲ್ ಡೀಲ್ ಮಾಡುತ್ತಾ ಇದ್ದಾರೆ ಅನ್ನುವ ಅನುಮಾನ ದಲ್ಲಿ ಪ್ರಕರಣ ದಾಖಲೆ ಆಗಿತ್ತು. ಕೊಪ್ಪಳ ದಲ್ಲಿ ಠಾಣೆಯ ವಿಚಾರಣೆ ದಲ್ಲಿ ಬ್ರೂಸ್ ಪೇಟೆ ಠಾಣೆಯ,ಪೇದೆ ರಾಮಲಿಂಗ ಬಳ್ಳಾರಿಯ ಕೆಲ ನಂಬರ್ ಗಳು ಕೊಪ್ಪಳ ಸಿ,ಇ,ಎನ್. ಠಾಣೆಯ ಪೇದೆ ಗೆ ಹಾಕಿ ಮಾಹಿತಿ ಪಡೆದ ವಿಚಾರಣ ಬಯಲುಗೆ ಬಂದಿದೆ.
ಅದನ್ನು ವಿಚಾರಣೆ ಮಾಡಲು ಕೊಪ್ಪಳ ಪೋಲಿಸರು ರಾಮಲಿಂಗನಗೆ ನೋಟೀಸ್ ಕೊಡಲು ಬಂದಿದ್ದರು ಆದರೆ ರಾಮಲಿಂಗ ಅವರನ್ನು ತಳ್ಳಿ ಹೊಡಿಹೊಗಿದ್ದಾರೆ ಎಂದು ಕರ್ತವ್ಯ ಕ್ಕೆ ಅಡ್ಡಿ ಪಡಿಸಲಾಗಿದೆ ಎಂದು ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲೆ ಆಗಿತ್ತು.
ಈಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಪಡೆದ, ದಿಟ್ಟ ಸಿಂಗಮ್ ಎಂದು ಖ್ಯಾತಿ ಪಡೆದ ಬಳ್ಳಾರಿ ಎಸ್ಪಿ ಡಾ.ಶೋಭರಾಣಿ ಅವರು ರಾಮಲಿಂಗ ಅವರನ್ನು ಅಮಾನತು ಮಾಡಿದ್ದಾರೆ. ದೂರವಾಣಿ ದಲ್ಲಿ ಎಸ್ಪಿ ಅವರು ಮಾಹಿತಿಯನ್ನು ನೀಡಿದ್ದಾರೆ. *ಇದು ಸಣ್ಣ ಅಪರಾಧ ಅಲ್ಲವೇ ಅಲ್ಲ ಸಿ.ಡಿ,ಆರ್.ಹಾಕಿ ಇತರ ಪೋನ್ ಮಾಹಿತಿ ಕಲೆ ಹಾಕುತ್ತಾರೆ ಅಂದರೆ ರಹಸ್ಯ ಅನ್ನವದು ಎನು ಉಳಿದಿದೆ.!?* ಪೋಲಿಸರು ರೂಲ್ಸ್ ಬಿಟ್ಟು ಯಾಲ್ಲವು ಮಾಡುತ್ತಾರೆ ಅಂದರೆ, ಯಾರ ಮೇಲೆ ನಂಬಿಕೆ ಇಡಬೇಕು, ಇಷ್ಟು ಮಾಹಿತಿ ಸಾಧಾರಣ ಪೇದೆ ಮಾಹಿತಿ ಕಲೆ ಹಾಕುತ್ತಾನೆ ಅಂದರೆ,ಯಾಲ್ಲವು ಸಂಶಯಾಸ್ಪದ ಪ್ರಶ್ನೆ ಗಳು ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿವೆ?? ಈಗಾಗಲೇ ಪ್ರತಿ ಸಣ್ಣ ವಿಚಾರ ಕೂಡ ಠಾಣೆಯ ಪಿಎಸ್ ಐ,ಸಿಪಿಐ ಡಿವೈ ಎಸ್ಪಿ ಅವರ ದೃಷ್ಟಿ ಗೆ ಇಲ್ಲದೆ ಎನು ನಡೆಯಲು 100% ಸಾಧ್ಯವಿಲ್ಲ.. ಅದರೆ ಕೂಡ ಬ್ರೂಸ್ ಪೇಟೆ ಠಾಣೆಯಲ್ಲಿ ಪದೇ ಪದೇ ಪೇದೆಗಳು ಬಲಿಪಶುಗಳು ಆಗುತ್ತಾನೆ ಇದ್ದಾರೆ ಅನ್ನವದು ಅನುಮಾನ ಅಚ್ಚರಿ ಮೂಡಿಸುತ್ತದೆ!!. ಥರ್ಡ್ ಲಾಂಗ್ವೇಜ್ ಮಾತನಾಡುವ ಖಾಕಿ ಗಳ ಕಳಪೆ ದರ್ಪ ಮಾರುಕಟ್ಟೆ ಯಲ್ಲಿ ಹರಾಜು ಅಗಿದೆ. ಈವರೆಗೆ ಬಳ್ಳಾರಿ ಯಲ್ಲಿ ಕೆಲ ವರ್ಷಗಳ ಇತಿಹಾಸ ದಿಂದ ಇಂತಹ ದುರಂತ ಗಳು ನಡೆದಿಲ್ಲ, ಇಲಾಖೆ ಗೌರವ ಹಾಳು ಆಗಿಲ್ಲ, ಈಹಿಂದೆ ಗಣಿ ದೂಳು ನಲ್ಲಿ ಕೇಲ IAS.IPS,ಗಳು ಜೈಲು ಪಾಲು ಆಗಿದ್ದರು. ಆದರೆ ಇತ್ತೀಚೆಗೆ ರಕ್ಷಕರು ಭಕ್ಷಕರು ಆಗಿದ್ದಾರೆ,ಇದೇ ಠಾಣೆಯಲ್ಲಿ ಮತ್ತೊಬ್ಬ ಪೇದೆ ಸಿ.ಡಿ.ಆರ್, ಮೂಲಕ ಮಾಹಿತಿ ತೆಗೆದುಕೊಂಡು, ಡೀಲ್ ಡೀಲ್ ಮಾಡುತ್ತಾರೆ ಅಂದರೆ, ಯಾರನ್ನು ಹೊಣೆ ಮಾಡಬೇಕು. ಠಾಣೆಯಲ್ಲಿ ಇತರರ ಪೋನ್ ಲಿಷ್ಟ್ ಇವರಗೆ ಯಾಕೆ ಕೊಡುತ್ತಾರೆ. ಸಾಧರಣವಾಗಿ ಪೋಲಿಸರು ಪ್ರಕರಣ ಸಮಯದಲ್ಲಿ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಪಡೆಯುತ್ತಾರೆ. ಆದರೇ ಪ್ರಕರಣ ಗಳ ಲಿಸ್ಟ್ ನಲ್ಲಿ ಇರುವ ನಂಬರ್ ಗಳು ರಾಮಲಿಂಗ ಅವರ ಗೆ ಕೊಟ್ಟಿದ್ದು ಯಾರು??.ಠಾಣೆಯಲ್ಲಿ ಯಾಲ್ಲವು ಸಂತೆ ಮಾರುಕಟ್ಟೆ ರೀತಿಯಲ್ಲಿ ಇರುತ್ತೆದಿಯಾ??. ಮೇಲಿನ ಅಧಿಕಾರಿಗಳು ಅನುಮತಿ ಇಲ್ಲದೆ ಸಿ.ಡಿ ಆರ್. ಹಾಕಲು ಸಾಧ್ಯವಿಲ್ಲ. ಇದು ಸಂಪೂರ್ಣ ವ್ಯವಸ್ಥೆ ವಾಗಿ ನಡೆದ, ಕೆಲಸ ಅನ್ನವದು. ಇದರ ಹಿಂದೆ ಕಾಣದ ಕೈ ವಾಡಗಳ ಕಥೆ ಇದೇ ಅನ್ನುವ ಅನುಮಾನ. ಠಾಣೆ ಗಳ ಅಧಿಕಾರಿಗಳನ್ನು ,ಇವರ ಮೇಲೆ ಅಧಿಕಾರಿಗಳನ್ನು ಯಾರು ಪ್ರಶ್ನೆ ಮಾಡುತ್ತ ಇಲ್ಲ.ಇವರ ಪರ್ಸನಲ್, ಸರ್ಕಾರದ ಮೊಬೈಲ್ ಗಳು ನಂಬರ್ ಗಳು ಸಿ.ಡಿ.ಆರ್ .ಹಾಕಬೇಕು ಸಂಪೂರ್ಣ ಸಿನಿಮಾ ಹೊರಗೆ ಸಿಗುತ್ತದೆ. ಅದು ಕೂಡ ಆಗುವ ಸಾಧ್ಯತೆ ಇರಬಹುದು??. ಈಗಾಗಲೇ ಬಳ್ಳಾರಿ ಬಂಗಾರ ಅಂಗಡಿಗಳ ಹಣ ಬಂಗಾರದ ಕಥೆ ಮುಗಿದಿಲ್ಲ.ಇಲಾಖೆಯ ಗೌರವ ಹಾಳು ಮಾಡಿದ ದಿಟ್ಟ ಪೋಲಿಸ್ ಅಧಿಕಾರಿಗಳ ಹೇಸರು ಚರಿತ್ರೆ ಪುಟಗಳಲ್ಲಿ ಇರುತ್ತದೆ.ನೂತನ ಎಸ್ಪಿ ಡಾ.ಶೋಭರಾಣಿ ಅವರು ಬಂದ ಮೇಲೆ ಮೂಲಜ್ ಇಲ್ಲದೆ ಕ್ರಮ ಮಾಡುತ್ತ ಇದ್ದಾರೆ ಇದರಿಂದ ಒಂದಿಷ್ಟು ಇಲಾಖೆ ಗೌರವ ಉಳಿದಿದೆ. ಇದು ಒಂದು ಠಾಣೆಯ ವಿಚಾರ ಅಲ್ಲವೇ ಅಲ್ಲ ಪ್ರತಿ ಠಾಣೆಯ ಸಿನಿಮಾ ಇದೇ ರೀತಿ ಯಲ್ಲಿ ಇದೇ ಏಂದು ಕೇಳಿಬರುತ್ತದೆ. ಏನೆ ಅಗಲಿ ಠಾಣೆ ಗಳ ಗೆ ಗೌರವ ಇಲ್ಲದಂತೆ ಅಗಿದೆ.ಇದರ ಪರಿಣಾಮ ಮುಂದೆ ಅಧಿಕಾರಿಗಳು ಗೆ ತಲೆ ನೋವು ಆಗುತ್ತದೆ..??.