*ಪೋಲಿಸ್ ಇಲಾಖೆಯಲ್ಲಿ ಇದ್ದು ರಹಸ್ಯವಾದ ಮಾಹಿತಿಯನ್ನು ಪಡೆದು ವಂಚನೆ ಮಾಡುತ್ತಿದ್ದ, ಬ್ರೂಸ್ ಪೇಟೆ ಠಾಣೆಯ ಮತ್ತೊಬ್ಬ ,ಪೇದೆ,ಇವರ ಪತ್ನಿ ಹೇಡ್ ಕಾನ್ಸ್‌ಟೇಬಲ್ ಗು ಲಿಂಕ್, ನೋಟೀಸ್, ಪ್ರಕರಣ.!!ಇಲಾಖೆಯ ಗೌರವ ಉಳಿದಿದೆಯಾ??.* ಬಳ್ಳಾರಿ (2) ಕೆಲ ವರ್ಷಗಳ ದಿಂದ ಕೊಪ್ಪಳ ಜಿಲ್ಲೆಯ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೋಲಿಸ್ (C.E.N) ಡಿಪಾರ್ಟ್ಮೆಂಟ್ ಠಾಣೆ ಯಲ್ಲಿ, ಕೋಟ್ರೆಪ್ಪ ಅನ್ನುವ ಮುಖ್ಯ ಪೇದೆ ಕೆಲಸವನ್ನು ನಿರ್ವಹಣೆ ಮಾಡುತ್ತ ಇದ್ದರು,ಇವರು ಇಲಾಖೆ ಯಲ್ಲಿ ಮಹತ್ವದ ಇಲಾಖೆ ಮಾಹಿತಿ ಸೋರಿಕೆಯನ್ನು ಮಾಡುತ್ತ ಹಣವನ್ನು ಗಳಿಕೆ ಮಾಡುತ್ತಾ,ಇತರೆ ಠಾಣೆಯ ಪೋಲಿಸ್ ಪೇದೆಗಳಿಗೆ,ಮಾಹಿತಿಯನ್ನು ನೀಡುತ್ತಿದ್ದರೆ ಅನ್ನುವ ಆರೋಪ ದಡಿಯಲ್ಲಿ,ಇವರ ಮೇಲೆ ಪ್ರಕರಣ ದಾಖಲೆ ಆಗಿತ್ತು.ಇವರ ವಿಚಾರಣೆ ಯಲ್ಲಿ ಕೋಟ್ರೆಪ್ಪ ,ಬಳ್ಳಾರಿಯ ಬ್ರೂಸ್ ಪೇಟೆ ಠಾಣೆಯ ರಾಮಲಿಂಗ ಅನ್ನುವ ಪೇದೆ ಕೂಡಾ ಬಳ್ಳಾರಿ ಯಿಂದ ಕೇಲ ನಂಬರ್ ಗಳು ಕೋಟ್ರೆಪ್ಪ ಅವರಿಗೆ ಹಾಕಿ ಕಾಲ್ ರಿಕಾರ್ಡೋ ಅದರ ಗೊಪ್ಯತೆ ಅವರ ಸಂಪರ್ಕ ಟವರ್ ಲೊಕೇಷನ್ ಅವರ ಸಂಪರ್ಕ ಮುಂತಾದ ಮಾಹಿತಿ ಪಡೆದು ಕೊಳ್ಳುತ್ತಾ ಇದ್ದರು ಎಂದು ತಿಳಿದು ಬಂದಿದೆ.
ಆದರೆ ಇದು
ತುಂಬಾ ರಹಸ್ಯವಾದ ವಿಭಾಗ, ಪ್ರಕರಣ ಗಳಲ್ಲಿ ಬಾಗಿ ಯಾಗಿ ಇರುವ ವಿಚಾರಣೆ ಮುಂತಾದ ಸಮಸ್ಯೆಗಳು ಬಂದ ಸಮಯದಲ್ಲಿ ನ್ಯಾಯಾಲಯದ ಅನುಮತಿ,ಎಸ್ಪಿ ಅನುಮತಿ ಪತ್ರದ ಮೂಲಕ ಪಡೆದು ಅವರ ಕಾಲ್ ರಿಕಾರ್ಡೊ ಪರಿಶೀಲನೆ ಮಾಡಬೇಕು ಆಗಿರುತ್ತದೆ ಯಾರೆಂದರೆ ಅವರು ಕಾಲ್ ರಿಕಾರ್ಡೋ ಮಾಹಿತಿ ಪಡೆಯುವುದು ಬಹುದೊಡ್ಡ ಅಪರಾಧ.
ರಾಮಲಿಂಗ ಪೆದೇ ಮೇಲೆ ಹಲವಾರು ಆರೋಪ ಗಳು ಹುಟ್ಟು ಕೊಂಡಿ ಇವೇ ಇಲಾಖೆ ಯವರು ಮುಚ್ಚಿಟ್ಟು ಕೊಂಡು ಮಾಹಿತಿ ಹೊರಗೆ ಬರದಂತೆ ನೋಡಿಕೊಳ್ಳುವುದು ಸಹಜವಾದ ಶೈಲಿ.
ಅದರೆ ರಾಮಲಿಂಗ ಮತ್ತು ಇತರರು ಸೇರಿಕೊಂಡು ಕಾಲ್ ರಿಕಾರ್ಡೋ ಪಡೆದು,ಅವರನ್ನು ಕರೆದು “ಡೀಲ್ ಡೀಲ್” ಮಾಡುತ್ತ ಹಣ ಗಳಿಕೆ ಮಾಡುತ್ತ ದಂದೆ ಮಾಡುತ್ತ ಇದ್ದರು ಅನ್ನುವುದು ಬಹಿರಂಗ ಗೊಂಡಿದೆ.
ಇದರ ಹಿಂದೆ ಒಂದು ಜಾಲ ಇದೆ ಎಂದು ಎಲ್ಲವು ಗೊತ್ತಿದ್ದು ಮಾಡಿದ್ದರೆ ಎಂದು ದೊಡ್ಡ ಮಟ್ಟದ ಅಧಿಕಾರಿಗಳು ಹೊರತು ಪಡಿಸಿ, ಎಲ್ಲರಿಗೆ ಮಾಹಿತಿ ಇದೆ ಅನ್ನುವ ಗುಸು ಗುಸು ಇದೆ.
ಕೊಪ್ಪಳ C.E.N.ವಿಭಾಗದ ಠಾಣೆಯ ಅಧಿಕಾರಿಗಳು ಬಳ್ಳಾರಿ ಗೆ ಎಂಟ್ರಿ ಕೊಟ್ಟಿದ್ದಾರೆ, ರಾಮಲಿಂಗ ಗೆ ಕೊಪ್ಪಳ ಸಿ.ಇ.ಎನ್ ಗೆ ವಿಚಾರಣೆ ಗೆ ಹಾಜರಾಗಲು ನೋಟೀಸ್ ಕೊಡಲು ಬಂದಿದ್ದರು ಆದರೆ ರಾಮಲಿಂಗ ಅವರು ಅವರ ಕೈ ನಲ್ಲಿ ಸಿಕ್ಕಿದ್ದು ನೋಟಿಸ್ ತೆಗೆದು ಕೊಳ್ಳದೆ ಅವರನ್ನು ತಳ್ಳಿ ಪರಾರಿ ಆಗಿದ್ದು ಘಟನೆ ನಡೆದಿದೆ. ಕರ್ತವ್ಯ ಅಡ್ಡಿ ಪಡಿಸಲಾಗಿದೆ ಎಂದು
ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಎಸ್ಪಿ,ಡಾ.ರಾಮ ಎಲ್ ಅರಸಿದ್ದಿ ಅವರು ದೂರವಾಣಿ ಮೂಲಕ ತಿಳಿಸಿದ್ದಾರೆ.
ಇದು ಅಲ್ಲದೆ ಬಳ್ಳಾರಿ ಎಸ್ಪಿ ಕಚೇರಿ ಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿರುವ ತ್ರಿವೇಣಿ ಅವರನ್ನು ವಿಚಾರಣೆ ಗೆ ಒಳಪಡಿಸಲಾಗಿದೆ, ಎಂದು ಕಾಲ್ ರಿಕಾರ್ಡೋ ಪತ್ತೆಹಚ್ಚಿ ಅವರುಗಳಿಂದ ಪಡೆದ ಹಣ ತ್ರಿವೇಣಿ ಅಕೌಂಟ್ ಗೆ ಲಿಂಕ್ ಆಗಿದೆ ಅನ್ನುವ ವಿಚಾರದಲ್ಲಿ ವಿಚಾರಣೆ ನಡೆಯುತ್ತದೆ ವಿಚಾರಣ ಗೌಪ್ಯತೆ ಹೇಳಲು ಸಾಧ್ಯವಾಗದು,ರಾಮಲಿಂಗ ಸಿಕ್ಕ ತದನಂತರ ಎಲ್ಲವು ಹೊರಗೆ ಬೀಳುತ್ತದೆ ಎಂದರು.
ಮೊನ್ನೆ ಮೊನ್ನೆ ಬಂಗಾರ ನಗದು ಹಣವನ್ನು ಕಳವು ಮಾಡಿದ್ದ ಪ್ರಕರಣ ದಲ್ಲಿ ಇದೆ ಠಾಣೆಯ ಒಬ್ಬ ಪೇದೆ ಜೈಲಿನಲ್ಲಿ ಇದ್ದಾರೆ, ಇದೆ ಠಾಣೆಯ ಮತ್ತೊಬ್ಬ ಪೇದೆ ಮತ್ತು ರಾಮಲಿಂಗ ಪತ್ನಿ ತ್ರಿವೇಣಿ ವಿಚಾರಣೆ ಗುರಿ ಯಾಗಿದ್ದಾರೆ.
ಪೋಲಿಸ್ ಇಲಾಖೆ ಯಲ್ಲಿ ಪೇದೆಗಳು ಇಂತಹ ಪ್ರಕರಣ ಗಳಲ್ಲಿ ಬಾಗಿ ಆಗುತ್ತಾರೆ ಎಂದರೆ ಇಲಾಖೆ ಗೌರವ ಯಾವ ಮಟ್ಟದಲ್ಲಿ ಇರುತ್ತದೆ ಅನ್ನುವುದು,ಗೌರವ ಉಳಿದಿದೆಯಾ ಎನ್ನುವುದು ಪ್ರಶ್ನೆ ಮಾಡುವಂತೆ ಆಗಿದೆ. *ಒಟ್ಟಾರೆ ಪೋಲಿಸ್ ಇಲಾಖೆಯಲ್ಲಿ ತುಂಬಾ ಅನುಮಾನ ಆಸ್ಪದ ವಿಚಾರ ಗಳು ಇದ್ದಾವೆ ಇದರ ರೂವಾರಿ ಗಳು ಯಾರು ಮುಂದೆ ಏನು ಆಗಬಹುದು ಅನ್ನುವುದು ಕಾದು ನೋಡಬೇಕು ಆಗಿದೆ.* ಕ್ರೈಮ್ ವಿಭಾಗದಲ್ಲಿ ರಾಜ್ಯ ಬೆಚ್ಚಿ ಬೀಳುವ ಮಾಹಿತಿ ಗಳು ಹಳ್ಳಿ ಕಟ್ಟೆಯಲ್ಲಿ ಕೇಳಿ ಬರುತ್ತವೆ.
ಇದರ ಮುಂದುವರೆದ ಭಾಗವನ್ನು ಕಾದು ನೋಡಬೇಕು..??. ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.9844445008.