ಪಿ.ಎಸ್.ಐ ಆಗಿ ಬಡ್ತಿ ಹೊಂದಿದ ಅಧಿಕಾರಿಗಳಿಗೆ ಸನ್ಮಾನ.
ಪೊಲೀಸ ಇಲಾಖೆಯಲ್ಲಿ ಸಿಬ್ಬಂದಿಗಳು, ಅಧಿಕಾರಿಗಳು ಹಿಂದೆ ಕರ್ತವ್ಯ ನಿರ್ವಹಿಸಿದ ಅನುಭವ ಮತ್ತು ಅಧಿಕಾರಿಗಳೊಂದಿಗೆ ಕಲಿತ ಅನುಭವವನ್ನು ಮರೆಯಬಾರದು ಎಂದು ಬ್ರೂಸ್ ಪೇಟೆ ಠಾಣೆಯ ಪಿಐ ಎಮ್.ಎನ್ ಸಿಂಧೂರ ಅವರು ತಿಳಿಸಿದರು.
ನಗರದಲ್ಲಿ ಭಾನುವಾರ ಸಂಜೆ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಆವರಣದಲ್ಲಿ ಎ.ಎಸ್.ಐ ಹುದ್ದೆ ಯಿಂದ ಪಿ.ಎಸ್.ಐ ಹುದ್ದೆಗೆ ಬಡ್ತಿ ಪಡೆದ ಅಧಿಕಾರಿಗಳು ಬಿಳ್ಕೋಡಿಗೆ ಸಮಾರಂಭ ನಡೆಯಿತು.
ಬ್ರೂಸ್ ಪೇಟೆ ಠಾಣೆಯ ಪಿಐ ಎಮ್.ಎನ್ ಸಿಂಧೂರ ಮಾತನಾಡಿದ ಅವರು ಪೊಲೀಸ್ ಇಲಾಖೆಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜೀವನದಲ್ಲಿ ಆರೋಗ್ಯ ಮತ್ತು ಅಧಿಕಾರಿಗಳ ಅನುಭವ ಬಹಳ ಮುಖ್ಯ. ಹಿಂದೆ ನಡೆದ ಘಟನೆಗಳನ್ನು ಮರೆಯಬಾರದು ಹಾಗೂ ಕಠಿಣ ಶ್ರಮ ಪಡಬೇಕು.
ಎ.ಎಸ್.ಐ ನಿಂದ ಪಿ.ಎಸ್.ಐ ಆಗಿ ಬಡ್ತಿ ಹೊಂದಿದ ಅಧಿಕಾರಿಗಳಿಗೆ ಶುಭ ಕೋರಿದರು. ಪೊಲೀಸ ಇಲಾಖೆಯಲ್ಲಿ ಇರುವವರು ಮನೋಭಾವ ಮತ್ತು ವೃತ್ತಿ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಪೊಲೀಸ್ ಇಲಾಖೆ ಗೌರವ ನೀಡುತ್ತೆ ಹಾಗೂ ಅನ್ನವನ್ನು ನೀಡುತ್ತದೆ ಎಂದರು. ಈ ಸಮಯದಲ್ಲಿ ಕಿರಿಯ ಪೊಲೀಸ್ ಸಿಬ್ಬಂದಿಗಳು ಹಿರಿಯ ಸಲಹೆ ಮತ್ತು ಸೂಚನೆ ಬಹಳ ಮುಖ್ಯ ಎಂದರು.
ಪಿ.ಎಸ್.ಐ ಆಗಿ ಬಡ್ತಿ ಹೊಂದಿದ ಹನುಮಂತಪ್ಪ.ಜಿ ಮಾತನಾಡಿದ ಅವರು ಪೊಲೀಸ್ ಇಲಾಖೆಯಲ್ಲಿ ಮೊದಲು ಕೆಲಸ ಕಲಿಯಬೇಕು. ಶಿಸ್ತು ಬಹಳ ಮುಖ್ಯ. ಪೊಲೀಸ್ ವೃತ್ತಿಯಲ್ಲಿ 34 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದೆನೆ. ಸಿಪಿಐ ಮತ್ತು ಡಿವೈಎಸ್ಪಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದೆನೆ ಎಂದರು. ಅಧಿಕಾರಿಗಳಿಗೆ ಗೌರವವನ್ನು ನೀಡಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ನಂತರ ಪಿ.ಎಸ್.ಐ ನಾಗಭೂಷಣ ಮಾತನಾಡಿದ ಅವರು
ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕೆಲಸವನ್ನು ಮಾಡಿದ್ದೆವೆ. ಮುಂದೆನು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದೆನೆ ಎಂದು ತಿಳಿಸಿದರು. ಅಧಿಕಾರಿಗಳಿಗೆ ಗೌರವ ಕೊಡಬೇಕು ಎಂದು ತಿಳಿಸಿದರು.
ಪಿ.ಎಸ್.ಐ ಸುರೇಶಪ್ಪ ಮಾತನಾಡಿದ ಅವರು ಪಿ.ಎಸ್.ಐ ಆಗಿ ಬಡ್ತಿ ಪಡೆದ ಸ್ನೇಹಿತ ಹನುಮಂತಪ್ಪ.ಜಿ ಅವರು ಸ್ನೇಹ ಜೀವಿಯಾಗಿದ್ದರು. ಪೊಲೀಸ್ ಅಧಿಕಾರಿಗಳು ಜೊತೆಗೆ ಹೇಗೆ ? ಕರ್ತವ್ಯ ನಿರ್ವಹಿಸಬೇಕು ಎನ್ನುವ ಅಂಶಗಳನ್ನು ಪಾಲನೆ ಮಾಡಿದ್ದೆನೆ ಎಂದರು. ಪೊಲೀಸ ಇಲಾಖೆಯಲ್ಲಿ
ಸಮಾಧಾನ ಮತ್ತು ತಾಳ್ಮೆ ಇರಬೇಕು ಎನ್ನುವ ಮಾಹಿತಿಯನ್ನು ತಿಳಿಸಿದರು. ಅದನ್ನು ಪಾಲನೆ ಮಾಡಿದ್ದೆನೆ ಎಂದರು.
ಠಾಣೆಯ ಸಿಪಿಐ ಮತ್ತು ಪಿ.ಎಸ್.ಐ ಅಧಿಕಾರಿಗಳು,
ಬಡ್ತಿ ಹೊಂದಿದ ಪಿ.ಎಸ್.ಐ ಅಧಿಕಾರಿಗಳಿಗೆ ಡಬಲ್ ಸ್ಟಾರ್ ಗಳನ್ನು ಹಾಕಿದರು. ಶಾಲು, ಪೇಟ, ಹೂವಿನಹಾರ ಹಾಕಿ ಸನ್ಮಾನ ಮಾಡಿದರು.
ಈ ಸಮಯದಲ್ಲಿ ಬ್ರೂಸ್ ಪೇಟೆ ಠಾಣೆಯ ಸಿಪಿಐ ಎಮ್.ಎನ್ ಸಿಂಧೂರ, ಪಿ.ಎಸ್ಐ ಸುರೇಶಪ್ಪ, ಕ್ರೈಮ್ ಪಿಎಸ್ಐ ಎಸ್.ಎಸ್
ವಡ್ಡರ, ಎ.ಎಸ್.ಐ ಮಲ್ಲಿಕಾರ್ಜುನ, ಸಿಬ್ಬಂದಿಗಳಾದ
ಪೊಲೀಸ ಕುಮಾರ ರೆಡ್ಡಿ,ಶಿವ ಕುಮಾರ್, ಉಮಾಪತಿ, ರಾಜಶೇಖರ್ ಸ್ವಾಮಿ, ಶರ್ಮಾಸ್, ಕುಬೇರ್ ನಾಯ್ಕ್, ಅನಿಲ್, ದೌಲ, ಆನಂದರೆಡ್ಡಿ, ನಾಗರಾಜ್, ಚಂದ್ರಶೇಖರ್, ಅಂಜಿನಿ ರೆಡ್ಡಿ, ಶ್ವೇತಾ, ಶಕುಂತಲಾ, ನೀಲಮ್ಮ ಭಾಗವಹಿಸಿದರು.
ವರದಿ:
ಕೆ.ಬಜಾರಪ್ಪ
ಬಳ್ಳಾರಿ.