ಜೆಸ್ಕಾಂನ ಭ್ರಷ್ಟ, ಜಾದುಗಾರ ಹುಸೇನ್ ಸಾಬ್ ಸಸ್ಪೆಂಡ್.ಇಲಾಖೆಯನ್ನು ತನ ಕಪಿ ಮುಷ್ಟಿ ಯಲ್ಲಿ ಇಟ್ಟುಕೊಂಡು ಆಳ್ವಿಕೆ ಮಾಡುತ್ತ ಇದ್ದ,ಲೂಟಿ ಮಾಡೋದು ಇವರ ಪ್ರಥಮ ಕರ್ತವ್ಯ ಆಗಿತ್ತು
ಬಳ್ಳಾರಿ,ಸೆ,೧೫: ಗುಲ್ಬರ್ಗಾ ವಿದ್ಯುಚಕ್ತಿ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿದ್ದ ಹುಸೇನ್ ಸಾಬ್ ಸೇವೆಯಿಂದ ಅಮಾನತ್ತಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಬಳ್ಳಾರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಹುಸೇನ್ ಸಾಬ್ ಮನೆಗಳ ಮೇಲೆ ದಾಳಿ ನಡೆಸಿದಾಗ ಹುಸೇನ್ ಸಾಬ್ ಮನೆಯಲ್ಲಿ ಕಂತೆ ಕಂತೆ ಹಣ, ಅಕ್ರಮ ಆಸ್ತಿಯ ದಾಖಲೆಗಳು ಸಿಕ್ಕು ಬೆತ್ತಲಾಗಿದ್ದ ಹುಸೇನ್ ಸಾಬ್ ಜೆಸ್ಕಾಂನ ಭ್ರಷ್ಟ ಅಧಿಕಾರಿ ಎಂಬ ಖ್ಯಾತಿ ಒಳಗಾಗಿದ್ದ ಇನ್ನು ಲೋಕಾಯುಕ್ತ ಅಧಿಕಾರಿಗಳು ಈತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಈತನ ಭ್ರಷ್ಟಚಾರದ ಕುರಿತು ಕಲಬುರಗಿಯ ಜೆಸ್ಕಾಂನ ಎಂ.ಡಿಯವರಿಗೆ ವರದಿ ಕಳುಹಿಸಿದ್ದರು.
ಈ ಹಿನ್ನಲೆಯಲ್ಲಿ ಹುಸೇನ್ ಸಾಬ್‌ರನ್ನು ಜೆಸ್ಕಾಂನ ಎಂ.ಡಿ ನಿನ್ನೆ ಸಂಜೆ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಒಬ್ಬ ಯೋಧನಾಗಿದ್ದುಕೊಂಡು ನಿವೃತ್ತನಾದ ಬಳಿಕ ಶಿಸ್ತು, ಸಂಯಮ ಮತ್ತು ಸಮಯ ಪಾಲನೆ ಮಾಡುತ್ತ ಮಾದರಿಯಾಗಬೇಕಿದ್ದ ಹುಸೇನ್ ಸಾಬ್ ಆರ್ಮಿ ಕೋಟಾದಲ್ಲಿ ಜೆಸ್ಕಾಂನಲ್ಲಿ ಸಹಾಯಕ ಅಭಿಯಂತರರಾಗಿ ಮೊದಲ ಬಾರಿಗೆ ಬೀದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ಕೆಲಸಕ್ಕೆ ಸೇರುತ್ತಾರೆ.
ಬಳಿಕ ವರ್ಗಾವಣೆ ಆಗಿ ಬಂದು ನಗರದ ಕೌಲ್ ಬಜಾರ್ ನ ಜೆಸ್ಕಾಂ ಕಚೇರಿಯ ಘಟಕ-೩ ರಲ್ಲಿ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಾರೆ.
ಕೌಲ್ ಬಜಾರ್‌ನ ೩ನೇ ಘಟಕದಲ್ಲಿ ಕೆಲಸ ನಿರ್ವಹಿಸಿ, ನಂತರ ಬಳ್ಳಾರಿ ನಗರ ಉಪವಿಭಾಗ ೪ನೇ ಘಟಕದಲ್ಲಿ ಕೆಲಸ ನಿರ್ವಹಿಸುತ್ತಾರೆ. ನಗರ ಉಪವಿಭಾಗ ಕಚೇರಿಯಲ್ಲಿ ಕೆಲಸ ಮಾಡುವ ಹುಸೇನ್ ಸಾಬ್ ನಂತರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಕೆಲಸ ನಿರ್ವಹಿಸುತ್ತಾರೆ. ಅಲ್ಲಿಂದ ಹೊಸಪೇಟೆಗೆ ವರ್ಗಾವಣೆ ಆಗುತ್ತಾರೆ.
ಸಸ್ಪೆಂಡ್ ಗಿರಾಕಿ: ಹೊಸಪೇಟೆಯಲ್ಲಿ ಜೆಸ್ಕಾಂನ ಉಗ್ರಾಣ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಹುಸೇನ್ ಸಾಬ್ ಅಕ್ರಮ ನಡೆಸಿ ಅಲ್ಲಿಯೂ ಅಮಾನತ್ತು ಆಗಿರುವ ಗಿರಾಕಿ. ಕೆಲವು ದಿನ ಅಲ್ಲಿ ಇಲ್ಲಿ ಓಡಾಡಿ, ಅಮೇಧ್ಯ ತಿನ್ನಿಸಿ ಮತ್ತೆ ಕೆಲಸಕ್ಕೆ ಹಾಜರಾಗುತ್ತಾರೆ. ಜೆಸ್ಕಾಂನಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿ ಪದೋನ್ನತಿ ಹೊಂದಿರುವ ಹೆಗ್ಗಳಿಕೆ ಇವರದ್ದು. ಸತತ ೫ ವರ್ಷಗಳ ಕಾಲ ಸೇವೆಯಲ್ಲಿ ಭದ್ರವಾಗಿ ನೆಲೆಯೂರಿ ಅಕ್ರಮವಾಗಿಯೇ ಬೇಜಾನ್ ಆಸ್ತಿ ಸಂಪಾದಿಸುತ್ತಾರೆ. ಅಷ್ಟೇ ಅಲ್ಲದೇ ತನ್ನದೇ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿ ಜೊತೆ ಲವ್ವಿ ಡವ್ವಿ ಕೂಡ ಇಟ್ಟುಕೊಂಡಿರುವ ಭೂಪನ ಕಾಮಲೀಲೆ ಎಲ್ಲರಿಗೂ ಗೊತ್ತಿರುವ ವಿಚಾರ.
ಅಪಾರ ಆಸ್ತಿ-ಪಾಸ್ತಿ: ಅಕ್ರಮ ಆಸ್ತಿ ಗಳಿಕೆಯಲ್ಲಿ ಏನೂ ಕಡಿಮೆ ಇಲ್ಲದ ಹುಸೇನ್ ಸಾಬ್, ಬಳ್ಳಾರಿ ತಾಲೂಕಿ ಶಿಡಿಗಿನಮೊಳ ಗ್ರಾಮದ ನಿವಾಸಿ ಎನ್ನುವುದೊಂದೇ ಈತನ ಸರ್ಟಿಫಿಕೇಟ್. ಮಿಕಿದ್ದೆಲ್ಲ ನಗರ, ಪಟ್ಟಣ ಪ್ರದೇಶಗಳಲ್ಲಿ ಸಾಕಷ್ಟು ಆಸ್ತಿ ಮಾಡಿಕೊಂಡಿದ್ದಾರೆ. ಬಳ್ಳಾರಿ, ಹಡಗಲಿ, ಹೊಸಪೇಟೆಯಲ್ಲಿ ಕೋಟ್ಯಾಂತರ ಮೌಲ್ಯದ ಮನೆಗಳು, ಕಟ್ಟಡಗಳು ಇವೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಹತ್ತಾರು ಎಕರೆ ಜಮೀನು ಖರೀದಿಸಿದ್ದಾನೆ.
ಹೊಸಪೇಟೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ಮನೆ ಇದೆ. ಸಾಲದ್ದಕ್ಕೆ ಸಾಕಷ್ಟು ಹಣ ಕ್ರೋಢೀಕರಿಸಿಟ್ಟುಕೊಂಡಿದ್ದಾನೆ. ಕಳೆದ ಬಾರಿ ರೇಡ್ ಆದಾಗ ಈತನ ಮನೆಯಲ್ಲಿ ಬರೋಬ್ಬರಿ ೨೫ ಲಕ್ಷ ಹಣದ ಕಂತೆ ಸಿಕ್ಕಿದೆ.
ಇದರ ಆಧಾರದ ಅಡಿ ವಿಚಾರಣೆ ನಡೆದಿತ್ತು.
ಲೋಕಾಯುಕ್ತ ದಾಳಿಗೆ ಒಳಗಾಗಿ, ಲಕ್ಷಾಂತರ ರೂ.ಹಣದ ಕಂತೆ ಹೊಂದಿದ್ದ ಹುಸೇನ್ ಸಾಬ್ ಲೋಕಾಯುಕ್ತ ಇನ್ಸ್ ಪೆಕ್ಟರ್ ಅವರನ್ನು ರಹಸ್ಯವಾಗಿ ಬಳ್ಳಾರಿ ಗೆಸ್ಟ್‌ಹೌಸ್‌ನಲ್ಲಿ ಭೇಟಿಯಾಗುವ ಉದ್ದೇಶವೇನಿತ್ತು? ಲೋಕಾಯುಕ್ತ ಇನ್ಸ್‌ಪೆಕ್ಟರ್ ರವರ ಕಚೇರಿಗೆ ಹೋಗದೇ ಸರ್ಕಾರಿ ಅತಿಥಿ ಗೃಹದಲ್ಲಿ ಲೋಕಾಯುಕ್ತ ಅಧಿಕಾರಿಗಳನ್ನು ಭೇಟಿಯಾಗುತ್ತಾರೆ ಅಂದರೆ ಏನರ್ಥ? ಇದನ್ನು ಕೆಲ ಪತ್ರಿಕೆಗಳು ಈ ಹಿಂದೆ ವಿಸ್ತೃತ ವರದಿ ಮಾಡಿತ್ತು. ಇದನ್ನಾಧರಿಸಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಅವರು ದಾಳಿಯಲ್ಲಿ ದೊರೆತ ದಾಖಲೆ ಸಮೇತ ಕಲಬುರಗಿ ವಲಯ ಮಟ್ಟದ ಹಿರಿಯ ಲೋಕಾಯುಕ್ತ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.
ಆ ವರದಿ ಅನ್ವಯ ಇದೀಗ ಸೇವೆಯಿಂದ ಅಮಾನತ್ತುಗೊಂಡಿದ್ದಾನೆ ಇವರ ಸ್ಥಾನದಲ್ಲಿ ಆಸ್ಮಾ ಖಾತುಲ್ ಎಂಬ ಅಧಿಕಾರಿ ನೇಮಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೇನಾಮಿ ವಿದ್ಯುತ್ ಗುತ್ತಿಗೆದಾರನಿಂದ ಕೆಲಸ
ಜೆಸ್ಕಾಂ ವ್ಯಾಪ್ತಿಯಲ್ಲಿ ಗುತ್ತಿಗೆ ಕೆಲಸಗಳಿಗೆಂದು ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ಜೆಸ್ಕಾಂಗೆ ವಿದ್ಯುತ್ ಗುತ್ತಿಗೆದಾರರ ಅಗತ್ಯವೂ ಇರುತ್ತದೆ. ಬಳ್ಳಾರಿಯಲ್ಲಿ ಐದು ವರ್ಷ ಠಿಕಾಣಿ ಹೂಡಿದ್ದ ಹುಸೇನ್ ಸಾಬ್ ಎಲ್ಲೆಲ್ಲಿ ಲೂ ಪೋಲ್ಸ್ ಇದೆ ಎನ್ನುವುದನ್ನು ಅರಿತು ಬೇರೆ ವಿದ್ಯುತ್ ಗುತ್ತಿಗೆದಾರರಿಗೆ ಅವಕಾಶ ನೀಡದೇ ತಾನೇ ತನಗೆ ಬೇಕಾದ ದಾದು ಎಂಬ ಬೇನಾಮಿ ಹೆಸರಿನಲ್ಲಿ ಈತನೇ ವಿದ್ಯುತ್ ಗುತ್ತಿಗೆದಾರಿಕೆಯನ್ನು ಮುನ್ನಡೆಸುತ್ತಿದ್ದಾನೆ. ಇದರಿಂದ ಕೋಟ್ಯಾಂತರ ರೂಪಾಯಿ ಅಕ್ರಮ ಸಂಪಾದನೆ ಮಾಡಿದ್ದರ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ಮಾಹಿತಿ ಇದೆ. ಇದೆಲ್ಲದರ ಆಧಾರದ ಅಡಿ ಲೋಕಾಯುಕ್ತರು ನೀಡಿದ ವರದಿ ಅಧರಿಸಿ ನಿನ್ನೆ ಈತನನ್ನ ಸೇವೆಯಿಂದ ಅಮಾನತ್ತು ಮಾಡಿ ಮನೆಗೆ ಕಳುಹಿಸಿದ್ದಾರೆ.
ಇದೀಗ ಹುಸೇನ್ ಸಾಬ್ ಸಸ್ಪೆಂಡ್ ಆಗಿ ಮನೆಯಲ್ಲಿ ಕೂರಬೇಕಾದ ಸ್ಥಿತಿ ತಂದುಕೊಂಡಿದ್ದಾನೆ.ಜಿಲ್ಲೆಯ ಗೌರವವನ್ನು ಹಾಳು ಮಾಡಿದ್ದಾರೆ. ಇಲಾಖೆ ಯಲ್ಲಿ ಸೀನಿಯರ್ ಅಧಿಕಾರಿಗಳು ಅನ್ನುವ ಗೌರವ ಮೂಲಕ ಅಕ್ರಮ ದಂದೆಗಳು ಮಾಡುತ್ತ ಇದ್ದರು. ಕರೆಂಟ್ ನನ್ನು ತಿಂದು ಜೀರ್ಣಿಸಿಕೊಳ್ಳಲು ಪ್ರಯತ್ನ ಮಾಡುತ್ತ ಬಂದಿದ್ದರು.
ಆದರೆ ಕರೆಂಟ್ ರಿವರ್ಸ್ ಆಗಿತ್ತು ಷಾಕ್ ಆಗಿತ್ತು,ಇಂದು… ಅಗಿಬಿಟ್ಟರ್ರು.!!.ಈತಂಹ ಭ್ರಷ್ಟ ಅಧಿಕಾರಿ ಜೊತೆಯಲ್ಲಿ ಕಾಮಗಾರಿ ಮಾಡಿದ ಕೇಲ ಗುತ್ತಿಗೆ ದಾರರು ಇದ್ದಾರೆ!! ಅವರಿಗೆ ಕೂಡ ಇಲಾಖೆ ತನಿಖೆ ಮಾಡಿ ಲೇಸನ್ನು ರದ್ದು ಮಾಡಬೇಕು.ಈಗಾಗಲೇ ಸರ್ಕಾರದ ಕೇಲ ಏಜೆನ್ಸಿ ಗಳು ಕಾಮಗಾರಿ ಮಾಡಿದ್ದಾರೆ,ಅವುಗಳನ್ನು ಮರುಪರಿಶೀಲನೆ ಮಾಡಬೇಕು ಅಗಿದೆ. ಇಲ್ಲವೆಂದರೆ ನ್ಯೂಸ್9ಟುಡೇ ಪೂರ್ತಿ ಮಾಹಿತಿ ಕೊಟ್ಟು ಅವರನ್ನು ಬೆತ್ತಲೆ ಮಾಡಬೇಕು ಆಗುತ್ತದೆ. ಗ್ರಾಮೀಣ ವ್ಯಾಪ್ತಿಯಲ್ಲಿ ಕೂಡ ಇಂತಹ ಪ್ರಕರಣ ಗಳು ತುಂಬಾ ಇದ್ದಾವೆ ಏಂದು ಕೇಳಿ ಬರುತ್ತಿದೆ,ಕೇಲ ಗುತ್ತಿಗೆ ದಾರರು ಉಪ್ಪುನ ಕಾಯಿ, ಕೊಟ್ಟ ಬಹುದೊಡ್ಡ ಮಟ್ಟದಲ್ಲಿ ಅಕ್ರಮ ಹಣವನ್ನು ಅಧಿಕಾರಿ ಗಳು ಗೆ ನೀಡಿದ್ದಾರೆ ಅನ್ನುವ ಕಳಪೆ ಕಾಮಗಾರಿ ಮಾಡಿದ್ದಾರೆ ಅನ್ನುವ ದಾಖಲೆ ಗಳು ಗ್ರಾಮೀಣ ವ್ಯಾಪ್ತಿಯ ಇ.ಇ ಚೇಂಬರ್ ಸುತ್ತು ವಾಸನೆ ಬರುತ್ತದೆ.
ಕಾದು ನೋಡಬೇಕು ಅಗಿದೆ ಮುಂದಿನ ಅಪಾಯ.?! (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ)