This is the title of the web page
This is the title of the web page

Please assign a menu to the primary menu location under menu

State

ವಾಲ್ಮೀಕಿ ನಿಗಮದ ಹಗರಣ ದಲ್ಲಿ ಇಂಚು ಇಂಚು ದಾಖಲೆಗಳು ಸಕ್ರಿಯವಾಗಿ ಇದ್ದು, ನಮ್ಮದು ಏನು ಪಾತ್ರ ವಿಲ್ಲ ಅನ್ನುತ್ತಾರೆ. ಇವರ ಗೆ ನೈತಿಕತೆ ಇದಿಯಾ??. ನಾಗೇಂದ್ರ ಹೀರೋಯಿಜಂ ನಡೆಯಲ್ಲ:- ಗಾಲಿ ಜನಾರ್ದನ ರೆಡ್ಡಿ.

ವಾಲ್ಮೀಕಿ ನಿಗಮದ ಹಗರಣ ದಲ್ಲಿ ಇಂಚು ಇಂಚು ದಾಖಲೆಗಳು ಸಕ್ರಿಯವಾಗಿ ಇದ್ದು, ನಮ್ಮದು ಏನು ಪಾತ್ರ ವಿಲ್ಲ ಅನ್ನುತ್ತಾರೆ. ಇವರ ಗೆ ನೈತಿಕತೆ ಇದಿಯಾ??. ನಾಗೇಂದ್ರ ಹೀರೋಯಿಜಂ ನಡೆಯಲ್ಲ:- ಗಾಲಿ ಜನಾರ್ದನ ರೆಡ್ಡಿ.

ವಾಲ್ಮೀಕಿ ನಿಗಮದ ಹಗರಣ ದಲ್ಲಿ ಇಂಚು ಇಂಚು ದಾಖಲೆಗಳು ಸಕ್ರಿಯವಾಗಿ ಇದ್ದು, ನಮ್ಮದು ಏನು ಪಾತ್ರ ವಿಲ್ಲ ಅನ್ನುತ್ತಾರೆ. ಇವರ ಗೆ ನೈತಿಕತೆ ಇದಿಯಾ??. ನಾಗೇಂದ್ರ ಹೀರೋಯಿಜಂ ನಡೆಯಲ್ಲ:- ಗಾಲಿ ಜನಾರ್ದನ ರೆಡ್ಡಿ.

ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗೆ ನಾಗೇಂದ್ರ 2 ವರ್ಷ ಜೈಲಲ್ಲಿ ಇದ್ದಿದ್ದು- ಜನಾರ್ದನರೆಡ್ಡಿ

ಬಳ್ಳಾರಿ:ಅ,17: ನಿನ್ನೆನೇ ಜೈಲಿನಿಂದ ಬಿಡುಗಡೆಯಾದ ನಾಗೇಂದ್ರ ಬಹಳ ವೀರಾವೇಶವಾಗಿ ಕೇಂದ್ರದ ಬಿಜೆಪಿ ಹಾಗೂ ರಾಜ್ಯ ಬಿಜೆಪಿಯ ವಿರುದ್ಧ ಮಾತನಾಡಿ ಹೀರೋಯಿಜಂ ತೋರಿಸಲು ಹೊರಟಿದ್ದಾರೆ ಇದು ನಡೆಯಲ್ಲ ಎಂದು ಬಿಜೆಪಿಯ ಹಿರಿಯ ಧುರೀಣ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ನಗರದ ಮೋಕಾ ರಸ್ತೆಯಲ್ಲಿನ ವಾಜಪೇಯಿ ಬಡಾವಣೆಯಲ್ಲಿರುವ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನ ಸರಕಾರದಿಂದ ಆಚರಿಸಬೇಕು ಹಾಗೂ ಜಯಂತಿಯ ದಿನ ಸರಕಾರಿ ರಜೆ ಘೋಷಣೆ ಮಾಡಬೇಕು ಎಂಬ ತಿರ್ಮಾನವನ್ನ ಕಳೆದ ನಮ್ಮ ಬಿಜೆಪಿ ಸರಕಾರ ಕಲಬುರಗಿಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯ ಕೈಗೊಂಡು ಮಾಡಿದ್ದು ಅಲ್ಲದೇ, ಪರಿಶಿಷ್ಟರಿಗೆ ಪ್ರತ್ಯೇಕ ಸಚಿವಾಲಯ ರಚಿಸಿದ್ದು ಕೊಡ ಬಿಜೆಪಿ ಸರಕಾರನೇ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದು ಕೂಡ ಬಿಜೆಪಿ ಸರಕಾರನೇ, ಆದರೆ ಕಾಂಗ್ರೆಸ್ ನವರು ಎಸ್ಟಿ ಸಮುದಾಯಕ್ಕೆ ಮಾಡಿದ್ದೇನೆಂದರೆ ಎಸ್ಟಿ ಅಭಿವೃದ್ಧಿ ನಿಗಮದಲ್ಲಿನ ಹಣ ಲೂಟಿ ಮಾಡಿದ್ದು ಕಾಂಗ್ರೆಸ್ ನ ಬಹುದೊಡ್ಡ ಕೊಡುಗೆ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಜನಾರ್ದನರೆಡ್ಡಿ ವಾಗ್ದಾಳಿ ನಡೆಸಿದರು.

ಇತ್ತಿಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಪರ ಮತ ಚಲಾಯಿಸಲು ಬಳ್ಳಾರಿ ಲೋಕಸಭಾ ಕ್ಷೇತ್ರದ ಏಳು ಲಕ್ಷಕ್ಕೂ ಅಧಿಕ ಮತದಾರರಿಗೆ ತಲಾ 200 ರೂಪಾಯಿಗಳನ್ನು ಹಂಚಿದ್ದು ಇದೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದಲ್ಲಿ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದೆ.

ಎಸ್ಟಿ ಮೀಸಲು ಕ್ಷೇತ್ರದಿಂದು ಗೆದ್ದು ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನಾಗೇಂದ್ರ ಲೂಟಿ ಮಾಡ್ತಾರೆ ಅಂದರೆ ತಿಂದ ಮನೆಗೆ ದ್ರೋಹ ಬಗೆದಂತಲ್ಲವೆ? ವಾಲ್ಮೀಕಿ ನಿಗಮದ ಹಣ ತನ್ನ ಸಹಚರರಿಗೆ, ವಿಮಾನ ಟಿಕೆಟ್ ಗಳನ್ನು ಕಾಯ್ದಿರಿಸಲು, ವಿದ್ಯುತ್ ಬಿಲ್‌ಗಳ ಪಾವತಿ, ತನ್ನ ವಾಹನಗಳ ನಿರ್ವಹಣೆ, ಮನೆಯ ಸಿಬ್ಬಂದಿಯ ಮಾಸಿಕ ವೇತನವನ್ನು ಪಾವತಿಸಲು ಹಾಗೂ ತನ್ನ ವೈಯಕ್ತಿಕ ವೆಚ್ಚಗಳನ್ನು ಭರಿಸಲು ಅಲ್ಲದೇ, ತನ್ನ ಬೆಂಬಲಿಗರ ಖಾತೆಗಳಿಗೆ ಹೇಗೆಲ್ಲ ಹಣ ವರ್ಗಾವಣೆ ಮಾಡಿದ್ದಾರೆ ಎಂಬುವುದು ಇಡಿ ಚಾರ್ಜ್ ಶೀಟ್ ನಲ್ಲಿ ಬಟಬಯಲಾಗಿದೆ. ಮಧ್ಯದಂಗಡಿ, ಬಂಗಾರದ ಅಂಗಡಿಗಳಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಸರ್ಕಾರಿ ಹಣ ವರ್ಗಾವಣೆ ಆಗುತ್ತೆ ಅಂದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಶಾಸಕ ಜನಾರ್ದನರೆಡ್ಡಿ ನಾಗೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಸ್ಟಿ ಸಮುದಾಯದ ಜನರ ಭೂಮಿಗಳಿಗೆ ಗಂಗಾ ಕಲ್ಯಾಣ ಯೋಜನೆಗೆ ಮೀಸಲಿಟ್ಟ ಹಣ, ಎಸ್ಟಿ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದಲ್ಲಿ ಇವರು ಚುನಾವಣೆ ಮಾಡ್ತಾರೆ ಅಂದರೆ, ನಿಜಕ್ಕೂ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇವರೆಲ್ಲ ಲೂಟಿ ಮಾಡಿ ಇದು ಬ್ಯಾಂಕ್ ನವರ ಹಗರಣ ಎಂದು ನಾಗೇಂದ್ರ ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ಕೊಡ್ತಾರೆ ಅಂದರೆ ಎಲ್ಲಿಂದ ನಗಬೇಕೋ ಗೊತ್ತಾಗುತ್ತಿಲ್ಲ ಈಗಾಗಲೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಹೇಗೆಲ್ಲ ಲೂಟಿಯಾಗಿದೆ ಎಂದು ಸಾರ್ವಜನಿಕವಾಗಿ ಎಲ್ಲರಿಗೂ ಜಗ್ದಾಜಾಹೀರಾಗಿದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಖಾತೆಯಿಂದ ಕೋಟ್ಯಂತರ ರೂಪಾಯಿ ಹಣವನ್ನು ನಮ್ಮ ರಾಜ್ಯ ಹಾಗೂ ತೆಲಂಗಾಣದ ರಾಜ್ಯದ ನಕಲಿ ಖಾತೆಗಳಿಗೆ ಕಳುಹಿಸಲಾಗಿದೆ ಎಂದು ಕರ್ನಾಟಕ ಪೊಲೀಸ್ ಮತ್ತು ಸಿಬಿಐನ ಎಫ್‌ಐಆರ್‌ನಿಂದ ಮನಿ ಲಾಂಡರಿಂಗ್ ಪ್ರಕರಣವು ದಾಖಲಾಗಿದೆ. ಇಡಿ ಹಣದ ವಹಿವಾಟು ಹೇಗೆಲ್ಲ ನಡೆದಿದೆ ಎಂದು ತನಿಖೆ ಮಾಡಿದೆ ಅಷ್ಟೆ, ಆದರೆ ಈಗ ಸಿಬಿಐ ಎಂಟ್ರಿಯಾಗುತ್ತೆ ಅಲ್ಲಿ ಯಾವ ರೀತಿ ಇವರು ಕ್ರಿಮಿನಲ್ ಐಡಿಯಾ ಉಪಯೋಗಿಸಿ ಈ ಹಗರಣ ಮಾಡಿದ್ದಾರೆ ಎಂಬುವುದು ಬಹಿರಂಗವಾಗುತ್ತೆ ಎಂದು ಜನಾರ್ದನರೆಡ್ಡಿ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದಲ್ಲಿ ಮತದಾರರಿಗೆ ಸಹಾಯ ಮಾಡುವ ಮತ್ತು ಬೂತ್‌ಗಳ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಪರಿಹಾರ ನೀಡಲು ಪ್ರತಿ ಮತಗಟ್ಟೆಗೆ 10,000 ರೂ.ಗಳನ್ನು ಹಂಚಿದ್ದು ಕೂಡ ಇಡಿ ಚಾರ್ಜ್ ಶೀಟ್ ನಿಂದ ಬಯಲಾಗಿದೆ.

ಅಲ್ಲದೇ, ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಶಾಸಕರಾದ ನಾರಾ ಭರತ್ ರೆಡ್ಡಿ (ಬಳ್ಳಾರಿ ನಗರ), ಶಾಸಕ ಗಣೇಶ್ (ಕಂಪ್ಲಿ) ಮತ್ತು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರ ಸಮನ್ವಯದಲ್ಲಿ ಅವರಿಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ಅನುಗುಣವಾಗಿ ನಗದು ಹಣವನ್ನು ವಿತರಿಸಿದ್ದು ಕೊಡ ಇಡಿ ಚಾರ್ಜ್ ಶೀಟ್ ನಲ್ಲಿ ನಾವು ನೋಡಬಹುದು ಎಂದು ಜನಾರ್ದನರೆಡ್ಡಿ ಹೇಳಿದರು.

ಬಳ್ಳಾರಿಯ 7,40,112 ಮತದಾರರಿಗೆ ತಲಾ 200 ರೂ.ಗಳನ್ನು ವಾಲ್ಮೀಕಿ ನಿಧಿಯಿಂದ ಒಟ್ಟು 14 ಕೋಟಿ ರೂ.ಗಳನ್ನು ಬಳಸಿಕೊಂಡಿದ್ದು ಪ್ರತಿ ಬೂತ್‌ನಲ್ಲಿ ಪಕ್ಷದ ಕಾರ್ಯಕರ್ತರಿಗೆ ತಲಾ 10,000 ರೂ.ಗಳನ್ನು ನೀಡಿದ್ದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ ಅಂದರೆ ಇವರು ಯಾವ ರೀತಿಯಲ್ಲಿ ಈ ಹಗರಣ ಮಾಡಿ ಎಸ್ಟಿ ಸಮುದಾಯಕ್ಕೆ ವಂಚಿಸಿದ್ದಾರೆ ಎಂಬುವುದು ಗೊತ್ತಾಗುತ್ತಿದೆ.

ದೇಶದಲ್ಲಿ ಕಾಂಗ್ರೆಸ್ ಸರಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂಬ ನಾಗೇಂದ್ರ ಹೇಳಿಕೆ 2012 ರಲ್ಲಿ ಇದೇ ನಾಗೇಂದ್ರ ಅಕ್ರಮ ಮೈನಿಂಗ್ ಕೇಸ್ ನಲ್ಲಿ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದಾಗ ಆಗ ದೇಶದಲ್ಲಿ ಯುಪಿಎ ಸರಕಾರ ಇತ್ತು. ಯುಪಿಎ ಸರಕಾರ ಅವಧಿಯಲ್ಲಿ ಇದೇ ನಾಗೇಂದ್ರ ಎರಡು ವರ್ಷ ಜೈಲಿನಲ್ಲಿ ಇರ್ತಾರೆ ಆದರೆ ಈಗ ಮೂರೇ ತಿಂಗಳಲ್ಲಿ ಹೊರ ಬಂದಿದ್ದಾರೆ ಎಂದ ರೆಡ್ಡಿ ತಾವು ಬಳ್ಳಾರಿ ಪ್ರವೇಶದಿಂದ ಬಿಜೆಪಿ ಉತ್ಸಾಹ ಅಲೆಯಲ್ಲಿದೆ ಅತ್ತ ನಾಗೇಂದ್ರ ಜೈಲಿನಿಂದ ಬಿಡುಗಡೆಗೊಂಡಿದ್ದು ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಹೆಚ್ಚಿದ್ದು ಸಂಡೂರು ಉಪ ಚುನಾವಣೆ ಹೈವೋಲ್ಟೇಜ್ ಕಣ ಆಗುತ್ತ ಎಂಬ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ ನಾಗೇಂದ್ರ ಮೇಲೆ ಎಸ್ ಐ ಟಿ ಯ 20 ಪ್ರಕರಣ ಸಿಬಿಐನ 9 ಪ್ರಕರಣದಿಂದ ಹೈವೋಲ್ಟೇಜ್ ಆಗಿದ್ದಾರೆ ನಾಗೇಂದ್ರ ಬಾಡಿಯಲ್ಲ ಕೇಸ್ ಗಳಿಂದ ಹೈವೋಲ್ಟೇಜ್ ಆಗಿದೆ ಬ್ಲಾಸ್ಟ್ ಆಗದೆ ನೋಡಿಕೊಳ್ಳಲು ಹೇಳಿ ಸಂಡೂರು ಯಾವ ವೋಲ್ಟೇಜು ಇಲ್ಲ ಎಂದು ರೆಡ್ಡಿ ಉತ್ತರಿಸಿದರು.

ನಾಳೆ ಸಂಡೂರಿನಲ್ಲಿ ನನ್ನ ಮನೆ ಗೃಹ ಪ್ರವೇಶ ಕಾರ್ಯಕ್ರಮ ಇದೆ ನಾಳೆಯಿಂದ ಅಲ್ಲೆ ಠಿಕಾಣಿಯೂಡಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವೆ ಯಾರಿಗಾದರೂ ಟಿಕೆಟ್ ನೀಡಲಿ ನಾನು ಪಕ್ಷದ ಪರ ಕೆಲಸ ಮಾಡುತೇನೆ. ಕಳೆದ 2008 ರಲ್ಲಿ 9 ವಿಧಾನಸಭಾ ಕ್ಷೇತ್ರಗಳ ಪೈಕಿ 9 ಕ್ಕೆ 9 ಕ್ಷೇತ್ರಗಳಲ್ಲಿ ಗೆದ್ದರೆ ದೃಷ್ಟಿಯಾಗುತ್ತೆ ಅಂತ ಸಂಡೂರು ಕ್ಷೇತ್ರಯೊಂದು ದೃಷ್ಟಿಗಾಗಿ ಉಳಿದಿತ್ತು. ಈಗ ಆ ದೃಷ್ಟಿ ತೆಗೆದು ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರುವುದು ನನ್ನ ಮೊದಲ ಕೆಲಸ ಎಂದು ಅವರು ಹೇಳಿದರು.
“ರೆಡ್ಡಿ ಗಾರು” ಗರ್ಜನೆ ಮಾಡಲು ಆರಂಭ ಮಾಡಿದ್ದಾರೆ, ಈವರೆಗೆ ಬಳ್ಳಾರಿ ಬಿಜೆಪಿ ಯಲ್ಲಿ ಗರ್ಜನೆ ಮಾಡುವ ನಾಯಕರು ಯಾರು ಇರಲಿಲ್ಲ, ಸೋಮಶೇಖರ್ ರೆಡ್ಡಿ ,ಶ್ರೀ ರಾಮುಲು,ಅವರಿಗೆ ಅವಕಾಶ ಸಿಕ್ಕರು, ನಾಮಕವಾಸ್ಥಿಯಾಗಿ,ಭಜನೆ ಮಾಡುತ್ತಾ ಕಾಲವನ್ನು ತಳ್ಳಿ ಕೊಂಡು ಹೋಗುತ್ತಾ ಇದ್ದರು.

ಜಿಲ್ಲಾ ಅಧ್ಯಕ್ಷರು ಮೇಲೆ ಬಿಟ್ಟು ತಪ್ಪಿಸಿಕೊಳ್ಳುವ ಪ್ರಯತ್ನ ಗಳು ಮಾಡುತ್ತಾ ಇದ್ದರು.

ಸರಿಯಾದ ಸಮಯಕ್ಕೆ ರೆಡ್ಡಿ ಎಂಟ್ರಿ ಕೊಟ್ಟಿದ್ದು ಬಿಜೆಪಿ ಕಾರ್ಯಕರ್ತರು ರಲ್ಲಿ ನೂತನ ಉತ್ಸವ ತೂಂಭಿದೆ. ರೆಡ್ಡಿ ಯನ್ನು ಯಾಲ್ಲರು ಕೈಬಿಡಲಾಯಿತು ಆದರೆ ಅಲಿಖಾನ್, ದಮ್ಮೂರ್ ಶೇಖರ್, ರಾಜಶೇಖರ್ ಗೌಡ,ಮಲ್ಲಿಕಾರ್ಜುನ, ಹುಂಡೆಕರ್ ರಾಜೇಶ್,ಎಷ್ಟು ಒತ್ತಡ ಗಳು ಇದ್ದುರು ಭಯಪಡದೆ ರೆಡ್ಡಗಾರು ಬೆನ್ನು ಗೆ ನಿಂತು ಹೋರಾಟ ಮಾಡಿದ್ದು ಶ್ಲಾಘನೀಯ.
ಈ ಸಂದರ್ಭದಲ್ಲಿ ಗಂಗಾವತಿ ಶಾಸಕರಾದ ಗಾಲಿ ಜನಾರ್ದನರೆಡ್ಡಿ, ಬಳ್ಳಾರಿ ನಗರದ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಅನಿಲ್ ನಾಯ್ಡು, ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಓಬಳೇಶ್, ಎಸ್ಟಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣ, ಬುಡಾ ಮಾಜಿ ಅಧ್ಯಕ್ಷ ದಮ್ಮೂರ ಶೇಖರ್, ಬಿಜೆಪಿ ಉಪಾಧ್ಯಕ್ಷೆ ಸುಮಾರೆಡ್ಡಿ, ಹೆಚ್.ಹನುಮಂತಪ್ಪ, ಸೋಮನಗೌಡ, ಮಲ್ಲಿಕಾರ್ಜುನ ಆಚಾರ್, ಗೋನಾಳ್ ರಾಜಶೇಖರಗೌಡ ಮಲ್ಲೇಶ್ ಕೆ.ಎ.ಮಧು, ಯರ್ರಿಂಗಳಿ ತಿಮ್ಮಾರೆಡ್ಡಿ, ಬಿ.ಕೆ.ಸುಂದರ, ರಾಣಿತೋಟ ವಿರೇಶ್, ಸುಮಾರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


News 9 Today

Leave a Reply