ಹಣದ ರೂಪದಲ್ಲಿ ಆಗಲಿ, ಜಾಹಿರಾತು ರೂಪದಲ್ಲಾಗಲಿ ಹಣ ಕೊಡದ ಹಿನ್ನಲೆ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರ ಮುಖಕ್ಕೆ ಮಸಿ ಹಾಕಿ ಅವಮಾನ, ಜಿಲ್ಲಾಧಿಕಾರಿ ಗಳ ಗೆ ದೂರು
ಬಳ್ಳಾರಿ:ಮೇ,06 ಬಳ್ಳಾರಿಯ ಸಂಜೆವಾಣಿ ಪತ್ರಿಕೆ ವರದಿಗಾರ ಎನ್.ವೀರಭದ್ರಗೌಡರವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು.
ದಿನಾಂಕ 30,04,2025 ರಂದು ಬಸವ ಜಯಂತಿ ಪ್ರಯುಕ್ತ ಸಾಂಸ್ಕೃತಿಕ ನಾಯಕ, ಮಹಾಮಾನವತವಾದಿ ಬಸವಣ್ಣ ರವರ ಪುತ್ಥಳಿಗೆ ಮಾಲಾರ್ಪಣೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ತಾವು ಸೇರಿದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಅಪಾರ ಜಿಲ್ಲಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಮತ್ತು ಮುಖಂಡರ ಜೊತೆ ನಾನು ಕೂಡ ಭಾಗವಹಿಸಿದ್ದೆ.
ಈ ಕಾರ್ಯಕ್ರಮದ ಪೋಟೋ ಮತ್ತು ವಿಷಯವನ್ನು ವಾರ್ತಾ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುತ್ತದೆ. ಇದೆ ಫೋಟೋ ಬಳಸಿಕೊಂಡು ಸಂಜೆವಾಣಿ ವರದಿಗಾರ ಎನ್.ವೀರಭದ್ರಗೌಡರವರು ಸಂಜೆವಾಣಿ ಪತ್ರಿಕೆಯಲ್ಲಿ ಈ ಹಾಕಿ ಆ ಫೋಟೋದಲ್ಲಿ ನನ್ನ ಭಾವಚಿತ್ರಕ್ಕೆ ಮಸಿ ಬಳಿದು ಪ್ರಕಟಿಸಿರುತ್ತಾರೆ. ಇದು ನನಗೆ ತುಂಬಾ ನೋವಾಗಿದೆ.
ಸಂಜೆವಾಣಿ ಪತ್ರಿಕೆಯ ವರದಿಗಾರ ಎನ್.ವೀರಭದ್ರಗೌಡ ಇವರು ಪತ್ರಿಕೆಗೆ ಜಾಹಿರಾತು ಕೊಡುವಂತೆ ನನಗೆ ಅನೇಕ ಸಲ ಕೇಳುತ್ತಿದ್ದರು ಆದರೆ, ನಾನು 1-2 ಸಲ ಜಾಹೀರಾತು ಕೊಟ್ಟು ನಂತರ ಜಾಹೀರಾತು ಕೊಟ್ಟಿರುವುದಿಲ್ಲ. ಅದೇ ಸಿಟ್ಟಿನಿಂದ ಈ ರೀತಿ ಪತ್ರಿಕೆಯಲ್ಲಿ ಮುಖಕ್ಕೆ ಮಸಿ ಬಳಿದು ನನಗೆ ಅವಮಾನ ಮಾಡಿರುತ್ತಾರೆ ಎಂದು ಚಿದಾನಂದಪ್ಪ ದೂರಿದ್ದಾರೆ.
ಅದೇ ರೀತಿಯಾಗಿ ಬೇಜವಾಬ್ದಾರಿತನದಿಂದ ಜಿಲ್ಲಾಧಿಕಾರಿಗಳ ಹೆಸರು, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರ ಹೆಸರನ್ನು ಕೂಡಾ ತಪ್ಪಾಗಿ ಮುದ್ರಿಸಿರುತ್ತಾರೆ.
ನನ್ನ ಫೋಟೋವನ್ನು ಪ್ರಟಿಸಲೇಬೇಕೆಂದು ನನ್ನ ಒತ್ತಾಯವೇನು ಇರುವುದಿಲ್ಲ. ಆದರೆ, ಸುದ್ದಿ ಪ್ರಕಟಿಸಿ ನನ್ನ ಮುಖದ ಮೇಲೆ ಮಸಿ ಬಳಿದು ಸುದ್ದಿ ಮಾಡಿ ತಮ್ಮ ಪತ್ರಿಕೆಯಲ್ಲಿ ಪ್ರಕಟ ಮಾಡಿರುವುದು ನನಗೆ ನೋವು ಉಂಟು ಮಾಡಿದೆ ಅಲ್ಲದೇ ಸರಕಾರದ ಒಂದು ಪ್ರಾಧಿಕಾರದ ಹುದ್ದೆ ಮಾಡಿದ ಅಪಮಾನವಾಗಿದೆ ಎಂದು ಚಿದಾನಂದಪ್ಪ ಆರೋಪಿಸಿದ್ದಾರೆ.
ವೈಯಕ್ತಿಕವಾಗಿ ನನಗಿಂತಲೂ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮಾಡಿದ ಅವಮಾನ ಆಗಿರುತ್ತದೆ. ಈ ರೀತಿ ಅವಮಾನ ಮತ್ತು ತಪ್ಪುಗಳು ಆದ ಬಗ್ಗೆ ಎನ್.ವೀರಭದ್ರಗೌಡ ಅವರ ಗಮನಕ್ಕೆ ತಂದರು ಸೌಜನ್ಯಕ್ಕಾದರೂ ಮತ್ತೊಮ್ಮೆ ಸರಿಯಾದ ರೀತಿಯಲ್ಲಿ ಪ್ರಕಟ ಮಾಡಿ ತಪ್ಪು ತಿದ್ದಿಕೊಳ್ಳುತ್ತಾರೆಂದು ಈ ದಿನದವರೆಗೂ ಕಾದಿದ್ದೇನೆ.
ಆದರೂ ಅವರು ಆದ ತಪ್ಪನ್ನು ಸರಿಪಡಿಸಿಕೊಂಡಿಲ್ಲ ಎಂದು ದೂರಿದ್ದಾರೆ.
ಆದ್ದರಿಂದ ರಾಜ್ಯ ಸರ್ಕಾರದ ಭಾಗವಾಗಿರುವ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಆದ ಅವಮಾನ ಎಂದು ಪರಿಗಣಿಸಿ ಜಿಲ್ಲಾಡಳಿತದಿಂದ ಎನ್.ವೀರಭಧ್ರಗೌಡನ ವಿರುದ್ಧ ಸೂಕ್ತ ಕಾನೂನು ಕ್ರಮ ಮತ್ತು ಕಾನೂನು ಹೋರಾಟವನ್ನು, ಜಿಲ್ಲಾಡಳಿತ ವಹಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕೆಂದು ಮಂಗಳವಾರ ದೂರು ನೀಡಿದ್ದಾರೆ. ಪತ್ರಿಕಾ ರಂಗದ ಇತಿಹಾಸದಲ್ಲಿ ಬಳ್ಳಾರಿ ಜಿಲ್ಲೆಯಿಂದಲೇ ಕಪ್ಪು ಚುಕ್ಕೆ ಬರುವಂತಹ ಹಿರಿಯರೆಂದು ಕೊಚ್ಚಿಕೊಳ್ಳುವ ಆಡ್ನಾಡಿ ಮಾಡಿದ ಕೆಲಸಕ್ಕೆ ಮರ್ಯಾದೆ ಇಲ್ಲದಂತಾಗಿದೆ. ಜಾಹೀರಾತು ನೀಡಲಿವೆಂದು ಆಡಳಿತದ ಸರ್ಕಾರ ಆಡಳಿತ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾಗಿರುವ ಕೆ.ಇ.ಚಿದಾನಂದಪ್ಪ ಅವರ ಮುಖಕಕ್ಕೆ ಮಸಿ ಹಾಕುವುದಂದರೆ ಅದು ಈ ರಾಜ್ಯದ ಪ್ರತಿಷ್ಠಿತ ಮುಖ್ಯಮಂತ್ರಿಗಳ “ಸಿದ್ದರಾಮಯ್ಯ ಅವರ ಮುಖಕ್ಕೆ ಹಚ್ಚಿದಂತೆ” ಮುಖಕ್ಕೆ ಮಸಿ ಹಚ್ಚಿ ಅವಮಾನ ಮಾಡುವುದು ಪತ್ರಿಕಾ ರಂಗದ ಯಾವ ಪುಟದಲ್ಲಿ ಇಲ್ಲ ಆದರೆ ದೂರದರ್ಶನ, ಸಂಜೆವಾಣಿ, ಸೇರಿದಂತೆ ಒಂದು ಲಾರಿಗಾಗುವಷ್ಟು ತೆಲುಗು, ಮಾರಾಠಿ, ಹಿಂದಿ, ಪತ್ರಿಕೆಗಳ ವರದಿಗಾರನೆಂದು ತನಗೆ ಎಲ್ಲವೂ ಗೊತ್ತು ಎಂದು ಜಂಬ ಕುಚ್ಚಿಕೊಳ್ಳುವ ವೀರಭದ್ರನಗೌಡನ ಈ ನರಿ ಬುದ್ಧಿ ರಸ್ತೆಯಲ್ಲಿ ತಿಳಿದು ಆಗಿದೆ. ಸಂಜೆ ವಾಣಿ, ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿದೆ. ಸರ್ಕಾರದ ಜಾಹೀರಾತುಗಳು ಬರ್ತಾ ಇದ್ದಾವೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ಮುಖಕ್ಕೆ ಮಸಿ ಹಚ್ಚಿ ಅವಮಾನ ಮಾಡುವುದು ಎಷ್ಟು ಸರಿ ಈ ಪತ್ರಿಕೆಯನ್ನು ಮಾಧ್ಯಮ ಪಟ್ಟಿಯಿಂದ ಹೊರ ಹಾಕಿ ವೀರಭದ್ರಗೌಡನ ವಿರುದ್ಧ ಕ್ರಮ ಕೈಗೊಳ್ಳಬೇಕು ಸರ್ಕಾರದ ಅಕಾಡೇಶ್ ಕಾರ್ಡ್ ಅನ್ನು ಸಹ ರದ್ದು ಮಾಡಬೇಕೆಂದು ಕೆ.ಇ.ಚಿದಾನಂದಪ್ಪ ಒತ್ತಾಯಿಸಿದ್ದಾರೆ. ಇಂತಹ ಮಹಾನುಭಾವನಿಂದ ಇಡೀ ಪತ್ರಿಕಾ ರಂಗ ತಲೆ ತಗ್ಗಿಸುವಂತಾಗಿದೆ.