This is the title of the web page
This is the title of the web page

Please assign a menu to the primary menu location under menu

State

ಜೇಸ್ಕಾಂ ಇಲಾಖೆ ಯಲ್ಲಿ ಲಕ್ಷಗಟ್ಟಲೆ ಅವ್ಯವಹಾರ.!! ರೈತರುಗೆ ಮೋಸ ಮಾಡಿದ ಕರೆಂಟ್ ಇಲಾಖೆ.!! ಲೆಕ್ಕ ಇಲ್ಲ ,ಬುಕ್‌ ,ಇಲ್ಲ ಯಾಲ್ಲವು ಗೋವಿಂದ ನಾಮವೇ!!

ಜೇಸ್ಕಾಂ ಇಲಾಖೆ ಯಲ್ಲಿ ಲಕ್ಷಗಟ್ಟಲೆ ಅವ್ಯವಹಾರ.!! ರೈತರುಗೆ ಮೋಸ ಮಾಡಿದ ಕರೆಂಟ್ ಇಲಾಖೆ.!! ಲೆಕ್ಕ ಇಲ್ಲ ,ಬುಕ್‌ ,ಇಲ್ಲ ಯಾಲ್ಲವು ಗೋವಿಂದ ನಾಮವೇ!!

ಜೇಸ್ಕಾಂ ಇಲಾಖೆ ಯಲ್ಲಿ ಲಕ್ಷಗಟ್ಟಲೆ ಅವ್ಯವಹಾರ.!! ರೈತರುಗೆ ಮೋಸ ಮಾಡಿದ ಕರೆಂಟ್ ಇಲಾಖೆ.!! ಲೆಕ್ಕ ಇಲ್ಲ ,ಬುಕ್‌ ,ಇಲ್ಲ ಯಾಲ್ಲವು ಗೋವಿಂದ ನಾಮವೇ!! ಬಳ್ಳಾರಿ(21)ಸಿರುಗುಪ್ಪ ತಾಲ್ಲೂಕಿನ ಹೋಬಳಿ ವ್ಯಾಪ್ತಿಯಲ್ಲಿ ಕರೆಂಟ್ ಇಲಾಖೆಯಲ್ಲಿ ಲಕ್ಷಗಟ್ಟಲೆ ಅವ್ಯವಹಾರ (ಲೂಟಿ )ಮಾಡಿದ್ದ ಪ್ರಕರಣ ಬಯಲಿಗೆ ಬಂದಿದೆ.

ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿನ ಜೇಸ್ಕಾಂ ಇ ಇ. ರಂಗನಾಥ್ ಬಾಬು.ಎ.ಇಇ. ಜವಾಬ್ದಾರಿಯ ಇಲಾಖೆ ಆಗಿತ್ತು.

ರೈತರಿಗೆ ಸರ್ಕಾರ ಸೇವೆ ಮಾಡಲು ಇದ್ದರೆ ಬಳ್ಳಾರಿ ಗ್ರಾಮೀಣ ವಿದ್ಯುತ್ ವಿಭಾಗದಲ್ಲಿ ರೈತರನ್ನು ವಂಚನೆ ಮಾಡುತ್ತಿದ್ದಾರೆ!!.

ಸಿರುಗುಪ್ಪ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಗೆ.ಆರ್,ಅರ್ ನಂಬರ್‌.ಸರ್ವೀಸ್ ಸರ್ಟಿಫಿಕೇಟ್ ಕೊಡುವ ವಿಚಾರ ದಲ್ಲಿ ರೈತರ ರಿಂದ ಲಕ್ಷಗಟ್ಟಲೆ ವಸೂಲಿ ಮಾಡಿ ನಕಲಿ ಆರ್,ಆರ್ ನಂಬರ್‌& ನಕಲಿ ಸರ್ಟಿಫಿಕೇಟ್ ಗಳು ಕೊಟ್ಟು ವಂಚನೆ ಮಾಡಿದ್ದು, ನೂರಾರು ನಂಬರ್‌ ಗಳ ರೈತರ ಮಾಹಿತಿ ಇರುವ ಬುಕ್ ಅಗಲಿ ಐ.ಡಿ ಅಗಲಿ ಲೆಕ್ಕಾಚಾರ ಅಗಲಿ ಇಲಾಖೆಯ ಕಂಪ್ಯೂಟರ್ ನಲ್ಲಿ ಇಲ್ಲವೆಂದು ಕೋಟಿ ಗಟ್ಟಲೆ ವಂಚನೆ ಮಾಡಿದ ಹಗರಣ ಬಯಲಿಗೆ ಬಂದಿದೆ.

ರೈತರ ವಿಚಾರದಲ್ಲಿ ಸರ್ಕಾರ ಗಳು ಸ್ವಲ್ಪ ಕೂಲ್ ಇರುತ್ತವೆ.

ಈ ಭಾಗದಲ್ಲಿ ತುಂಬಾ ಪಂಪ್ ಸೆಟ್ ಗಳು, ಭತ್ತ ತುಂಬಾ ಬೆಳೆಯುತ್ತಾರೆ, ತುಂಗಭದ್ರಾ, ನಾಲೆ ಮತ್ತು ನದಿಗಳು, ಬೋರ್ ವೇಲ್ಸ್‌ ಗಳು ಮೂಲಕ ಬೇಸಾಯ ಮಾಡುತ್ತಾರೆ.

ಇಲ್ಲಿನ ರೈತರು ಅಮಾಯಕರು ಯಾರು ನೇರವಾಗಿ ಇಲಾಖೆ ಗೆ ಹೋಗಿ ಕೆಲಸ ಮಾಡಿಸಿ ಕೊಳ್ಳುವ ಅಲೋಚನೆ ಕಡಿಮೆ, ಅದರಲ್ಲಿ ವಿದ್ಯುತ್ ಇಲಾಖೆ ಅಂದರೆ ಯಾರಿಗೆ ಅರ್ಥ ಆಗದೆ ಇರುವ ಇಲಾಖೆ.

ಇಲ್ಲಿನ ಅಧಿಕಾರಿಗಳು ಕೂಡ ನೇರವಾಗಿ ರೈತರು ಬಂದರೆ ಅವರ ಕೆಲಸ ಮಾಡಿ ಕೊಡವ ಮನಸ್ಸು ಉಳ್ಳ ಅಧಿಕಾರಿಗಳು ಯಾರು ಇಲ್ಲ.

ಇಲಾಖೆಯ ಲೈನ್ ಮ್ಯಾನ್ ಗಳು ಮಧ್ಯವರ್ತಿಗಳ,ಪರಿಚಯ ಇರುವ ಅವರು ಬಂದರೆ ಮಾತ್ರವೇ ಕೆಲಸವನ್ನು ಮಾಡುತ್ತಾರೆ.

ಇದನ್ನು ಬಂಡವಾಳ ಮಾಡಿಕೊಂಡ ಅಲ್ಲಿನ ಅಧಿಕಾರಿಗಳು ಕಂಪ್ಯೂಟರ್ ಸಿಬ್ಬಂದಿ ರೈತರ ರಿಂದ ಹಣವನ್ನು ಪಡೆದು ಅವ್ಯವಹಾರ ಮಾಡಿದ್ದಾರೆ ಅನ್ನುವುದು ಬಹಿರಂಗ ಗೊಂಡಿದೆ.

ಆರ್. ಆರ್ ನಂಬರ್‌ ಸರ್ಟಿಫಿಕೇಟ್ ಜೊತೆಯಲ್ಲಿ ರೈತರಿಗೆ ವಿದ್ಯುತ್ ಸಂಪರ್ಕ ಕೊಡಿಸುವ ವಿಚಾರದಲ್ಲಿ ಒಬ್ಬ ಒಬ್ಬ ರೈತರಿಂದ ಎರಡೂವರೆ ಲಕ್ಷ ಮತ್ತು ಮೂರು ಲಕ್ಷ ಗಳು,ಸರ್ಟಿಫಿಕೇಟ್ ಗೆ 20.ಸಾವಿರದಿಂದ 15ಸಾವಿರ ರೂ ಗಳುನ್ನು ವಸೂಲಿ ಮಾಡಿದ್ದಾರೆ.

ಇಲಾಖೆ ಗೆ ಲಕ್ಷ ಗಟ್ಟಲೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಏಂದು ತಿಳಿದು ಬಂದಿದೆ.

ಈವಿಚಾರದಲ್ಲಿ ಇಲಾಖೆಗೆ ದೂರು ಬಂದಿತ್ತು, ಅದರ ಮೇಲೆ ಪರಿಶೀಲನೆ ಮಾಡಲು ಟೀಮ್ ಮಾಡಿದ್ದೀವಿ ಎಂದು ರಂಗನಾಥ್ ಬಾಬು ತಿಳಿಸಿದ್ದಾರೆ.
*•ಲಕ್ಷಗಟ್ಟಲೆ ಹಗರಣ ನಡೆದಿದ್ದು ಯಾವ ರೀತಿ ಯಲ್ಲಿ.??* 2019 ರಲ್ಲಿ ರಾಜ್ಯ ಸರ್ಕಾರ ರೈತರಿಗೆ ಪಂಪ್ ಸೆಟ್ ಗಳು ಗೆ ಮೀಟರ್ ಅಳವಡಿಕೆ ಮಾಡಬೇಕು ಅನ್ನುವ ಆಲೋಚನೆ ಆಗಿತ್ತು ಉಚಿತ ವಿದ್ಯುತ್ ನೀಡುತ್ತಾ ಇದ್ದರೂ ಕೂಡಾ ಪವರ್ ಎಷ್ಟು ಬಳಕೆ ಆಗುತ್ತದೆ ಅನ್ನುವ ಲೆಕ್ಕಾಚಾರ ದಲ್ಲಿ ಯೋಚನೆ ಮಾಡಲಾಗಿತ್ತು,ತದನಂತರ ಮೀಟರ್ ಅಳವಡಿಕೆ ನಿಲ್ಲಿಸಲಾಯಿತು,ಕೇವಲ ಪಂಪ್ ಸೆಟ್ ಗಳು ಎಷ್ಟು ಇದ್ದಾವೆ, ಅಧಿಕೃತವಾಗಿ ಎಷ್ಟು,ಅವಗಳುಗೆ ಇಲಾಖೆ ಯಿಂದ ಗುರ್ತಿಸಿ 50 ರೂಪಾಯಿಗಳಿಂದ ಇವುಗಳನ್ನು ಸೀರಿಯಲ್ ನಂಬರ್‌ ಮೂಲಕ ಆರ್.ಆರ್ ನಂಬರ್‌ ಸರ್ವಿಸ್ ಸರ್ಟಿಫಿಕೇಟ್ ಕೊಡುವ ವ್ಯವಸ್ಥೆಯನ್ನು ಮಾಡಲಾಗಿತ್ತು.

ಇದನ್ನು ಪ್ಲಾನ್ ಮಾಡಿಕೊಂಡು ರೈತರಿಗೆ ವಂಚನೆ ಮಾಡಿದ್ದು,ಸಾವಿರಗಳು ದಿಂದ ಹಿಡುದು ಲಕ್ಷ ಗಟ್ಟಲೆ ತೆಗೆದುಕೊಂಡು, ಎಲ್ಲಾವು ನಕಲಿ ಮಾಡಿ ಇಲಾಖೆ ಗೆ ಕೋಟಿ ಗಟ್ಟಲೆ ವಂಚನೆ ಮಾಡಿದ್ದು ಆಡಿಟ್ ನಲ್ಲಿ ಬಯಲಿಗೆ ಬಂದಿದೆ ಎಂದು ತಿಳಿದು ಬಂದಿದೆ.

ಈ ಹಗರಣ ದಲ್ಲಿ ನಾಲ್ಕು ರಿಂದ ಐದು ಮಂದಿ ಅಮಾನತು ಆಗುವ ಸಾಧ್ಯತೆ ಇದೆ.

ಇನ್ನಷ್ಟು ಅಧಿಕಾರಿಗಳ ಗೆ ಕೂಡ ಅಪಾಯ ಇದೆ.

ಮೇಲಿನ ಅಧಿಕಾರಿಗಳು ಯಾವ ಕ್ರಮವನ್ನು ಕೈಗೊಳ್ಳುತ್ತಾರೆ, ಅನ್ನುವುದು ಕಾದು ನೋಡಬೇಕು ಅಗಿದೆ.

ಅಥವಾ ಮುಚ್ಚಿ ಹಾಕಿ ಮಣ್ಣು ಪಾಲು ಮಾಡಬಹುದ ಅನ್ನುವುದು ಪ್ರಶ್ನೆ ಅಗಿದೆ.

ಈಗಾಗಲೇ ಬಳ್ಳಾರಿ ಜೇಸ್ಕಾಂ ಇಲಾಖೆ ಅಧಿಕಾರಿ ಒಬ್ಬ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬಲಿ ಆಗಿದ್ದಾರೆ.

(ಕೆ.ಬಜಾರಪ್ಪ ವರದಿಗಾರರು.)


News 9 Today

Leave a Reply