ಇಂದಿರಾ ಕ್ಯಾಂಟಿನ್’ಗೆ ಎರಡು ದಿನಗಳಿಂದ ಗ್ರಹಣ
*ಕೊನೆಗೆ ಪಾಲಿಕೆ ಸದಸ್ಯನ ಹೋರಾಟ, ಅಧಿಕಾರಿಗಳ ವಿರುದ್ಧ ಸಚಿವ ನಾಗೇಂದ್ರ ಗರಂ*
*ಬಡವರು, ವಿದ್ಯಾರ್ಥಿಗಳು ಚಿಂತನೆಯಲ್ಲಿ*
*ಬಳ್ಳಾರಿ ಜಿಲ್ಲೆಯಲ್ಲಿರುವ 7 ಇಂದಿರಾ ಕ್ಯಾಂಟೀನ್’ಗಳು ಬಂದ್*
*ಇಂದಿರಾ ಕ್ಯಾಂಟೀನ್’ನಲ್ಲಿ ಶನಿವಾರ, ಭಾನುವಾರ ಒಂದು ಸ್ಪೂನ್ ಅನ್ನ ಸಿಕ್ಕಿಲ್ಲ*
ಬಳ್ಳಾರಿ : ರಾಜ್ಯದ ಮುಖ್ಯಮಂತ್ರಿ ಅಗಿರುವ ಸಿದ್ದರಾಮಯ್ಯ ಅವರು ಕನಸಿನ ಯೋಜನೆಯಾಗಿರುವ ಅನ್ಮಭಾಗ್ಯ ಯೋಜನೆಯೂ ಬಡವರು ಹಸಿವುನಿಂದ ಇರಬಾರದು ಎಂಬ ಧ್ಯೇಯದೊಂದಿಗೆ ಮಹತ್ವದ ಯೋಜನೆಯನ್ನು ಇಡಿ ರಾಜ್ಯಾದ್ಯಂತ ಎಷ್ಟೇ ಸಮಸ್ಯೆಗಳು ಬಂದರು ನಿರ್ವಹಣೆಯಲ್ಲಿ ತೊಂದರೆ ಅಗಬಾರದು ಅನ್ನುವ ದೃಢ ಸಂಕಲ್ಪವನ್ನು ಮಾಡಿದ ಮಹಾನಾಯಕ ಸಿದ್ದರಾಮಯ್ಯನವರು. ಇಂತಹ ಇಂದಿರಾ ಕ್ಯಾಂಟನ್ ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರದಿಂದ ಬಂದ್ ಆಗಿದೆ. ಪ್ರತಿದಿನ ನಗರದದಲ್ಲಿ 7ರಿಂದ 8 ಸಾವಿರ ಬಡ ಜನರು ಊಟ ಮಾಡುವ ಕ್ಯಾಂಟನ್ ಕ್ಲೋಸ್ ಆಗಿದೆ. ಪ್ರತಿ ವರ್ಷ ಟೆಂಡರ್ ಮೂಲಕ ಒಂದು ವರ್ಷದ ಅವಧಿವರಗೆ ಗುತ್ತಿಗೆ ಪಡೆದು ಕ್ಯಾಂಟನ್ ನಿರ್ವಹಣೆ ಮಾಡುತ್ತಾರೆ. ಆದರೆ ಟೆಂಡರ್ ಅವಧಿ ಮುಗಿದು ಮೂರು ತಿಂಗಳು ಕಳದಿದೆ. ಇದರ ಮದ್ಯದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭ ಗೊಂಡಿತ್ತು. ಆದರೆ ಕೂಡ ಗುತ್ತಿಗೆದಾರರು ಮೂರು ತಿಂಗಳು ನಡೆಸಿದ್ದಾರೆ. ಇದ್ದಕ್ಕಿದ್ದಂತೆ ಅಡಳಿತ ಅಧಿಕಾರಿಗಳು ಅವಧಿ ಮುಗಿದಿದೆ ಕ್ಯಾಂಟನ್ ಮುಚ್ಚುವಂತೆ ಹೇಳಿದ್ದಾರೆ. ಇದರ ಮದ್ಯದಲ್ಲಿ ಒಂದು ವರ್ಷದದಿಂದ ಗುತ್ತಿಗೆದಾರರಗೆ ಹಣವನ್ನು ನೀಡಿಲ್ಲ.7ರಿಂದ 8 ಕೋಟಿ ಹಣ ಬರಬೇಕಿದೆ. ಇದಕ್ಕೆ ಒಂದು ಕಡೆ ಡಿಸಿ ಸಾಹೇಬರ ಶಾಪ ಕೂಡ ಇದೆ ಎನ್ನಲಾಗುತ್ತಿದೆ. ಈ ಹಿಂದೆ ಅವರು ಭೇಟಿ ಮಾಡಿದ ಸಂದರ್ಭದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಂಡುಬಂದಿದೆ ಎಂದು ಇದನ್ನು ಸರಿಪಡಸದೆ ಒಂದಿಷ್ಟು ಬಿಸಿ ಮುಟ್ಟಿಸಿದ್ದಾರೆ ಅನ್ನುವ ಮಾಹಿತಿ ಇದೆ. ಅದಕ್ಕೆ ಇಂದಿರಾ ಕ್ಯಾಂಟನ್ ಬಂದ್ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ಜಿಲ್ಲೆಯ ಚುನಾವಣೆ ಪ್ರತಿನಿಧಿಗಳು ಇಂತಹ ಮಹತ್ವದ ಬಡವರ ಯೋಜನೆ ಬಗ್ಗೆ ಕಾಳಜಿ ತೆಗೆದುಕೊಂಡು ಎಚ್ಚರ ವಹಿಸಬೇಕಾಗಿತ್ತು. ಇದು ಒಂದು ರೀತಿಯಲ್ಲಿ ಅವಮಾನ ಅಪಮಾನದ ವಿಚಾರವಾಗಿದೆ. ಕೊನೆಗೆ ಈ ವಿಚಾರ ನಗರದ 30ನ ವಾರ್ಡ್ ಪಾಲಿಕೆಯ ಸದಸ್ಯರು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಕೌಲಬಜಾರ್ ಅಸೀಫ್ ಅವರ ಗಮನಕ್ಕೆ ಬಂದ ತಕ್ಷಣವೇ ಸಚಿವರು ಹಾಗೂ ಶಾಸಕರ ಮತ್ತು ಅಧಿಕಾರಿಗಳು ಜೊತೆಯಲ್ಲಿ ಮಾತನಾಡಿ ಅದನ್ನು ಆರಂಭ ಮಾಡಿಸಲು ಶತ ಪ್ರಯತ್ನ ಮಾಡಿದ್ದಾರೆ. ಬಿಡುವು ಇಲ್ಲದೆ ಎಲ್ಲರು ಜೊತೆಯಲ್ಲಿ ಸಂಪರ್ಕ ಮಾಡಿದ್ದಾರೆ. ಎಚ್ಚುತ್ತಕೊಂಡ ಅಧಿಕಾರಿಗಳು ಗಡಿ ಬಿಡಿ ಮಾಡಿ ಕ್ಯಾಂಟನ್ ತಕ್ಷಣವೇ ಆರಂಭ ಮಾಡುವ ಪ್ರಕ್ರಿಯೆ ಮಾಡಿದ್ದಾರೆ. ಆದರೆ ಕಾರ್ಮಿಕರಿಂದ ಮಾಡುವ ಕೆಲಸ ಆಗಿದೆ ತಕ್ಷಣವೇ ಆರಂಭ ಮಾಡಲು ಸಾಧ್ಯವಾಗದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಬಡವರ ಕ್ಯಾಂಟನ್ ಬಂದ್ ಅಗಿರವ ತಕ್ಷಣವೇ ಅದನ್ನು ಪುನಃ ಆರಂಭ ಮಾಡಿಸಲು ಪ್ರಯತ್ನ ಮಾಡಿದ ಪಾಲಿಕೆ ಸದಸ್ಯ ಅಸೀಫ್ ಗೆ ಬಡವರು ನೆರವಾಗಿದ್ದಾರೆ.
(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)