*ಅಖಂಡ ಜಿಲ್ಲೆಯ ಒಂದು ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲು ಮುಸ್ಲಿಂ ಮುಖಂಡರ ಒತ್ತಾಯ*
ಹೊಸಪೇಟೆ,ಮಾ.21-ಬಳ್ಳಾರಿ ಮತ್ತು ವಿಜಯನಗರ ಕ್ಷೇತ್ರದದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಉಭಯ ಜಿಲ್ಲೆಗಳ ಅಲ್ಪ ಸಂಖ್ಯಾತ ಸಮುದಾಯದ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದ್ದಾರೆ.
ಇಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಹೂವಿನ ಹಡಗಲಿಯ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ, ಮಾಜಿ ತಹಶಿಲ್ದಾರ ಸಿ.ಚಂದಾ ಸಾಹೇಬ್, ಕೂಡ್ಲಿಯ ಮಾದೇಹಳ್ಳಿ ನಜೀರ್ ಸಾರ್, ಹಗರಿಬೊಮ್ಮನಹಳ್ಳಿಯ ಪುರಸಭೆ ಸದಸ್ಯ ಇಸ್ಮಾಯಿಲ್ ಸಾಬ್, ಬಳ್ಳಾರಿ ಜಿಲ್ಲಾ ವಕ್ಘ್ ಬೋರ್ಡ್ ನ ಮಾಜಿ ಅದ್ಯಕ್ಷ ಹುಸೇನ್ ಪೀರಾ ಇನ್ನಿತರರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಅವಕಾಶಗಳನ್ನು ಪಡೆಯುವ ಹಕ್ಕು ಎಲ್ಲರಿಗೂ ಇದೆ. ದೇವರಾಜ ಅರಸ್, ವೀರೇಂದ್ರ ಪಾಟೀಲ್, ಗುಂಡುರಾವ್, ಎಸ್.ಬಂಗಾರಪ್ಪ, ವೀರಪ್ಪ ಮೋಯ್ಲಿ, ಧರ್ಮಸಿಂಗ್ ಮುಖ್ಯಮಂತ್ರಿಗಳಿದ್ದಾಗ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ ಹೆಚ್ಚಿನ ಅವಕಾಶ ನೀಡಲಾಗಿತ್ತು. ಇತ್ತೀಚೆಗೆ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿಲ್ಲ. ಇದರಿಂದ ರಾಜಕೀಯವಾತಗಿ ಮುಸ್ಲಿಂ ಸಮುದಾಯ ತೀರಾ ಹಿಂದುಳಿಯುವ ಸಂದರ್ಭ ಬಂದಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಲ್ಪಸಂಖ್ಯಾತ ಮುಖಂಡರು ಅರ್ಜಿಗಳನ್ನು ಸಲ್ಲಿಸಿದ್ದು, ಉಭಯ ಜಿಲ್ಲೆಗಳ ಯಾವುದಾದರೂ ಒಂದು ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಜಾತಿವಾರು ಗಣತಿ ನಡೆದಿದ್ದು, 1.8 ಕೋಟಿಯಲ್ಲಿ ಅಲ್ಪಸಂಖ್ಯಾತರಲ್ಲಿ 88 ಲಕ್ಷಕ್ಕೂ ಮೇಲ್ಪಟ್ಟು ಮುಸ್ಲಿಮರು ಇದ್ದಾರೆ. ಎರಡನೆ ಸ್ಥಾನದಲ್ಲಿರುವ ಮುಸ್ಲಿಮರಿಗೆ ಟಿಕೆಟ್ ನೀಡುವುದು ಅಗತ್ಯ. ದೇಶದಲ್ಲಿ ಮುಸ್ಲಿಂ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ತಮ್ಮ ನಿμÉ್ಠಯನ್ನು ಪ್ರದರ್ಶಿಸುತ್ತಿದ್ದಾರೆ. ಸಿಪಾಯಿ ದಂಗೆ, ಖಿಲಾಪತ್ ಚಳುವಳಿಗಳಲ್ಲಿ ಮುಸ್ಲಿಂ ಜನಾಂಗದ 22 ಮಹಿಳೆಯರು ಪ್ರಾಣಾರ್ಪಣೆ ಮಾಡಿದ್ದಾರೆ. ನೂರಕ್ಕೂ ಮೇಲ್ಪಟ್ಟ ಮಹಿಳೆಯರು ಜೈಲುಬಂಧಿಗಳಾಗಿದ್ದರು. ಇಷ್ಟೆಲ್ಲ ತ್ಯಾಗ, ಬಲಿದಾನ ಮಾಡಿದ್ದರೂ ಸಹ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಒಂದು ವೇಳೆ ಟಿಕೆಟ್ ನೀಡದಿದ್ದಲ್ಲಿ ಎಲ್ಲ ಮುಸ್ಲಿಮರು ಮತದಾನ ಪ್ರಕ್ರಿಯೆಯಿಂದ ದೂರವೇ ಉಳಿಯಬೇಕಾದೀತು ಎಂದು ಎಚ್ಚರಿಕೆಯನ್ನೂ ನೀಡಿದರು.
ಈ ಸಂದರ್ಭದಲ್ಲಿ ಸಿರುಗುಪ್ಪದ ಮುಸ್ಲಿಂ ಮುಖಂಡರಾದ ಚಿಟ್ಕಿ ಹುಸೇನ್, ಹಂಡಿ ಹಾಶೀಂ, ಪಿ.ಹಾಜೀ ಮೊಹ್ಮದ್, ಸಿರುಗುಪ್ಪ ನಗರ ಸಭೆಯ ಸದಸ್ಯರಾದ ನಜೀರ್ ಸಾಬ್, ಮೊಹದೀನ್, ಹಡಗಲಿಯ ವಾರದ ಗೌಸ್, ಕಂಪ್ಲಿಯ ಅಬ್ದುಲ್ ಮುನಾಫ್, ಕಂಪ್ಲಿ ಪುರಸಭೆಯ ಸದಸ್ಯ ಚಾಂದ್ ಬಾಷ, ಬುಡೆನ್ ಸಾಬ್, ಮರಿಯಮ್ಮನಹಳ್ಳಿ, ಕಂಪ್ಲಿ ಪುರಸಭೆ ಸದಸ್ಯ ಉಸ್ಮಾನ್, ಬಳ್ಳಾರಿ ಪಾಲಿಕೆಯ ಮಾಜಿ ಸದಸ್ಯೆ ಪರ್ವೀನ್ ಬಾನು, ಕಂಪ್ಲಿಯ ಹಬೀಬ್ ರಹೆಮಾನ್ ಇದ್ದರು.
ಬಾಕ್ಸ್:
* ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಹ್ಮದ್ ಇಮಾಮ್ ನಿಯಾಜಿ ಅವರು ಬಿಜೆಪಿ ದೌರ್ಜನ್ಯದ ನಡುವೆಯೂ ಸಾಕಷ್ಟು ಹೋರಾಟಗಳನ್ನು ನಡೆಸಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅವರಿಗೆ ಈ ಬಾರಿ ಟಿಕೆಟ್ ನೀಡಬೇಕು. ಖರ್ಗೆ, ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಟಿಕೆಟ್ ನೀಡದೇ ಹೋದರೆ ಕೆಪಿಸಿಸಿ ಕಚೇರಿ ಎದುರು ನಾವೆಲ್ಲ ಪ್ರತಿಭಟನೆ ನಡೆಸಬೇಕಾಗುತ್ತದೆ.
-ಕೆಎಸ್ ಚಾಂದ್ ಬಾಷಾ
ಮುಸ್ಲಿಂ ಸಮುದಾಯದ ಮುಖಂಡರು, ಕಂಪ್ಲಿ. ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.