This is the title of the web page
This is the title of the web page

Please assign a menu to the primary menu location under menu

State

ಅಂತರಾಷ್ಟ್ರೀಯ ಯೋಗ ದಿನಾಚರಣೆ* *ಯೋಗದಿಂದ ಆರೋಗ್ಯಶಾಲಿ ಸಮಾಜ ನಿರ್ಮಿಸೋಣ:ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು

ಅಂತರಾಷ್ಟ್ರೀಯ ಯೋಗ ದಿನಾಚರಣೆ* *ಯೋಗದಿಂದ ಆರೋಗ್ಯಶಾಲಿ ಸಮಾಜ ನಿರ್ಮಿಸೋಣ:ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು

*ಅಂತರಾಷ್ಟ್ರೀಯ ಯೋಗ ದಿನಾಚರಣೆ*
*ಯೋಗದಿಂದ ಆರೋಗ್ಯಶಾಲಿ ಸಮಾಜ ನಿರ್ಮಿಸೋಣ:ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು*
ಬಳ್ಳಾರಿ,ಜೂ.(21) ಯೋಗ ಒಂದು ಜ್ಞಾನ, ಯೋಗ ಒಂದು ಸಾಧನೆ, ಯೋಗ ಬದುಕಿನ ಕಲೆ,ಯೋಗವೇ ಒಂದು ಜೀವನ, ಬದುಕು ಹಸನಾಗಬೇಕೆಂದರೆ ಯೋಗದ ಕೃಷಿ ಮಾಡಬೇಕು. ಯೋಗದಿಂದ ಆರೋಗ್ಯ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀ ರಾಮುಲು ಅವರು ಹೇಳಿದರು.
ಕೇಂದ್ರ ಆಯುμï ಮಂತ್ರಾಲಯ,ಆಯುμï ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುμï ಇಲಾಖೆ ಹಾಗೂ ಸಮಸ್ತ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ‘ಮಾನವತೆಗಾಗಿ ಯೋಗ’ ಎಂಬ ಘೋಷ ವಾಕ್ಯದಡಿ ಮಂಗಳವಾರದಂದು ನಗರದ ಶ್ರೀ ಕೋಟೆ ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ 08ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಗ ಎಂದರೆ ಮನಸ್ಸು ಮತ್ತು ದೇಹವನ್ನು ಸಾಧನೆಯ ಮೂಲಕ ಒಗ್ಗೂಡಿಸುವ ಪ್ರಕ್ರಿಯೆಯೇ ಯೋಗ. ಇದರ ವೈಶಿಷ್ಟ್ಯತೆ ಮತ್ತು ಶ್ರೇಷ್ಠತೆಯ ಪ್ರಭಾವದಿಂದ ಜಗತ್ತಿನಾದ್ಯಂತ ಇಂದು ಯೋಗ ದಿನವನ್ನು ಆಚರಿಸಲಾಗುತ್ತಿದೆ ಇಂತಹ ಶ್ರೇಷ್ಠ ಸಾಧನವನ್ನು ಎಲ್ಲರೂ ನಮ್ಮ ಜೀವನ ಶೈಲಿಯನ್ನಾಗಿ ರೂಪಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಯೋಗದಿಂದ ವ್ಯಕ್ತಿ ವಿಕಸನ ಹಾಗೂ ಜಾಗತಿಕ ಸಾಮರಸ್ಯವನ್ನು ಸಾಧಿಸಬಹುದು.
“ಆರೋಗ್ಯಕರ ಮನಸ್ಸು ಆರೋಗ್ಯವಂತನ ದೇಹದಲ್ಲಿ ನೆಲೆಸುತ್ತದೆ” ಎನ್ನುವ ಹಾಗೆ, ಯೋಗದ ಮೂಲಕ ಆಯುಷ್ಮನ್ ಭಾರತ, ಶ್ರೇಷ್ಠ ಭಾರತ ಹಾಗೂ ಆರೋಗ್ಯಶಾಲಿ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.
ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಇರುವ ಏಕೈಕ ಮಾರ್ಗವೆಂದರೆ ಅದು ಯೋಗ. ಜಾತಿ, ಮತ, ಪಂಥ, ಧರ್ಮ ಇವೆಲ್ಲಕ್ಕೂ ಮೀರಿದ್ದು ಯೋಗ ಆಗಿದೆ ಈ ದಿನಗಳಲ್ಲಿ ಮನುಕುಲದ ಬೆಳಕು ಎಂದರೆ ಅದು ಯೋಗ ಎಂದು ಹೇಳಿದರು.
ಮನಸ್ಸು ಹಾಗೂ ದೇಹ – ಇವೆರಡನ್ನು ಬೆಸೆದು ಸಾಧನೆಯೆಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಯೋಗವಾಗಿದೆ.
ಭಾರತದ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿ ಅವರು “ಯೋಗ ಎಲ್ಲರಿಗೂ ಸೇರಿದ್ದು ಮತ್ತು ಎಲ್ಲರೂ ಯೋಗಕ್ಕೆ ಸೇರಿದವರು” ಯೋಗದ ಮೂಲಕ “ಒಂದು ವಿಶ್ವ, ಒಂದು ಆರೋಗ್ಯ” ಎಂಬ ಸಂದೇಶ ಇಡೀ ಜಗತ್ತಿಗೆ ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಆಧುನಿಕ ಶತಮಾನಗಳಲ್ಲಿ ಯೋಗಕ್ಕೆ ಪೌರಾಣಿಕ, ಐತಿಹಾಸಿಕ, ಆಧುನಿಕ ಮಹತ್ವ ಹಿನ್ನೆಲೆ ಇದ್ದು, ವೇದದಲ್ಲಿ ಯೋಗದ ಮೊದಲ ಗುರು, ಶಿವನು ಎಂದು ಹೇಳಲಾಗುತ್ತದೆ;ಆದ್ದರಿಂದ ಶಿವನನ್ನು ಆದಿಯೋಗಿ ಎಂದು ಕರೆಯಲಾಗುತ್ತದೆ. ಶಿವ ತನ್ನ ಜ್ಞಾನದ ಶಕ್ತಿಯನ್ನು ಯೋಗದ ಮೂಲಕ ಸಪ್ತ ಋಷಿಗಳಿಗೆ ನೀಡಿದರೆಂಬುದು ನಮ್ಮಲ್ಲಿ ಪ್ರತೀತಿ ಇದೆ. ಹೀಗೆ ಶಿವನ ಮೂಲಕ ಯೋಗ ಜಗತ್ತಿನಾದ್ಯಂತ ಹಬ್ಬಿಕೊಂಡಿತು ಎಂಬುದನ್ನು ನಾವು ಪೌರಾಣಿಕ ಚರಿತ್ರೆಗಳಲ್ಲಿ ಕಾಣಬಹುದು ಎಂದು ಅವರು ವಿವರಿಸಿದರು.
ಸಪ್ತ ಋಷಿಗಳಲ್ಲಿ ಒಬ್ಬರಾದ ಅಗಸ್ತ್ಯ ಮಹರ್ಷಿಗಳು ಸಹ ಯೋಗದ ಜ್ಞಾನವನ್ನು ಭರತ ಖಂಡಕ್ಕೆ ಮೊದಲು ಪರಿಚಯಿಸಿ, ನಂತರ ಪತಂಜಲಿಯ ಯೋಗ ಸೂತ್ರದ ಮೂಲಕ ವಿಜ್ಞಾನದ ರೂಪ ಪಡೆಯಿತು ಎಂದು ಐತಿಹಾಸಿಕ ಹಿನ್ನಲೆ ಇದೆ ಎಂದು ತಿಳಿಸಿದರು.
ಯೋಗಕ್ಕೆ ಆಧುನಿಕ ಮಹತ್ವ ತಂದಿದ್ದು ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿಯವರು. ಪ್ರತೀ ವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಮೋದಿಯವರು 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UN General Assembly) ಉದ್ದೇಶಿಸಿ ಮಾತನಾಡುವಾಗ ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು. ಸುಮಾರು 170 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳು ಅನುಮೋದಿಸಿ 2014ರ ಡಿಸೆಂಬರ್‍ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UN General Assembly) ಜೂನ್ 21ಅನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ (World Yoga Day) ಘೋಷಿಸಿತು. ಇದರ ಫಲವಾಗಿಯೇ 2015ರಿಂದ ಪ್ರತೀ ವರ್ಷ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ಸಂಸ್ಥೆಯ ಪ್ರಕಾರ ಯೋಗವು ಒಂದು “ಸಮತೋಲನ” ಮತ್ತು “ಸಾಮರಸ್ಯದ” ಸಂಕೇತವಾಗಿದೆ ಎಂದು ತಿಳಿಸಿದರು.
ಹಿರಿಯ ವೈದ್ಯರಾದ ಡಾ.ವಿಜೇಂದ್ರ ಆಚಾರ್ಯ ಮಾತನಾಡಿ, ಅಸಂಕ್ರಾಮಿಕ ರೋಗಗಳು ತಡೆಗಟ್ಟುವಲ್ಲಿ ಯೋಗ ಪರಿಣಾಮಕಾರಿ. ಮಾನಸಿಕ ಮತ್ತು ದೇಹದ ಸಮತೋಲನಕ್ಕೆ ಯೋಗವೇ ಮದ್ದು ಎಂದು ತಿಳಿಸಿದರು.
2019ರಲ್ಲಿ ಕೋವಿಡ್‍ಗೆ ತುತ್ತಾಗಿ ಕಿನ್ನತೆಗೆ ಬಳಲುವಂತವರಿಗೆ ಯೋಗವು ಒಂದು ಔಷಧವಾಗಿ ಕೆಲಸ ಮಾಡಿದ್ದು ಅದು ಯೋಗದ ಸಾಧನೆ ಎಂದರು.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮನಸ್ಸು, ಶಾಂತಿ, ಭಾತೃತ್ವ, ಸಂವರ್ಧತೆಗೆ, ಪ್ರಬಲ ಮಾದರಿ ಎಂದರೆ ಅದು ಯೋಗ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ 06 ಜನ ಹಿರಿಯ ಯೋಗ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಇದೇ ವೇಳೆ ಮೈಸೂರಿನಲ್ಲಿ ನಡೆದ ಪ್ರಧಾನಿಗಳ ಭಾಷಣದ ನೇರ ಪ್ರಸಾರವನ್ನು ವೀಕ್ಷಿಸಲಾಯಿತು.
ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಂದಾಜು 1500ಕ್ಕೂ ಹೆಚ್ಚು ಅಧಿಕ ಸಂಖ್ಯೆಯಲ್ಲಿ ಯೋಗಾಸಕ್ತರಿಗೆ ನೀರಿನ ಬಾಟಲ್, ಮೊಳಕೆ ಕಾಳು, ಬಾಳೆಹಣ್ಣು, ಯೋಗ ಕೈಪಿಡಿ, ಟೀ-ಶರ್ಟ್ ಹಾಗೂ ಕ್ಯಾಪ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷರಾದ ಪಿ.ಪಾಲಣ್ಣ, ಮಾಜಿ ಸಂಸದೆ ಜೆ.ಶಾಂತಾ, ಮಾಜಿ ಶಾಸಕ ಟಿ.ಎಚ್.ಸುರೇಶ್‍ಬಾಬು, ಅಪರ ಜಿಲ್ಲಾಧಿಕಾರಿಗಳಾದ ಮಂಜುನಾಥ ಪಿ.ಎಸ್, ಜಿಲ್ಲಾ ಪಂಚಾಯತ್ ಸಿಇಒ ಲಿಂಗಮೂರ್ತಿ, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅಂದಾನಪ್ಪ ವಡಗೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ತಹಶೀಲ್ದಾರ ವಿಶ್ವನಾಥ ಅವರು ಸೇರಿದಂತೆ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು, ಇತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಂದಾಜು 1500ಕ್ಕೂ ಹೆಚ್ಚು ಅಧಿಕ ಸಂಖ್ಯೆಯಲ್ಲಿ ವಿವಿಧ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಯೋಗಾಸಕ್ತರು ಸಾಮೂಹಿಕ ಯೋಗಾಭ್ಯಾಸದಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ದೇಶದ ಪ್ರಧಾನಿ ಭಾಷಣ ವನ್ನು, ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಿದ್ದರು,ಆದರೆ,ಯಾಲ್ಲರು ವೀಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಕೆಲವರು ವೀಕ್ಷಣೆ ಮಾಡಿದರು, ಇನ್ನುಳಿದ ಅವರು ಕೇಳಿಸಿಕೊಂಡರು,ಯಾವುದೇ ಒಂದು ಮೂಲೆಗೆ ಟಿವಿ ಹಾಕಿ, ಕಾಣಿಸಿದಂತೆ ಮಾಡಿದ್ದರು ಅಧಿಕಾರಿಗಳ ಕರ್ತವ್ಯ ದೋಷಗಳು ಎದ್ದು ಕಾಣುತ್ತಾ ಇದ್ದವು. ಸಚಿವರು ಕೊನೆಗೆ ಯಾಲ್ಲರು ಕಾಣುವಂತೆ ಮಾಡಿ ಏಂದು ಹೇಳಿದರು,ಅಧಿಕಾರಿಗಳು ಗಮನವನ್ನು ಕೊಡಲಿಲ್ಲ.!!ಶಾಲೆ ಮಕ್ಕಳು ಜಾಸ್ತಿ ಭಾಗವಹಿಸಿದ್ದರು. ನಾಗರಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದರು. ಉಸ್ತುವಾರಿ ಸಚಿವರು ಶ್ರೀ ರಾಮುಲು ಅವರು ಪಾಲ್ಗೊಂಡಿದ್ದು ಯೋಗ ದಿನಾಚರಣೆ ಗೆ,ಮೆರಗು ಬಂದಿತ್ತು. ಅಸ್ತವ್ಯಸ್ತತೆ ನಡುವೆ ಅಧಿಕಾರಿಗಳು,ಕಾರ್ಯಕ್ರಮ ಮಾಡಿದ್ದು,ಕಾಣುತ್ತಾ ಇತ್ತು. (ಕೆ.ಬಜಾರಪ್ಪ ವರದಿಗಾರರು.)


News 9 Today

Leave a Reply