This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿಗೆ ಜನಾರ್ದನ ರೆಡ್ಡಿ ಬರದ ಹಾಗೇ ಮಾಡಿದ್ದು ಸೋಮಶೇಖರ್ ರೆಡ್ಡಿ ; ಅಲಿಖಾನ್

ಬಳ್ಳಾರಿಗೆ ಜನಾರ್ದನ ರೆಡ್ಡಿ ಬರದ ಹಾಗೇ ಮಾಡಿದ್ದು ಸೋಮಶೇಖರ್ ರೆಡ್ಡಿ ; ಅಲಿಖಾನ್

*ಬಳ್ಳಾರಿಗೆ ಜನಾರ್ದನ ರೆಡ್ಡಿ ಬರದ ಹಾಗೇ ಮಾಡಿದ್ದು ಸೋಮಶೇಖರ್ ರೆಡ್ಡಿ ; ಅಲಿಖಾನ್*

ಬಳ್ಳಾರಿ : ಜನಾರ್ಧನರೆಡ್ಡಿ ಅವರಿಗೆ ಸೋಮಶೇಖರ ರೆಡ್ಡಿ, ಬ್ಲಾಕ್ ಮೇಲ್ , ಕುತಂತ್ರ ಮಾಡಿದ್ದನ್ನು ಹೇಳಬೇಕಾಗುತ್ತದೆ. ಜನಾರ್ಧನರೆಡ್ಡಿ ಅವರು ನನ್ನ ಹೆಜ್ಜೆಯಲ್ಲಿ ಹೆಜ್ಜೆ ಹಾಕಲು ಬಾರದವರು ಹೇಡಿಗಳೆಂದರೆ. ಇವರೇಕೆ ಕುಂಬಳಕಾಯಿ ಕಳ್ಳ ಎಂದರೆ ತಮ್ಮ ಹೆಗಲು ನೋಡಿಕೊಳ್ಳುತ್ತಾರೆ ಎಂದು ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಟೀಕಿಸಿದರು.
ಬಳ್ಳಾರಿಯಲ್ಲಿ ಇವರು ಅಕ್ರಮ ಮಾಡುವುದನ್ನು ನಿಲ್ಲಿಸಲಾಗುತ್ತದೆ ಎಂದು. ಜನಾರ್ಧನರೆಡ್ಡಿ ಅವರು ಬಳ್ಳಾರಿಗೆ ಬರದಂತೆ ಮಾಡಿದ್ದೇ ಇವರು ಎಂದು ಆರೋಪಿಸಿದರು.

ಮಾಜಿ ಸಚಿವ ಜನಾರ್ಧನರೆಡ್ಡಿ ಅವರ ಸಹೋದರ ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಟೀಕೆ ಮಾಡಿದ್ದರ ಬಗ್ಗೆ ಇಂದು ಕೆಆರ್’ಪಿಪಿ ಪಕ್ಷದ ಮುಖಂಡರು ಸುದ್ದಿಗೋಷ್ಟಿ ನಡೆಸಿ ವಾಗ್ದಾಳಿ ನಡೆಸಿದರು. ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ರಾಜಶೇಖರಗೌಡ ಅವರು ನಗರದಲ್ಲಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಅವರು ನಮ್ಮ ಪಕ್ಷದ ನಾಯಕ ಜನಾರ್ದನ ರೆಡ್ಡಿ ಅವರು ಅಕ್ರಮ ಮಾಡಿದ್ದಾರೆ. ಸ್ವಾರ್ಥಿ, ತಾನು ಬೆಳೆಯಲು ಇತರರನ್ನು ಬಳಸಿಕೊಂಡರು ಮುಂತಾಗಿ ಟೀಕಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಅವರನ್ನು ಖರೀದಿ ಮಾಡಿ ಕರುಣಾಕರ ರೆಡ್ಡಿ ಅವರನ್ನು ಗೆಲ್ಲಿಸಿಕೊಂಡಿತು ಎಂದು ಹೇಳಿದ್ದಾರೆ.

ಹಾಗದರೇ ಕರುಣಾಕರ ರೆಡ್ಡಿ ಗೆಲುವು ಅಕ್ರಮವೇ ಎಂದು ಪ್ರಶ್ನಿಸಿದರು. ಸೋಲಿನ ಹತಾಸೆಯಿಂದ ಏನೆಲ್ಲಾ ಮಾತನಾಡುತ್ತಿದ್ದಾರೆ ಎನಿಸುತ್ತಿದೆ ಎಂದರು.
ಅಕ್ರಮ ಮಾಡಿದ್ದಾರೆಂದು ಸೋಮಶೇಖರ ರೆಡ್ಡಿ ಅವರು ಹೇಳಿದ್ದಾರೆ. ಆದರೆ ಅವರೇ ಈ ಹಿಂದೆ ಜನಾರ್ಧನರೆಡ್ಡಿ ಅವರ ಬಗ್ಗೆ ಏನು ಹೇಳುತ್ತಿದ್ದರು ಎಂಬುದರ ಬಗ್ಗೆ ತೆಲುಗಿನಲ್ಲಿ ನೀಡಿದ ಸಂದರ್ಶನದ ಭಾಗವನ್ನು ಪತ್ರಕರ್ತರಿಗೆ ಪ್ರದರ್ಶಿಸಿದರು. ಅದರಲ್ಲಿ ಸೋಮಶೇಖರ ರೆಡ್ಡಿ ಅವರು ” ಜನಾರ್ಧನರೆಡ್ಡಿ ಲ್ಯಾಕ ಪೋತೆ ಶ್ರೀರಾಮುಲು‌ ಚೇರಿ ಅಂದರಿನಿ ಪೆಂಚಾರು ಅದೇ ವಿದಂಗ ತಮ್ಮಡು ನೆನ್ನನ್ನೀ ರಾಜಕೀಯಂಗ ಪೆದ್ದಗ ಪೆಂಚಾಡು. ಕುಟುಂಬಲೋ ಇಲಾ ಒಕರು ಉಂಟಾರು ಎಂದಿರುವ ಬಗ್ಗೆ ಪ್ರದರ್ಶಿಸಿದರು.

ಅಷ್ಟೇ ಅಲ್ಲದೆ ಜನಾರ್ಧನರೆಡ್ಡಿ ಅವರಿಂದ ಪಕ್ಷಕ್ಕೆ ಸಹಕಾರ ಆಗಿದೆಂದು ಬಿಜೆಪಿಯ ಈಶ್ವರಪ್ಪ, ಯಡಿಯೂರಪ್ಪ ಹೇಳಿದ್ದ ಮಾತುಗಳನ್ನು ಪ್ರದರ್ಶಿಸಿದರು.
ಸೋಲಿನ ಹತಾಶೆಯಿಂದ ಏನೆಲ್ಲಾ ಮಾತಮಾಡುವುದು ಸರಿಯಲ್ಲ. ನಾನು ಸೋತಿದ್ದೆ ನನಗ್ಯಾರು ನೀವು ಬಂದು ಧೈರ್ಯ ತುಂಬಲಿಲ್ಲ. ಪಾಲಿಕೆ ಚುನಾವಣೆಯಲ್ಲಿ ಸ್ವತಃ ನಿಮ್ಮ ಮಗನನ್ನು ಗೆಲ್ಲಿಸಿಕೊಳ್ಳಲಾಗಿಲ್ಲ. ಹೀಗಿರುವಾಗ ನೀವು ನಮ್ಮ ಪಕ್ಷದ ನಾಯಕರ ಬಗ್ಗೆ ಟೀಕೆ ಸರಿಯಲ್ಲ. ನಮ್ಮ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಸೋತಿದ್ದಾರೆ. ಅವರೇನು ಹತಾಸೆಯಾಗಿ ಮಾತನಾಡಿಲ್ಲ ಎಂದರು. ಮುಂದಿನ‌ ಚುನಾವಣೆಗೂ ಲಕ್ಷ್ಮೀ ಅರುಣಾ ಅವರನ್ನೇ ನಮ್ಮ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಂದಿನಿಂದಲೇ ಸಂಘಟನೆ, ಹೋರಾಟ ಮಾಡಲಿದೆ. ನೀವು ಮಾಡಿ. ಅದು ಬಿಟ್ಟು ಪಕ್ಷದ ಮುಖಂಡರ ಮೇಲೆ ಆಧಾರ ರಹಿತ ಟೀಕೆ ಬೇಡ ಎಂದರು.ಈಗಾಗಲೇ ನಮ್ಮ ಪಕ್ಷದ ಕೆಲ ಮುಖಂಡರು ಗೆ ಏಕವಚನ ದಲ್ಲಿ ಮಾತನಾಡಿದ್ದಾರೆ,ಆದರೂ ಕೂಡ ನಮಗೆ ಗೌರವ ಸೋಮಶೇಖರ್ ರೆಡ್ಡಿ ಮೇಲೆ ಅದನ್ನು ಉಳಿಸಿಕೊಂಡು ಹೋಗಬೇಕು.. ಇಲ್ಲದಿದ್ದರೆ ಯಾಲ್ಲವು ದಕ್ಕೆ ಉತ್ತರ ಕೊಡಬೇಕು ಆಗುತ್ತದೆ,ಎಚ್ಚರಿಕೆಯನ್ನು ಕೊಟ್ಟರು.ಅವರ ಸೋಲು ನಮಗೆ ಏನು ಸಂಬಂಧ ಏಂದರು. ಅವರ ಪಕ್ಷದ ದಲ್ಲಿ ಸೋಮಶೇಖರ್ ರೆಡ್ಡಿಯವರ ಗೆ ಸೋಲು ಆಗುತ್ತದೆ ಏಂದು ನಾಯಕರು,ಸರ್ವೇ ಗಳು ಹೇಳಲಾಗಿತ್ತು. ಬಿಜೆಪಿ ಪಕ್ಷ ಬಳ್ಳಾರಿ ಯಲ್ಲಿ ಇದೆ ಎಂದರೆ ಅದು ಜನಾರ್ದನ ರೆಡ್ಡಿ ಕೃಪೆ ಏಂದರು.


News 9 Today

Leave a Reply