This is the title of the web page
This is the title of the web page

Please assign a menu to the primary menu location under menu

State

ಲಕ್ಷಾಂತರ ರೂಪಾಯಿ ಗಳ ಆಭರಣ ಗಳು ವಶಕ್ಕೆ.

ಲಕ್ಷಾಂತರ ರೂಪಾಯಿ ಗಳ ಆಭರಣ ಗಳು ವಶಕ್ಕೆ.

ಲಕ್ಷಾಂತರ ರೂಪಾಯಿ ಗಳ ಆಭರಣ ಗಳು ವಶಕ್ಕೆ.

ಬಳ್ಳಾರಿ(7) ಜಿಲ್ಲಾಪೊಲೀಸ್
ಕೌಲ್‌ ಬಜಾರ್ ಪೊಲೀಸ್ ಠಾಣಾ ಪೊಲೀಸರಿಂದ ಮನೆಕಳ್ಳತನ ಆರೋಪಿಯನ್ನು ಪೊಲೀಸ್ -16,14,000/- . ដ ដ : 269 πιο ಬಂಗಾರದ ಆಭರಣಗಳ ವಶ

ಕೌಲ್‌ ಬಜಾರ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಸ್ವತ್ತಿನ ಪ್ರಕರಣಗಳಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಕುರಿತು ಮಾನ್ಯ ಪೊಲೀಸ್ ಅಧೀಕ್ಷಕರು ಬಳ್ಳಾರಿ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಳ್ಳಾರಿ ರವರ ಮಾರ್ಗದರ್ಶನದಲ್ಲಿ ಹಾಗೂ ಮಾನ್ಯ ಡಿ.ಎಸ್.ಪಿ ಬಳ್ಳಾರಿ ನಗರ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ಪಿ.ಐ ರವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.

ಈ ದಿನ ದಿನಾಂಕ:01/08/2024 ರಂದು ಆರೋಪಿ ಹನುಮಂತ ತಂದೆ ಕೊಲ್ಲಪ್ಪ ವ: 26 ವರ್ಷ, ಭೋವಿ ಜನಾಂಗ, ಗಾರೆ ಕೆಲಸ, ವಾಸ; ಸರ್ಕಾರಿ ಶಾಲೆ ಹತ್ತಿರ, ಕರಿಮಾರೇಮ್ಮ ಕಾಲೋನಿ, ಕೋಳಗಲ್ ರಸ್ತೆ, ಬಳ್ಳಾರಿ. ಈತನನ್ನು ಮಾನ್ಯ ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಹನುಮಂತ ರವರನ್ನು ವಿಚಾರಣೆ ಮಾಡಲಾಗಿ ಠಾಣಾ ಸರಹದ್ದಿನ 06 ಕಡೆಗಳಲ್ಲಿ ಮನೆಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸದರಿ ಆರೋಪಿತನಿಂದ ಒಟ್ಟು 06 ಪ್ರಕರಣಗಳಿಗೆ ಸಂಬಂದಿಸಿದ ಅಂದಾಜು 16,14,000/- ರೂ.ಗಳ ಬೆಲೆ ಬಾಳುವ ಅಂದಾಜು 269 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಜಪ್ತುಪಡಿಸಿಕೊಂಡಿರುತ್ತದೆ.

ಸದರಿ ಕಾರ್ಯಚರಣೆಯಲ್ಲಿ ಭಾಗವಹಿಸಿದ ಶ್ರೀ. ಚಂದ್ರಕಾಂತ ನಂದರೆಡ್ಡಿ, ಡಿ.ಎಸ್.ಪಿ ಬಳ್ಳಾರಿ ನಗರ ಉಪ-ವಿಭಾಗ, ಶ್ರೀ.ಟಿ.ಸುಭಾಷ ಚಂದ್ರ, ಪಿ.ಐ, ಕೌಲ್ ಬಜಾರ್ ಪೊಲೀಸ್ ಠಾಣೆ, ಸ್ಯಾಮುವೇಲ್.ಡಿ ಪಿ.ಎಸ್.ಐ(ತನಿಖೆ-1), ಸೋಮಯ್ಯ.ಎನ್. ಪಿ.ಎಸ್.ಐ (ತನಿಖೆ-2) ಲಾರೆನ್ಸ್, ಪಿ.ಎಸ್.ಐ.(ಕಾ&ಸು) ಸಿಬ್ಬಂದಿಯವರಾದ ನಾಗರಾಜ.ಕೆ, ಹೆಚ್.ಸಿ. 327, ಎಸ್.ಅನ್ವರ್ ಬಾಷ, ಹೆಚ್.ಸಿ. 231, ಕೆ.ಎನ್.ಸೋಮಪ್ಪ, ಹೆಚ್.ಸಿ.212, ರಾಮನಗೌಡ.ಕೆ.ಆರ್, ಹೆಚ್.ಸಿ.239, ಶಿವಪುತ್ರಪ್ಪ ಪಿ.ಸಿ-307, ಜಡಿಯಪ್ಪ ಪಿಸಿ-372, ಚಾಲಕ ಶ್ರೀ ಗೋಪಾಲ್ ಎ.ಹೆಚ್.ಸಿ – 114, ಕುಮಾರಿ ಶಾಂತಿ ಮ.ಪಿ.ಸಿ-472 ರವರ ಕಾರ್ಯವೈಖರಿಯನ್ನು ಡಾ. ಶೋಭಾರಾಣಿ.ವಿ.ಜೆ, ಪೊಲೀಸ್ ಅಧೀಕ್ಷಕರು, ಬಳ್ಳಾರಿ ರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply