ಕನಕ ದುರ್ಗಾದೇವಿ ಗುಡಿಯಲ್ಲಿ ಮುಸುಕಿನ ಮರ್ಮ.ಭಕ್ತರಲ್ಲಿ ಆತಂಕ!!.ಅರ್ಚಕರ ಪಾಲಿಗೆ,ಚಿನ್ನದ ದುರ್ಗಾ.
ಬಳ್ಳಾರಿ (8) ನಾಡಿನ ಆದಿದೇವತೆ ಪ್ರಪಂಚ ಮಟ್ಟದಲ್ಲಿ ಭಕ್ತರನ್ನು ಪಡೆದ, ನಂಬಿಕೆಯ ಆರಾಧ್ಯ ದೈವ ಎಂದು ಖ್ಯಾತಿ ಹೊಂದಿರುವ ಬಳ್ಳಾರಿ ಕನಕ ದುರ್ಗಮ್ಮ.
ಲಕ್ಷಾಂತರ ಜನರ ಇಷ್ಟ ದೈವ ಬಳ್ಳಾರಿ ದುರ್ಗಾದೇವಿ,ನಗರದ ನಡು ಗಡ್ಡೆ ಯಲ್ಲಿ ನಿಂತು ಜನರನ್ನು ಕಾಪಾಡುವ ತಾಯಿ ಕನಕ ದುರ್ಗಾ.
ಆದರೆ ದಿನ ದಿನಕ್ಕೆ ಗುಡಿ ಸಮಸ್ಯೆಗಳಿಗೆ ಗೂಡು ಆಗುತ್ತಾ ಬರುತ್ತದೆ.
ಇತ್ತಿಚ್ಚಿಗೆ ದೇವಸ್ಥಾನದ ಹುಂಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಆದರೆ ದೊಡ್ಡಮಟ್ಟದಲ್ಲಿ ಏನು ನಷ್ಟ ಆಗಿಲ್ಲ, ಹುಂಡಿ ಯಲ್ಲಿರುವ ಹಣದಲ್ಲಿ ಕೇವಲ 1300 , ರೂಪಾಯಿ, ಗಳು ಸುಟ್ಟ ನೋಟುಗಳು ಕುಂಕುಮ ಹರಿಷಣ, ಎಣ್ಣೆ, ಹಚ್ಚಿ ಕೊಂಡಿದ್ದ 13000 ಸಾವಿರಗಳು, ಮಾತ್ರವೇ,ಇನ್ನೂ ಉಳಿದ ಲಕ್ಷದ ಹಣ ಕ್ಕೆ ಏನು ಆಗಿಲ್ಲ. *ಬೆಂಕಿಗೆ ಕಾರಣ ಏನು, ಯಾವಾಗಲೂ ಭಕ್ತರು ಅರ್ಚಕರು ಇರುತ್ತಾರೆ,!?*
ಔದು ಅನುಮಾನ ಬರುವ ವಿಚಾರ ಇದೆ??. ಇದರಲ್ಲಿ,ದೇವಸ್ಥಾನದ ಅರ್ಚಕರ ಪೂಜಾ ವಿಧಾನದಲ್ಲಿ ಭಕ್ತರಲ್ಲಿ ಗೊಂದಲ ಇದೆ,ಅಲ್ಲಿ ಹಲವಾರು ರೀತಿಯಲ್ಲಿ ಬೇಡಿಕೆ ಗಳು ತೀರಿಸಿಕೊಳ್ಳುವ ಭಕ್ತರು ಸರ್ಕಾರದ ನಿಗದಿ ಮಾಡಿದ ರಸೀದಿ ತೆಗೆದುಕೊಂಡು ಹೋಗುತ್ತಾರೆ, ಅಲ್ಲಿ ಅಸಲಿ ಕಥೆ ಆರಂಭ ವಾಗುತ್ತದೆ, ಅರ್ಚಕರು ಸರ್ಕಾರದ ರಸೀದಿ ಆಗಿದೆ ..ನಮ್ಮದು ಪ್ರತ್ಯೇಕವಾಗಿ ಕೊಡಬೇಕು ನಗದು ರೂಪದಲ್ಲಿ ಅನ್ನುವ ಬೇಡಿಕೆ ಇಡುತ್ತಾರೆ, ದೊಡ್ಡ ದೊಡ್ಡ ಪೂಜೆ ಗಳು ಆದರೆ ಸಾವಿರಾರು ಗಟ್ಟಲೆ ಕೊಡಬೇಕು ಆಗುತ್ತದೆ, ಪ್ರಸಾದ ರೂಪದಲ್ಲಿ ಕೂಡಾ, ಕುರಿಗಳ ತಲೆ ದಿಂದ ಹಿಡಿದು ಅಕ್ಕಿ ಮುಂತಾದ ಎಲ್ಲಾವು ಒಳಗೆ ಕೊಡಬೇಕು ಅಗುತ್ತದೆ ಮಂಗಳ ಹಾರತಿ ತಟ್ಟೆ ಗೆ ಬರುವ ಹಣ ಮುಂತಾದ ಯಾವುದೇ ಸರ್ಕಾರ ಕ್ಕೆ ಮುಟ್ಟಲ್ಲ, ಯಾಲ್ಲವು ಅರ್ಚಕರ ಕೈ ಸೇರುತ್ತವೆ.!!
ಅಲ್ಲಿಯ ಕಾರ್ಯನಿರ್ವಹಣ ಅಧಿಕಾರಿಗಳ ಕೂಡ ಎಲ್ಲಾವು ನೋಡುತ್ತ ಇರಲು ಸಾಧ್ಯವಿಲ್ಲ, ಇಷ್ಟು ಹೆಚ್ಚು ಕಡಿಮೆ ಅರ್ಚಕರಿಗೆ ಇರಲಿ ಅನ್ನುವ ಆಲೋಚನೆ ಎಲ್ಲರಿಗೆ ಇರುತ್ತದೆ.
ಆದರೆ ಇತ್ತೀಚೆಗೆ ಗರ್ಭಗುಡಿಯ ಹತ್ತಿರದಲ್ಲಿ,
ಹೊಸದಾಗಿ ಮತ್ತೊಂದು ಜನರಿಗೆ ಕಾಣುವಂತೆ ಸರ್ಕಾರ ಕ್ಕೆ ಆದಾಯ ಗಳಿಸುವ ನಿಟ್ಟಿನಲ್ಲಿ ಮತ್ತೊಂದು ನೂತನ ಹುಂಡಿಯನ್ನು ಕುಡಿಸಲಾಗಿತ್ತು,ಇದು ಒಂದಿಷ್ಟು ಕಸಿ,ಬಿಸಿ ಆಗಿರಬಹುದು ಅನ್ನುವ ಅನುಮಾನ ಗಳು ಭಕ್ತರಲ್ಲಿ.
ಹೊಸದಾಗಿ ಇಟ್ಟಿರುವ ಹುಂಡಿ ಮೇಲೆ ದೇವರ ವಿಗ್ರಹ, ಮಂಗಳಾರತಿ ತಟ್ಟೆ ಇಟ್ಟಿರುವ ಹಿನ್ನೆಲೆ ಅಪಾಯ ಸಂಭವಿಸಿದೆ ಎಂದು, ಅನುಮಾನ ವ್ಯಕ್ತಪಡಿಸಿದ್ದಾರೆ, ಅಧಿಕಾರಿ.
ಇದನ್ನು ನೋಡಿದರೆ ಅಲ್ಲಿ ಹುಂಡಿ ಇರಬಾರದು ಎನ್ನುವ ಸಂದೇಶ ಕಾಣುತ್ತದೆ.
ಬೆಂಕಿ ಕಾಣಿಸಿಕೊಂಡ, ಎರಡೂ ದಿನಗಳು ತದನಂತರ ಅಧಿಕಾರಿಗಳು ಬಂದಿದ್ದಾರೆ ಎಂದು ಅಲ್ಲಿಯ ಅರ್ಚಕರ ಆರೋಪ.
ಘಟನೆ ವಿಚಾರ ಮೇಲಿನ ಅಧಿಕಾರಿಗಳಿಗೆ ತಿಳಿಸಲಾಗಿತ್ತು, ದೊಡ್ಡ ಅಪಾಯ ಇಲ್ಲ ಕರೆನ್ಸಿ ಅಷ್ಟು ಬೇಗ ಹಾಳು ಆಗೋದಿಲ್ಲ ಕೇಲ ಕಾರಣಗಳಿಂದ ಒಂದು ದಿನ ತಡವಾಗಿ ತೆಗೆದು ನೋಡಲಾಗಿದೆ, ಎಂದು ಅಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.
ಆದರೆ ದೇವಸ್ಥಾನದಲ್ಲಿ ಕೆಲ ಮೂಲತಃ ಅರ್ಚಕರಿಯಿಂದ ಪದೇಪದೇ ಒತ್ತಡಗಳು ಇರುತ್ತವೆ ಎನ್ನುತ್ತಾರೆ.
ಪ್ರತಿ ಸಣ್ಣ ವಿಚಾರದಲ್ಲಿ ಕೂಡ ರಾಜಕಾರಣ, ಅರ್ಚಕರಲ್ಲಿ ಕೂಡ ಪೂಜಾ ಮಾಡುವ ವಿಚಾರದಲ್ಲಿ ಕೂಡ ನಮಗೆ ಹಕ್ಕು ಇದೆ,ನಮಗೆ ಹಕ್ಕು ಇದೆ ಎಂದು ಪದೇಪದೇ ವಿಚಾರಗಳು ಬಯಲು ಬರುತ್ತಾನೆ ಇರುತ್ತವೆ.
ದೇವಾಲಯ ಸರ್ಕಾರ ಕ್ಕೆ ಸೇರಿದ ಮೇಲೆ ಪ್ರಭಾವಿ ಅರ್ಚಕರ ಒಂದು ಗುಂಪುಗೆ ಸಹಿಸಿ ಕೊಳ್ಳಲು ಆಗುತ್ತಾ ಇಲ್ಲ,ಈಹಿಂದೆ ದೇವಾಲಯ ಸಂಪೂರ್ಣ ಅರ್ಚಕರ ಕಪಿ ಮುಷ್ಟಿಯಲ್ಲಿ ಇತ್ತು.
ಪ್ರಸ್ತುತ ವಾತಾವರಣ ಅರ್ಚಕರು /ಅಧಿಕಾರಿಗಳ ಮದ್ಯೆ ಗೊಂದಲ ಗೂಡು ಆಗಿದೆ.
ಅರ್ಚಕರ ಬಣ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ಆಡಬೇಕು ಎನ್ನುವ ಆಲೋಚನೆ, ಅಧಿಕಾರಿಗಳು ನಮ್ಮ ಕರ್ತವ್ಯವನ್ನು ಮಾಡಲು ಬಿಡಬೇಕು ಎಂದು ಅವರು ವಾದ ಆಗಿದೆ.
ಈ ದೇವಾಲಯ ಕ್ಕೆ ಮೂಲತಃ ಅರ್ಚಕರು ಯಾರೂ ಅನ್ನುವುದು ನಿಗೂಢ ವಾಗಿದೆ.
ಯಾವಾಗಲೂ.13,15 ಮಂದಿ ಇರುತ್ತಾರೆ.20 ದಿನ,30 ದಿನಕ್ಕೆ ಒಬ್ಬರು ಇಬ್ಬರಂತೆ, ಬರುತ್ತಾರಂತೆ ಅರ್ಚಕರು,ಎಲ್ಲಾರು ಸಂಬಂಧಿಕರು ಎನ್ನುತ್ತಾರೆ ಎಂದು ತಿಳಿದು ಬಂದಿದೆ!!
ಎಲ್ಲಾ ದೇವಸ್ಥಾನ ಗಳಲ್ಲಿ, ಅರ್ಚಕರಿಗೆ ಸರ್ಕಾರದ ಸಂಬಳ ಇರುತ್ತದೆ ಅದರೆ ಇಲ್ಲಿಯಾ ಅರ್ಚಕರಿಗೆ ಮಂಗಳಹಾರತಿ,ತಟ್ಟೆ, ಸೇವಾ ಶುಲ್ಕ ದಲ್ಲಿ 50% ಕೊಡಬೇಕು ಅಂತೆ,
ಸೇವಾ ಶುಲ್ಕ ದಿಂದ ಹಣವನ್ನು ಪಡೆದರೆ ದೇವಾಲಯ ಕ್ಕೆ ಬರುವ ಸಾಮಾಗ್ರಿಗಳು,ಇನ್ನು ಮುಂತಾದವು ದೇವಾಲಯ ಕ್ಕೆ ಕೊಡಬೇಕು ಆಗಿರುತ್ತದೆ,
ಆದರೆ ಅದು ಯಾವುದೇ ಸಂಪ್ರಾದಾಯ ಇಲ್ಲ ಎಲ್ಲಾವು ಅರ್ಚಕರಿಗೆ ಹೋಗುತ್ತವೆ ಎಂದು ತಿಳಿದು ಬಂದಿದೆ.
ಕನಿಷ್ಠ ಅಂದರೆ ಡೈಲಿ 10 ಸಾವಿರ ಮೇಲೆ ಆದಾಯ ತಿಂಗಳಿಗೆ 3,4 ಲಕ್ಷ ಗಳು ಇರುತ್ತದೆ, ಎಂದು, ಎಲ್ಲರು ಬರೋದು ಅರ್ಚಕರ ಸಂಬಂದಕರು ಅನ್ನುತ್ತಾರೆ ಎಂದು, ಮಾಹಿತಿ.
ಈಗಾಗಲೇ ಅರ್ಚಕ ರಲ್ಲಿ ಒಬ್ಬರು ಮೂಲತಃ ಅರ್ಚಕರಿಗೆ ಪೂಜಾ ಮಾಡಲು ಸಿಗುತ್ತಾ ಇಲ್ಲವೆಂದು, ದೂರು ನೀಡಿದ್ದಾರೆ ಆದರೆ ಅದು ವರ್ಷ ಗಳು ಕಳೆದರು ವಿಚಾರಣೆ ಹಂತದಲ್ಲೇ ಇದೇ,ದೇವಾಲಯದಲ್ಲಿ ಪ್ರತಿ ಸಣ್ಣ ವಿಚಾರ ಕೂಡ ರಾಜಕಾರಣಿಗಳ ಬಾಗಿಲುಗಳು ತಲುಪುತ್ತವೆ, ಇಲ್ಲಿಯ ಅರ್ಚಕರಿಗೆ ಎಲ್ಲಾ ಪಕ್ಷದ ರಾಜಕಾರಣಿ ಗಳ ಆಶೀರ್ವಾದ ಇದೆ.
ರಾಜಕಾರಣಿ ಗಳು ಕೂಡ ವ್ಯವಸ್ಥೆ ಸರಿಪಡಿಸುವ ಪ್ರಯತ್ನ ಮಾಡಿಲ್ಲ ಎಲ್ಲಾವುದಕ್ಕೆ ತಲೆ ಆಡಿಸುವ ವ್ಯವಸ್ಥೆ ಆಗಿದೆ.
ಜಿಲ್ಲಾಧಿಕಾರಿ ಗಳ ಗಮನಕ್ಕೆ ಇದ್ದರು ಅವರು ಅದನ್ನು ಸರಿಪಡಿಸಲು ಪ್ರಯತ್ನ ಮಾಡುತ್ತಾರೆ ಅದರೆ ಅಷ್ಟರಲ್ಲಿ ಹಲವಾರು ರೀತಿ ದಿಂದ ಅಡಚಣೆ ಆಗಿರುತ್ತದೆ, ದಿನಗಳ ಕಳೆದು ಹೋಗುತ್ತವೆ, ಅಧಿಕಾರಿ ಗಳು ವರ್ಗಾವಣೆ ಆಗುತ್ತಾರೆ ಕಥೆ ಅಲ್ಲಿಗೆ ನಿಲ್ಲುತ್ತದೆ.!!
ಪೂಜಾ ಪುನಸ್ಕಾರಗಳಿಗೆ ಯಾವುದೇ ತೊಂದರೆ ಇಲ್ಲ.
ಕೇಲ ಅರ್ಚಕರ ನಡುವೆ ಸರ್ಕಾರದ ದೇವದಾಯ ಅಧಿಕಾರಿಗಳ ನಡುವೆ ಸಮಸ್ಯೆ ಬೆಳೆಯುತ್ತಾ, ಬರುತ್ತದೆ, ದೇವಾಲಯ ಸರ್ಕಾರದ ಅಧೀನದಲ್ಲಿ ಇದೆ,ಅಧಿಕಾರಿಗಳು ಎಲ್ಲವು ಪಾಲನೆ ಎನ್ನುತ್ತಾರೆ ಅರ್ಚಕರ ಬಣ ಅದನ್ನು ಒಪ್ಪುತ್ತಾ ಇಲ್ಲ. ಕನಕ ದುರ್ಗ, ಅರ್ಚಕರ ಗೆ ಚಿನ್ನದ ದುರ್ಗಾದೇವಿ ಆಗಿದ್ದಾರೆ,ಯಾಲ್ಲವು ಕಡಿವಾಣ ಆದರೆ,..??
ಇಲ್ಲಿನ ಅಧಿಕಾರಿಗಳಿಗೆ ಹಲವಾರು ರೀತಿಯಲ್ಲಿ ಒತ್ತಡ ಗಳು ಇರುತ್ತವೆ ಎಂದು ಧೈರ್ಯದಿಂದ ಎದುರಿಸಲು ಅಭ್ಯಾಸ ಆಗಿದೆ ಅನ್ನುತ್ತಾರೆ ಅಧಿಕಾರಿಗಳು.
ಈವರೆಗೆ ದೇವಾಲಯ ಸರ್ಕಾರದ ಎಲ್ಲರ ಸಹಾಯ ಸಹಕಾರ ದಿಂದ ಅಭಿವೃದ್ಧಿ ಆಗಿದೆ,ಇದರಲ್ಲಿ ಕಾರ್ಯನಿರ್ವಹಣ ಅಧಿಕಾರಿ ಹನುಮಂತಪ್ಪ ಮತ್ತು ಮೇಲಿನ ಅಧಿಕಾರಿಗಳ ಕರ್ತವ್ಯ ಶ್ಲಾಘನೀಯ.
ದೇವಸ್ಥಾನ ಕ್ಕೆ ಬರುವ ಭಕ್ತರಿಗೆ ಶಾಂತಿ ದಿಂದ ಕೂಡಿರುವ ವ್ಯವಸ್ಥೆ ಆಗಿರಬೇಕು, ದೇವಸ್ಥಾನ ದಲ್ಲಿ ಹಣ ಕಿತ್ತುವ ವ್ಯವಸ್ಥೆ ಇರಬಾರದು, ಗುಡಿಯನ್ನು ಹಣಕಾಸಿನ ಎಟಿಎಂ ಮಾಡಿಕೊಳ್ಳ ಬಾರದು, ದೇವಾಲಯ ರಾಜಕಾರಣಿಗಳ ವೇದಿಕೆ ಆಗಬಾರದು, ಆಡಳಿತ ಅಧಿಕಾರಿಗಳಿಗೆ ಸಹಕಾರ ಕೊಡಬೇಕು.ಎಲ್ಲಾವು ಲೇಕ್ಕಚಾರ ಗಳು ಸಕ್ರಿಯವಾಗಿ ಇರಬೇಕು.
ದೇವಾಲಯ ಸಾರ್ವಜನಿಕ ರದ್ದು, ವೈಯಕ್ತಿಕ ಅಲ್ಲ,
ಕಳಂಕ ಬರುವಂತೆ ಯಾರು ಪ್ರಯತ್ನ ಮಾಡಬಾರದು. ಭಕ್ತರಲ್ಲಿ ನಂಬಿಕೆ ಮೂಡಿಸಬೇಕು,ವ್ಯವಸ್ಥೆ ಯಲ್ಲಿ ಬದಲಾವಣೆ ಆಗಿಲ್ಲ ಅಂದರೆ ಅಭಿವೃದ್ಧಿ ಕೂಂಟಿತ ಅಗುತ್ತದೆ.ಅರ್ಚಕರ ಅದರೂ ಬದಲಾವಣೆ ಅಗಬೇಕು,ಇಲ್ಲವೇ ಎಂದರೆ ಸರ್ಕಾರ ಪೂರ್ತಿ ಯಾಗಿ ಅಧೀನ ದಲ್ಲಿ ತೆಗೆದುಕೊಂಡು ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು.ಈಗಾಗಲೇ ಮೂಲತಃ ದೇವಸ್ಥಾನ ಅರ್ಚಕರ ಬೇರೆ ಇದ್ದಾರೆ ಎಂದು ಸಮಯ ಬಂದರೆ ಅವರ ಸಮಾಜ ಹೋರಾಟ ಮಾಡುವ ದಿನಮಾನಗಳು ಇದ್ದಾವೆ ಎಂದು, ಮಾತನಾಡುವ ಪರಿಸ್ಥಿತಿ ಕೇಳಿ ಬರುತ್ತದೆ. ಇನ್ನಷ್ಟು ಮಾಹಿತಿ ಮುಂದಿನ ಸಂಚಿಕೆಯಲ್ಲಿ… ಕೆ.ಬಜಾರಪ್ಪ ವರದಿಗಾರರು.