ಬ್ಯಾಂಕ್ ಎಟಿಎಂ ನಲ್ಲಿ ಇದ್ದ ಲಕ್ಷಗಟ್ಟಲೆ ಹಣ ಕಳವು!!.ಬಾಗಿಲು ಮುರಿದಿಲ್ಲ,ಎಟಿಎಂ ಮಿಷನ್ ಮಾಯವು ಅಗಿಲ್ಲ, ಲಕ್ಷಗಟ್ಟಲೆ ಹಣ ಮಾಯ.!! ಬಳ್ಳಾರಿ(18) ನಗರದ ಜನ ಸಂಚಾರ ಪ್ರದೇಶ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖ್ಯಾತ ಆಸ್ಪತ್ರೆ ಗಳ ಇರುವ ತಾಳುರು ರಸ್ತೆಯ ಮುಖ್ಯ ರಸ್ತೆಯಲ್ಲಿ ಇರುವ ವಿಕಾಸ್ ಬ್ಯಾಂಕ್, ಪಕ್ಕದಲ್ಲಿ ಇರುವ ಅವರದೇ ಎಟಿಎಂ ಯಲ್ಲಿ ಶುಕ್ರವಾರ15/9/2023 ರಂದು1.30 ,ಗಂಟೆ ಸಮಯದಲ್ಲಿ 8.ಲಕ್ಷದ 72ಸಾವಿರ (8,72,000) ನಗದು,ಕಳವು ಮಾಡಿಕೊಂಡು ಹೋಗಿದ್ದ ಪ್ರಕರಣ ತಡವಾಗಿ ಬಯಲು ಗೆ ಬಂದಿದೆ.
ಅದೇ ದಿನ ಎಟಿಎಂ ಯಲ್ಲಿ 12 ಗಂಟೆ ವರಗೆ ವ್ಯವಹಾರ ನಡೆದಿದೆ.
ತದನಂತರ ಎಟಿಎಂ ಡೌನ್ ಟ್ಯಾನ್ ಸಕ್ಷನ್ ತೋರಿಸಲು ಆರಂಭ ವಾಗಿದೆ.
ಅನುಮಾನ ಬಂದಿದ್ದ ಬ್ಯಾಂಕ್ ಸಿಬ್ಬಂದಿ ಎಟಿಎಂ ಪರಿಶೀಲನೆ ಮಾಡಲಾಗಿದೆ ಅದರಲ್ಲಿ ಇರಬೇಕು ಅಗಿರವ ಬ್ಯಾಂಕ್ ಬ್ಯಾಲೆನ್ಸ್ ಶೀಟ್ ಪ್ರಕಾರ 8.72.000/ ಇರಬೇಕು ಆಗಿತ್ತು, ಅದು ಸಂಪೂರ್ಣ ಮಾಯವಾಗಿರುತ್ತದೆ.
ಗಾಭಿರಿ ಗೊಂಡ ಸಿಬ್ಬಂದಿ ತಮ್ಮ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಅಷ್ಟು ದೊಡ್ಡ ಮಟ್ಟದಲ್ಲಿ ಹಣವನ್ನು ತುಂಬಾ ಜಾಣತನ ದಿಂದ ಕಳವು ಮಾಡಿದ್ದಾರೆ, ಕಳವು ಮಾಡಿದ ದೃಶ್ಯ ಗಳು ಸಿಸಿ ಕ್ಯಾಮರಾಗಳಲ್ಲಿ ರಿಕಾರ್ಡೊ ಅಗಿದೆ .
ಆದರೇ ಕಳ್ಳರು ಮಾತ್ರ ಮುಖಕ್ಕೆ ಮಾಸ್ಕ್ ಹಾಕಿ ಮುಖ: ಕಾಣದಂತೆ ಮುಚ್ಚಿಕೊಂಡಿದ್ದಾರೆ ಏಂದು ಬ್ಯಾಂಕ್ ಅಧಿಕಾರಿಗಳು,ಪೋಲಿಸರು ಹೇಳುತ್ತಾ ಇದ್ದಾರೆ.
ಒಬ್ಬ ವ್ಯಕ್ತಿ ಎಟಿಎಂ ಹೊಳಗೆ ಪ್ರವೇಶ ಮಾಡಿ ಮಿಷನ್ ಗೆ ಯಾವುದೇ ಹಾನಿ ಆಗದಂತೆ,ಪಾಸ್ ವರ್ಡ್ ಮೂಲಕ ಎಟಿಎಂ ಓಪನ್ ಮಾಡಿ ಹಣವನ್ನು ಕಳವು ಮಾಡಿದ್ದಾರೆ ಅನ್ನುವ ಅನುಮಾನ ಗಳು ಇದ್ದಾವೆ ಏಂದು ಬ್ಯಾಂಕ್ ನ ಮುಖ್ಯಸ್ಥರು ತಿಳಿಸಿದ್ದಾರೆ.
ಏಟಿಏಂ ನ ಪಾಸ್ ವರ್ಡ್ ಅದನ್ನು ನೋಡಿಕೊಳ್ಳುವ ಅವರ ಗೆ ಮಾತ್ರವೇ ತಿಳಿದು ಇರುತ್ತದೆ ಅದರೇ ಅದೇ ಸಮಯದಲ್ಲಿ ಸಿಬ್ಬಂದಿ ಯಾಲ್ಲರು ಕರ್ತವ್ಯ ದಲ್ಲಿ ಇದ್ದರು, ಅನುಮಾನ ಮಾಡಲು ಅಗುತ್ತಾ ಇಲ್ಲ,ನಮಗೆ ಸಂಶಯ ಉಂಟುಮಾಡುತ್ತದೆ.
ಇಷ್ಟು ದೊಡ್ಡ ಮಟ್ಟದಲ್ಲಿ ಹಣವು ಕಳವು ಆಗಿದ್ದು ಅಚ್ಚರಿ ಮೂಡಿಸುತ್ತದೆ ಎಂದರು.
ಪೋಲಿಸರು ಕೂಡ ಯಾಲ್ಲ ರೀತಿಯಲ್ಲಿ ತನಿಖೆ ಆರಂಭ ಮಾಡಿದ್ದಾರೆ.
ಕ್ಯಾಮರಾ ದಲ್ಲಿ ಮಾತ್ರ ಓರ್ವ ಹಣವನ್ನು ತೆಗೆದುಕೊಂಡು ಹೊರಗೆ ಇದ್ದ ಇನ್ನೊಬ್ಬನ ಸ್ಕೂಟರ್ ಮೇಲೆ ಹೊಗುವ ದೃಶ್ಯ ಗಳು ಕಾಣುತ್ತೇವೆ ಪಾರ್ವತಿ ನಗರದ ಪಾರ್ಕ್ ರಸ್ತೆ ವರೆಗೆ ಹೊಗಿರವ, ಅನುಮಾನ ವ್ಯಕ್ತಪಡಿಸಿದ್ದಾರೆ.
ತದನಂತರ ಅವರ ಸುಳಿವು ಸಿಗುತ್ತಾಇಲ್ಲ ಸುತ್ತಮುತ್ತಲಿನ ಇತರರ ಕ್ಯಾಮೆರಾಗಳು ಪರಿಶೀಲನೆ ಮಾಡುವ ಕೆಲಸವನ್ನು ಪೋಲಿಸರು ಆರಂಭ ಮಾಡಿದ್ದಾರೆ.
ಶುಕ್ರವಾರ ನಡೆದ ಘಟನೆಯನ್ನು ಗಾಂಧಿ ನಗರದ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲೆ ಮಾಡಲಾಗಿದೆ ಏಂದು ತಿಳಿದು ಬಂದಿದೆ.
ಸುತ್ತಮುತ್ತಲಿನ ಕ್ಯಾಮೆರಾಗಳು ಇದ್ದು ಕೂಡ ಕಳವು ಮಾಡುತ್ತಾರೆ ಅಂದರೆ ಅಚ್ಚರಿ ಅಗಿದೆ.
ಬ್ಯಾಂಕ್ ಗೆ ಕೂಡ ಸುತ್ತಮುತ್ತಲಿನ ಕ್ಯಾಮೆರಾಗಳು ಹಾಕಿರುತ್ತಾರೆ ಅವುಗಳು ಕೇವಲ 10,15 ಅಡಿ ದೂರದ ದೃಶ್ಯಗಳನ್ನು ಸೆರೆಹಿಡಿಯಲು ಅಗಿಲ್ಲ, ಪಾಸ್ ವರ್ಡ್ ಸಿಬ್ಬಂದಿ ಗೆ ಇರುತ್ತದೆ,ಇದನ್ನು ಬಿಟ್ಟು ಪಾಸ್ ವರ್ಡ್ ಬಳಿಕೆ ಮಾಡಿ ಹಣವನ್ನು ಕಳವು ಮಾಡಿದ ಅನುಮಾನ ಗಳು ಕಾಣುತ್ತವೆ ಅಂದರೆ, ಇದು ಇಂಟರ್ನ್ಯಾಷನಲ್ ಕ್ರಿಮಿನಲ್ ಗಳು ಮಾಡಿರಬಹುದು ಅನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
ನಗರದ ಜನರು ಕೂಡ ಭಯದಿಂದ ಜೀವನ ಮಾಡುವ ವಾತಾವರಣ ಸೃಷ್ಟಿ ಅಗಿದೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)