*ರಾಮುಲು ವಿರುದ್ದ ಭೂ ಹಗರಣ 6 ಸಾವಿರ ಪುಟಗಳ ಚಾರ್ಜ್ಶೀಟ್ ಬಿಡುಗಡೆ.300,ಕೋಟಿ ಬೆಲೆ ಬಾಳುವ ಅಸ್ಥಿ. !!*
*ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ಶ್ರೀರಾಮುಲು ಸತ್ಯ ಹರಿಶ್ಚಂದ್ರ ಅಲ್ಲಾ*
ಗಣಿ ನಾಡು ಬಳ್ಳಾರಿಯಲ್ಲಿ ರಾಜಕೀಯ ರಂಗು ಪಡೆದಿದೆ.
ಕಳೆದ ಎರಡು ದಿನಗಳ ಹಿಂದೆ ರಾಹುಲ್ ಗಾಂಧಿ ಅವರ ಪಾದಯಾತ್ರೆಯ ಹಿನ್ನಲೆ ಕಾಂಗ್ರೆಸ್ ನಾಯಕರು ಐಕ್ಯತೆ ಸಮಾವೇಶ ಮಾಡಿದ್ದಾರೆ. ಸಮಾವೇಶದಲ್ಲಿ ರಾಹುಲ್ ಗಾಂದಿ ಸೇರಿದಂತೆ ಸಿದ್ದರಾಮಯ್ಯಾ ಹಾಗೂ ಡಿಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ವೇಳೆಯಲ್ಲಿ ಸಿದ್ದರಾಮಯ್ಯಾ ಅವರು ಸಚಿವ ಶ್ರೀರಾಮುಲು ವಿರುದ್ಧ ಗುಡುಗಿದ್ದು, ರಾಮುಲು ಅವರನ್ನು ಪೆದ್ದಾ ಎಂದಿದ್ದರು.
ಇದಕ್ಕೆ ಪ್ರತಿಯಾಗಿ ನಿನ್ನೆ ಶ್ರೀರಾಮುಲು ಅವರು ಪತ್ರಿಕಾಗೋಷ್ಠಿ ನಡೆಸಿ ಸಿದ್ದರಾಮಯ್ಯಾ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದ, ಅಲ್ಲದೇ ಕಾಂಗ್ರೆಸ್ ನಾಯಕ ಉಗ್ರಪ್ಪಾ ಅವರ ಬಹಿರಂಗ ಚೆರ್ಚೆಗೆ ಬರುವಂತೆ ಸಿದ್ದರಾಮಯ್ಯಾ ಅವರು ಆಹ್ವಾನ ನೀಡಿದ್ರು, ಇದಕ್ಕೆ ಪ್ರತಿಯಾಗಿ ಶ್ರೀ ರಾಮುಲು ಅವರುಬೇಡ ಸಿದ್ದರಾಮಯ್ಯಾ ಅವರಿಗೆ ಬಹಿರಂಗ ಚೆರ್ಚೆಗೆ ಬರುವಂತೆ ಸವಾಲು ಹಾಕಿದ್ರು.
ಇದರ ಮುಂದು ವರೆದ ಭಾಗವಾಗಿ ಇಂದು ಮಾಜಿ ಸಂಸದ ಹಾಗೂ ಮಾಜಿ ಸಚಿವ ಉಗ್ರಪ್ಪಾ ಹಾಗು ದಿವಾಕರ್ ಬಾಬು ಜೆಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಕ್ರಮ ಭೂ ಒತ್ತವರಿ ಮಾಡಿಕೊಂಡಿದ್ದ ಆರೋಪ ಹೊತ್ತಿರುವ ಶ್ರೀ ರಾಮುಲು ಅವರ ಚಾರ್ಚ್ ಶೀಟ್ , ಬಿಡುಗಡೆಗೊಳಿಸಿದ್ದಾರೆ. ಬಳಿಕ ಮಾತನಾಡಿದ ಅವರು ರಾಮುಲು ರಾಜೀನಾಮೆ ನೀಡಲಿ ಇಲ್ಲವೇ ಸಿಎಂ ವಜಾಗೊಳಿಸಬೇಕು ಎಂದು ಉಗ್ರಪ್ಪಾ ಒತ್ತಾಯ ಮಾಡಿದ್ದಾರೆ ,300ಕೋಟಿ ಬೆಲೆ ಬಾಳುವ ಆಸ್ತಿ ದಾಖಲೆಗಳನ್ನು ನೋಡಿದರೆ, ಬಿಜೆಪಿ ನಾಯಕರು ಮುಖವನ್ನು ಜನರ ಗೆ ತೋರಿಸಲು ಸಾಧ್ಯವಿಲ್ಲ. ಪ್ರಧಾನಿ ನೋಡಿದರೆ,…??
ಇನ್ನು ಶ್ರೀರಾಮುಲು ಅವರ ವಿರುದ್ಧ ವಾಗ್ದಾಳಿ ಮಾಡಿದ ಮಾಜಿ ಸಚಿವ ದಿವಾಕರ್ ಬಾಬು, ಕಾಂಗ್ರೆಸ್ ನಾಯಕರ ಬಗ್ಗೆ ಮಾತಾಡುವ ರಾಮುಲು
ಸತ್ಯ ಹರಿಶ್ಚಂದ್ರ ಅಲ್ಲ, ಈ ಬಗ್ಗೆ ಹಿಂದೆಯೇ ದಾಖಲೆ ಬಿಡುಗಡೆ ಮಾಡಿದ್ದೇವೆ,ಬಳ್ಳಾರಿಯಲ್ಲಿ ರಾಮುಲು ಒಬ್ಬ ಸತ್ಯ ಹರಿಶ್ಚಂದ್ರ ಅಲ್ಲ.
ಶ್ರೀರಾಮುಲು ಅವರೇ ಈ ಹಿಂದೆ ವಿದ್ಯ ವಿನಯ ಇಲ್ಲಾ ಎಂದು ಅನೇಕ ಸಾರಿ ಹೇಳಿಕೊಂಡಿದ್ದಾರೆ.
ಸಿದ್ದರಾಮಯ್ಯ ಸೋಲಿನ ಬಗ್ಗೆ ಮಾತಾಡುವ ರಾಮುಲು ಹಿಂದೆ ಸೋತಿದ್ದಾರೆ ಎಂದಿದ್ದಾರೆ….(ಕೆ.ಬಜಾರಪ್ಪ ವರದಿಗಾರರು.)