ವಾಹನ ನಿಲುಗಡೆ ಶೆಡ್ ನಿರ್ಮಾಣ ಮಾಡಿ. ಮೂಲಭೂತ ಸೌಲಭ್ಯಗಳು ಹೊದಿಗಿಸಿ ಎಂದು, ನ್ಯಾಯವಾದಿಗಳ ಧರಣಿ.!!
ಬಳ್ಳಾರಿ(14)ಜಿಲ್ಲಾ ನ್ಯಾಯಲಯ ನೂತನ ಕಟ್ಟಡ ಉದ್ಘಾಟನೆ ಗೊಂಡು ಸುಮಾರು ಎರಡು ವರ್ಷಗಳು ಕಳೆದಿದೆ.
ಇದರ ಜೊತೆಗೆ ಜಿಲ್ಲಾ ವಕೀಲರ ಸಂಘ ನೂತನ ಕಟ್ಟಡವು ಉದ್ಘಾಟನೆ ಗೊಂಡಿದೆ.
ಆದರೆ ವಕೀಲರಿಗೆ ಹಾಗು ಕಕ್ಷಿದಾರರಗೆ ಮೂಲಬೂತ ಸೌಕರ್ಯಗಳ ಕೊರತೆ ಮಾತ್ರ ಹಾಗೆ ಇದೆ.
ಮುಖ್ಯವಾಗಿ ವಾಹನಗಳ ಪಾರ್ಕಿಂಗ್ ವ್ಯವಸ್ತೆ ಸರಿಯಾಗಿ ಇಲ್ಲದೆ ವಕೀಲರು ತಮ್ಮ ವಾಹನಗಳನ್ನು ಬಿಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕನಿಷ್ಠ ಪಕ್ಷ ಇರೋಸ್ಥಳದಲ್ಲಿ ಶೆಡ್ ನಿರ್ಮಾಣ ಮಾಡದೆ ಪ್ರಸ್ತುತ ಎಲ್ಲೆಂದರಲ್ಲಿ ನಿಲ್ಲುವ ಸ್ತಿತಿ ಇದೆ.
ಹಾಗು ವಕೀಲರ ಸಂಘದಲ್ಲಿ ಲೈಫ್ ದುರಸ್ತಿಯಲ್ಲಿದ್ದು, ಇದರಿಂದ ಮಹಿಳಾ ವಕೀಲರು ತಮ್ನ ವಿಶ್ರಾಂತಿ ಕೊಠಡಿಗೆ ಹೋಗಲು ಮೆಟ್ಟಿಲುಗಳ ಹೇರಿ ಹೋಗುವ ಅನಿವಾರ್ಯತೆ ಎದುರಾಗಿ, ಅಲವು ತಿಂಗಳುಗಳೇ ಕಳೆದಿವೆ.
ಈ ಎಲ್ಲಾ ವಿಷಯಗಳ ಬಗ್ಗೆ ಅಲವಾರು ಬಾರಿ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಧೀಶರಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೇ ಕಾರ್ಯ ರೂಪಕ್ಕೆ ಬಂದಿಲ್ಲ ಎಂದು, ಶುಕ್ರವಾರ ಹೋರಾಟದ ಮುಂದಾಳತ್ವ ವಹಿಸಿದ್ದ ವಕೀಲರಾದ ಹೆಚ್ .ಚಂದ್ರಶೇಖರ ರೆಡ್ಡಿ ನೇತೃತ್ವದಲ್ಲಿ, ವಕೀಲರು ಒಂದು ದಿನ ಸಂಕೇತವಾಗಿ ನ್ಯಾಯಾಲಯದ ಮುಖ್ಯ ರಸ್ತೆಯ ಗೇಟ್ ಬಳಿ ಧರಣಿ ನಡೆಸಿದರು.
ಧರಣಿ ಸ್ಥಳಕ್ಕೆ ವಕೀಲರ ಸಂಘದ ಅಧ್ಯಕ್ಷ ರಾಂಬ್ರಹ್ಮ ಆಗಮಿಸಿ, ವಕೀಲರಿಗೆ ಭರವಸೆ ನೀಡಿ ಇದನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ಎಲ್ಲಾರು ಸೇರಿ ತರೋಣ ಅಂತ ಹೇಳಿದ ನಂತರ ಇಂದಿನ ಸಾಂಕೇತಿಕ ಧರಣಿ ಯನ್ನು ನಿಲ್ಲಿಸಲಾಯತು.
ಈಸಂದರ್ಭದಲ್ಲಿ ಬಹುತೇಕ ವಕೀಲರು,
ಪಾಲ್ಗೊಂಡಿದ್ದರು.