This is the title of the web page
This is the title of the web page

Please assign a menu to the primary menu location under menu

State

ಲಾರಿ ಮಾಲಿಕರ ಸಂಘ ಯಾವುದು,ನಕಲಿ ಯಾವುದು ಅಸಲಿ??.ಸಹಕಾರ ಸಂಘ ಕ್ಕೆ ಕೊಟ್ಟಿರುವ ದಾಖಲೆಗಳು, ಅಸಲಿ ಯಾವುದು ನಕಲಿ,ಯಾವುದು!?

ಲಾರಿ ಮಾಲಿಕರ ಸಂಘ ಯಾವುದು,ನಕಲಿ ಯಾವುದು ಅಸಲಿ??.ಸಹಕಾರ ಸಂಘ ಕ್ಕೆ ಕೊಟ್ಟಿರುವ ದಾಖಲೆಗಳು, ಅಸಲಿ ಯಾವುದು ನಕಲಿ,ಯಾವುದು!?

ಲಾರಿ ಮಾಲಿಕರ ಸಂಘ ಯಾವುದು,ನಕಲಿ ಯಾವುದು ಅಸಲಿ??.ಸಹಕಾರ ಸಂಘ ಕ್ಕೆ ಕೊಟ್ಟಿರುವ ದಾಖಲೆಗಳು, ಅಸಲಿ ಯಾವುದು ನಕಲಿ,ಯಾವುದು!?

ಬಳ್ಳಾರಿ(4) ಬಳ್ಳಾರಿ ಜಿಲ್ಲೆಯ ಲಾರಿ ಮಾಲಿಕರ ಸಂಘದ ಕಥೆ ಕಾದಂಬರಿ ಆಗಿದೆ!!.
ಬಳ್ಳಾರಿ ಜಿಲ್ಲೆಯ ಲಾರಿ ಮಾಲಿಕರ ಸಂಘ,ಕ್ಕೆ ಒಂದು ಇತಿಹಾಸ ಇದೇ, ಗಣಿಗಾರಿಕೆ ಸಮಯದಲ್ಲಿ ಸಾವಿರಾರು ಲಾರಿ ಮಾಲಿಕರಿಗೆ ಕೈ ತುಂಬಾ ಹಣ ಸಿಗುತ್ತಾ ಇತ್ತು, ತದನಂತರ ಹಲವಾರು ಘಟನೆ ಗಳು ನಡೆದು ,ವ್ಯವಸ್ಥೆ ಅದಲು,ಬದಲು ಆಗಿತ್ತು,ಮೂನ್ನಭಾಯಿ ತದನಂತರ,,ಪೇದ್ದಣ್ಣ,,ಓಬಳೇಶ,ಎಂ,ಎನ್, ಬಸವರಾಜ, ಯುಳ್ಳ, ಸಂಘ ಈವರೆಗೆ ಆಸ್ತಿತ್ವ ದಲ್ಲಿ ಇತ್ತು,ಆದರೆ ಇತ್ತೀಚೆಗೆ ಲಾರಿ ಅಸೋಸಿಯೇಷನ್ ದಲ್ಲಿ ಮಹತ್ತರ ಬದಲಾವಣೆ ಆಗಿದೆ, ಇದಕ್ಕೆ ರಾಜಕಾರಣದ ಬಣ್ಣ ಹಚ್ಚಿ ಕೊಂಡಿದೆ.

ಒಂದು ಸಂಘದಲ್ಲಿ ಅಧ್ಯಕ್ಷರ ಬದಲಾವಣೆ, ಸಾರ್ವ ಸಾಮಾನ್ಯ,ಆದರೆ ಅದು ಸಕ್ರಿಯ ವ್ಯವಸ್ಥೆ ದಿಂದ ಕೂಡಿ ಇರಬೇಕು, ಅದನ್ನು ಹೊರತು ಪಡಿಸಿ, ಕ್ಷಣ ಕ್ಷಣಕ್ಕೂಅಧ್ಯಕ್ಷ ಬದಲಾವಣೆ ಅವರು ಆಗಿದ್ದಾರೆ, ಇವರು ಆಗಿದ್ದಾರೆ, ಶಾಸಕರು ಹೇಳಿದ್ದಾರೆ ಸಚಿವರು ಹೇಳಿದ್ದಾರೆ ಎಂದು,ಅಸೋಸಿಯೇಷನ್ ದಲ್ಲಿ ಬಂದು ಮೀಟಿಂಗ್ ಮಾಡಿ, ಗೊಂದಲ ಸೃಷ್ಟಿ ಮಾಡೋದು, ಕಾಮನ್ ಆಗಿದೆ, ಇತ್ತೀಚೆಗೆ,ಲಾರಿ ಅಸೋಸಿಯೇಷನ್ ಗೆ ಕೆಲ ಪಾಲಿಕೆ ಸದಸ್ಯರು ಕೂಡ ಬಂದು ಸಕ್ರಿಯವಾಗಿ ಅಸೋಸಿಯೇಷನ್ ನಡೆಯಬೇಕು ಎನ್ನುವುದು, ನಮ್ಮ ಉದ್ದೇಶ ಎಂದು, ಶಾಸಕರು ಇದನ್ನು ಸರಿಪಡಿಸಲು, ಹೇಳಿದ್ದಾರೆ ಎಂದು ಗೌರವ ದಿಂದ ಹೇಳಿ ಚೆನ್ನಾಗಿ ಮಾಡಿಕೊಂಡು ಹೋಗಬೇಕು ಎನ್ನುವ ಸಂದೇಶ ರವಾನೆ ಮಾಡಿದ್ದರು.

26/6/2024 ರಂದು ದಲಿತ ಸಮಾಜದ ಲಾರಿ ಅಸೋಸಿಯೇಷನ್ ಅಧ್ಯಕ್ಷ ಪೇದ್ದಣ್ಣ ರಾಜೀನಾಮೆ ಮಾಡಿದ್ದರು, ಹಂಗಾಮಿ ಅಧ್ಯಕ್ಷರು ಆಗಿ ವಿಶ್ವನಾಥ್ ಅವರನ್ನು ನೇಮಕಗೊಂಡಿದ್ದರು.

ತದನಂತರ ಚುನಾವಣೆ ಮಾಡೋಣ ಅನ್ನುವ ನಿರ್ಣಯ ಕ್ಕೆ ಬಂದಿದ್ದರು, ಎಲ್ಲಾ ಲಾರಿ ಮಾಲಿಕರು,ಆದರೆ 26/6/24 ರಂದು, ಅಸೋಸಿಯೇಷನ್ ಯಲ್ಲಿ ಮೀಟಿಂಗ್ ಆಗುತ್ತದೆ.
*ಇಲ್ಲಿ ಅಸಲಿ ಕಥೆ ಆರಂಭ ಆಗುತ್ತದೆ.!!* 24/09/23ರಲ್ಲಿ -2022-23 ಸಾಲಿನ ವಾರ್ಷಿಕ ಮಹಾಜನ ಸಭೆ ನಡಾವಳಿ ಮಾಡಲಾಗಿ,2022ನೇ ಆಗಿನ ಸಂಘದ ಅಧ್ಯಕ್ಷರಾದ ಚಿರಂಜೀವಿ, ರವರ ಅಧ್ಯಕ್ಷತೆಯಲ್ಲಿ ಕೈ ಗೊಂಡ ಸಭಾ ನಡವಳಿಗಳು ತೀರ್ಮಾನ ಎಂದು,2023-24ನೇ ಸಾಲಿನ ಆಡಳಿತ ಮಂಡಳಿ, ಸದಸ್ಯರ ಆಯ್ಕೆ ಬಗ್ಗೆ ಎಂದು, 2023 ಸಾಲಿನ ಕಾರ್ಯಕಾರಿ ಮಂಡಳಿ ಸದಸ್ಯರು ಗಳನ್ನು ವಾರ್ಷಿಕ ಮಹಾಜನ ಸಭೆಯಲ್ಲಿ, ಸರ್ವಾನುಮತದಿಂದ ಒಪ್ಪಿ ಆಯ್ಕೆ ಮಾಡಿಕೊಂಡಿದ್ದು,ಸದರಿ ಕಾರ್ಯಕಾರಿ ಮಂಡಳಿಯ ಸದಸ್ಯರು ಪಟ್ಟಿಯನ್ನು ಸಹಕಾರಿ ಸಂಘಗಳ ಉಪನಿಬಂಧಕರವರ ಕಚೇರಿ ಗೆ 1.ವಿ.ಶ್ರೀ ನಿವಾಸುಲು ಮಿಂಚು (ಪಾಲಿಕೆ ಸದಸ್ಯರು)ಅಧ್ಯಕ್ಷರು.2.ನೂರ್ ಮಹಮ್ಮದ್ .ಉಪಾಧ್ಯಕ್ಷ. (ಪಾಲಿಕೆ ಸದಸ್ಯರು)3.ಮೂಲ್ಲಾಮಹಬೂಬ್ ಬಾಷ.ಪ್ರದಾನ ಕಾರ್ಯದರ್ಶಿ. ಎಂ.ಎಲ್ ಟಿ,ಬಾಬು)4.ಪ್ರವೀಣ್ ಕುಮಾರ್, ಖಜಾಂಚಿ.5 ಟಿ.ಶ್ರೀ ನಿವಾಸುಲು,ಜ.ಕಾರ್ಯದರ್ಶಿ. ಇನ್ನೂ ಮುಂತಾದ ಒಟ್ಟಾರೆ14 ,ಜನರ ಪಟ್ಟಿ ಯುಳ್ಳ ಬಳ್ಳಾರಿ ಜಿಲ್ಲಾ ಲಾರಿ ಮಾಲಿಕರ ಸಂಘದ ಲೆಟರ್ ಪ್ಯಾಡ್ ನಲ್ಲಿ ಸಿಲ್ ಹಾಕಿ ನೀಡಿದ್ದಾರೆ.ಎನ್,ವಿ,ಆರ್,ಜಿ.ಅಸೋಸಿಯೇಟ್,ಚಾರ್ಟರ್ಡ್ ಅಕೌಂಟಿಂಗ್ ಅವರ ರಿಂದ ಆಡಿಟ್ ರಿಪೋರ್ಟ್ ನೀಡಿದ್ದಾರೆ,ಬ್ಯಾಂಕ್ ವರ್ಷದ ರಿಪೋರ್ಟ್, ಖರ್ಚು ವೆಚ್ಚ ಗಳ ಪಟ್ಟಿ ಯನ್ನು ನೀಡಿದ್ದಾರೆ,ಸಹಕಾರ ಸಂಘದ ಕಚೇರಿ ಗೆ ಮಿಂಚು ಶ್ರೀ ನಿವಾಸುಲು ಅವರು ಲಾರಿ ಸಂಘದ ಅಧ್ಯಕ್ಷ ರು ಆಗಿದ್ದ ಇದರ ಸಹಿ ಯುಳ್ಳ, ದಾಖಲೆ ಮೂಲಕ ನವೀಕರಣ ಗೊಳಿಸುವ ಕುರಿತಂತೆ ಪ್ರಸ್ತಾಪ ಮಾಡಿರುತ್ತಾರೆ(ಫೈಲಿಂಗ್).ಕಚೇರಿಗೆ ಎರಡೂ ಪ್ರಸ್ತಾವನೆ ಗಳು ಬಂದಿದ್ದು, ಅಧಿಕಾರಿಗಳು ನೋಡಿ ತಲ್ಲಣಮಲ್ಲಣ ಆಗಿದ್ದಾರೆ, ಹಳೆ,ಸಂಘದ, ಹೊಸ ಸಂಘದ ಪ್ರಸ್ತಾಪ ಗಳು. ತಕ್ಷಣವೇ ಅಧಿಕಾರಿಗಳು, ಯಾವುದು ಅಸಲಿ,ಯಾವದು ನಕಲಿ ಎನ್ನುವುದನ್ನು ತಿಳಿದು ಕೊಳ್ಳಲು ಮೂಲತಃ 10ವರ್ಷದ ದಾಖಲೆ ಸಲ್ಲಿಸಲು ನೋಟಿಸ್ ನೀಡಿದ್ದಾರೆ.
ಅಷ್ಟರಲ್ಲಿ ಸಹಕಾರ ಸಂಘಗಳ, ಉಪನಿಬಂಧಕರುಗೆ, ಪ್ರಭಾವಿ ರಾಜಕಾರಣಿ ಗಳ ಒತ್ತಡ ಬರುತ್ತದೆ, ಅದನ್ನು ಸರಿಪಡಿಸಿ ಮಾಡಿಕೊಡಿ ಎಂದು, ಅದಕ್ಕೆ ಅವರು ಸಕ್ರಿಯ ಮಾರ್ಗದಲ್ಲಿ ಬಂದರೆ ಮಾಡಲಾಗುತ್ತದೆ, ದಯಮಾಡಿ ತಾವು ನಾಲ್ಕು ಜನರಿಗೆ ಮಾದರಿ ಆಗಬೇಕು ಇದು ಅಷ್ಟು ಸುಲಭವಾಗಿ ಇಲ್ಲ ದಯವಿಟ್ಟು ಕ್ಷಮಿಸಿ ಎಂದು ಉತ್ತರ ಕೊಟ್ಟಿದ್ದಾರೆ. ಅವರ ಆಪ್ತ ಕೂಡ ಸಹಕಾರ ಸಂಘಗಳ ಕಚೇರಿ ಗೆ ಹೋಗಿ,ಸರಿಪಡಿಸಿ ಮಾಡಿ ಕೊಡಿ ಸ್ವಲ್ಪ ಟೈಮ್ ಕೊಡಿ ಎಂದು ಹೇಳಿದ್ದಾರೆ ಅಧಿಕಾರಿ ಕೇಸರಿಮಠ ತಿಳಿಸಿದ್ದಾರೆ. ಇದರಲ್ಲಿ ಮೂನ್ನಬಾಯ್ ತದನಂತರ,ಪೇದ್ದಣ್ಣ ಅಧ್ಯಕ್ಷರು ಇದ್ದರು, ಇದು ವಾಸ್ತವವಾಗಿ ಇರುವ ವಿಚಾರ, ಆದರೆ ಪೇದ್ದಣ್ಣ ರಾಜೀನಾಮೆ 10ದಿನಗಳು ಆಗಿದ್ದು,2023ರಲ್ಲಿಯೇ ವಿ.ಶ್ರೀ ನಿವಾಸುಲು ಅಧ್ಯಕ್ಷರು, ಆಗಿರುವ ದಾಖಲೆ ಬಯಲಿಗೆ ಬಂದಿದೆ, ಅಂದರೆ ಈವರೆಗೆ ಪೇದ್ದಣ್ಣ ಅಧ್ಯಕ್ಷ ಗರಿ ನಕಲಿ ಇರಬೇಕು, ಸಂಘಕ್ಕೆ ನಕಲಿ ದಾಖಲೆ ಕೊಟ್ಟು ವಂಚನೆ(ಮೋಸ) ಮಾಡಿರಬೇಕು.ಅಥವಾ ಮಿಂಚು ಶ್ರೀನಿವಾಸ್ ಅಧ್ಯಕ್ಷರು,ಎಂದು ನೀಡಿರುವ ದಾಖಲೆ ನಕಲಿ ಆಗಿದ್ದರೆ, ಜನ ಪ್ರತಿನಿಧಿ ಯಾಗಿ ಸಮಸ್ಯೆ ಗೆ ಸಿಲುಕಿ ವಿರೋಧ ಪಕ್ಷದ ಅವರಿಗೆ ಆಹಾರ ಆಗಬಹುದು. ಒಟ್ಟಾರೆ ಸಹಕಾರ ಸಂಘ ನಕಲಿ ಯಾರೂ ಅಸಲಿ ಯಾರೂ ಎನ್ನುವುದು ಬಹಿರಂಗ ಮಾಡಿ ನಕಲಿ ಮಾಡಿರುವ ಅವರ ವಿರುದ್ಧ ಸರ್ಕಾರ ಕ್ಕೆ ಮಾಹಿತಿ ಕೊಡಬೇಕು ಆಗುತ್ತದೆ. ಇದರ ಮತ್ತಷ್ಟು ಮಾಹಿತಿ ಯೊಂದಿಗೆ.ನ್ಯೂಸ್9ಟುಡೇ ಸೋಷಿಯಲ್ ಮೀಡಿಯಾ ದಲ್ಲಿ.. (ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ.).


News 9 Today

Leave a Reply