This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ಗೋಲ್ ಮಾಲ್

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ಗೋಲ್ ಮಾಲ್

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ಗೋಲ್ ಮಾಲ್

*ಬೈಲಾ ವಿರುದ್ಧ ಆಡಳಿತ ನಡೆಸುತ್ತಿರುವ ಕುರಿತು ದೂರು*

*ಸಂಸ್ಥೆಯ ಬೈಲಾ ನಿಯಮಗಳು ಗಾಳಿಗೆ ತೂರಿ ಲಕ್ಷಾಂತರ ರೂ ಲೂಟಿ?*

(Exclusive News)

ಬಳ್ಳಾರಿ : ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್) 1953 ಆರಂಭಿಗೊಂಡಿತ್ತು. ವ್ಯಾಪಾರಸ್ಥರು GST ಹೊಂದಿರುವ ಅಂಗಡಿ ಮಾಲೀಕರು ಇದರಲ್ಲಿ ಸದಸ್ಯತ್ವವನ್ನು ಪಡೆಯುತ್ತಾರೆ. ವರ್ತಕರಿಗೆ ತೊಂದರೆ ಆದರೆ ಅವರ ಪರವಾಗಿ ಬ.ಜಿ.ವಾ.ಮತ್ತು ಕೈ.ಸಂಸ್ಥೆ ನಿಲ್ಲುತ್ತದೆ. ಜಿಲ್ಲೆಯಲ್ಲಿ ಇದು ಒಂದು ಪ್ರಸಿದ್ಧ ಪಡೆದ ಸಂಸ್ಥೆಯಾಗುದೆ. ನಗರದ ಮಧ್ಯ ಭಾಗದಲ್ಲಿ ಬಹುದೊಡ್ಡ ವಾಣಿಜ್ಯ ಮಳಿಗೆಗಳು ಹೊಂದಿರುವ ಲಕ್ಷಾಂತರ ರೂಪಾಯಿಗಳು ಸಂಪನ್ಮೂಲಗಳನ್ನು ಹೊಂದಿದೆ. ಆದರೆ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಸಿ ಹೊಸ ಸದಸ್ಯರಿಗೆ ಅವಕಾಶ ಮಾಡಿಕೊಡಬೇಕಾಗಿ ನಿಯಮವಿದ್ದರೂ ಸರ್ವ ಸದಸ್ಯರ ಸಭೆಯಲ್ಲಿ ಅಭಿಪ್ರಾಯಕ್ಕೆ ಮನ್ನಣೆ ನೀಡದೆ 2016ರಿಂದ ಅದೇ ಸದಸ್ಯರು ಅಧಿಕಾರದಲ್ಲಿದ್ದಾರೆ ಎಂದು ಕಳೆದ ವರ್ಷದ ಸರ್ವ ಸದಸ್ಯರ ಸಭೆ ಇದುವರೆಗೆ ಜರುಗಿಸದೇ ಆರ್ಥಿಕ ಪತ್ರಗಳಿಗೆ ಅನುಮೋದನೆ ಪಡೆಯದೇ ಹಾಗೇ ಕಾಲಹರಣ ಮಾಡುತ್ತಿದ್ದಾರೆ ಎಂದು ಕೂಡಲೇ ಸರ್ವ ಸದಸ್ಯರ ಸಭೆಯನ್ನು ನಡೆಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ಸರ್ಕಾರ ಬೆಂಗಳೂರು ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯಕಾರಿ ಸಮತಿ ಸದಸ್ಯರಾದ ಗುತ್ತಾ ಚಂದ್ರಶೇಖರ್ ಅವರಿಗೆ
ಪತ್ರದ ಮೂಲಕ ಕೋರಿದ್ದಾರೆ.

•ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅವ್ಯವಹಾರಗಳು*

ಬೈಲಾದಲ್ಲಿ ಸಂಸ್ಥೆ ವತಿಯಿಂದ ತರಬೇತಿ ಆರಂಭಿಸಲು ಅವಕಾಶ ಇರುವುದಿಲ್ಲ, ಅದರೆ ಬೈಲಾ ನಿಯಮಗಳನ್ನು ಗಾಳಿಗೆ ತೂರಿ ಸಂಸ್ಥೆಯ ಕಟ್ಟಡದಲ್ಲಿ “ಬಳ್ಳಾರಿ ಚೇಂಬರ್ ಕೌಶಲ್ಯಾಭಿವೃದ್ದಿ ಕೇಂದ್ರ” ವನ್ನು ಸ್ಥಾಪಿಸಿ ಕಂಪ್ಯೂಟರ್ ಖರೀದಿಯ ಮೇಲೆ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆಸಿದ್ದಾರೆ. ಅಲ್ಲದೇ, ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಕೌಶಲ್ಯಭಿವೃದ್ದಿ ಇಲಾಖೆಯಿಂದಲೂ ಅನೇಕ ಯೋಜನೆಗಳ ಅಡಿಯಲ್ಲಿ ತರಬೇತಿ ಯೋಜನೆಗಳನ್ನು ಪಡೆದುಕೊಂಡು ಬೈಲಾ ವಿರುದ್ದವಾಗಿ ನಡೆದುಕೊಂಡು ಸರ್ಕಾರದ ಅನುದಾನ ಪಡೆದುಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಗುತ್ತಾ ಆರೋಪ ಮಾಡಿದ್ದಾರೆ.

ವ್ಯಾಪರಸ್ಥರು, ವರ್ತಕರು, ವಾಣಿಜ್ಯೋದ್ಯಮಗಳಿಗೆ ಸಹಕರಿಸುವದಾಗಿ ಸಂಸ್ಥೆಯ ಆದಾಯವನ್ನು ಬಳಿಕೆ ಮಾಡುವ ಉದ್ದೇಶವಿದ್ದರೆ ಇತ್ತೀಚಿನ ಆಡಳಿತ ಮಂಡಳಿ, ಕಳೆದ ಎರಡು ವರ್ಷಗಳದಿಂದ “ರೈತಣ್ಣನ ಉಟ” ಎಂಬ ಹೊಸ ಯೋಜನೆಯನ್ನು ಆರಂಭಸಿ ಈ ಯೋಜನೆಯ ಹೆಸರಲ್ಲಿ ಲಕ್ಷಾಂತರ ರೂಪಾಯಿಗಳ ದೇಣಿಗೆಯನ್ನು ದಾನಿಗಳಿಂದ ಪಡೆದುಕೊಂಡು, ದಾನ ನೀಡಿದಂತಹ ದಾನಿಗಳಿಗೆ ಅಧಿಕೃತ ರಸೀದಿಯನ್ನು ನೀಡದೆ ಲೆಕ್ಕ ಪುಸ್ತಕದಲ್ಲಿಯೂ ದಾಖಲಿಸದೇ ಸದಸ್ಯರ ಹಾಗೂ ದಾನಿಗಳ ಹಣವನ್ನು ಲೂಟಿ ಮಾಡುತ್ತಾರೆ ಎಂದು ಈ ಯೋಜನೆಯಲ್ಲಿ ಪಡೆದ ಹಣವನ್ನು ಯಾವುದೇ ಬ್ಯಾಂಕ್’ನ ಸಂಸ್ಥೆಯ ಖಾತೆಯಲ್ಲಿ ಜಮಾ ಮಾಡಿಲ್ಲ. ಅಲ್ಲದೆ ನಗದು ವ್ಯವಹಾರ ಐದು ಸಾವಿರಕ್ಕೂ ಮೀರಬಾರದೆಂಬ ಕಾನೂನಿದ್ದರೂ ಲಕ್ಷಾಂತರ ರೂಪಾಯಿಗಳ ಹಣವನ್ನು ನಗದು ರೂಪದಲ್ಲಿ ಪಡೆದುಕೊಂಡು, ಸಂಸ್ಥೆಯ ಲೆಕ್ಕ ಪುಸ್ತಕದಲ್ಲಿ ತೋರಿಸದೆ ವಂಚಿಸಿದ್ದಾರೆ ಎಂದು ಗುತ್ತಾ ಚಂದ್ರಶೇಖರ್ ತಿಳಿಸಿದ್ದಾರೆ.

ಬೈಲಾ ಪ್ರಕಾರ ಒಟ್ಟಾರೆ 60ಜನರು ಇರಬೇಕಾಗಿರುವ ಸಭೆಗಳಲ್ಲಿ 90ಸದಸ್ಯರು ಪಾಲ್ಗೊಳ್ಳುತ್ತಾರೆ. ಇವರು ಎಲ್ಲರು ನಡಾವಳಿಯ ಪುಸ್ತಕದಲ್ಲಿ ಸಹಿ ಹಾಕುತ್ತಾರೆ. ಬೈಲಾ ಮೀರಿ ಸದಸ್ಯರು ಇದ್ದರೆ ಆರೋಗ್ಯಕರ ಚರ್ಚೆಗೆ ಅವಕಾಶವಿರುವುದಲ್ಲ. ಇದರಿಂದ ಅವ್ಯವಹಾರ ಮಾಡಲು ಅವಕಾಶ ಇರುತ್ತದೆ. ಪ್ರತಿ ಹಣಕಾಸು ವರ್ಷದ ಮುಕ್ತಾಯ ಆರು ತಿಂಗಳಲ್ಲಿ ಸರ್ವ ಸದಸ್ಯರ ಸಭೆಯನ್ನು ನಡೆಸಬೇಕೆಂಬ ನಿಯಮ ಇದ್ದರು 2022ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಮಾಡಿಲ್ಲ. ಇಂತಹ ಸರ್ವ ಸದಸ್ಯರ ಸಭೆಯಲ್ಲಿ ಯಾವುದೇ ಒಬ್ಬ ಸದಸ್ಯ ಏನಾದರೂ ಸಂಸ್ಥೆಯ ನ್ಯೂನತೆಯನ್ನು ಹೇಳಲು ಮುಂದಾದಾಗ ಅಂತಹ ಸದಸ್ಯನಿಗೆ ಮಾತನಾಡಲು ಅವಕಾಶ ಕೊಡದೆ ಬಹುಮತವನ್ನು ತೋರಿಸಿ ಬಾಯಿಮುಚ್ಚಿಸುತ್ತಾರೆ ಎಂಬ ಆರೋಪ ಕೇಳಿ ಬಂದಿವೆ. ಕಾನೂನಿಗೆ ಬೆಲೆ ಕೊಡದೆ, ಹಣ ದೋಚುತ್ತಿರವವ ಇಂತಹ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಕಾನೂನಿನ ಅರಿವು ಇರಬೇಕು ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಾರ್ಯಕಾರಿ ಸಮಿತಿ ಸದಸ್ಯರಾದ ಗುತ್ತಾ ಚಂದ್ರಶೇಖರ್ ತಿಳಿಸಿದ್ದಾರೆ.

ಇದು ಅಲ್ಲದೆ ಈ ಹಿಂದೆ ಕೂಡ ಸಭೆಗಳಲ್ಲಿ ಸೂಟ್ ಕೇಸ್ ನೀಡಿದ್ದರು. ಅದರಲ್ಲಿ ಕೂಡ ಅವ್ಯವಹಾರ ನಡೆದಿತ್ತು‌ ಚೇಂಬರ್ ಮ್ಯಾಗಜೀನ್, ಪುಸ್ತಕ ಬಿಡುಗಡೆ, ಪ್ರಿಂಟಿಂಗ್ ಮಾಡುವ ಸಮಯದಲ್ಲಿ ಅನುಮತಿ ಇಲ್ಲದೆ ಮುದ್ರಣ ಮಾಡಿದ್ದಾರೆ. 2015-2019 ಮಧ್ಯದಲ್ಲಿ ಅಂದಾಜು 3ಕೋಟಿ ಮೇಲೆ ಹಣವಿತ್ತು. ಆದರೆ 1,00,55,000.ರೂಗಳು ಮಾತ್ರವೇ ತೋರಿಸುತ್ತದೆ. ಇನ್ನೂ ಉಳಿದ ಹಣದ ಲೆಕ್ಕಪತ್ರಗಳು ಇಲ್ಲವೆಂದು ಈ ಹಿಂದೆ ಇದ್ದ ಅಧ್ಯಕ್ಷರು ಪ್ರಸ್ತಾಪ ಮಾಡಿದ್ದರು. ಆದರೆ ಈವರೆಗೆ ಅದರ ಮಾಹಿತಿ ಇಲ್ಲವೆಂದು ಹೇಳಿದ್ದಾರೆ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿಶ್ವವಿದ್ಯಾಲಯದಲ್ಲಿ ಗಣಕಯಂತ್ರ ಪ್ರಯೋಗಾಲಯ ಉದ್ಘಾಟನಾ ಮಾಡಿದ್ದರು. ಅದಕ್ಕೆ ಅಂದಾಜು ಲಕ್ಷಗಟ್ಟಲೆ ಖರ್ಚು ಮಾಡಿದ್ದಾರೆ. ಆದರೆ ಅದರ ಹಣ ಥರ್ಡ್ ಪಾರ್ಟಿಗೆ ಕೊಟ್ಟು ಗೋಲ್ ಮಾಲ್ ಮಾಡಿದ್ದಾರೆ. ಅದು ತನಿಖೆ ಆಗಬೇಕು ಎಂದಿದ್ದಾರೆ. ಈಗಾಗಲೇ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬೈಲಾ ವಿರುದ್ಧ ನಡೆಸುತ್ತಿರುವ ಅಡಳಿತ ಕುರಿತು ಮೇಲಿನ ಅಧಿಕಾರಿಗಳಿಗೆ ದೂರು ಅರ್ಜಿ ಸಲ್ಲಿಸಲಾಗಿದೆ. ಅಧಿಕಾರಿಗಳು ಕೂಡ ಬಳ್ಳಾರಿಯ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಪರಿಶೀಲನೆ ಮಾಡುವಂತೆ ಆದೇಶ ನೀಡಿದ್ದಾರೆ. ಇವರು ಏನೂ ಮಾಡುತ್ತಾರೆ ಎಂದು ಕಾದು ನೋಡಬೇಕಾಗಿದೆ. ವಿನಾಃಕಾರಣ ನೇಪಮಾಡಿ ನ್ಯಾಯಾಲಯಕ್ಕೆ ಹೋಗುವಂತೆ ಮಾಡಿ ಕಾಲ ಹರಣ ಮಾಡುವ ಸಾಧ್ಯತೆಗಳು ಎದ್ದು ಕಾಣುತ್ತಿವೆ ಎಂದು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನೋಡಲು ತುಂಬಾ ನಿಷ್ಠೆ ಪ್ರಾಮಾಣಿಕತೆ ಇದ್ದಂತೆ ಕಾಣುತ್ತಿತ್ತು, ಆದರೆ ಇಲ್ಲಿನ ಚಿತ್ರಣವು ಸಂಪೂರ್ಣವಾಗಿ ಬದಲಾವಣೆಯಾಗಿದೆ.

(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ)


News 9 Today

Leave a Reply