This is the title of the web page
This is the title of the web page

Please assign a menu to the primary menu location under menu

State

ಬೋಗಸ್ ಪರಿಚಯ ಪತ್ರಗಳು ನೀಡಿ ಮತ ಪಡೆಯುವ ಮೋಸದ ರಾಜಕಾರಣ ನಾವು ಮಾಡಲ್ಲ : ಶಾಸಕ ನಾಗೇಂದ್ರ ಕಿಡಿ.

ಬೋಗಸ್ ಪರಿಚಯ ಪತ್ರಗಳು ನೀಡಿ ಮತ ಪಡೆಯುವ ಮೋಸದ ರಾಜಕಾರಣ ನಾವು ಮಾಡಲ್ಲ : ಶಾಸಕ ನಾಗೇಂದ್ರ ಕಿಡಿ.

*ಬೋಗಸ್ ಪರಿಚಯ ಪತ್ರಗಳು ನೀಡಿ ಮತ ಪಡೆಯುವ ಮೋಸದ ರಾಜಕಾರಣ ನಾವು ಮಾಡಲ್ಲ : ಶಾಸಕ ನಾಗೇಂದ್ರ ಕಿಡಿ.*

 

ಬಳ್ಳಾರಿ : ಬಳ್ಳಾರಿ ಗ್ರಾಮೀಣ ಕ್ಷೇತ್ರದ ರಾಜಕೀಯ ಮಹತ್ತರವಾದ ತೀರುವು ಪಡೆದುಕೊಂಡಿದೆ.

 

ಒಂದೇ ಸಮುದಾಯದ ಮುಖಂಡರು ಹಾಗೂ ಸಂಬಂಧಿಗಳ ನಡುವೆ ಜಿದ್ದಾಜಿದ್ದಿನ ಕಣವಾಗಿದೆ.

 

ಗುರುವಾರ ರಾತ್ರಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿ ಪ್ರದೇಶದ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಅವರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ರಾಜೀವ್ ಗಾಂಧಿ ನಗರ 34ನೇ ವಾರ್ಡಿನ ಅಧಿ ನಾಯಕಿ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಅವರ ವಾರ್ಡ್‌ಯಲ್ಲಿ ಪ್ರಚಾರ ಮಾಡಿದರು.

 

ಸಾವಿರಾರು ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

 

ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ರಾಜೀವ್ ಗಾಂಧಿ ನಗರದಲ್ಲಿ ಒಂದಿಷ್ಟು •ಪಟ್ಟಗಳ ವಿಚಾರದಲ್ಲಿ ಗೊಂದಲ ಸೃಷ್ಟಿ ಆಗಿತ್ತು.

 

ಇದನ್ನು ರಾಜಕೀಯವಾಗಿ ಲಾಭ ಪಡೆಯುವ ಬಿಜೆಪಿಯ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಅವರು ತಕ್ಷಣವೇ ಪ್ರವೇಶ ಮಾಡಿ ಅಲ್ಲಿನ ಕೆಲ ಚೋಟಮೊಟ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಸಿಕೊಂಡಿದ್ದರು.

 

ತಕ್ಷಣವೇ ಒಂದು ಪ್ಲಾನ್ ಮಾಡಿ ಸ್ಲಮ್ ಬೋರ್ಡ್ ವತಿಯಿಂದ ಪರಿಚಯ ಪತ್ರಗಳು ಎನ್ನುವ ಪತ್ರಗಳನ್ನು ಹಂಚಿಕೆ ಮಾಡುತ್ತಾರೆ.

 

ಜಗತ್ತಿನಲ್ಲಿ ಇಲ್ಲಿಯವರಗೆ ಹಕ್ಕುಪತ್ರಗಳು, ಪಟ್ಟಗಳು ಇಲ್ಲದೆ ಇರುವ ನಿವಾಸಿಗಳಿಗೆ ಸರ್ಕಾರದಿಂದ ಪರಿಚಯ ಪತ್ರಗಳು ನೀಡುವುದನ್ನು ಯಾರು ನೋಡದೇ ಇರಬಹುದು!

 

ಸುದೀರ್ಘ ಅನುಭವ ಇರುವ ರಾಜಕಾರಣಿ ಶ್ರೀರಾಮುಲು ಅವರ ಇಂತಹ ಪ್ಲಾನ್ ಮಾಡಿ ಜನರಿಗೆ ವಂಚನೆ ಮಾಡುತ್ತಾರೆ ಅಂದರೆ ಮಾತನಾಡಲು ಅಗಿದೆ ಮೌನ ವಾತಾವರಣ ಸೃಷ್ಟಿ ಅಗಿದೆ ಸಾರ್ವಜನಿಕ ವಲಯದದಲ್ಲಿ.

 

ಗುರುವಾರ ಪ್ರಚಾರ ಮಾಡುವ ಸಮಯದಲ್ಲಿ ಶಾಸಕ ನಾಗೇಂದ್ರ ಅಲ್ಲಿಯ ಸ್ಥಳೀಯ ನಿವಾಸಿಗಳು ಸಾವಿರಾರು ಜನರಿಗೆ ಹೇಳುತ್ತ ಬಿಜೆಪಿ ಅಭ್ಯರ್ಥಿಗೆ ಅನುಕೂಲ ಆಗುವ ನಿಟ್ಟಿನಲ್ಲಿ *ಮತದಾರರಿಗೆ ಬೋಗಸ್ ಪರಿಚಯ ಪತ್ರಗಳನ್ನು ನೀಡಿದ್ದಾರೆ ಎಂದು ಲೇವಡಿ ಮಾಡಿದರು*.

 

ಪಟ್ಟ ಕೇಳುತ್ತಿರುವ ಪ್ರದೇಶ ಸಂಪೂರ್ಣ ಖಾಸಗಿ ಮಾಲೀಕರ ಒಡೆತನದಲ್ಲಿ ಇದೆ,ನಾವು ಅವರ ಜೊತೆಯಲ್ಲಿ ಮಾತನಾಡಲಾಗಿದೆ.

 

ಅದನ್ನು ಖರೀದಿ ಮಾಡಿ ತಮಗೆ ಶಾಶ್ವತವಾಗಿ ಇರುವ ರೀತಿಯಲ್ಲಿ ಪಟ್ಟಾ ಮಾಡಿಕೊಟ್ಟು ನೆಮ್ಮದಿ ಜೀವನವನ್ನು ಮಾಡುವ ವ್ಯವಸ್ಥೆ ಮಾಡಿಕೊಡುವ ಉದ್ದೇಶ ನಮ್ಮದು ಆಗಿತ್ತು.

 

ಆದರೆ ಮೋಸದಿಂದ ಕೂಡಿರುವ ಬೋಗಸ್ ಪತ್ರಗಳನ್ನು ಕೊಟ್ಟು ವಂಚನೆ ಮಾಡುವ ಉದ್ದೇಶ ಬಿಜೆಪಿ ಅವರದ್ದಾಗಿದೆ ಎಂದು ಕಿಡಿಕಾರಿದರು.

 

ಹೆತ್ತವರು ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ,ಈ ಬಾರಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುತ್ತದೆ, ಮೊಟ್ಟಮೊದಲ ದಿನವೇ ತಮಗೆ ಪಟ್ಟಾಗಳನ್ನು ಹಂಚಿಕೆ ಮಾಡುತ್ತೇನೆ, ಇದು ನನ್ನ ಮೊದಲ ನನ್ನ ಪ್ರಣಾಳಿಕೆ ಪ್ರಮಾಣ ಎಂದರು.

 

ಆದರೆ ಬಿಜೆಪಿ ಅವರ ಸರ್ಕಾರದ ಬೋಗಸ್ ಪತ್ರಗಳಿಗೆ ಸೂತ್ರದಾರರು ಯಾರು? ನಕಲಿ ಪತ್ರಗಳನ್ನು ಯಾವ ರೀತಿಯಲ್ಲಿ ಹಂಚಿಕೆ ಮಾಡಿದ್ದಾರೆ? ಇದು ಕಾನೂನು ರೀತಿಯಲ್ಲಿ ಅಪರಾಧ ಅಲ್ಲವೇ ಎನ್ನುವುದಯ ತಿಳಿಯಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಸಂಕಟ ಆಗಬಹುದೆ? ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಡೆ ಏನೂ ಎನ್ನವದು ಯಕ್ಷ ಪ್ರಶ್ನೆ ಅಗಿದೆ.

 

(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)


News 9 Today

Leave a Reply