ರಾಹುಲ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಶಾಸಕ ನಾಗೇಂದ್ರ ಭಾಗಿ
ಬಳ್ಳಾರಿ: ಜ,30: ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ರಾಹುಲ್ ಗಾಂಧಿಯವರ ಐತಿಹಾಸಿಕ ಭಾರತ ಜೋಡೋ ಯಾತ್ರೆ ಅಂತಿಮ ಘಟ್ಟಕ್ಕೆ ತಲುಪಿದೆ. ಕನ್ಯಾಕುಮಾರಿ ಯಿಂದ ಆರಂಭವಾದ ಯಾತ್ರೆ ಜಮ್ಮು ಕಾಶ್ಮೀರ ತಲುಪಿದ್ದು ಈಗ ಸಮಾರೋಪ ಸಮಾರಂಭಕ್ಕೆ ಭರದ ಸಿದ್ದತೆಗಳು ನಡೆದ ಬೆನ್ನಲ್ಲೆ ಕರ್ನಾಟಕದಿಂದ ಕಾಂಗ್ರೆಸ್ ನಾಯಕರು ದೆಹಲಿಯ ಕರ್ನಾಟಕ ಭವನದಲ್ಲಿ ಬೀಡು ಬಿಟ್ಟಿದ್ದು ರಾಜ್ಯದ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅದ್ಯಕ್ಷ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಕರ್ನಾಟಕ ಭವನದಲ್ಲಿ ಪರಸ್ಪರ ಭೇಟಿಯಾಗಿ ಕೇಂದ್ರದ ನಾಯಕರೊಂದಿಗೆ ಹಾಗೂ ರಾಜ್ಯದ ನಾಯಕರೊಂದಿಗೆ ಹಲವು ಮಹತ್ತರ ರಾಜಕೀಯ ಬೆಳವಣಿಗಳ ಕುರಿತು ಚರ್ಚಿಸಿದರು. ನಂತರ ಅಲ್ಲಿಂದ ಜಮ್ಮುವಿಗೆ ವಿಮಾನದಲ್ಲಿ ಪ್ರಯಾಣ ಬೆಳಸಿದ್ದಾರೆ ಎಂದು ತಿಳಿದು ಬಂದಿದೆ.