*ಶ್ರೀ ರಾಮುಲು ಅವರು ರಾಜಕಾರಣ ಒಂದೇ ಅಲ್ಲ ಈನಾಡಿನ ರಂಗಭೂಮಿ ಬಯಲಾಟ ವನ್ನು ಕೂಡ ಅದ್ಬುತ ವಾಗಿ ಆಡಬಲ್ಲ ಧೀಮಂತ.* ಬಳ್ಳಾರಿ(24)ಕಂಪ್ಲಿ ತಾಲ್ಲೂಕಿನ ಹಿರೇಹಡ್ಲಗಿ ಗ್ರಾಮದಲ್ಲಿ ನೆಡೆದ ಪಾರ್ಥ ವಿಜಯ ಬಯಲುನಾಟಕದಲ್ಲಿ ಭಾಗವಹಿಸಿ ಕುಣಿದು ಜನರನ್ನು ಸಂತೋಷ ಪಡಿಸಿದ ಸ್ವಾಭಿಮಾನಿ ಬಿ,ಶ್ರೀರಾಮುಲು ಅವರು.
ನಮ್ಮ ನಾಡುನಲ್ಲಿ ಪ್ರಸಿದ್ಧ ರಂಗ ಭೂಮಿ ಎಂದರೆ ಅದು ಹಳ್ಳಿಯ ಹಬ್ಬ ಅನ್ನುವ ವಾತಾವರಣ ಸೃಷ್ಟಿ ಮಾಡೋದು ಬಯಲಾಟ ಮಾತ್ರವೇ.
ಈಗಲೂ ಪಾರ್ಥಿ ವಿಜಯ, ಅಭಿಮನ್ಯು ಕಾಳಗ,ಗಿರಜ ಕಲ್ಯಾಣಿ, ಅನೇಕ ಬಯಲಾಟ ಗಳು ಹಳ್ಳಿ ಗಳಲ್ಲಿ ಆಡುತ್ತಾ ಇರುತ್ತಾರೆ ಈಗಿನ ವಾತಾವರಣ ದಲ್ಲಿ ಬಯಲಾಟ ಖರ್ಚು ವೆಚ್ಚಗಳು ಕೂಡ ದುಬಾರಿ ಅಗಿದ್ದಾವೆ, ಅದಕ್ಕೆ ಅಲ್ಪಸ್ವಲ್ಪ ರಾಜಕಾರಣಿಗಳು ಶ್ರೀಮಂತರು ಆರ್ಥಿಕ ಸಹಾಯ ಮಾಡುತ್ತಾರೆ, ಇದರ ಹಿನ್ನಲೆ ಅಥಿ ಹೆಚ್ಚಿನ ಅಭಿಮಾನಿಗಳು,ಸೂರ್ಯನಾರಾಯಣ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ, ಶ್ರೀ ರಾಮುಲು, ನಾಗೇಂದ್ರ, ಸಣ್ಣಪಕ್ಕಿರಪ್ಪ ,ಭರತ್ ರೆಡ್ಡಿ,ಸುರೇಶ್ ಬಾಬು, ಕುರುಬ ಸಂಘದ ಮುಖಂಡರು ಅಗಿರವ ದಾರದ ಮಿಲ್ ಮೋಹನ್ ಮುಂತಾದ ನಾಯಕರನ್ನು ಆಹ್ವಾನ ಮಾಡುತ್ತ ಇರುತ್ತಾರೆ.
ಅದರೆ ಸಾಧಾರಣವಾಗಿ ಕೆಲ ನಾಯಕರು ಸನ್ಮಾನ ಸತ್ಕಾರ ಕ್ಕೆ ಸೀಮಿತ ವಾಗಿ ಇರುತ್ತಾರೆ ಅದರೆ ಮಾಜಿ ಸಚಿವರು ಅಗಿರವ ಶ್ರೀ ರಾಮುಲು ಅವರು ಪಾತ್ರ ದಾರಿ ಸಮಾನವಾಗಿ ಬಯಲಾಟ ಕುಣಿದು ಕುಪ್ಪಳಿಸಿದ್ದು,ಹಳ್ಳಿಗಳಲ್ಲಿ ಮತ್ತಷ್ಟು ಸಂಭ್ರಮ ಸಡಗರ ಹುಟ್ಟುವಂತೆ ಮಾಡಿದ್ದಾರೆ.
ರಾಮುಲು ಅವರ ಬಯಲಾಟ ಕುಣಿತ ಸೋಷಿಯಲ್ ಮೀಡಿಯಾ ದಲ್ಲಿ ಶಬ್ದ ಮಾಡುತ್ತ ಇದೇ. ಸಾಧಾರಣವಾಗಿ ಬಯಲಾಟ ಆಡಿದರೆ ಸಂತೋಷ ಮಳೆ ಬೆಲೆ ಯಾಲ್ಲವು ಚನ್ನಾಗಿ ಇರುತ್ತದೆ ಅನ್ನುವ ಸಂದೇಶ ಕೂಡ ಇದೆ.
(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)