*ಸ್ತ್ರೀ ಸಂಘಟನಾ ನಡಿಗೆ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗಿಯಾದ ಶ್ರೀಮತಿ ಶ್ರೀ “ಟಿ ಹೆಚ್ ದೀಪ ಸುರೇಶ್ ಬಾಬು”*
ಕ್ಷೇತ್ರದ ಮಹಿಳೆಯರಲ್ಲಿ ಆತ್ಮ ವಿಶ್ವಾಸದ, ಸ್ವಾವಲಂಬನೆಯನ್ನು ಮೂಡಿಸಿ ಬೃಹತ್ ಪ್ರಮಾಣದಲ್ಲಿ ಮಹಿಳೆಯರನ್ನು ಸಂಘಟಿಸಲು ಪ್ರಯತ್ನಿಸಿರುವ ಒಂದು ಕ್ರಾಂತಿಕಾರಿ ಪ್ರಯತ್ನದ ಮೊದಲ ಹೆಜ್ಜೆಯಾಗಿ, ನಡೆಸುತ್ತಿರುವ “ಸ್ತ್ರೀ ಸಂಘಟನಾ ನಡಿಗೆಯು” ಇಂದು ★ಬಾದನಹಟ್ಟಿ, ಮತ್ತು ಮುಷ್ಟಗಟ್ಟ★ ಗ್ರಾಮಗಳಲ್ಲಿ, ಅರ್ಥಪೂರ್ಣವಾದ ಕಾರ್ಯ ಚಟುವಟಿಕೆ ಮೂಲಕ ಯಶಸ್ವಿಗೊಂಡಿತು…
ಸನ್ಮಾನ್ಯ “ಶ್ರೀ ಟಿ ಹೆಚ್ ಸುರೇಶ್ ಬಾಬು” ರವರ ಧರ್ಮಪತ್ನಿಯಾದ ಶ್ರೀಮತಿ ಶ್ರೀ “ಟಿ ಹೆಚ್ ದೀಪ ಸುರೇಶ್ ಬಾಬು” ರವರು ಗ್ರಾಮದ ಅನೇಕ ಮಹಿಳೆಯರನ್ನು ಭೇಟಿ ಮಾಡಿದರು ವಿಶೇಷವಾಗಿ, ತೀವ್ರವಾದ ಬಿರು ಬಿಸಿಲಿನ ನಡುವೆಯೂ ತಮ್ಮ ದೈನಂದಿನ, ಕೂಲಿ ಕೆಲಸದಲ್ಲಿ ನಿರತರಾಗಿರುವ ಅನೇಕ ಮಹಿಳೆಯರನ್ನ ಅದೇ ಸ್ಥಳದಲ್ಲಿಯೇ ಭೇಟಿ ಮಾಡಿ, ಅವರ ಬದುಕಿನ, ಕಷ್ಟಕಾರ್ಪಣ್ಯಗಳ ಕುರಿತು ಸಮಾಲೋಚನೆ ನಡೆಸಿ, ಅವರಿಗೆ ನೆರವಾಗುವ ಭರವಸೆಯನ್ನು ತುಂಬಿದರು…
ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವನ ಗುಣಗಳು ಆಕೆಗೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತದೆ.ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯುತ್ತಾ ಜಗತ್ತಿನ ದೃಷ್ಟಿಯನ್ನು ತನ್ನೆಡೆ ಸೆಳೆದ, ಸ್ತ್ರೀ ಒಂದು ಸಮುದಾಯವನ್ನು ಸಮರ್ಥವಾಗಿ ಪ್ರತಿನಿಧಿಸುವ ಸಾಮರ್ಥ್ಯ ಹೊಂದಿರುವಂತಹವಳು ಎಂಬುದು… ಬಿರು ಬಿಸಿಲಿನ ನಡುವೆಯೂ ಕೆಲಸ ಮಾಡುವ ಅವಳ ಜೀವನ ಪದ್ಧತಿಯನ್ನು ಅರ್ಥೈಸಿಕೊಂಡರೆ ಸಾಕು ನಮಗೆ ನೈಜ ದರ್ಶನದ ಅರಿವಾಗಲಿದೆ..
ಬೃಹತ್ ಪ್ರಮಾಣದ ಮಹಿಳಾ ಸಂಘಟನಾ ಅಭಿಯಾನವು ಯಶಸ್ವಿಗೊಳ್ಳಲೆಂದು ತಮ್ಮ ಅಮೂಲ್ಯವಾದ ಆಶೀರ್ವಾದ ಪಡೆಯಲು ಇಚ್ಚಿಸುತ್ತೇವೆ ಏಂದರು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)