ಮುಂಡರಗಿ ಶಾಲೆ ಮಕ್ಕಳು ಸಂಭ್ರಮದಲ್ಲಿ. ಬಾಲ್ಯದ ದಿನಗಳು ನೆನಪಿಗೆ ತರುತ್ತವೆ.ಮುಂಡರಗಿ ನಾಗರಾಜ್.
ಬಳ್ಳಾರಿ (15)ಇಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಮೃದ್ಧಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಉದ್ಘಾಟನೆಯ ಪ್ರಯುಕ್ತ ಸಂಸ್ಥೆಯ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡ್ರಿಗಿಯ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ ಮತ್ತು ಮಗ್ಗಿಪುಸ್ತಕ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಮುಖಂಡರಾದ ಮುಂಡ್ರಿಗಿ ನಾಗರಾಜ್ ಮಾತನಾಡಿ ನೂತನ ಸಮೃದ್ಧಿ ಸಂಸ್ಥೆಯ ಪ್ರಥಮ ಕಾರ್ಯಕ್ರಮಕ್ಕೆ ಶುಭಹಾರೈಸಿ, ಮುಂದಿನ ದಿನಗಳಲ್ಲಿ ಸಂಸ್ಥೆಯು ಮತ್ತಷ್ಟು ಸತ್ಕಾರ್ಯಗಳನ್ನು ಹಮ್ಮಿಕೊಳ್ಳಲಿ ಎಂದು ಮಾತನಾಡಿದರು.ಇಂದು ಸಂಭ್ರಮ ನೋಡಿದರೆ ಬಾಲ್ಯದ ದಿನಗಳು ನೆನಪಿಗೆ ತರುತ್ತವೆ ಎಂದರು. ವಿದ್ಯ ಯಾರಿಂದಲೂ ಕಳವು ಮಾಡಲು ಸಾದ್ಯವಿಲ್ಲ,ಚನ್ನಾಗಿ ವಿದ್ಯ ಯನ್ನು ಕಲಿಯಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ್, ಸಂಸ್ಥೆಯ ಅಧ್ಯಕ್ಷರಾದ ಅರುಣ್ ಕುಮಾರ್ ಮುಂಡ್ರಿಗಿ, SDMC ಅಧ್ಯಕ್ಷರಾದ ಶ್ರೀನಿವಾಸ್ ಜವೆದಾರ್, ಶಾಲಾ ಮುಖ್ಯ ಗುರುಗಳಾದ ಉಮಾದೇವಿ, ಸಹ ಶಿಕ್ಷಕರು ಹಾಗೂ ಗ್ರಾಮದ ಮುಖಂಡರು ಹಾಗೂ ಯುವಕರು ಸಂಸ್ಥೆಯ ಸದಸ್ಯರಾದ ಶ್ರೀನಿವಾಸ್, ಮಹೇಶ್, ಹುಲುಗೇಶ್, ನಾಗರಾಜ್, ವಿಜಯ್, ಬಸವರಾಜ್, ಹೊನ್ನೂರಸ್ವಾಮಿ, ಪ್ರಹ್ಲಾದ್ ತೆಗ್ಗಿನಬೂದಿಹಾಳ್ ಮುಂತಾದವರು ಭಾಗವಹಿಸಿದ್ದರು.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)