*ಸರ್ಕಾರದ ವಿಮ್ಸ್ ಆಸ್ಪತ್ರೆ ವ್ಯವಸ್ಥೆ ಮೇಲೆ ಅಸಮಾಧಾನ ವ್ಯಕ್ತಪಡಿಸಿದ, ನಾರಾ ಭರತ್ ರೆಡ್ಡಿ!!.* ಬಳ್ಳಾರಿ(15) ಜಿಲ್ಲೆಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ವಿಮ್ಸ್) ಬುಧವಾರ ಬೆಳಿಗ್ಗೆ ವಿದ್ಯುತ್ ಕೈಕೊಟ್ಟು, ಜನರೇಟರ್ ಕೆಲಸ ಮಾಡದೆ ಇರುವ ಪರಿಣಾಮ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದ (ಐಸಿಯು) ಮೂವರು ಮೃತಪಟ್ಟಿದ್ದು,
ಇದಕ್ಕೆ ಸಂಬಂಧಿಸಿದ ವಿಮ್ಸ್ ನ ಆಡಳಿತಾಧಿಕಾರಿಗಳ ಬೇಜವಾಬ್ದಾರಿ ಮತ್ತು ಅಸಮರ್ಥತೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುವ ಒಂದು ಜಿಲ್ಲಾಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಮತ್ತು ಅದಕ್ಕೆ ಪರ್ಯಾಯವಾಗಿರುವ ಜನರೇಟರ್ ಕೆಲಸ ಮಾಡಿಲ್ಲ ಅಂದರೆ ಇದು ಆರೋಗ್ಯ ಇಲಾಖೆಗೆಯ ನಾಚಿಕೆಗೇಡಿನ ಸಂಗತಿ. ಇದರಿಂದ ನಿಗಾ ಘಟಕದಲ್ಲಿದ್ದ ಮೂವರು ಜನ ಮೃತರಾದರು ಈ ಸಂಬಂಧ ವಿಮ್ಸ್ ಅಧಿಕಾರಿಗಳು ಸಹ ಯಾವುದೇ ಜವಾಬು ನಿಡುತ್ತಿಲ್ಲ, ಅಂದರೆ ಇಲ್ಲಿರುವ ಅಧಿಕಾರಿಗಳ ಕಾರ್ಯವೈಖರಿ ಮತ್ತು ಇವರನ್ನು ಗಮನಿಸಬೇಕಾದ ಆರೋಗ್ಯ ಇಲಾಖೆ ಮಂತ್ರಿಗಳು ಸೇರಿ ಜನಸಾಮಾನ್ಯರ ಪ್ರಾಣದ ಜೋತೆ ಚೆಲ್ಲಾಟ ಆಡುತ್ತಿದ್ದಾರೆ ಎಂಬುವುದು ಕಾಣುತ್ತಿದೆ.
ಸರ್ಕಾರದಿಂದ ಕೋಟಿ ಗಟ್ಟಲೆ ಹಣವನ್ನು ಮಂಜೂರು ಮಾಡಿಸಿ ಕೊಂಡು,ಐಸಿಯು ನಲ್ಲಿದ್ದ ಜನರೇಟರ್ ಸಹ ವ್ಯವಾಸ್ತಿತವಾಗಿ ನಿಭಾಯಿಸುತ್ತಿಲ್ಲ, ಅಂದರೆ ಇಲ್ಲಿಯೂ 40% ಸರ್ಕಾರ ಕೈವಾಡ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.
ಈ ಘಟನೆ ಸಂಬಂಧ ಯಾರು ತಪ್ಪಿತಸ್ಥರೋ ಅವರನ್ನು ಕೂಡಲೇ ಅಮಾನತು ಮಾಡಬೇಕು, ಅವರಿಗೆ ತಕ್ಕ ಶಿಕ್ಷೆಯಾಗಬೇಕು.
ಹಾಗೂ ಮೃತರಾದವಾರಿಗೆ ಪರಿಹಾರ ನೀಡಬೇಕು ಮತ್ತು ಇಂತಹಾ ಘಟನೆಗಳು ಮರುಕಳಿಸದಂತೆ ನೊಡಿಕೋಳ್ಳಬೇಕು ಏಂದು,ಮಾಜೀ ಶಾಸಕರು ಪ್ರಭಾವಿ ನಾಯಕರು ಅಗಿರವ, ನಾರಾ ಸೂರ್ಯ ನಾರಾಯಣ ರೆಡ್ಡಿ ಅವರ ಪುತ್ರ ನಾರಾ ಭರತ್ ರೆಡ್ಡಿ,ಒತ್ತಾಯ ಮಾಡಿದ್ದಾರೆ.( ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)