ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿದೆ – ನಾರಾಯಣಸ್ವಾಮಿ
ಬಳ್ಳಾರಿ :(28) ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿದ್ದು, ಮುಖ್ಯಮಂತ್ರಿ ಸ್ಥಾನವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ನಾರಾಯಣಸ್ವಾಮಿ ಅವರು ಒತ್ತಾಯ ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪಂಚ ಪಕ್ಷಗಳು ಅಕಾಡಕ್ಕೆ ಇಳಿಯಲಿದೆ. ಸರ್ಕಾರ ರಚಿಸುವ ಬಹುಮತ ಸ್ಥಾನ ಪಡೆದುಕೊಳ್ಳವುದರಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷವೂವಕೂಡ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಸ್ಥಿರತೆ ಕಳೆದುಕೊಳ್ಳುತ್ತಿವೆ. ಅದ್ದರಿಂದ ಎಎಪಿ ಪಕ್ಷ ಇತ್ತೀಚೆಗೆ ರಾಷ್ಟ್ರ ಮಟ್ಟದ ತೃತೀಯ ರಂಗ ಪಾರ್ಟಿಯೆಂದು ಮತದಾರರಲ್ಲಿ ಗುರುತಿಸಿಕೊಂಡು ರಾಜ್ಯದಲ್ಲಿ ಮುಖ್ಯಮಂತ್ರಿ ಗದ್ದುಗೆ ಹಿಡಿಯಲೆಂದು ಕರ್ನಾಟಕ ರಾಜ್ಯ ಮತದಾರರು ಬಯಸುತ್ತಿದ್ದಾರೆ. ದೇಶದ ಪ್ರಮುಖ ಪಕ್ಷ ಎಎಪಿಯಿಂದ ಉತ್ತರ ಕಲ್ಯಾಣ ಭಾಗಕ್ಕೆ ಮುಖ್ಯಮಂತ್ರಿ ಪಟ್ಟ ಒಲಿದು ಬರುವ ಸಾಧ್ಯತೆ ಇದೆ ಎಂದರು.
ಎಎಪಿ ಪಕ್ಷಕ್ಕೆ ಮತದಾರರು ಆಶೀರ್ವಾದ ಮಾಡಿದಲ್ಲಿ ಉತ್ತರ ಕಲ್ಯಾಣ ಭಾಗಕ್ಕೆ ರಾಜ್ಯ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ. ಉತ್ತರ ಕಲ್ಯಾಣ ಭಾಗದ ಬಅಷ್ಠ ಸಾಮ್ರಾಜ್ಯಗಳ ನೆಲೆ ಕೊಟ್ಟಿದ್ದ ಭೂಮಿ, ಕನ್ನಡ ಸಾಮ್ರಾಜ್ಯ 04 ಅಧಿಪಥ್ಯದ ರಾಜಧಾನಿಗಳ ಬೆಳವಣಿಗೆಗೆ ಈ ಕಷ್ಟು ಕರುನಾಡು ಮಣ್ಣಲ್ಲೇ ಆಳ್ವಿಕೆಗೆ ಸಾಕ್ಷಿಯಾದ ಸ್ಥಳಗಳು ಕಲ್ಯಾಣ ಚಾಲುಕ್ಯ ಸಾಹಿತ್ಯ ರತ್ನ, ಕದಂಬ ಹೊಯ್ಸಳರ ಶಿಲೆಗಳ ಬಸವಾದಿ ಶಿವ ಶರಣರ ಶರೀಫರಂತ ಸಂತರು ನಡೆದಾಡಿದ ಜನಪದ ನೆಲೆಗೆ ಎಎಪಿ ಪಕ್ಷದಿಂದ ಮುಖ್ಯಂತ್ರಿ ಸ್ಥಾನ ಒಲೆಯುವ ಸಂದರ್ಭ ಕೂಡ ಬರಬಹುದು ಎಂದು ಅವರು ವಿವರಿಸಿದರು.
ಬಳ್ಳಾರಿ ಮಹಾನಗರಪಾಲಿಕೆಯ ಮಾರ್ಚ್ 29ರ ಮೇಯರ್ ಆಯ್ಕೆ ನಡೆಯಲಿರುವ ಎಸ್ಸಿ ಮೀಸಲಾತಿಯ ಆಗಿರುವ ಎಡಗೈ ಸಮುದಾಯದ ಉಮಾದೇವಿ ಶಿವರಾಜ್ ಬಾಪೂಜಿನಗರ ಇವರಿಗೆ ಸ್ಥಾನವನ್ನು ನೀಡಿದ ಪಕ್ಷದಲ್ಲಿ ಈ ಸಮುದಾಯ ಮತದಾರರು ಸಾರ್ವತ್ರಿಕ ಚುನಾವಣೆಯಿಂದಲೇ ಆಮ್ ಆದ್ಮ ಪಾರ್ಟಿಗೆ ಕರ್ನಾಟಕ ರಾಜ್ಯ ಮಟ್ಟದಲ್ಲಿ ಶೋಷಿತ ನಿರ್ಲಕ್ಷ್ಯಕ್ಕೆ ಒಳಗಾದ ಮಾದಿಗ ಸಮುದಾಯದ ಮತದಾರರು ದೇಶವನ್ನಾಳುವ ಪ್ರಾಬಲ್ಯವನ್ನು ಹೊಂದಿದ್ದರೂ ಸಹ ಆನಾಥ ಪ್ರಜ್ಞೆಯಂತೆ ಇಂದಿಗೂ ಉಳಿಸಿರುವಂತ ಆಡಳಿತ ನಡೆಸಿರುವಂತ ಪಕ್ಷಗಳು ತೊರೆದು ಆಮ್ ಆದ್ಮ ಪಾರ್ಟಿಗೆ ಕೈಹಿಡಿಯುವ ಸಾಧ್ಯತೆ ಇದೆ. ಇವರಿಗೆ ಕೇಜ್ರಿವಾಲ್ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಾನಗಳಿಗೆ ಸ್ಪರ್ಧೆಗೆ ಅವಕಾಶ ನೀಡಲಿದ್ದಾರೆ ಇದೇ ರೀತಿ ಪರಿಶಿಷ್ಟ ವರ್ಗ ಇತರ ಲಿಂಗಾಯತ ವೀರಶೈವ ಹಿಂದುಳಿದ ವರ್ಗದ ಹೆಚ್ಚಿನ ಸ್ಥಾನಗಳನ್ನು ನೀಡಿ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸಿದೆ ಎಂದರು.
(ಕೆ.ಬಜಾರಪ್ಪ ವರದಿಗಾರರು.ಕಲ್ಯಾಣ ಕರ್ನಾಟಕ.)